ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಕಳೆದ 3 ಪಂದ್ಯಗಳಲ್ಲಿ ಕೆಕೆಆರ್‌ಗೆ ಗೇಮ್‌ ಚೇಂಜರ್‌ ಯಾರೆಂದು ತಿಳಿಸಿದ ಅಜಿಂಕ್ಯ ರಹಾನೆ!

IPL 2026: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನವನ್ನು ತೋರಿದ ವರುಣ್‌ ಚಕ್ರವರ್ತಿಯನ್ನು ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ನಾಯಕ ಅಜಿಂಕ್ಯ ರಹಾನೆ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಚಕ್ರವರ್ತಿಯನ್ನು ರಹಾನೆ ಗೇಮ್‌ ಚೇಂಜರ್‌ ಎಂದು ಗುಣಗಾನ ಮಾಡಿದ್ದಾರೆ.

ವರುಣ್‌ ಚಕ್ರವರ್ತಿಯನ್ನು ಶ್ಲಾಘಿಸಿದ ಅಜಿಂಕ್ಯ ರಹಾನೆ

ನವದೆಹಲಿ: ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ (SRH vs KKR) ಮ್ಯಾಚ್‌ ವಿನ್ನಿಂಗ್‌ ಬೌಲಿಂಗ್‌ ಸ್ಪೆಲ್‌ ಮಾಡಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಸ್ಪಿನ್ನರ್‌ ವರುಣ್‌ ಚಕ್ರವರ್ತಿಯನ್ನು (Varun Chakravarthy) ನಾಯಕ ಅಜಿಂಕ್ಯ ರಹಾನೆ (Ajinkya Rahane) ಗುಣಗಾನ ಮಾಡಿದ್ದಾರೆ. ವರುಣ್‌ ನಮಗೆ ಗೇಮ್‌ ಚೇಂಜರ್‌ ಎಂದಿದ್ದಾರೆ. ಈ ಪಂದ್ಯದಲ್ಲಿ ವರುಣ್‌ ಚಕ್ರವರ್ತಿ 36 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಬಳಿಸಿದರು ಹಾಗೂ ಎಸ್‌ಆರ್‌ಎಚ್‌ ತಂಡವನ್ನು 165 ರನ್‌ಗಳಿಗೆ ಕಟ್ಟಿಹಾಕಲು ತಮ್ಮ ತಂಡಕ್ಕೆ ನೆರವು ನೀಡಿದ್ದರು. ಈ ಪಂದ್ಯವನ್ನು ಕೆಕೆಆರ್‌ ಗೆದ್ದು ಬೀಗಿತ್ತು.

ಈ ಪಂದ್ಯದ ಬಳಿಕ ಮಾತನಾಡಿದ ನಾಯಕ ಅಜಿಂಕ್ಯ ರಹಾನೆ, ಟೂರ್ನಿಯ ಆರಂಭದಲ್ಲಿ ಅನುಭವಿಸಿದ್ದ ವೈಫಲ್ಯವನ್ನು ವರುಣ್‌ ಚಕ್ರವರ್ತಿ ಇದೀಗ ಹೇಗೆ ಮೆಟ್ಟಿ ನಿಂತರು ಎಂದು ವಿವರಿಸಿದ್ದಾರೆ. ಈ ಪಂದ್ಯದಲ್ಲಿ ಗುರಿಯನ್ನು ಹಿಂಬಾಲಿಸಿದ್ದ ಕೆಕೆಆರ್‌, 7 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು. ಆ ಮೂಲಕ ಕೆಕೆಆರ್‌ ಸತತ ಐದು ಪಂದ್ಯಗಳ ಸೋಲಿನ ಬಳಿಕ ಹ್ಯಾಟ್ರಿಕ್‌ ಗೆಲುವು ಪಡೆದಿತ್ತು.

ಈ ಪಂದ್ಯದ ಬಳಿಕ ಮಾತನಾಡಿದ್ದ ಅಜಿಂಕ್ಯ ರಹಾನೆ, "ಅವರಿಗಾಗಿ (ವರುಣ್‌) ನಾನು ತುಂಬಾ ಖುಷಿಯಾಗಿದ್ದೇನೆ. ಟೂರ್ನಿಯ ಆರಂಭದಲ್ಲಿ ಅವರು ತುಂಬಾ ಹಿನ್ನಡೆ ಅನುಭವಿಸಿದ್ದರು, ಆದರೆ ಅವರು ತದನಂತರ ಭರ್ಜರಿಯಾಗಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನವನ್ನು ತೋರಿದ್ದಾರೆ.

SRH vs KKR: ಐಪಿಎಲ್‌ನಲ್ಲಿ 200 ವಿಕೆಟ್‌ ಪೂರ್ತಿಗೊಳಿಸಿದ ನರೈನ್;‌ ಈ ಸಾಧನೆಗೈದ ಮೊದಲ ವಿದೇಶಿಗ

ಅವರು ಕಮ್‌ಬ್ಯಾಕ್‌ ಮಾಡಿದ ಹಾದಿ ಅದ್ಭುತವಾಗಿತ್ತು. ಅವರು ಯಾವಾಗಲೂ ವಿಶ್ವಾಸದಲ್ಲಿರುತ್ತಾರೆ. ಅವರು ನಿಜವಾಗಿಯೂ ಕಠಿಣ ಪರಿಶ್ರಮಪಟ್ಟಿದ್ದಾರೆ ಹಾಗೂ ಅದ್ಭುತ ನಡೆಯನ್ನು ಪ್ರದರ್ಶಿಸಿದ್ದಾರೆ. ತಂಡದ ಕಠಿಣ ಸನ್ನಿವೇಶದಲ್ಲಿ ಏನಾದರೂ ಮಾಡಬಹುದಾದ ಆಟಗಾರರು ನಿಮಗೆ ಅಗತ್ಯವಾಗಿದೆ. ಅವರು ಕಠಿಣ ಓವರ್‌ಗಳನ್ನು ಬೌಲ್‌ ಮಾಡುತ್ತಿದ್ದಾರೆ. ಅವರು ಇದೇ ರೀತಿಯ ಪ್ರದರ್ಶನವನ್ನು ತೋರುವುದನ್ನು ಮುಂದುವರಿಸಲಿದ್ದಾರೆ," ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

“ತುಂಬಾ ಒಳ್ಳೆಯ ಪಂದ್ಯ. ನಾವು ಚೆಂಡಿನೊಂದಿಗೆ ಕಮ್‌ಬ್ಯಾಕ್‌ ಮಾಡಿದ ರೀತಿಯೇ ಅದ್ಭುತವಾಗಿತ್ತು. ಅವರು 190-200 ರನ್‌ಗಳನ್ನು ಗಳಿಸುವಂತೆ ಕಾಣಿಸುತ್ತಿತ್ತು. ಇದು ಬ್ಯಾಟಿಂಗ್‌ಗೆ ಉತ್ತಮ ಪಿಚ್ ಆಗಿತ್ತು. 190-200 ಅನ್ನು ಬೆನ್ನಟ್ಟುವುದು ಸವಾಲಿನದ್ದಾಗಿರುತ್ತಿತ್ತು. ಆದರೆ ಅವರನ್ನು ಅದಕ್ಕಿಂತ ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ ಶ್ರೇಯ ನಮ್ಮ ಬೌಲಿಂಗ್ ಘಟಕಕ್ಕೆ, ವಿಶೇಷವಾಗಿ ಸ್ಪಿನ್ನರ್‌ಗಳಿಗೆ ಸಲ್ಲುತ್ತದೆ. ಅವರು ನಿರಂತರವಾಗಿ ವಿಕೆಟ್‌ಗಳನ್ನು ಪಡೆಯುತ್ತಿದ್ದರು. ಆ ಸಣ್ಣ ಕ್ಷಣಗಳೇ ಬಹಳ ಮುಖ್ಯ. ಈ ಗೆಲುವಿನಿಂದ ತುಂಬಾ ಸಂತೋಷವಾಗಿದೆ,” ಎಂದು ಅವರು ಸೇರಿಸಿದ್ದಾರೆ.

SRH vs KKR: ಚಿರತೆ ವೇಗ, ರೋವ್ಮನ್ ಪೊವೆಲ್ ಒನ್‌ ಹ್ಯಾಂಡೆಡ್‌ ಕ್ಯಾಚ್‌ಗೆ ನೆಟ್ಟಿಗರು ಫಿದಾ

ಕೋಲ್ಕತ್ತಾ ನೈಟ್ ರೈಡರ್ಸ್ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನದ ನೆರವಿನಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು 19 ಓವರ್‌ಗಳಲ್ಲಿ 165 ರನ್‌ಗಳಿಗೆ ಆಲ್‌ಔಟ್ ಮಾಡಿತು. ವರುಣ್‌ ಚಕ್ರವರ್ತಿ (3/36) ಅವರ ಬೌಲಿಂಗ್ ಪ್ರದರ್ಶನ ಗಮನಾರ್ಹವಾಗಿತ್ತು. ನಂತರ ಗುರಿಯನ್ನು 18.2 ಓವರ್‌ಗಳಲ್ಲಿ ಕೆಕೆಆರ್‌ ಸುಲಭವಾಗಿ ಬೆನ್ನಟ್ಟಿತು.

ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಅವರ ಸ್ಫೋಟಕ ಆರಂಭದಿಂದ ಎಸ್‌ಆರ್‌ಎಚ್ ಉತ್ತಮ ಆರಂಭ ಪಡೆದಿತ್ತು. ಪವರ್‌ಪ್ಲೇನಲ್ಲಿ 71 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡು ಆತಿಥೇಯತರು ಉತ್ತಮ ಪ್ರದರ್ಶನವನ್ನು ತೋರಿತ್ತು. ಹೆಡ್ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, ಕೊನೆಗೆ 28 ಎಸೆತಗಳಲ್ಲಿ 61 ರನ್ ಗಳಿಸಿದರು. ಆದರೆ ಹೆಡ್ ಔಟ್ ಆದ ಬಳಿಕ ರನ್‌ ವೇಗಕ್ಕೆ ಕಡಿವಾಣ ಬಿತ್ತು.

ಕೆಕೆಆರ್ ಬೌಲರ್‌ಗಳು ಒತ್ತಡವನ್ನು ಮುಂದುವರಿಸಿದರು. ಸುನಿಲ್ ನರೇನ್ ಮತ್ತು ಕಾರ್ತಿಕ್ ತ್ಯಾಗಿ ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಇಶಾನ್ ಕಿಶನ್ 29 ಚೆಂಡುಗಳಲ್ಲಿ 42 ರನ್‌ಗಳೊಂದಿಗೆ ಇನಿಂಗ್ಸ್‌ ಅನ್ನು ಕಟ್ಟಿಹಾಕಲು ಪ್ರಯತ್ನಿಸಿದರೂ, ನಿರಂತರವಾಗಿ ವಿಕೆಟ್‌ಗಳು ಬೀಳುತ್ತಿದ್ದರಿಂದ ಎಸ್‌ಆರ್‌ಎಚ್ ತಂಡ ಸಮರ್ಪಕ ಮೊತ್ತಕ್ಕಿಂತ ಕಡಿಮೆ ರನ್‌ಗಳಿಗೆ ಸೀಮಿತವಾಯಿತು.