ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಂತಾರಾಷ್ಟ್ರೀಯ ಕ್ರಿಕೆಟ್‌ ವಿದಾಯದ ಬಳಿಕ ಸಚಿನ್‌ ಕಳುಹಿಸಿದ್ದ ಸಂದೇಶವನ್ನು ರಿವೀಲ್‌ ಮಾಡಿದ ಅಜಿಂಕ್ಯ ರಹಾನೆ!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಮೊದಲು ಕರೆ ಮಾಡಿ ಮಾತನಾಡಿದ್ದು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಎಂದು ಟೀಮ್‌ ಇಂಡಿಯಾ ಮಾಜಿ ನಾಯಕ ಅಜಿಂಕ್ಯ ರಹಾನೆ ತಿಳಿಸಿದ್ದಾರೆ. ಜುಲೈ 30 ರಂದು ರಹಾನೆ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು.

ಸಚಿನ್ ಕರೆ ಮಾಡಿದ್ದ ಘಟನೆ ನೆನೆದ ಅಜಿಂಕ್ಯ ರಹಾನೆ.

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಮಾಸ್ಟರ್‌ ಬ್ಲಾಸ್ಟರ್ ಸಚಿನ್‌ ತೆಂಡೂಲ್ಕರ್‌ (Sachin Tendulkar) ಅವರು ತಮಗೆ ಮೊದಲಿಗರಾಗಿ ಕರೆ ಮಾಡಿದ್ದರು ಎಂದು ಭಾರತ ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ (Ajinkya Rahane) ಬಹಿರಂಗಪಡಿಸಿದ್ದಾರೆ. ಜುಲೈ 30ರಂದು ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಮುಂಬೈನ ಕ್ರಿಕೆಟ್‌ ಮೈದಾನಗಳಿಂದ ಆರಂಭವಾದ ರಹಾನೆ ಅವರ ಕ್ರಿಕೆಟ್‌ ಪಯಣ, ಭಾರತೀಯ ಕ್ರಿಕೆಟ್‌ನ ಹಲವು ಸ್ಮರಣೀಯ ಕ್ಷಣಗಳ ಭಾಗವಾಗುವವರೆಗೆ ಸಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವಿಡಿಯೊ ಮೂಲಕ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ರಹಾನೆ ತೆರೆ ಎಳೆದಿದ್ದರು.

ಮುಂಬೈ ತಂಡದ ಮಾಜಿ ನಾಯಕ 85 ಟೆಸ್ಟ್‌, 90 ಏಕದಿನ ಹಾಗೂ 20 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ಭಾರತ ತಂಡ ಐತಿಹಾಸಿಕ ಟೆಸ್ಟ್‌ ಸರಣಿ ಗೆದ್ದ ಸಂದರ್ಭದಲ್ಲಿ ನಾಯಕನಾಗಿ ನೀಡಿದ ಪ್ರದರ್ಶನ ಅವರ ವೃತ್ತಿಜೀವನದ ಅತ್ಯಂತ ಸ್ಮರಣೀಯ ಸಾಧನೆಗಳಲ್ಲಿ ಒಂದಾಗಿದೆ. ಹಲವು ವರ್ಷಗಳ ಕಾಲ ವಿವಿಧ ಮಾದರಿಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಬಳಿಕ, 37ನೇ ವಯಸ್ಸಿನ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಯಣಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ ಎಂದು ನಿರ್ಧರಿಸಿದ್ದರು.

2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ಆಡಬೇಕೆಂದ ಅಜಿಂಕ್ಯ ರಹಾನೆ!

‘ಸಚಿನ್‌ ಪಾಜಿ ನಾನು ಇನ್ನಷ್ಟು ಆಡುತ್ತೇನೆ ಎಂದುಕೊಂಡಿದ್ದರು’: ರಹಾನೆ

ಇಂಡಿಯನ್‌ ಎಕ್ಸ್‌ಪ್ರೆಸ್‌ ಜೊತೆ ಮಾತನಾಡಿದ ರಹಾನೆ, ಸಚಿನ್‌ ತೆಂಡೂಲ್ಕರ್‌ ಅವರೇ ಮೊದಲಿಗರಾಗಿ ನನಗೆ ಕರೆ ಮಾಡಿದ್ದರು ಎಂದು ಹೇಳಿದ್ದಾರೆ. ರಹಾನೆ ಇನ್ನೂ ಕೆಲವು ವರ್ಷಗಳ ಕಾಲ ಕ್ರಿಕೆಟ್‌ ಆಡುತ್ತಾರೆ ಎಂದು ಸಚಿನ್‌ ನಿರೀಕ್ಷಿಸಿದ್ದಾಗಿ ತಿಳಿಸಿದ್ದರು.

ಇದೇ ವೇಳೆ ಇರ್ಫಾನ್‌ ಪಠಾಣ್‌ ಕರೆ ಮಾಡಿದ್ದರೆ, ಚೇತೇಶ್ವರ ಪೂಜಾರಾ, ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಮತ್ತು ಜಸ್‌ಪ್ರೀತ್‌ ಬುಮ್ರಾ ನನಗೆ ಸಂದೇಶ ಕಳುಹಿಸಿದ್ದರು ಎಂದು ರಹಾನೆ ಹೇಳಿಕೊಂಡಿದ್ದಾರೆ.

“ಮೊದಲ ಕರೆ ಸಚಿನ್‌ ಪಾಜಿ ಅವರಿಂದ ಬಂದಿತ್ತು. ನಾನು ಇನ್ನಷ್ಟು ಕಾಲ ಆಡುತ್ತೇನೆ ಎಂದು ಅವರು ಭಾವಿಸಿದ್ದರು. ಆದರೆ ಯಾವುದೇ ವಿಷಾದವಿಲ್ಲದೆ ನಿವೃತ್ತಿಯಾಗುತ್ತಿರುವಾಗ, ಕ್ರಿಕೆಟ್‌ ಅನ್ನು ಅನಗತ್ಯವಾಗಿ ಮುಂದುವರಿಸಲು ನನಗೆ ಇಷ್ಟವಿರಲಿಲ್ಲ ಎಂದು ಅವರಿಗೆ ತಿಳಿಸಿದೆ. ಇರ್ಫಾನ್‌ ಪಠಾಣ್‌ ಕೂಡ ಕರೆ ಮಾಡಿದ್ದರು. ಪೂಜಾರಾ, ವಿರಾಟ್‌, ರೋಹಿತ್‌ ಮತ್ತು ಬುಮ್ರಾ ನನಗೆ ಸಂದೇಶ ಕಳುಹಿಸಿದ್ದರು. ಎಲ್ಲರಿಗೂ ನಾನು ಒಂದೇ ಮಾತು ಹೇಳಿದೆ: ನಾನು ಕ್ರಿಕೆಟ್‌ಗೆ ಎಲ್ಲವನ್ನೂ ನೀಡಿದ್ದೇನೆ ಎಂಬ ತೃಪ್ತಿ ನನಗಿದೆ,” ಎಂದು ರಹಾನೆ ತಿಳಿಸಿದ್ದಾರೆ.

ʻ17 ಕೆಜಿ ತೂಕ ಇಳಿಕೆʼ: ಬಿಸಿಸಿಐ ಸೆಲೆಕ್ಟರ್‌ಗಳ ನಂಬಿಕೆಯನ್ನು ಸರ್ಫರಾಝ್‌ ಖಾನ್‌ ಮರಳಿ ಪಡೆದಿದ್ದೇಗೆ?

ನಿವೃತ್ತಿ ವಿಡಿಯೊ ರೆಕಾರ್ಡ್‌ ಮಾಡಿದ ಬಳಿಕ ಸಾಕಷ್ಟು ಅತ್ತಿದ್ದೆ

ರಹಾನೆ ಅವರ ನಿವೃತ್ತಿ ಘೋಷಣೆಯ ವಿಡಿಯೊ ಭಾವುಕವಾಗಿತ್ತು. ವಿಡಿಯೊ ರೆಕಾರ್ಡ್‌ ಮಾಡಿದ ಬಳಿಕ ತಾವು ಸಾಕಷ್ಟು ಅತ್ತಿದ್ದಾಗಿ ಮಾಜಿ ಭಾರತ ಬ್ಯಾಟರ್‌ ತಿಳಿಸಿದ್ದಾರೆ.

“ವಿಡಿಯೊ ರೆಕಾರ್ಡ್‌ ಮಾಡಿದ ಬಳಿಕ ನಾನು ಸಾಕಷ್ಟು ಅತ್ತೆ. ಕುಟುಂಬದೊಂದಿಗೆ ನಿವೃತ್ತಿಯ ಬಗ್ಗೆ ಮಾತನಾಡುವಾಗಲೇ ಭಾವುಕನಾಗಿದ್ದೆ. ಆದರೆ ವಿಡಿಯೊ ರೆಕಾರ್ಡ್‌ ಮಾಡುವಾಗ ಅದು ನನ್ನ ಮೇಲೆ ಇಷ್ಟು ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನಾನು ಹಲವು ವರ್ಷಗಳಿಂದ ಪ್ರೀತಿಸುತ್ತಾ ಬಂದಿದ್ದ ಕ್ರಿಕೆಟ್‌ ಅನ್ನು ಇನ್ನು ಮುಂದೆ ಅದೇ ರೀತಿಯಲ್ಲಿ ಆಡಲು ಸಾಧ್ಯವಿಲ್ಲ ಎಂಬ ವಾಸ್ತವ ಅರಿವಿಗೆ ಬಂತು. ಆ ಆಲೋಚನೆ ವಿಡಯೊ ರೆಕಾರ್ಡಿಂಗ್‌ ಮುಗಿಯುವವರೆಗೂ ನನ್ನ ಮನಸ್ಸಿನಲ್ಲಿತ್ತು,” ಎಂದು ರಹಾನೆ ಹೇಳಿದ್ದಾರೆ.

ಭಾರತ ತಂಡದಿಂದ ಹೊರಗುಳಿದಿರುವ ಮೊಹಮ್ಮದ್‌ ಶಮಿಗೆ ಜಹೀರ್‌ ಖಾನ್‌ ಬಲವಾದ ಸಂದೇಶ!

ಯುರೋಪಿಯನ್‌ ಟಿ20 ಲೀಗ್‌ ಆಡಲಿರುವ ರಹಾನೆ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರೂ ರಹಾನೆ ಸಂಪೂರ್ಣವಾಗಿ ಕ್ರಿಕೆಟ್‌ನಿಂದ ದೂರವಾಗುತ್ತಿಲ್ಲ. ಅವರು ಯುರೋಪಿಯನ್‌ ಟಿ20 ಪ್ರೀಮಿಯರ್‌ ಲೀಗ್‌ (ETPL) ಉದ್ಘಾಟನಾ ಆವೃತ್ತಿಯಲ್ಲಿ ಆಡಲು ನಿರ್ಧರಿಸಿದ್ದು, ಮುಂದೆಯೂ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಆಟ ಮುಂದುವರಿಸಲಿದ್ದಾರೆ.