ನವದೆಹಲಿ: ಭಾರತ ತಂಡದ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav) ಅವರು ಇತ್ತೀಚಿನ ಪಂದ್ಯಗಳಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವುದರ ಹೊರತಾಗಿಯೂ ಅವರನ್ನು ಟೀಮ್ ಮ್ಯಾನೇಜ್‌ಮೆಂಟ್ ಬೆಂಬಲಿಸಬೇಕೆಂದು ಮಾಜಿ ನಾಯಕ ಅಜಿಂಕ್ಯ ರಹಾನೆ (Ajinkya Rahane) ಸಲಹೆ ನೀಡಿದ್ದಾರೆ. ಕಳಪೆ ಫಾರ್ಮ್ ಹೊರತಾಗಿಯೂ ಕುಲ್ದೀಪ್ ಯಾದವ್ ಅವರನ್ನು ನಾಯಕ ಶುಭಮನ್ ಗಿಲ್ ಹಾಗೂ ಹೆಡ್ ಕೋಚ್ ಗೌತಮ್ ಗಂಭೀರ್ ಬೆಂಬಲ ನೀಡಬೇಕೆಂದು ರಹಾನೆ ಆಗ್ರಹಿಸಿದ್ದಾರೆ.
ಶ್ರೀಲಂಕಾ ವಿರುದ್ಧ ಗಾಲೆ ಟೆಸ್ಟ್ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಅವರು ತಮ್ಮ ಸ್ಪಿನ್ ಬೌಲಿಂಗ್‌ನಿಂದ ಅಷ್ಟೊಂದು ಪರಿಣಾಮಕಾರಿಯಾಗಿರಲಿಲ್ಲ. ಅವರು ಕೇವಲ ಒಂದೇ ಒಂದು ವಿಕೆಟ್ ಮಾತ್ರ ಪಡೆದಿದ್ದರು. ಹಾಗಾಗಿ ಎರಡನೇ ಟೆಸ್ಟ್ ಪಂದ್ಯಕ್ಕೆ ಅವರ ಸ್ಥಾನದ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಆದರೆ, ಮಾನವ್ ಸುತಾರ್ ಹಾಗೂ ರವೀಂದ್ರ ಜಡೇಜಾ ತಮ್ಮ ಸ್ಪಿನ್ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಸಿಂಹ ಸ್ವಪ್ನವಾಗಿದ್ದರು.
ಆರ್‌ಸಿಬಿ ವೇಗಿಗೆ ಸ್ಥಾನ; 2027ರ ಏಕದಿನ ವಿಶ್ವಕಪ್‌ಗೆ ಭಾರತ ತಂಡವನ್ನು ಆರಿಸಿದ ರಾಬಿನ್ ಉತ್ತಪ್ಪ!
ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಜಿಕ್ಯ ರಹಾನೆ, "ಕುಲ್ದೀಪ್ ಯಾದವ್‌ಗೆ ಇನ್ನಷ್ಟು ವಿಶ್ವಾಸವನ್ನು ನೀಡಬೇಕೆಂದು ನಾನು ಬಯಸುತ್ತೇನೆ. ಈ ಹಂತದಲ್ಲಿ ಅವರಿಗೆ ಟೀಮ್ ಮ್ಯಾನೇಜ್‌ಮೆಂಟ್ ಸಾಥ್ ನೀಡಬೇಕಾದ ಅಗತ್ಯವಿದೆ. ಏಕೆಂದರೆ ಈ ಹಿಂದೆ ಎಂಥಾ ನಿರ್ಣಾಯಕ ಸಮಯದಲ್ಲಿಯೂ ಅವರು ವಿಕೆಟ್‌ಗಳನ್ನು ಕಿತ್ತಿದ್ದಾರೆ. ಗಾಲೆಯಲ್ಲಿ ಹೆಚ್ಚಿನ ಓವರ್‌ಗಳನ್ನು ಬೌಲ್ ಮಾಡಲು ಕುಲ್ದೀಪ್‌ಗೆ ಅವಕಾಶ ಸಿಗಲಿಲ್ಲ ಎಂಬುದು ನಿಜ. ಪಂದ್ಯದಲ್ಲಿ ಇಂಥಾ ಸಂಗತಿಗಳು ನಡೆಯುತ್ತವೆ. ಕೆಲವೊಮ್ಮೆ ನೀವು ಲಯವನ್ನು ಪಡೆಯಲು ಆಗುವುದಿಲ್ಲ. ಕಂಡೀಷನ್ಸ್ ಇದೇ ರೀತಿ ಮುಂದಿನ ಪಂದ್ಯದಲ್ಲಿಯೂ ಕುಲ್ದೀಪ್ ಯಾದವ್‌ಗೆ ಬೆಂಬಲಿಸಬೇಕು. ಅವರು ಮ್ಯಾಚ್ ವಿನ್ನಿಂಗ್ ಬೌಲರ್. ತಂಡವನ್ನು ಅವರನ್ನು ಬೆಂಬಲಿಸಿದರೆ, ಅವರು ಉತ್ತಮ ಪ್ರದರ್ಶನವನ್ನು ತೋರುತ್ತಾರೆ," ಎಂದು ಹೇಳಿದ್ದಾರೆ.
2017ರಲ್ಲಿ ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಕುಲ್ದೀಪ್ ಯಾದವ್ ಅವರು ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದು ಪೂರ್ಣ ಪ್ರಮಾಣದ ನಾಯಕನಾಗಿದ್ದ ವಿರಾಟ್ ಕೊಹ್ಲಿ ಗಾಯಕ್ಕೆ ತುತ್ತಾಗಿದ್ದರು, ಇದರ ಪರಿಣಾಮ ಅಂದು ಭಾರತ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಿದ್ದರು.
ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ಬಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಮ್ಯಾನೇಜ್‌ಮೆಂಟ್ ಅದೇ ಪ್ಲೇಯಿಂಗ್ Xiಅನ್ನು ಉಳಿಸಿಕೊಳ್ಳಬೇಕೆಂದು ಅಜಿಂಕ್ಯ ರಹಾನೆ ಆಗ್ರಹಿಸಿದ್ದಾರೆ. ಈ ಹಿಂದೆ ಭಾರತ ತಂಡಕ್ಕೆ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಕುಲ್ದೀಪ್ ಯಾದವ್ ನೆರವು ನೀಡಿದ್ದರು ಎಂದು ಇದೇ ರಹಾನೆ ಸ್ಮರಿಸಿಕೊಂಡಿದ್ದಾರೆ.
ʻನೀವು ಐಪಿಎಲ್ ಆಡಬೇಡಿʼ: ಮಾನವ್ ಸುತಾರ್‌ಗೆ ಚೇತೇಶ್ವರ್ ಪೂಜಾರ ಈ ಸಲಹೆ ನೀಡಿದ್ದೇಕೆ?
"ಇದು ಕಂಡೀಷನ್ಸ್ ಅನ್ನು ಅವಲಂಬಿಸಿದೆ. ಸಾಮಾನ್ಯವಾಗಿ ಶ್ರೀಲಂಕಾದಲ್ಲಿ ಸ್ಪಿನ್ ಸ್ನೇಹಿ ಕಂಡೀಷನ್ಸ್ ಇದೆ. ಇನ್ನು ಎಸ್‌ಎಸ್‌ಸಿ ಮೈದಾನದಲ್ಲಿ ಹಲವು ವರ್ಷಗಳ ಕಾಲ ನಾವು ಆಡಿದ್ದೇವೆ, ಇಲ್ಲಿನ ಕಂಡೀಷನ್ಸ್ ಸೀಮರ್‌ಗಳಿಗೆ ನೆರವು ನೀಡುತ್ತದೆ. ಹಾಗಾಗಿ ನಿಮಗೆ ಮೂರು ಸ್ಪಿನ್ನರ್‌ಗಳು ಅಥವಾ ಮೂರು ವೇಗಿಗಳು ಬೇಕೇ ಎಂಬ ಬಗ್ಗೆ ನೀವು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ. ಇಲ್ಲಿನ ಪಿಚ್ ಸೀಮಿಂಗ್ ಕಂಡೀಷನ್ಸ್ ಇದ್ದು, ಪಿಚ್ ಒಣಗಿಲ್ಲವಾದರೆ, ಪಿಚ್ ಮೇಲೆ ಸ್ವಲ್ಪ ಹುಲ್ಲು ಬೆಳೆದಿದ್ದರೆ, ನೀವು ನಿಮ್ಮ ಪ್ಲೇಯಿಂಗ್ Xiನಲ್ಲಿ ಒಂದು ಬದಲಾವಣೆ ತರಬೇಕಾಗಿದೆ. ಇದು ಬಿಟ್ಟರೆ ತಂಡದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಕಂಡೀಷನ್ಸ್ ಅದೇ ರೀತಿ ಇದ್ದರೆ ತಂಡದ ಪ್ಲೇಯಿಂಗ್ XI ಅನ್ನು ಬದಲಾಯಿಸಬಾರದು," ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.