ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದ ಟೆಸ್ಟ್‌ ಪದಾರ್ಪಣೆಯ ರಾಹುಲ್‌ ದ್ರಾವಿಡ್‌ ಸಂದೇಶವನ್ನು ನಿರಾಕರಿಸಿದ್ದ ಆಕಾಶ್‌ ದೀಪ್‌!

ಭಾರತ ಟೆಸ್ಟ್‌ ತಂಡದ ಪದಾರ್ಪಣೆ ಬಗ್ಗೆ ಆಗಿನ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಸಂದೇಶವನ್ನು ಆರಂಭದಲ್ಲಿ ಮರೆತು ಹೋಗಿದ್ದ ಟೀಮ್‌ ಇಂಡಿಯಾ ವೇಗಿ ಆಕಾಶ ದೀಪ್‌ ಹೇಳಿಕೊಂಡಿದ್ದಾರೆ. ದ್ರಾವಿಡ್‌ ಸಂದೇಶ ಬಂದ 11 ರಿಂದ 12 ಗಂಟೆಗಳ ಬಳಿಕ ಭಾರತ ತಂಡದ ಪರ ಆಡುವ ಬಗ್ಗೆ ಖಚಿತವಾಗಿತ್ತು ಎಂದು ಆಕಾಶ್‌ ದೀಪ್‌ ಹೇಳಿಕೊಂಡಿದ್ದಾರೆ.

ರಾಹುಲ್‌ ದ್ರಾವಿಡ್‌ ಸಂದೇಶವನ್ನು ನಿರಾಕರಿಸಿದ್ದ ಆಕಾಶ್‌ ದೀಪ್‌.

ನವದೆಹಲಿ: ಭಾರತ ಟೆಸ್ಟ್‌ ತಂಡದ (Indian Cricket Team) ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ವೇಗದ ಬೌಲರ್‌ ಆಕಾಶ್‌ ದೀಪ್‌ (Akash Deep) ಹಲವು ವರ್ಷಗಳ ಕಾಲ ಕಾದಿದ್ದಾರೆ. ಆದರೆ ಅವರಿಗೆ ಟೆಸ್ಟ್‌ಗೆ ಪದಾರ್ಪಣೆ ಮಾಡಲು ಅವಕಾಶ ಬಂದಾಗ ಬಲಗೈ ಇದನ್ನು ನಂಬಿರಲಿಲ್ಲ ಹಾಗೂ ತಡವಾಗಿ ತಮ್ಮ ಅವಕಾಶದ ಬಗ್ಗೆ ಖಚಿತಪಡಿಸಿಕೊಂಡಿದ್ದರು. ಈ ಬಗ್ಗೆ ಸ್ವತಃ ಆಕಾಶ್‌ ದೀಪ್‌ ಅವರೇ ಹೇಳಿಕೊಂಡಿದ್ದಾರೆ.

ಟೆಸ್ಟ್‌ ಪಂದ್ಯಕ್ಕೂ ಮುನ್ನ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಅವರು, ಟೆಸ್ಟ್‌ ಪದಾರ್ಪಣೆ ಮಾಡುವ ಬಗ್ಗೆ ಸಂದೇಶವನ್ನು ಕಳುಹಿಸಿದ್ದರು ಎಂದು ಆಕಾಶ್‌ ದೀಪ್‌ ರಿವೀಲ್‌ ಮಾಡಿದ್ದಾರೆ. ಆದರೆ, ಆರಂಭದಲ್ಲಿ ದ್ರಾವಿಡ್‌ ಅವರ ಮೊಬೈಲ್‌ ಸಂಖ್ಯೆಯನ್ನು ಬಲಗೈ ವೇಗಿ ಇಟ್ಟುಕೊಂಡಿರಲಿಲ್ಲ. ಹಾಗಾಗಿ ಅವರಿಗೆ ಟೆಸ್ಟ್‌ ಪದಾರ್ಪಣೆ ಬಗ್ಗೆ ಖಚಿತತೆ ಇರಲಿಲ್ಲ. ಆದರೆ, ಒಮ್ಮೆ ಆಟಗಾರರು ಹೇಳಿದ ಬಳಿಕ ಅವರು ಭಾರತ ತಂಡಕ್ಕೆ ಪದಾರ್ಪಣೆ ಮಾಡುವುದನ್ನು ಖಚಿತಪಡಿಸಿದ್ದರು.

ಆಜ್‌ ತಕ್‌ ಬಿಹಾರ್‌ ಪಂಚಾಯತ್‌ನಲ್ಲಿ ಮಾತನಾಡಿದ ಆಕಾಶ್‌ ದೀಪ್‌, "ನೀವು ನಾಳೆ ಆಡುತ್ತೀರಿ ಎಂದು ರಾಹುಲ್‌ ದ್ರಾವಿಡ್‌ ಅವರು ನನಗೆ ಹೇಳುವ ಸಂದೇಶ ಬಂದಿತ್ತು. ಅವರ ಮೊಬೈಲ್‌ ನಂಬರ್‌ ಅನ್ನು ನಾನು ಸೇವ್‌ ಮಾಡಿಕೊಂಡಿರಲಿಲ್ಲ ಹಾಗೂ ಆ ಸಂದೇಶವನ್ನು ಕಡೆಗಣಿಸಿದ್ದೆ," ಎಂದು ಹೇಳಿದ್ದಾರೆ.

200 ಒಡಿಐ ವಿಕೆಟ್‌ ಕಿತ್ತು ಶೇನ್‌ ವಾರ್ನ್‌ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರಿದ ಆಡಮ್‌ ಝಾಂಪ!

"ಭಾರತ ತಂಡದ ಪರ ಆಡುವ ಬಗ್ಗೆ ನನಗೆ ಖಚಿತತೆ ಇರಲಿಲ್ಲ, ಹಾಗಾಗಿ ನನಗೆ ವಿಶ್ರಾಂತಿ ಇರಲಿಲ್ಲ. ಮತ್ತೊಮ್ಮೆ ಸಂದೇಶವನ್ನು ಪರಿಶೀಲಿಸಿದ ಬಳಿಕ, ಇದು ರಾಹುಲ್‌ ಸರ್‌ ನಂಬರ್‌ ಎಂದು ತಿಳಿಯಿತು. ಮತ್ತೆ ನನಗೆ ಕರೆ ಮಾಡಿ ಕ್ಷಮಿಸಿ ಸರ್‌, ನಿಮ್ಮ ನಂಬರ್‌ ಅನ್ನು ನಾನು ಸೇವ್‌ ಮಾಡಿಕೊಂಡಿರಲಿಲ್ಲ. ಹಾಗಾಗಿ ಸಂದೇಶವನ್ನು ನಾನು ಕಳೆದುಕೊಂಡಿದ್ದೇನೆ ಎಂದು ಹೇಳಿದ್ದೆ," ಎಂದರು.

ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಖಚಿತವಾದ ಬಳಿಕ ಆಕಾಶ್ ದೀಪ್ ಆ ಅವಕಾಶವನ್ನು ವಿಭಿನ್ನವಾಗಿ ನೋಡಿದರು. ಪಂದ್ಯದ ಒತ್ತಡಕ್ಕೆ ಒಳಗಾಗುವ ಬದಲು, ತಮ್ಮ ಕ್ರಿಕೆಟ್‌ ಪಯಣದಲ್ಲಿ ಕಳೆದ ಹಲವು ವರ್ಷಗಳ ಕಾಲ ಮಾಡಿದ ಪರಿಶ್ರಮವನ್ನು ಪರೀಕ್ಷಿಸುವ ಮಹತ್ವದ ಅವಕಾಶ ಇದಾಗಿದೆ ಎಂದು ಅವರು ಭಾವಿಸಿದರು.

“ನನಗೆ ತುಂಬಾ ಸಂತೋಷವಾಗಿತ್ತು. ಆದರೆ ನಾನು ಇದನ್ನು ಒಂದು ಅವಕಾಶವಾಗಿ ನೋಡಿದೆ. ಇದು ನನ್ನ ಜೀವನದ ಅತ್ಯಂತ ದೊಡ್ಡ ಅವಕಾಶ ಎಂದು ಭಾವಿಸಿದ್ದೆ. ಕಳೆದ 22-23 ವರ್ಷಗಳಲ್ಲಿ ನಾನು ಕ್ರಿಕೆಟ್‌ನಲ್ಲಿ ಏನು ಮಾಡಿದ್ದೆನೋ, ಅದಕ್ಕೆ ಈ ಐದು ದಿನಗಳು ಪರೀಕ್ಷೆಯಾಗಿದ್ದವು,” ಎಂದು ಆಕಾಶ್ ದೀಪ್ ಹೇಳಿದ್ದಾರೆ.

IND vs WI ಏಕದಿನ ಸರಣಿಯಲ್ಲಿ ಗಮನ ಸೆಳೆಯಬಲ್ಲ ಆಟಗಾರನನ್ನು ಹೆಸರಿಸಿದ ಇರ್ಫಾನ್‌ ಪಠಾಣ್!

ಆಕಾಶ್ ದೀಪ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಹೆಚ್ಚು ಉಪಯುಕ್ತ ಕೊಡುಗೆ ನೀಡಲು ಕೆಲಸ ಮಾಡುತ್ತಿದ್ದಾರೆ. ತಮ್ಮ ಆಟದ ಈ ಭಾಗವನ್ನು ಅಭಿವೃದ್ಧಿಪಡಿಸಿಕೊಳ್ಳುವಂತೆ ಕೋಚ್ ಗೌತಮ್ ಗಂಭೀರ್ ಪ್ರೋತ್ಸಾಹಿಸಿದ್ದಾರೆ ಎಂದು ಆಕಾಶ್ ದೀಪ್ ಹೇಳಿದ್ದಾರೆ. ಭಾರತಕ್ಕೆ ಕೆಳ ಕ್ರಮಾಂಕದಲ್ಲಿ ರನ್‌ಗಳ ಅಗತ್ಯವಿದ್ದಾಗಲೆಲ್ಲಾ ಬ್ಯಾಟ್‌ನಿಂದಲೂ ತಂಡಕ್ಕೆ ನೆರವಾಗಬೇಕು ಎಂಬುದು ತಮ್ಮ ಉದ್ದೇಶ ಎಂದು ಅವರು ತಿಳಿಸಿದ್ದಾರೆ.

“ನನಗೆ ಎಲ್ಲವನ್ನೂ ನೀಡಿರುವುದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಬೌಲಿಂಗ್ ನನ್ನ ಜೀವನದಲ್ಲಿ ಎಲ್ಲವನ್ನೂ ನೀಡಿದೆ. ಹೀಗಾಗಿ ನಾನು ಯಾವಾಗಲೂ ಬೌಲಿಂಗ್‌ನ್ನೇ ಆಯ್ಕೆ ಮಾಡುತ್ತೇನೆ. ಆದರೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಾಗಲೆಲ್ಲಾ ಅದನ್ನು ಬಳಸಿಕೊಳ್ಳುತ್ತೇನೆ,” ಎಂದು ಆಕಾಶ್ ದೀಪ್ ಹೇಳಿದ್ದಾರೆ.