ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪೃಥ್ವಿ ಶಾ ಜೊತೆ ನಿಶ್ಚಿತಾರ್ಥ ಬ್ರೇಕ್‌-ಅಪ್‌ ಮಾಡಿಕೊಂಡ ಬಗ್ಗೆ ಆಕೃತಿ ಅಗರ್ವಾಲ್‌ ಸ್ಪಷ್ಟನೆ!

ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಅವರ ಜತೆಗೆ ಆಕೃತಿ ಅಗರ್ವಾಲ್‌ ಅವರು ತಮ್ಮ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಆಕೃತಿ ಅವರೇ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಕಳೆದ ಆರು ತಿಂಗಳ ಹಿಂದ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಇಬ್ಬರೂ ಪರಸ್ಪರ ಒಪ್ಪಿಗೆಯ ಮೂಲಕ ಈ ನಿರ್ಧಾರಕ್ಕೆ ಬಂದಿದ್ದಾರೆ.

ಪೃಥ್ವಿ ಶಾ ಜೊತೆ ನಿಶ್ಚಿತಾರ್ಥ ಮುರಿದುಕೊಂಡ ಆಕೃತಿ ಅಗರ್ವಾಲ್‌.

ನವದೆಹಲಿ: ತಮ್ಮ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ಕಠಿಣ ದಿನಗಳನ್ನು ಎದುರಿಸುತ್ತಿರುವ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ (Prithvi Shaw) ಇದೀಗ ತಮ್ಮ ವೈಯಕ್ತಿಕ ಜೀವನದಲ್ಲಿಯೂ ದೊಡ್ಡ ಹಿನ್ನಡೆಯನ್ನು ಅನುಭವಿಸಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಆಕೃತಿ ಅಗರ್ವಾಲ್‌ (Akruti Agarwal) ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಅವರ ನಿಶ್ಚಿತಾರ್ಥ ಮುರಿದು ಬಿದ್ದಿದೆ. ಈ ಬಗ್ಗೆ ಆಕೃತಿ ಅಗರ್ವಾಲ್‌ ಅವರೇ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಇಬ್ಬರೂ ಸೇರಿ ಇದಕ್ಕೆ ಒಪ್ಪಿಕೊಂಡ ಬಳಿಕ ಬೇರೆ-ಬೇರಿಯಾಗಿದ್ದೇವೆಂದು ಆಕೃತಿ ಹೇಳಿಕೊಂಡಿದ್ದಾರೆ.

“ಭಾರವಾದ ಹೃದಯದಿಂದ ಈ ವಿಷಯವನ್ನು ಹಂಚಿಕೊಳ್ಳುತ್ತಿದ್ದೇನೆ. ನಿಶ್ಚಿತಾರ್ಥ ಮಾಡಿಕೊಂಡಿದ್ದ ಗೆಳೆಯ ಹಾಗೂ ನಾನು ನಮ್ಮ ಭವಿಷ್ಯದ ಕುರಿತಾದ ವಿಭಿನ್ನ ಗುರಿಗಳು ಮತ್ತು ಪರಿಸ್ಥಿತಿಗಳ ಕಾರಣದಿಂದ ಬೇರ್ಪಡಲು ನಿರ್ಧರಿಸಿದ್ದೇವೆ. ನಾವು ಪರಸ್ಪರ ಎಷ್ಟೇ ಪ್ರೀತಿ ಹಾಗೂ ಕಾಳಜಿ ಹೊಂದಿದ್ದರೂ, ನಮ್ಮ ಜೀವನದ ಹಾದಿಗಳು ಒಟ್ಟಾಗಿ ಸಾಗಲು ಸಾಧ್ಯವಿಲ್ಲ ಎಂಬುದನ್ನು ಒಪ್ಪಿಕೊಳ್ಳುವ ಹಂತಕ್ಕೆ ಬಂದಿದ್ದೇವೆ. ನಮ್ಮ ಜವಾಬ್ದಾರಿಗಳು ಹಾಗೂ ಸದ್ಯ ನಾವು ಎದುರಿಸುತ್ತಿರುವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು, ಪರಸ್ಪರ ಒಪ್ಪಿಗೆಯಿಂದ ಪ್ರತ್ಯೇಕವಾಗಿ ಸಾಗಲು ನಿರ್ಧರಿಸಿದ್ದೇವೆ,” ಎಂದು ಆಕೃತಿ ಅಗರ್ವಾಲ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗಾಗಿ ಏಷ್ಯನ್ ಗೇಮ್ಸ್‌ನಿಂದ ನಿತೀಶ್ ರೆಡ್ಡಿ ರಿಲೀಸ್‌

“ಮುಂದಿನ ಜೀವನದಲ್ಲಿ ನಮ್ಮಿಬ್ಬರಿಗೂ ಉತ್ತಮವಾದದ್ದೇ ನಡೆಯಲಿ, ಶಾಂತಿ ಮತ್ತು ಸಂತೋಷ ಸಿಗಲಿ ಎಂದು ನಾನು ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಈ ಕಷ್ಟದ ಸಮಯದಲ್ಲಿ ನಮ್ಮ ಖಾಸಗಿತನವನ್ನು ಎಲ್ಲರೂ ಗೌರವಿಸಬೇಕು ಎಂದು ವಿನಂತಿಸುತ್ತೇನೆ. ನಮ್ಮ ನಿರ್ಧಾರದ ಹಿಂದಿನ ಕಾರಣಗಳ ಬಗ್ಗೆ ಊಹಾಪೋಹಗಳನ್ನು ಮಾಡುವುದು ಅಥವಾ ಯಾವುದೇ ರೀತಿಯ ನಿರ್ಧಾರಕ್ಕೆ ಬರುವುದು ಬೇಡ. ನಮ್ಮ ಪರಿಸ್ಥಿತಿ ಹಾಗೂ ವೈಯಕ್ತಿಕ ಜಾಗವನ್ನು ಅರ್ಥಮಾಡಿಕೊಂಡು ಗೌರವಿಸಿದ್ದಕ್ಕಾಗಿ ಧನ್ಯವಾದಗಳು,” ಎಂದು ಅವರು ಹೇಳಿದ್ದಾರೆ.



ಪೃಥ್ವಿ ಶಾ ಮತ್ತು ಆಕೃತಿ ಅಗರ್ವಾಲ್ ಅವರು ಮಾರ್ಚ್ 8ರಂದು ತಮ್ಮ ನಿಶ್ಚಿತಾರ್ಥವನ್ನು ಘೋಷಿಸಿದ್ದರು. ಈ ಸಂದರ್ಭದಲ್ಲಿ ಭಾರತ ತಂಡದ ಬ್ಯಾಟರ್ ಪೃಥ್ವಿ ಶಾ ಅವರು ನಿಶ್ಚಿತಾರ್ಥದ ಕ್ಷಣಗಳ ಹಲವು ರೊಮ್ಯಾಂಟಿಕ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಒಂದು ಫೋಟೋದಲ್ಲಿ ಶಾ ಅವರು ಆಕೃತಿ ಅಗರ್ವಾಲ್ ಅವರಿಗೆ ಪ್ರಪೋಸ್ ಮಾಡಲು ಒಂದು ಮೊಣಕಾಲಿನ ಮೇಲೆ ಕುಳಿತಿರುವುದು ಕಂಡುಬಂದಿತ್ತು. ಮತ್ತೊಂದು ಫೋಟೋದಲ್ಲಿ ಇಬ್ಬರೂ ತಮ್ಮ ನಿಶ್ಚಿತಾರ್ಥದ ಉಂಗುರಗಳನ್ನು ಪ್ರದರ್ಶಿಸಿದ್ದರು.

“ಮೈದಾನದಲ್ಲಿ ಸಿಕ್ಸರ್‌ಗಳಿಂದ ಹಿಡಿದು, ಮೈದಾನದ ಹೊರಗೆ ಜೀವನಪೂರ್ತಿ ಯಶಸ್ಸಿನ ಹೊಡೆತಗಳವರೆಗೆ. ಅವಳು ನನ್ನ ಪರಿಪೂರ್ಣ ಇನಿಂಗ್ಸ್!” ಎಂದು ಶಾ ಆ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದರು.

ಪಂದ್ಯದ ಸ್ಥಳ ಬದಲಾಯಿಸುವ ಪಾಕಿಸ್ತಾನದ ಮನವಿ ತಿರಸ್ಕರಿಸಿದ ಹಾಕಿ ಇಂಡಿಯಾ

ಪೃಥ್ವಿ ಶಾ ದೇಶಿ ಹಾಗೂ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮತ್ತೆ ತಮ್ಮ ಸ್ಥಾನವನ್ನು ಬಲಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಪ್ರಮುಖ ಹಂತದಲ್ಲೇ ಈ ನಿಶ್ಚಿತಾರ್ಥ ನಡೆದಿತ್ತು. 2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಬಲಗೈ ಬ್ಯಾಟರ್ ಶಾ ಅವರನ್ನು 2026ರ ಐಪಿಎಲ್ ಹರಾಜಿನ ವೇಗದ ಸುತ್ತಿನಲ್ಲಿ ಡೆಲಿ ಕ್ಯಾಪಿಟಲ್ಸ್ ತಂಡವು ₹75 ಲಕ್ಷಕ್ಕೆ ಖರೀದಿಸಿತ್ತು. ಆದರೆ, 2026ರ ಐಪಿಎಲ್‌ ಋತುವಿನಲ್ಲಿ ಶಾ ಅವರಿಗೆ ಒಂದೇ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಗಲಿಲ್ಲ.