ನವದೆಹಲಿ: ಕೆರಿಬಿಯನ್ ಪ್ರೀಮಿಯರ್ ಲೀಗ್ (CPL 2025) ಟೂರ್ನಿಯ ಟ್ರಿನ್‌ಬ್ಯಾಗೊ ನೈಟ್ ರೈಡರ್ಸ್ ಹಾಗೂ ಗಯಾನ ಆಮೇಜಾನ್ ವಾರಿಯರ್ಸ್ (TRK vs GAW) ನಡುವಣ 2025ರ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದ ವೇಳೆ ಅಲೆಕ್ಸ್ ಹೇಲ್ಸ್ (Alex Hales) ಟಿ20 ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ತಲುಪಿದ್ದಾರೆ. ಈ ಪಂದ್ಯದಲ್ಲಿ ಟ್ರಿನ್‌ಬ್ಯಾಗೊ ನೈಟ್ ರೈಡರ್ಸ್ ತಂಡದ ಪರ ಇನಿಂಗ್ಸ್ ಆರಂಭಿಸಿದ ಅಲೆಕ್ಸ್ ಹೇಲ್ಸ್ ಕೇವಲ 43 ಎಸೆತಗಳಲ್ಲಿ 74 ರನ್‌ಗಳನ್ನು ಸಿಡಿಸಿದರು. ಆ ಮೂಲಕ 164 ರನ್‌ಗಳ ಗುರಿಯನ್ನು ಟಿಕೆಆರ್ ತಂಡ 17.2 ಓವರ್‌ಗಳಿಗೆ ತಲುಪಲು ನೆರವು ನೀಡಿದರು. ಬಲಗೈ ಬ್ಯಾಟ್ಸ್‌ಮನ್ ತಮ್ಮ ಸ್ಪೋಟಕ ಇನಿಂಗ್ಸ್‌ನಲ್ಲಿ 7 ಸಿಕ್ಸರ್ ಹಾಗೂ 3 ಬೌಂಡರಿಗಳನ್ನು ಸಿಡಿಸಿದರು. ಇವರು ಆರಂಭಿಕ ವಿಕೆಟ್‌ಗೆ ಕಾಲಿನ್ ಮನ್ರೊ ಅವರ ಜೊತೆಗೆ 116 ರನ್‌ಗಳ ಜೊತೆಯಾಟವನ್ನು ಆಡಿದರು.
ತಮ್ಮ ಅರ್ಧಶತಕದ ಮೂಲಕ ಅಲೆಕ್ಸ್ ಹೇಲ್ಸ್ ಟಿ20 ಕ್ರಿಕೆಟ್‌ನಲ್ಲಿ ನೂತನ ಮೈಲುಗಲ್ಲು ತಲುಪಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 14000 ರನ್‌ಗಳ ದಾಖಲಿಸಿದ ವೆಸ್ಟ್ ಇಂಡೀಸ್ ಅಲ್ಲದ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಅಲೆಕ್ಸ್ ಹೇಲ್ಸ್ ಭಾಜನರಾಗಿದ್ದಾರೆ. ಇಲ್ಲಿಯತನ ಆಡಿದ 509 ಪಂದ್ಯಗಳಿಂದ14024 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ.
14,000 ಟಿ20 ರನ್ ಗಳಿಸಿ ಕೈರೊನ್ ಪೊಲಾರ್ಡ್ ದಾಖಲೆ ಮುರಿದ ಅಲೆಕ್ಸ್ ಹೇಲ್ಸ್!
ಅಗ್ರ ಸ್ಥಾನದಲ್ಲಿರುವ ಕ್ರಿಸ್ ಗೇಲ್
ಅಲೆಕ್ಸ್ ಹೇಲ್ಸ್‌ಗೂ ಮುನ್ನ ಕೈರೊನ್ ಪೊಲಾರ್ಡ್ ಅವರು ಟಿ20 ಕ್ರಿಕೆಟ್‌ನಲ್ಲಿ 14000 ರನ್‌ಗಳನ್ನು ದಾಖಲಿಸಿದ್ದರು. ವೆಸ್ಟ್ ಇಂಡೀಸ್ ಆಲ್‌ರೌಂಡರ್ ಸದ್ಯ 14012 ರನ್‌ಗಳನ್ನು ದಾಖಲಿಸಿದ್ದಾರೆ. ಇನ್ನು ಇವರ ಮಾಜಿ ಸಹ ಆಟಗಾರ ಕ್ರಿಸ್ ಗೇಲ್ 14562 ರನ್‌ಗಳನ್ನು ದಾಖಲಿಸಿದ್ದಾರೆ. ಆರ್‌ಸಿಬಿ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ 22 ಶತಕಗಳು ಹಾಗೂ 88 ಅರ್ಧಶತಕಗಳನ್ನು ಬಾರಿಸಿದ್ದಾರೆ.
ಅಲೆಕ್ಸ್ ಹೇಲ್ಸ್ ಅವರು 7 ಶತಕಗಳು ಹಾಗೂ 89 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇವರು ವಿಂಡೀಸ್ ದಿಗ್ಗಜನ ದಾಖಲೆಯನ್ನು ಅಲೆಕ್ಸ್ ಹೇಲ್ಸ್ ಮುರಿಯಬಹುದು, ಇನ್ನು ಕೈರೊನ್ ಪೊಲಾರ್ಡ್ ಅವರು ಒಂದು ಶತಕ ಹಾಗೂ 64 ಅರ್ಧಶತಕಗಳನ್ನು ತಮ್ಮ ಖಾತೆಯಲ್ಲಿ ಹೊಂದಿದ್ದಾರೆ. ಇವರ ಬೌಲಿಂಗ್‌ನಲ್ಲಿ 332 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಮೂರನೇ ಬಾರಿ ದಿ ಹಂಡ್ರೆಡ್ ಟೂರ್ನಿಯಲ್ಲಿ ಚಾಂಪಿಯನ್ ಆದ ಓವಲ್ ಇನ್ವಿನ್ಸಿಬಲ್ಸ್!
2009ರಲ್ಲಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ
2009ರಲ್ಲಿ ಅಲೆಕ್ಸ್ ಹೇಲ್ಸ್ ಅವರು ನಾಟಿಂಗ್‌ಹ್ಯಾಮ್‌ಶೈರ್ ಪರ ಟಿ20 ಕಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ದುರ್ಹ್ಯಾಮ್ ವಿರುದ್ಧದ ತಮ್ಮ ಪದಾರ್ಪಣೆ ಪಂದ್ಯದಲ್ಲಿ ಅವರು ಎರಡು ಎಸೆತಗಳಲ್ಲಿ ಡಕ್‌ಔಟ್ ಆಗಿದ್ದರು. ನಂತರ 2011ರಲ್ಲಿ ಜೋಸ್ ಬಟ್ಲರ್ ಅವರ ಜೊತೆಗೆ ಅಲೆಕ್ಸ್ ಹೇಲ್ಸ್ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದೇ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಹಾಗೂ ಅಜಿಂಕ್ಯ ರಹಾನೆ ಕೂಡ ಟಿ20ಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ತಮ್ಮ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಪದಾರ್ಪಣೆ ಪಂದ್ಯದಲ್ಲಿಯೂ ಹೇಲ್ಸ್ ಎರಡು ಎಸೆತಗಳಲ್ಲಿ ಡಕ್‌ಔಟ್ ಆಗಿದ್ದರು.