ಮೂರನೇ ಬಾರಿ ದಿ ಹಂಡ್ರೆಡ್ ಟೂರ್ನಿಯಲ್ಲಿ ಚಾಂಪಿಯನ್ ಆದ ಓವಲ್ ಇನ್ವಿನ್ಸಿಬಲ್ಸ್!
ಓವಲ್ ಇನ್ವಿನ್ಸಿಬಲ್ಸ್ ತಂಡ ದಿ ಹಂಡ್ರೆಡ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ. ಲಂಡನ್‌ನ ಐತಿಹಾಸಿಕ ದಿ ಲಾರ್ಡ್ಸ್ ಅಂಗಣದಲ್ಲಿ ನಡೆದಿದ್ದ ತೀವ್ರ ರೋಚಕೆತಯ ಫೈನಲ್ ಪಂದ್ಯದಲ್ಲಿ ಓವಲ್ ತಂಡ, ಎದುರಾಳಿ ಟ್ರೆಂಟ್ ರಾಕೆಟ್ಸ್ ತಂಡವನ್ನು 26 ರನ್‌ಗಳಿಂದ ಮಣಿಸಿತು. ಆ ಮೂಲಕ ಮೂರನೇ ಬಾರಿ ದಿ ಹಂಡ್ರೆಡ್ ಟೂರ್ನಿಯಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಮೂರನೇ ಬಾರಿ ದಿ ಹಂಡ್ರೆಡ್ ಟೂರ್ನಿ ಗೆದ್ದ ಓವಲ್ ಇನ್ವಿನ್ಸಿಬಲ್ಸ್ ತಂಡ. -

ಲಂಡನ್: ಓವಲ್ ಇನ್ವಿನ್ಸಿಬಲ್ಸ್ (Oval Invincibles) ತಂಡ ಮೂರನೇ ಬಾರಿ ದಿ ಹಂಡ್ರೆಡ್ (The Hundred) ಪ್ರಶಸ್ತಿಯನ್ನು ಗೆದ್ದಿದೆ. ಇಂಗ್ಲೆಂಡ್‌ನಲ್ಲಿ ನಡೆಯುವ ಈ ಲೀಗ್‌ನ ಫೈನಲ್‌ನಲ್ಲಿ ಓವಲ್ ತಂಡ, ಎದುರಾಳಿ ಟ್ರೆಂಟ್ ರಾಕೆಟ್ಸ್ (Trent Rockets) ವಿರುದ್ದ ಗೆಲ್ಲುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ ನಡೆದಿದ್ದ ರೋಚಕ ಫೈನಲ್ ಪಂದ್ಯವನ್ನು ಓವಲ್ ಇನ್ವಿನ್ಸಿಬಲ್ಸ್ ತಂಡ 26 ರನ್‌ಗಳ ಅಂತರದಲ್ಲಿ ಗೆದ್ದುಕೊಂಡಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಸ್ಯಾಮ್ ಬಿಲ್ಲಿಂಗ್ಸ್ ನಾಯಕತ್ವದ ಓವಲ್, 100 ಎಸೆತಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 168 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ರಾಕೆಟ್ಸ್ ತಂಡವು 8 ವಿಕೆಟ್‌ಗಳಿಗೆ ಕೇವಲ 142 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಈ ಗೆಲುವಿನ ಮೂಲಕ ಓವಲ್ ಇನ್ವಿನ್ಸಿಬಲ್ಸ್ ತಂಡ, ದಿ ಹಂಡ್ರೆಡ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಚಾಂಪಿಯನ್ಸ್ ಆಯಿತು.
ಓವಲ್ ಇನ್ವಿನ್ಸಿಬಲ್ಸ್ ಪರ ಆರಂಭಿಕ ಬ್ಯಾಟ್ಸ್‌ಮನ್ ವಿಲ್ ಜ್ಯಾಕ್ಸ್ ಸ್ಫೋಟಕ ಬ್ಯಾಟಿಂಗ್ ತೋರಿದರು. ವಿಲ್ ಜ್ಯಾಕ್ಸ್, ತವಂಡಾ ಮುಯೆಯೆ ಅವರೊಂದಿಗೆ 31 ರನ್‌ಗಳ ಪಾಲುದಾರಿಕೆಯನ್ನು ಆಡಿದರು. ಇದರ ನಂತರ, ಜೋರ್ಡಾನ್ ಕಾಕ್ಸ್, ಜಾಕ್ಸ್‌ಗೆ ಬೆಂಬಲ ನೀಡಿದರು. ಇಬ್ಬರೂ ಎರಡನೇ ವಿಕೆಟ್‌ಗೆ 87 ರನ್‌ಗಳ ಜೊತೆಯಾಟವನ್ನು ಆಡಿದರು. ಕಾಕ್ಸ್ 28 ಎಸೆತಗಳಲ್ಲಿ 40 ರನ್ ಗಳಿಸಿದರು. ಜಾಕ್ಸ್ ಅರ್ಧಶತಕ ಗಳಿಸಿದರು. ಅವರು 41 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 72 ರನ್ ಗಳಿಸಿದರು. ಟ್ರೆಂಟ್ ರಾಕೆಟ್ಸ್ ಪರ ಬೌಲಿಂಗ್‌ನಲ್ಲಿ ಮಾರ್ಕಸ್ ಸ್ಟೋಯ್ನಿಸ್ ಎರಡು ವಿಕೆಟ್ ಪಡೆದರು.
DPL 2025: ದಿಗ್ವೇಶ್ ರಾಥಿ ಅವರ ಜತೆಗಿನ ಕಿರಿಕ್ ಬಗ್ಗೆ ಪ್ರತಿಕ್ರಿಯಿಸಿದ ನಿತೀಶ್ ರಾಣಾ!
ಮಾರ್ಕಸ್ ಸ್ಟೋಯ್ನಿಸ್ ಏಕಾಂಗಿ ಹೋರಾಟ ವ್ಯರ್ಥ
ಟ್ರೆಂಟ್ ರಾಕೆಟ್ಸ್‌ನ ಬ್ಯಾಟಿಂಗ್ ಫೈನಲ್ ಪಂದ್ಯದಲ್ಲಿ ಕೆಲಸ ಮಾಡಲಿಲ್ಲ. ಆರಂಭಿಕರಾದ ಟಾಮ್ ಬ್ಯಾಂಟನ್ ಮತ್ತು ಜೋ ರೂಟ್ ತಂಡಕ್ಕೆ ನಿಧಾನಗತಿಯ ಆರಂಭ ನೀಡಿದರು. ಇಬ್ಬರ ನಡುವೆ ಮೊದಲ ವಿಕೆಟ್‌ಗೆ 32 ಎಸೆತಗಳಲ್ಲಿ 36 ರನ್‌ಗಳ ಪಾಲುದಾರಿಕೆ ಇತ್ತು. ಬ್ಯಾಂಟನ್ 23 ರನ್ ಗಳಿಸಿದರೆ, ಜೋ ರೂಟ್ 10 ರನ್ ಗಳಿಸಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಬಂದ ರೆಹಾನ್ ಅಹ್ಮದ್ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ನಾಯಕ ಡೇವಿಡ್ ವಿಲ್ಲಿ 8 ಎಸೆತಗಳಲ್ಲಿ 14 ರನ್‌ಗಳ ತ್ವರಿತವಾಗಿ ತಮ್ಮ ಇನಿಂಗ್ಸ್ ಮುಗಿಸಿದರು. ಆದಾಗ್ಯೂ, ಮಾರ್ಕಸ್ ಸ್ಟೋಯ್ನಿಸ್ ಒಂದು ಕಡೆ ಗಟ್ಟಿಯಾಗಿ ನಿಂತು ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು.
🏆 3 YEARS IN A ROW! 🏆
— The Hundred (@thehundred) August 31, 2025
Oval Invincibles are 2025 champions! #TheHundredFinal pic.twitter.com/UlHzSpeIQ8
ಮಾರ್ಕಸ್ ಸ್ಟೋಯ್ನಿಸ್ ತುದಿಯಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ರನ್ ಗಳಿಸಿದರೂ ಮತ್ತೊಂದು ತುದಿಯಲ್ಲಿ ಬೇರೆ ಯಾವುದೇ ಬ್ಯಾಟ್ಸ್‌ಮನ್ ಸಾಥ್ ನೀಡಲಿಲ್ಲ. ಸ್ಟೋಯ್ನಿಸ್ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು ಆದರೆ ಇನ್ನೊಂದು ತುದಿಯಿಂದ ರನ್‌ಗಳು ಬರುತ್ತಿರಲಿಲ್ಲ. ಇನಿಂಗ್ಸ್ ಕೊನೆಯ ಎಸೆತದಲ್ಲಿ 64 ರನ್ ಗಳಿಸಿ ಅವರು ಔಟಾದರು.
ಓವಲ್ ತಂಡದ ಪರ ನೇಥನ್ ಸೌಟರ್ 25 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಪಂದ್ಯಕ್ಕಾಗಿಯೇ ಇಂಗ್ಲೆಂಡ್‌ಗೆ ಬಂದ ಆಡಮ್ ಝಾಂಪ 20 ಎಸೆತಗಳಲ್ಲಿ 21 ರನ್‌ಗಳಿಗೆ ಒಂದು ವಿಕೆಟ್ ಪಡೆದರು. 367 ರನ್ ಗಳಿಸಿದ ಜೋರ್ಡನ್ ಕಾಕ್ಸ್ ಅವರು ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.