ನವದೆಹಲಿ ಇಂಡಿಯನ್ ಪ್ರೀಮಿಯರ್ ಲೀಗ್ 19ನೇ ಆವೃತ್ತಿಯ (IPL 2026) ತನ್ನ ಆರಂಭಿಕ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿದ ಬಳಿಕ ಗುಜರಾತ್ ಟೈಟನ್ಸ್ (Gujarat Titans) ತಂಡಕ್ಕೆ ಸಮತೋಲನ ತರಲು ಕೆಲವು ಬದಲಾವಣೆಗಳನ್ನು ಮಾಡಬೇಕೆಂದು ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು (Ambati Rayudu) ಸಲಹೆ ನೀಡಿದ್ದಾರೆ. ಮಾರ್ಚ್ 31 ರಂದು ಮಲ್ಲಾನ್‌ಪುರದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಪಂದ್ಯದಲ್ಲಿ ಶುಭಮನ್ ಗಿಲ್ ನಾಯಕತ್ವದ ಟೈಟನ್ಸ್ ಮೂರು ವಿಕೆಟ್‌ಗಳಿಂದ ಸೋಲು ಅನುಭವಿಸಿತ್ತು.
ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್ ತನ್ನ ಪಾಲಿನ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 162 ರನ್‌ಗಳನ್ನು ಗಳಿಸಿತ್ತಾದರೂ ಎದುರಾಳಿ ತಂಡಕ್ಕೆ ಕಠಿಣ ಸ್ಪರ್ಧೆ ನೀಡಿತು. ಆದರೆ ಅಂತಿಮವಾಗಿ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್ ಕಿಂಗ್ಸ್ ತಂಡ ಐದು ಎಸೆತಗಳು ಬಾಕಿ ಇರುವಾಗ ಮೂರು ವಿಕೆಟ್‌ಗಳ ಜಯ ಸಾಧಿಸಿತು. ಐಪಿಎಲ್ ಡೆಬ್ಯೂ ಪಂದ್ಯದಲ್ಲೇ ಕೂಪರ್ ಕನೋಲಿ ಅಜೇಯ ಅರ್ಧಶತಕ ಸಿಡಿಸಿ ತನ್ನ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ʻಶುಭಮನ್ ಗಿಲ್ ನಾಯಕತ್ವಕ್ಕೆ ಏನಾಯ್ತು?ʼ-ಗುಜರಾತ್ ಟೈಟನ್ಸ್ ಸೋಲಿಗೆ ಇದೇ ಕಾರಣ ಎಂದ ಆಕಾಶ್ ಚೋಪ್ರಾ!
ಪಂದ್ಯದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು, ಟೈಟನ್ಸ್ ತಂಡದಲ್ಲಿ ಶಾರುಖ್ ಖಾನ್ ಅವರ ಪಾತ್ರವನ್ನು ಪ್ರಶ್ನಿಸಿದರು. ಬಲಗೈ ಬ್ಯಾಟ್ಸ್‌ಮನ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದು, ಇನಿಂಗ್ಸ್‌ಗ್ಸ್‌ನಲ್ಲಿ 4.2 ಓವರ್‌ಗಳು ಉಳಿದಿದ್ದಾಗ ಕ್ರೀಸ್‌ಗೆ ಬಂದರು. ಆದರೆ ವೈಶಾಖ್ ವಿಜಯಕುಮಾರ್ ಬೌಲಿಂಗ್‌ನಲ್ಲಿ ವಿಕೆಟ್ ಕೈಚೆಲ್ಲಿಸಿದರು. ಅವರು 6 ಎಸೆತಗಳಲ್ಲಿ ಕೇವಲ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಶಾರುಖ್ ಖಾನ್ ವಿರುದ್ಧ ಅಂಬಾಟಿ ರಾಯುಡು ಬೇಸರ
ಐಪಿಎಲ್ ಟೂರ್ನಿಯಲ್ಲಿ ಕಳೆದ ಕೆಲವು ಸಮಯದಿಂದ ಶಾರುಖ್ ಖಾನ್ ತಮ್ಮ ಹೆಸರುಗಿಂತ ತಕ್ಕ ಮಟ್ಟದ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ ಎಂದು ರಾಯುಡು ಅಭಿಪ್ರಾಯಪಟ್ಟರು.
“ಇದೀಗ ಕೆಲ ಸೀಸನ್‌ಗಳಿಂದ ನಿರೀಕ್ಷೆ ಹುಸಿ ಮಾಡಿದ ಬಗ್ಗೆ ಬಹಳ ಮಾತುಕತೆ ನಡೆಯುತ್ತಿದೆ, ಆದರೆ ಪ್ರಾಮಾಣಿಕವಾಗಿ ಸಾಕಷ್ಟು ಫಲಿತಾಂಶ ಬಂದಿಲ್ಲ. ಟೈಟನ್ಸ್ (GT) ತಂಡದ ಪರ ಶಾರುಖ್ ಖಾನ್ ಮೇಲೆ ಬಹಳ ನಿರೀಕ್ಷೆ ಇತ್ತು, ಏಕೆಂದರೆ ತಂಡ, ಅವರನ್ನು ಪಂದ್ಯಗಳನ್ನು ಮುಗಿಸಲು ಬಯಸಿತ್ತು. ಆದರೆ, ಇದು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಟೀಮ್ ಮ್ಯಾನೇಜ್‌ಮೆಂಟ್ ಶೀಘ್ರದಲ್ಲೇ ಅವರ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಅವರು ಹಿಂದಿನ ವರ್ಷದಿಂದ ಸುಧಾರಣೆ ಕಂಡಿದ್ದಾರೆಯೇ? ಯಾವುದಾದರೂ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದಾರೆಯೇ? ಈ ಪ್ರಶ್ನೆಗೆ ಉತ್ತರ ಇಲ್ಲವಾದರೆ, ತಂಡ ಬಹುಬೇಗ ನಿರ್ಧಾರ ಕೈಗೊಳ್ಳಬೇಕಾಗುತ್ತದೆ,” ಎಂದು ಅಂಬಾಟಿ ರಾಯುಡು ಇಎಸ್‌ಪಿಎನ್ ಕ್ರಿಕ್‌ಇನ್ಪೋಗೆ ತಿಳಿಸಿದ್ದಾರೆ.
IPL 2026: ಶ್ರೇಯಸ್ ಅಯ್ಯರ್‌ಗೆ ಗಾಯದ ಬಗ್ಗೆ ಅಪ್‌ಡೇಟ್ ನೀಡಿದ ಯುಜ್ವೇಂದ್ರ ಚಹಲ್!
ಜೇಸನ್ ಹೋಲ್ಡರ್‌ಗೆ ಮಣೆ ಹಾಕಿ: ರಾಯುಡು
ಗುಜರಾತ್ ಟೈಟನ್ಸ್ ತಮ್ಮ ತಂಡಕ್ಕೆ ಹೆಚ್ಚು ಸಮತೋಲನ ತರಲು ಅಶೋಕ್ ಶರ್ಮಾ ಅಥವಾ ಮೊಹಮ್ಮದ್ ಸಿರಾಜ್ ಅವರ ಪೈಕಿ ಒಬ್ಬರನ್ನು ಡ್ರಾಪ್ ಮಾಡಿ ಬ್ಯಾಟ್ಸ್‌ಮನ್ ಅನ್ನು ಸೇರಿಸಬಹುದೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ವಿದೇಶಿ ಕೋಟಾದಡಿಯಲ್ಲಿ ಕಗಿಸೊ ರಬಾಡ ಅವರ ಬದಲು ಜೇಸನ್ ಹೋಲ್ಡರ್‌ಗೆ ಅವಕಾಶ ನೀಡಬೇಕೆಂದು ಅವರು ಸಲಹೆ ನೀಡಿದ್ದಾರೆ.
“ನೀವು ಪ್ಲೇಯಿಂಗ್ xiನಲ್ಲಿ ಅಶೋಕ್ ಶರ್ಮಾ, ಸಿರಾಜ್ ಅಥವಾ ಪ್ರಸಿಧ್ ಕೃಷ್ಣ ಅವರಲ್ಲಿ ಒಬ್ಬರನ್ನು ಡ್ರಾಪ್ ಮಾಡಬೇಕು. ಆದರೆ ಪ್ರಸಿಧ್ ಕೃಷ್ಣ ಈಗ ಬೌಲ್ ಮಾಡುವ ರೀತಿಯಿಂದ ಅವರನ್ನು ಡ್ರಾಪ್ ಮಾಡಲಾಗುವುದಿಲ್ಲ. ಆದ್ದರಿಂದ ಸಿರಾಜ್ ಅಥವಾ ಅಶೋಕ್ ನಡುವೆ ಒಬ್ಬರನ್ನು ಆಯ್ಕೆ ಮಾಡಬೇಕು. ಇಬ್ಬರನ್ನೂ ಆಟಕ್ಕೆ ತರಲು ಸಾಧ್ಯವಿಲ್ಲ ಅಥವಾ ರಬಡಾ ಬಿಟ್ಟು ಹೋಲ್ಡರ್ ತಂದರೆ ಬ್ಯಾಟಿಂಗ್ ಸಮಸ್ಯೆ ಕೂಡ ಪರಿಹಾರವಾಗುತ್ತದೆ. ಪ್ರಸಿಧ್ ಕೃಷ್ಣ ಮೊದಲ 10 ಓವರ್‌ಗಳಲ್ಲಿ ಮತ್ತು ಬಹುಶಃ ಮೊದಲ ಆರು ಓವರ್‌ಗಳಲ್ಲಿ ಕನಿಷ್ಠ ಒಂದು ಓವರ್ ಬೌಲ್ ಮಾಡಬೇಕು,” ಎಂದು ಅಂಬಾಟಿ ರಾಯುಡು ಸೂಚಿಸಿದ್ದಾರೆ.