ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಫ್ಘಾನಿಸ್ತಾನ ವಿರುದ್ದದ ತ್ರಿಕೋನ ಸರಣಿಯ ಭಾರತ ಬಿ ತಂಡಕ್ಕೆ ಆಯ್ಕೆಯಾದ ಅನ್ವಯ್‌ ದ್ರಾವಿಡ್‌!

India U-19 B Squad: ಅಫ್ಘಾನಿಸ್ತಾನ ವಿರುದ್ಧದ ತ್ರಿಕೋನ ಸರಣಿಗೆ ಭಾರತ ಅಂಡರ್‌-19 ಎ ಮತ್ತು ಭಾರತ ಅಂಡರ್‌-19 ಬಿ ತಂಡಗಳನ್ನು ಬಿಸಿಸಿಐ ಪ್ರಕಟಿಸಿದೆ. ಭಾರತ ಬಿ ತಂಡಕ್ಕೆ ಭಾರತ ತಂಡದ ಮಾಜಿ ನಾಯಕ ಹಾಗೂ ಮಾಜಿ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಪುತ್ರ ಅನ್ವಯ್‌ ದ್ರಾವಿಡ್‌ಆಯ್ಕೆಯಾಗಿದ್ದಾರೆ.

ಭಾರತ ಅಂಡರ್‌-19 ಬಿ ತಂಡಕ್ಕೆ ಅನ್ವಯ್‌ ದ್ರಾವಿಡ್‌ ಆಯ್ಕೆ.

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಮಾಜಿ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಅವರ ಪುತ್ರ ಅನ್ವಯ್‌ ದ್ರಾವಿಡ್‌ (Anvay Dravid) ಅವರು ಅಫ್ಘಾನಿಸ್ತಾನ ವಿರುದ್ಧದ ತ್ರಿಕೋನ ಸರಣಿಯ ಭಾರತ ಅಂಡರ್‌-19 ಬಿ (India U-19 B Squad) ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ತ್ರಿಕೋನ ಸರಣಿಯು ನವೆಂಬರ್‌ 17 ರಿಂದ 30ರವರೆಗೆ ನಡೆಯಲಿದೆ. ಈ ಟೂರ್ನಿಯು ಬೆಂಗಳೂರಿನ ಬಿಸಿಸಿಐನ ಸೆಂಟರ್‌ ಆಫ್‌ ಎಕ್ಸಲೆನ್ಸ್‌ ಮೈದಾನದಲ್ಲಿ ನಡೆಯಲಿದೆ. ಭಾರತ ಅಂಡರ್‌-19 ಎ, ಭಾರತ ಅಂಡರ್‌-19 ಬಿ ಹಾಗೂ ಅಫ್ಘಾನಿಸ್ತಾನ ತಂಡಗಳು ಈ ಸರಣಿಯಲ್ಲಿ ಕಾದಾಟ ನಡೆಸಲಿದೆ.

ಕಳೆದ ಹಲವು ತಿಂಗಳುಗಳಿಂದ ಅನ್ವಯ್‌ ದ್ರಾವಿಡ್‌ ಕಿರಿಯದ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನವನ್ನು ತೋರುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಅಪ್ಪನಂತೆ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಆಗಿರುವ ಅನ್ವಯ್‌, ದೇಶಿ ಕಿರಿಯರ ಕ್ರಿಕೆಟ್‌ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನವನ್ನು ತೋರಿದ್ದಾರೆ. ಕಳೆದ ತಿಂಗಳು ವಿನೋ ಮಂಕಡ್‌ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಅನ್ವಯ್‌ ದ್ರಾವಿಡ್‌ ಅತ್ಯುತ್ತಮವಾಗಿ ಮುನ್ನಡೆಸಿದ್ದರು. ನಾಯಕತ್ವ ಹಾಗೂ ವೈಯಕ್ತಿಕ ಪ್ರದರ್ಶನದ ಮೂಲಕ ಅವರು ಎಲ್ಲರ ಗಮನವನ್ನು ಸೆಳೆದಿದ್ದರು.

ಹೆಚ್ಚುವರಿಯಾಗಿ, ನವೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆಯಲಿರುವ ಅಂಡರ್-19 ಚಾಲೆಂಜರ್ ಟ್ರೋಫಿಗಾಗಿ ಅವರನ್ನು ತಂಡದಲ್ಲಿ ಹೆಸರಿಸಲಾಯಿತು, ಆದರೂ ಆ ಟೂರ್ನಿಯಲ್ಲಿ ಅವರಿಗೆ ಇನ್ನೂ ಪಂದ್ಯದ ಸಮಯ ಸಿಕ್ಕಿಲ್ಲ.

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಭಾರತ ತಂಡದ ಆಯ್ಕೆಗೆ ಇಬ್ಬರು ಪ್ರಸಿದ್ಧ ಯುವ ಪ್ರತಿಭೆಗಳಾದ ಆಯುಷ್ ಮ್ಹಾತ್ರೆ ಮತ್ತು ವೈಭವ್ ಸೂರ್ಯವಂಶಿ ಅವರು ಅಲಭ್ಯರಾಗಿದ್ದಾರೆ. ಈ ಇಬ್ಬರೂ ಆಟಗಾರರು ತಮ್ಮ-ತಮ್ಮ ರಾಜ್ಯ ಹಿರಿಯರ ತಂಡಗಳಲ್ಲಿ ಸೇವೆಯ ಕಾರಣ ಅಲಭ್ಯರಾಗಿದ್ದಾರೆ. ಆಯುಷ್ ಮ್ಹಾತ್ರೆ ಪ್ರಸ್ತುತ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ, ಆದರೆ ವೈಭವ್ ಸೂರ್ಯವಂಶಿ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌‌ ಟೂರ್ನಿಯಲ್ಲಿ ಸ್ಪರ್ಧಿಸುವ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಕಾರಣದಿಂದಾಗಿ ಇವರು ತ್ರಿಕೋನ ಸರಣಿಗೆ ಅಲಭ್ಯರಾಗಿದ್ದಾರೆ.

ಅಂಡರ್‌-19 ವಿಶ್ವಕಪ್‌ ಟೂರ್ನಿಗೆ ಬಲಿಷ್ಠ ಭಾರತ ತಂಡವನ್ನು ಕಟ್ಟುವ ಸಲುವಾಗಿ ಈ ತ್ರಿಕೋನ ಸರಣಿಯಲ್ಲಿ ಆಟಗಾರರನ್ನು ಗುರುತಿಸಲು ಕೋಚ್‌ ಹಾಗೂ ಆಯ್ಕೆದಾರರಿಗೆ ನೆರವಾಗಲಿದೆ. ಅನ್ವಯ್ ದ್ರಾವಿಡ್ ಅವರ ವೃತ್ತಿಜೀವನದಲ್ಲಿ ಇದು ಮತ್ತೊಂದು ಹೆಜ್ಜೆಯಾಗಿದೆ, ಅವರ ಕುಟುಂಬದ ಪರಂಪರೆಯಿಂದಾಗಿ ನಿರೀಕ್ಷೆಗಳು ಸ್ವಾಭಾವಿಕವಾಗಿ ಹೆಚ್ಚಿವೆ. ಆದರೆ ಅವರ ಇತ್ತೀಚಿನ ಪ್ರದರ್ಶನಗಳು ಅವರು ತಮ್ಮದೇ ಆದ ಹಾದಿಯನ್ನು ರೂಪಿಸಿಕೊಳ್ಳುತ್ತಿದ್ದಾರೆಂದು ಸೂಚಿಸುತ್ತವೆ.



ಭಾರತ ಅಂಡರ್‌-19 ಎ ತಂಡ: ವಿಹಾನ್ ಮಲ್ಹೋತ್ರಾ (ನಾಯಕ), ಅಭಿಜ್ಞಾನ್ ಕುಂದು (ಉಪ ನಾಯಕ & ವಿಕೆಟ್‌ ಕೀಪರ್‌) , ವಾಫಿ ಕಚ್ಚಿ, ವಂಶ್ ಆಚಾರ್ಯ, ವಿನೀತ್ ವಿ.ಕೆ, ಲಕ್ಷ್ಯ ರಾಯಚಂದನಿ , ರಾಪೋಲ್ (ವಿ.ಕೀ), ಕಾನಿಷ್ಕ್‌ ಚೌಹಾಣ್‌, ಅನ್‌ಮೋಲ್‌ಜಿತ್‌ ಸಿಂಗ್, ಕಿಲಾನ್‌ ಪಟೇಲ್‌, ಮೊಹಮ್ಮದ್ ಇನಾನ್ (ಕೆಸಿಎ), ಹೆನಿಲ್‌ ಪಟೇಲ್, ಅಶುತೋಷ್ ಮಹಿದಾ, ಆದಿತ್ಯ ರಾವತ್, ಮೊಹಮ್ಮದ್ ಮಲಿಕ್

ಭಾರತ ಅಂಡರ್‌-19 ಬಿ ತಂಡ: ಆರೋನ್‌ ಜಾರ್ಜ್‌ (ನಾಯಕ), ವೇದಾಂತ್‌ ತ್ರಿವೇದಿ (ಉಪ ನಾಯಕ), ಯುವರಾಜ್‌ ಗೋಹಿಲ್‌, ಮೌಲ್ಯರಾಜಸಿನ್ಹ್‌ ಚಾವ್ದಾ, ರಾಹುಲ್‌ ಕುಮಾರ್‌, ಹಾರ್ವಂಶ್‌ ಸಿಂಗ್‌, ಅನ್ವಯ್‌ ದ್ರಾವಿಡ್‌ (ಕರ್ನಾಟಕ), ಆರ್‌ ಎಸ್‌ ಅಂಬರೀಶ್‌, ಬಿಕೆ ಕಿಶೋರ್‌, ನಮನ್‌ ಪುಷ್ಪಕ್‌, ಹೇಮಚುದೇಶನ್‌, ಉದಯ್‌ ಮೋಹನ್‌, ಇಶಾನ್‌ ಸೂದ್‌, ಡಿ ದೀಪೇಶ್‌,ರೋಹಿತ್‌ ಕುಮಾರ್‌ ದಾಸ್‌