ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

India's Predicted Playing XI: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೊದಲನೇ ಟೆಸ್ಟ್‌ ಪಂದ್ಯ ನವೆಂಬರ್‌ 14 ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್‌ XI ಅನ್ನು ಇಲ್ಲಿ ವಿವರಿಸಲಾಗಿದೆ.

IND vs SA: ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI -

Profile
Ramesh Kote Nov 9, 2025 5:48 PM

ನವದೆಹಲಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು (IND vs SA) ಎರಡು ಪಂದ್ಯಗಳ ಟೆಸ್ಟ್‌ ಸರಣಿಗೆ ಸಜ್ಜಾಗುತ್ತಿವೆ. ಮೊದಲನೇ ಟೆಸ್ಟ್‌ ಪಂದ್ಯ ನವೆಂಬರ್‌ 14 ರಂದು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ವಿರಾಟ್‌ ಕೊಹ್ಲಿ (Virat Kohli), ರೋಹಿತ್‌ ಶರ್ಮಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವ ಹಿನ್ನೆಲೆಯಲ್ಲಿ ಭಾರತ ತಂಡದ ಪ್ಲೇಯಿಂಗ್‌ XIನ (India's Playing XI) ಅಗ್ರ ಮೂರು ಕ್ರಮಾಂಕಗಳಲ್ಲಿ ಮೇಜರ್‌ ಸರ್ಜರಿ ಮಾಡಲಾಗುತ್ತಿದೆ. ಇಂಗ್ಲೆಂಡ್‌ ವಿರುದ್ದದ ಟೆಸ್ಟ್‌ ಸರಣಿಯಲ್ಲಿಯೇ ಭಾರತದ ಪ್ಲೇಯಿಂಗ್‌ XIನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿತ್ತು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ತವರು ಟೆಸ್ಟ್‌ ಸರಣಿಯಲ್ಲಿಯೂ ಟೀಮ್‌ ಇಂಡಿಯಾದಲ್ಲಿ ನಾವು ಕೆಲ ಬದಲಾವಣೆಗಳನ್ನು ನೋಡಬಹುದು.

ಮೊದಲನೇ ಟೆಸ್ಟ್‌ ಪಂದ್ಯದ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ವಿಕೆಟ್‌ ಕೀಪರ್‌ ಸ್ಥಾನಕ್ಕೆ ಇದೀಗ ಪೈಪೋಟಿ ತೀವ್ರವಾಗಿದೆ. ಏಕೆಂದರೆ ದೇಶಿ ಕ್ರಿಕೆಟ್‌ನಲ್ಲಿ ಧ್ರುವ್‌ ಜುರೆಲ್‌ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರು ನಿಯಮಿತವಾಗಿ ರನ್‌ ಗಳಿಸುತ್ತಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ಎ ವಿರುದ್ದ ಎರಡನೇ ಅನಧಿಕೃತ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಅವರು ಶತಕಗಳನ್ನು ಬಾರಿಸಿದ್ದರು. ಮತ್ತೊಂದು ಕಡೆ ರಿಷಭ್‌ ಪಂತ್‌ ಗಾಯದಿಂದ ಕಮ್‌ಬ್ಯಾಕ್‌ ಮಾಡಿದ್ದು, ದಕ್ಷಿಣ ಆಫ್ರಿಕಾ ಎ ವಿರುದ್ದದ ಮೊದಲನೇ ಅನಧಿಕೃತ ಟೆಸ್ಟ್‌ನಲ್ಲಿ ಅರ್ಧಶತಕವನ್ನು ಬಾರಿಸಿದ್ದರು. ಪಂತ್‌ ಮೊದಲನೇ ಆಯ್ಕೆಯ ವಿಕೆಟ್‌ ಕೀಪರ್‌ ಆಗಿದ್ದು, ಇವರು ಆಡುವುದು ಬಹುತೇಕ ಖಚಿತ. ಆದರೆ, ಅದ್ಭುತ ಫಾರ್ಮ್‌ನಲ್ಲಿರುವ ಧ್ರುವ್‌ ಜುರೆಲ್‌ ಅವರ ಸೇವೆಯನ್ನು ಕಳೆದುಕೊಳ್ಳಲು ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಇಷ್ಟವಿಲ್ಲ.

IND vs SA Test: ಗಿಲ್, ಬುಮ್ರಾ ಸೇರಿದಂತೆ ನಾಲ್ವರು ಆಟಗಾರರು ಇಂದು ಕೋಲ್ಕತ್ತಾಗೆ ಆಗಮನ

ಈ ಸೀಸನ್‌ ಆರಂಭದಿಂದಲೂ ಧ್ರುವ್‌ ಜುರೆಲ್‌ ಅವರು ಕ್ರಮವಾಗಿ 140, 1 ಹಾಗೂ 56, 125, 44 ಹಾಗೂ 6 ರನ್‌, 132 ಹಾಗೂ ಅಜೇಯ 127 ಗಳಿಸಿದ್ದಾರೆ. ಕಳೆದ ಎಂಟು ಪ್ರಥಮ ದರ್ಜೆ ಕ್ರಿಕೆಟ್‌ ಇನಿಂಗ್ಸ್‌ಗಳಲ್ಲಿ ಅವರು ಮೂರು ಶತಕಗಳು ಹಾಗೂ ಒಂದು ಅರ್ಧಶತಕವನ್ನು ಬಾರಿಸಿದ್ದಾರೆ. ಹಾಗಾಗಿ ಧ್ರುವ್‌ ಜುರೆಲ್ ಅವರನ್ನು ಮೊದಲನೇ ಟೆಸ್ಟ್‌ ಪಂದ್ಯದಿಂದ ಕೈ ಬಿಡಲು ಸಾಧ್ಯವೇ ಇಲ್ಲ. ಹಾಗಾಗಿ ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ ಅವರ ಬದಲು ಧ್ರುವ್‌ ಜುರೆಲ್‌ಗೆ ಭಾರತದ ಪ್ಲೇಯಿಂಗ್‌ XIನಲ್ಲಿ ಅವಕಾಶ ನೀಡಬಹುದು. ಜುರೆಲ್‌ಗೆ ಅವಕಾಶ ನೀಡಲು ಟೀಮ್‌ ಮ್ಯಾನೇಜ್‌ಮೆಂಟ್‌ನ ಮೊದಲ ತಂತ್ರ ಇದಾಗಿದೆ.

ಬಿಸಿಸಿಐನ ಮೂಲಗಳು ಕೂಡ ಇದೇ ವಿಷಯವನ್ನು ಹಂಚಿಕೊಂಡಿದೆ. ಧ್ರುವ್‌ ಜುರೆಲ್‌ ಅವರ ಫಾರ್ಮ್‌ ಹಾಗೂ ವಿಶ್ವಾಸವನ್ನು ಕಳೆದುಕೊಳ್ಳಲು ಟೀಮ್‌ ಮ್ಯಾನೇಜ್‌ಮೆಂಟ್‌ಗೆ ಇಷ್ಟವಿಲ್ಲ. ಹಾಗಾಗಿ ಅವರನ್ನು ಪೂರ್ಣ ಪ್ರಮಾಣದ ಬ್ಯಾಟ್ಸ್‌ಮನ್‌ ಆಗಿ ಆಡಿಸಬಹುದು ಎಂದು ತಿಳಿಸಿದೆ. ಜುರೆಲ್ ಅವರನ್ನು ನಿಭಾಯಿಸಲು ಭಾರತ ತನ್ನ ಬೌಲಿಂಗ್ ಘಟಕವನ್ನು ಕಡಿತಗೊಳಿಸಲು ಸಜ್ಜಾಗಿದೆ ಎಂದು ವರದಿಯಾಗಿದೆ, ಬಹುಶಃ ಸಾಮಾನ್ಯಕ್ಕಿಂತ ಒಬ್ಬ ಕಡಿಮೆ ಬೌಲರ್‌ನೊಂದಿಗೆ ಆಡುವ ಸಾಧ್ಯತೆಯಿದೆ. ಈಡನ್ ಗಾರ್ಡನ್‌ನಲ್ಲಿನ ಪಿಚ್ ಪರಿಸ್ಥಿತಿಗಳನ್ನು ಅವಲಂಬಿಸಿ ಎಡಗೈ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಅಥವಾ ವೇಗಿ ಆಕಾಶ್ ದೀಪ್ ಅವರಲ್ಲಿ ಒಬ್ಬರನ್ನು ಕೈ ಬಿಡಬಹುದು ಎಂದು ಮೂಲಗಳು ತಿಳಿಸಿವೆ. ಇದು ಗೌತಮ್‌ ಗಂಭೀರ್‌ ಅವರ ಎರಡನೇ ಮಾರ್ಗ.

IND vs SA: ದಕ್ಷಿಣ ಆಫ್ರಿಕಾ ಒಡಿಐ ಸರಣಿಗೆ ಅಭ್ಯಾಸ ಶುರು ಮಾಡಿದ ರೋಹಿತ್‌ ಶರ್ಮಾ!

ತವರು ಟೆಸ್ಟ್‌ ಸರಣಿಯಲ್ಲಿ ಸಾಮಾನ್ಯವಾಗಿ ಮೂವರು ಮುಂಚೂಣಿ ಸ್ಪಿನ್ನರ್‌ಗಳು ಹಾಗೂ ಇಬ್ಬರು ವೇಗದ ಬೌಲರ್‌ಗಳನ್ನು ಆಡಿಸಲಾಗುತ್ತದೆ. ಆ ಮೂಲಕ ಇಲ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್‌ ಅನ್ನು ಆಡಿಸಲು ಸಾಧ್ಯವಾಗುತ್ತದೆ. ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ಅವರು ಕೂಡ ಇದನ್ನೇ ಯೋಚಿಸುತ್ತಿದ್ದಾರೆ.

ಮೊದಲನೇ ಟೆಸ್ಟ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಯಶಸ್ವಿ ಜೈಸ್ವಾಲ್‌, ಕೆಎಲ್‌ ರಾಹುಲ್‌, ಶುಭಮನ್‌ ಗಿಲ್‌ (ನಾಯಕ), ಸಾಯಿ ಸುದರ್ಶನ್‌, ರಿಷಭ್‌ ಪಂತ್‌ (ವಿಕೆಟ್‌ ಕೀಪರ್‌, ಉಪ ನಾಯಕ), ವಾಷಿಂಗ್ಟನ್‌ ಸುಂದರ್‌/ ಧ್ರುವ್‌ ಜುರೆಲ್‌, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ, ಆಕಾಶ್‌ ದೀಪ್‌, ಮೊಹಮ್ಮದ್‌ ಸಿರಾಜ್‌