ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ranji Trophy 2026-27: 16 ಸದಸ್ಯರ ಗೋವಾ ತಂಡ ಪ್ರಕಟ, ಅರ್ಜುನ್‌ ತೆಂಡೂಲ್ಕರ್‌ಗೆ ಸ್ಥಾನವಿಲ್ಲ!

2026-27ರ ರಣಜಿ ಟ್ರೋಫಿ ಟೂರ್ನಿಗೆ 16 ಸದಸ್ಯರ ಗೋವಾ ತಂಡವನ್ನು ಪ್ರಕಟಿಸಿದ್ದು, ಅಭಿನವ್‌ ತೇಜ್ರಾಣ ಅವರಿಗೆ ನಾಯಕತ್ವವನ್ನು ನೀಡಲಾಗಿದೆ. ಆದರೆ, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಇದು ಅಚ್ಚರಿಯ ಸಂಗತಿಯಾಗಿದೆ. ಇದಕ್ಕೆ ಕಾರಣವೇನೆಂದು ಬಹಿರಂಗವಾಗಿಲ್ಲ.

ಗೋವಾ ರಣಜಿ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡ ಅರ್ಜುನ್‌ ತೆಂಡೂಲ್ಕರ್‌.

ನವದೆಹಲಿ: ಮುಂಬರುವ 2026-27ರ ರಣಜಿ ಟ್ರೋಫಿ (Ranji Trophy 2026-27) ಟೂರ್ನಿಗಾಗಿ ಗೋವಾ ಕ್ರಿಕೆಟ್ ಸಂಸ್ಥೆ ಅಕ್ಟೋಬರ್ 9ರಂದು 16 ಆಟಗಾರರ ತಂಡವನ್ನು ಪ್ರಕಟಿಸಿದೆ. ಅಭಿನವ್ ತೇಜ್ರಾಣಾ ತಂಡದ ನಾಯಕನಾಗಿ ನೇಮಕಗೊಂಡಿದ್ದಾರೆ. ಈ ಆಯ್ಕೆಯಲ್ಲಿ ಗಮನ ಸೆಳೆದ ಪ್ರಮುಖ ಬೆಳವಣಿಗೆಯೆಂದರೆ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (Abhinav Tejrana) ಅವರನ್ನು ತಂಡದಿಂದ ಕೈಬಿಟ್ಟಿರುವುದು.

27ರ ವಯಸ್ಸಿನ ಅರ್ಜುನ್ 2022-23ರ ಋತುವಿನಿಂದ ಗೋವಾ ತಂಡದ ಭಾಗವಾಗಿದ್ದರು. ಇತ್ತೀಚೆಗೆ ಗೋವಾ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳನ್ನು ಪೂರೈಸಿದ್ದರೂ, ಮುಂಬರುವ ರಣಜಿ ಟ್ರೋಫಿಗಾಗಿ ಪ್ರಕಟಿಸಿರುವ ತಂಡದಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ. ಇದಕ್ಕೂ ಮೊದಲು ಅವರು ಗೋವಾ ತಂಡದ ಓಮನ್ ಪ್ರವಾಸದಿಂದಲೂ ಹೊರಗುಳಿದಿದ್ದರು. 2025-26ರ ರಣಜಿ ಟ್ರೋಫಿಯಲ್ಲಿ ಕೇರಳ ವಿರುದ್ಧ ಪೊರ್ವೊರಿಮ್‌ನಲ್ಲಿ ನಡೆದಿದ್ದ ಪಂದ್ಯವೇ ಗೋವಾ ಪರ ಅರ್ಜುನ್ ಆಡಿದ ಕೊನೆಯ ಪಂದ್ಯವಾಗಿದೆ. ಅವರು ಗೋವಾ ಪರ ವಿಜಯ್ ಹಝಾರೆ ಟ್ರೋಫಿಯಲ್ಲಿಯೂ ಆಡಿದ್ದಾರೆ.

IND vs WI: ʻಬೌಲರ್‌ಗಳು ಏಕೆ, ಬೌಲಿಂಗ್‌ ಮಷೀನ್‌ ಇಟ್ಟುಕೊಳ್ಳಿʼ-ಪಿಚ್‌ ಬಗ್ಗೆ ಗುಡುಗಿದ ಯುಜ್ವೇಂದ್ರ ಚಹಲ್‌!

ಅಕ್ಟೋಬರ್ 11ರಂದು ಬರೋಡಾ ವಿರುದ್ಧ ಮೊದಲ ಪಂದ್ಯ

ಗೋವಾ ತಂಡ 2026-27ರ ರಣಜಿ ಟ್ರೋಫಿ ಅಭಿಯಾನವನ್ನು ಅಕ್ಟೋಬರ್ 11ರಂದು ಆರಂಭಿಸಲಿದೆ. ಪಣಜಿಯಲ್ಲಿ ನಡೆಯಲಿರುವ ಎಲೈಟ್ ಗ್ರೂಪ್ ಎ ಪಂದ್ಯದಲ್ಲಿ ಬರೋಡಾ ತಂಡವನ್ನು ಎದುರಿಸಲಿದೆ. ರಣಜಿ ಟ್ರೋಫಿಯ 92ನೇ ಆವೃತ್ತಿಯು 2026ರ ಅಕ್ಟೋಬರ್ 11ರಿಂದ 2027ರ ಮಾರ್ಚ್ 3ರವರೆಗೆ ನಡೆಯಲಿದೆ. ಟೂರ್ನಿಯ ಆರಂಭಕ್ಕೂ ಮುನ್ನ ಗೋವಾ ತಂಡವು ತನ್ನ ಆಟಗಾರರ ಬಳಗದ ಜೊತೆಗೆ ತರಬೇತಿ ಮತ್ತು ಸಹಾಯಕ ಸಿಬ್ಬಂದಿಯ ವಿವರಗಳನ್ನೂ ಪ್ರಕಟಿಸಿದೆ.

ಗೋವಾ ತಂಡದ ಕೋಚಿಂಗ್ ವಿಭಾಗದ ಜವಾಬ್ದಾರಿ ಯಾರಿಗೆ?

ಮುಂಬರುವ ಋತುವಿನಲ್ಲಿ ಗೋವಾ ತಂಡದ ಮುಖ್ಯ ಕೋಚ್ ಆಗಿ ದಿನೇಶ್ ಮೊಂಗಿಯಾ ಕಾರ್ಯನಿರ್ವಹಿಸಲಿದ್ದಾರೆ. ಕೃಷ್ಣ ರಾವ್ ಬೌಲಿಂಗ್ ಕೋಚ್ ಆಗಿದ್ದು, ಪ್ರಕಾಶ್ ಮಾಯೆಂಕರ್ ಅವರು ಹಿರಿಯ ಪುರುಷರ ತಂಡದ ಕೋಚಿಂಗ್ ಮತ್ತು ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಅನಿಲ್ ಜೋಗ್ಳೇಕರ್ ತಂಡದ ವ್ಯವಸ್ಥಾಪಕರಾಗಿರಲಿದ್ದಾರೆ. ಎನ್‌ಡಿಟಿವಿ ಸ್ಪೋರ್ಟ್ಸ್ ವರದಿಯ ಪ್ರಕಾರ, ಗೋವಾ ತಂಡದ ಸಿಬ್ಬಂದಿಯ ವಿವರಗಳನ್ನು ಪ್ರಕಟಿಸುವ ವೇಳೆ ಈ ಮಾಹಿತಿ ನೀಡಲಾಗಿದೆ.

2027ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಆಡಲೇಬೇಕೆಂದ ರಾಬಿನ್‌ ಸಿಂಗ್‌!

ಗೋವಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಮಹೇಶ್ ದೇಸಾಯಿ, ಕಾರ್ಯದರ್ಶಿ ತುಳಸಿದಾಸ್ ಶೆಟ್ಯೆ ಹಾಗೂ ಸಂಪೂರ್ಣ ಆಡಳಿತ ಸಮಿತಿಯು ಮುಂಬರುವ ರಣಜಿ ಟ್ರೋಫಿಗಾಗಿ ತಂಡಕ್ಕೆ ಶುಭ ಹಾರೈಸಿದೆ. ದೇಶೀಯ ಕ್ರಿಕೆಟ್‌ನಲ್ಲಿ ಗೋವಾವನ್ನು ಪ್ರತಿನಿಧಿಸಲು ಸಜ್ಜಾಗಿರುವ ಆಟಗಾರರಿಗೆ ಆಡಳಿತ ಮಂಡಳಿ ಬೆಂಬಲ ವ್ಯಕ್ತಪಡಿಸಿದೆ. ಅರ್ಜುನ್ ತೆಂಡೂಲ್ಕರ್ ಅವರ ಅನುಪಸ್ಥಿತಿ ಈ ತಂಡದ ಆಯ್ಕೆಯ ಪ್ರಮುಖ ಸುದ್ದಿಯಾಗಿದ್ದು, ಬರೋಡಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಗೋವಾ ತಂಡ ಹೇಗೆ ಪ್ರದರ್ಶನ ನೀಡಲಿದೆ ಎಂಬ ಕುತೂಹಲ ಈಗ ಹೆಚ್ಚಾಗಿದೆ.

ಗೋವಾ ತಂಡ: ಅಭಿನವ್ ತೇಜ್ರಾಣಾ (ನಾಯಕ), ಸುಯೇಶ್ ಪ್ರಭುದೇಸಾಯಿ, ಮಂಥನ್ ಖುಟ್ಕರ್, ಲಲಿತ್ ಯಾದವ್, ಸ್ನೇಹಲ್ ಕೌಠಂಕರ್, ಶಿವೇಂದ್ರ ಭುಜ್ಬಲ್, ಕೌಶಿಕ್ ವಿ., ಶುಭಂ ತಾರಿ, ಋತ್ವಿಕ್ ನಾಯಕ್, ದರ್ಶನ್ ಮಿಸಾಳ್, ಯಶ್ ಕಸ್ವಂಕರ್, ಅಮೂಲ್ಯ ಪಾಂಡ್ರೆಕರ್, ದೀಪರಾಜ್ ಗಾಂವ್ಕರ್, ರಾಜಶೇಖರ್ ಹರಿಕಾಂತ್, ಮೋಹಿತ್ ರೆಡ್ಕರ್ ಮತ್ತು ಫೆಲೆಕ್ಸ್ ಅಲೆಮಾವೊ