ನವದೆಹಲಿ: ಗುಜರಾತ್ ಟೈಟನ್ಸ್ (Gujarat Titans) ತಂಡದ ಮುಖ್ಯ ಕೋಚ್ ಆಶಿಶ್ ನೆಹ್ರಾ (Ashish Nehra) ಅವರನ್ನು ಭಾರತ ತಂಡದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ (Harbhajan Singh) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ತಂಡದಲ್ಲಿ ಒಗ್ಗಟ್ಟು ಮತ್ತು ಕೇಂದ್ರೀಕೃತ ವಾತಾವರಣವನ್ನು ನಿರ್ಮಿಸುವಲ್ಲಿ ನೆಹ್ರಾ ಮಹತ್ವದ ಪಾತ್ರವಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಗುಜರಾತ್ ತಂಡ, ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿತು ಹಾಗೂ ಈ ಸೀಸನ್‌ನ ಐದು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಪಡೆದ ನಂತರ ಜಿಟಿ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದಿದೆ.
“ಅಶೀಷ್ ನೆಹ್ರಾ ಎಲ್ಲಿಯೇ ಇರಲಿ, ಯಾವಾಗ ಬೇಕಾದರೂ ವಾತಾವರಣವನ್ನು ಆರಾಮದಾಯಕವಾಗಿಸುವ ವ್ಯಕ್ತಿ. ಅವರು ಇರುವ ಸ್ಥಳದಲ್ಲಿ ಎಲ್ಲರೂ ಸುಲಭವಾಗಿ ಹೊಂದಿಕೊಳ್ಳುವಂತೆ ಮಾಡುತ್ತಾರೆ. ಅವರಷ್ಟೇ ಅಲ್ಲ, ಅವರ ಜೊತೆ ಕೆಲಸ ಮಾಡುವ ಪ್ರತಿಯೊಬ್ಬರೂ ಅದನ್ನು ಅನುಭವಿಸುತ್ತಾರೆ,” ಎಂದು ಹರ್ಭಜನ್ ಜಿಯೊ ಸ್ಟಾರ್‌ನಲ್ಲಿ ಹೇಳಿದ್ದಾರೆ.
RCB vs DC: ಟಾಸ್ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಬ್ಯಾಟಿಂಗ್!
ಭಾರತದ ಮಾಜಿ ಆಟಗಾರ ನೆಹ್ರಾ 2022ರಲ್ಲಿ ಗುಜರಾತ್ ಟೈಟನ್ಸ್ ಫ್ರಾಂಚೈಸಿ ಆರಂಭವಾದಾಗಿನಿಂದಲೇ ತಂಡದ ರೂಪುಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮೊದಲ ಸೀಸನ್‌ನಲ್ಲೇ ತಂಡಕ್ಕೆ ಕಿರೀಟ ತಂದುಕೊಟ್ಟಿದ್ದು ಅವರ ಸಾಧನೆಯಾಗಿದೆ. ಅವರ ಆಟಗಾರ-ಕೇಂದ್ರೀಕೃತ (player-centric) ಮತ್ತು ನೇರ ಸಂಪರ್ಕದ ಕೋಚಿಂಗ್ ಶೈಲಿ ತಂಡದಲ್ಲಿ ಒಗ್ಗಟ್ಟನ್ನು ಬೆಳೆಸಿದ್ದು, ಸ್ಪಷ್ಟವಾದ ಪಾತ್ರಗಳು ಮತ್ತು ಉತ್ತಮ ಸಂವಹನವನ್ನು ತಂಡದ ಯಶಸ್ಸಿನ ಮುಖ್ಯ ಅಂಶಗಳಾಗಿ ರೂಪಿಸಿದೆ.
ನೆಹ್ರಾ ಕೊಡುಗೆಗೆ ಹರ್ಭಜನ್ ಮೆಚ್ಚುಗೆ
“ಗುಜರಾತ್ ಟೈಟನ್ಸ್ ತಂಡಕ್ಕೆ ಅವರ ಅತ್ಯಂತ ದೊಡ್ಡ ಕೊಡುಗೆ ಎಂದರೆ, ಎಲ್ಲರನ್ನು ಒಗ್ಗೂಡಿಸುವುದು. ಅದೇ ಅಶಿಶ್ ನೆಹ್ರಾ. ಅವರು ಫುಟ್‌ಬಾಲ್ ಕೋಚ್‌ನಂತೆ ಇರುತ್ತಾರೆ. ಅವರು ಯಾವತ್ತೂ ನಿಶ್ಚಲವಾಗಿ ಕುಳಿತುಕೊಳ್ಳುವುದಿಲ್ಲ. ಪಂದ್ಯದ ಪೂರ್ತಿ ಆಟಗಾರರೊಂದಿಗೆ ಮಾತನಾಡುತ್ತಾ, ಮಾರ್ಗದರ್ಶನ ನೀಡುತ್ತಿರುತ್ತಾರೆ,” ಎಂದು ಹೇಳಿದರು.
IPL 2026: ಜಸ್‌ಪ್ರೀತ್ ಬುಮ್ರಾ ಎದುರಿಸುತ್ತಿರುವ ಸಮಸ್ಯೆಯನ್ನು ತಿಳಿಸಿದ ಇರ್ಫಾನ್ ಪಠಾಣ್!
ಗುಜರಾತ್ ಟೈಟನ್ಸ್ ತಂಡದ ಕಮ್‌ಬ್ಯಾಕ್‌ಗೆ ಗಿಲ್-ಬಟ್ಲರ್ ನೆರವು
ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಗಿಲ್ 50 ಬಾಲ್‌ಗಳಲ್ಲಿ 86 ರನ್ ಗಳಿಸಿ ಶಾಂತ ಹಾಗೂ ಹೊಣೆಗಾರಿಕೆಯ ಇನಿಂಗ್ಸ್ ಆಡಿದರು. ಅವರ ನಾಯಕತ್ವದಲ್ಲಿ ತಂಡ ಗುರಿಯನ್ನು ಎರಡು ಎರಡು ಎಸೆತಗಳು ಬಾಕಿ ಇರುವಾಗಲೇ ಸಾಧಿಸಿತು.
ಸೀಸನ್ ಆರಂಭದಲ್ಲಿ ಎರಡು ನಿರಂತರ ಸೋಲುಗಳನ್ನು ಕಂಡ ಗುಜರಾತ್, ನಂತರ ಡೆಲ್ಲಿ ವಿರುದ್ಧ ಕೇವಲ ಒಂದು ರನ್ ಅಂತರದಲ್ಲಿ ಜಯ ಸಾಧಿಸುವ ಮೂಲಕ ಕಮ್‌ಬ್ಯಾಕ್ ಮಾಡಿತು. ಆ ಜಯದಿಂದ ಬಂದ ಆತ್ಮವಿಶ್ವಾಸದ ನೆರವಿನಿಂದ ತಂಡ ಈಗ ಉತ್ತಮ ಸಮತೋಲನ ಮತ್ತು ನಂಬಿಕೆಯನ್ನು ಪ್ರದರ್ಶಿಸುತ್ತಿದೆ.
ಇನ್ನೊಂದೆಡೆ, ಬಟ್ಲರ್ ಮಧ್ಯಮ ಕ್ರಮಾಂಕದಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದಾರೆ. ಐದು ಪಂದ್ಯಗಳಲ್ಲಿ 201 ರನ್ ಗಳಿಸಿರುವ ಅವರು, ಸರಾಸರಿ 40.20 ಹಾಗೂ ಸುಮಾರು 160 ಸ್ಟ್ರೈಕ್ ರೇಟ್‌ನೊಂದಿಗೆ ತಂಡಕ್ಕೆ ಸ್ಥಿರತೆ ಮತ್ತು ದಾಳಿಯ ಶಕ್ತಿ ನೀಡುತ್ತಿದ್ದಾರೆ. ಗಿಲ್ ಅವರ ನಿರಂತರತೆಯನ್ನು ಬಟ್ಲರ್ ಅವರ ಆಕ್ರಮಣಶೀಲ ಆಟ ಸಮತೋಲನಗೊಳಿಸುತ್ತಿದೆ. ಮುಂದಿನ ಪಂದ್ಯದಲ್ಲಿ ಗುಜರಾತ್ ಏಪ್ರಿಲ್ 20ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಎದುರು ಆಡಲಿದೆ.