ನವದೆಹಲಿ: ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್ (ICC ODI World Cup 2027) ಟೂರ್ನಿಯಲ್ಲಿ ಭಾರತ ತಂಡದ ಪರ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಆಡುವುದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆಗಳು ನಿರಂತರವಾಗಿ ನಡೆಯುತ್ತಿವೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಒಡಿಐ ನಿವೃತ್ತಿಗಳ ಊಹಾಪೋಹಗಳನ್ನು ತಳ್ಳಿ ಹಾಕಿದ್ದರು. ಆದರೂ ಈ ಇಬ್ಬರೂ ಹಿರಿಯ ಆಟಗಾರರು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಬಗ್ಗೆ ಖಚಿತತೆ ಇಲ್ಲ. ಏಕೆಂದರೆ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನೂ ದೀರ್ಘಾವಧಿ ಸಮಯ ಉಳಿದಿದೆ.
ಭಾರತ ತಂಡದ ಮಾಜಿ ವೇಗಿ ಹಾಗೂ ಗುಜರಾತ್ ಟೈಟನ್ಸ್ ತಂಡದ ಹೆಡ್ ಕೋಚ್ ಆಶಿಶ್ ನೆಹ್ರಾ ಅವರು, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರ ಏಕದಿನ ವಿಶ್ವಕಪ್ ಭವಿಷ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ವರ್ಷ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಮತ್ತು ರೋಹಿತ್ ಆಡಲಿದ್ದಾರೆಂದು ಭವಿಷ್ಯ ನುಡಿದಿದ್ದಾರೆ.
ಈ ವಾರದ ಆರಂಭದಲ್ಲಿ ನಡೆದಿದ್ದ ಬಂಗಾಳ ಕ್ರಿಕೆಟ್ ಅಸೋಸಿಯೇಷನ್ (CAB) ವಾರ್ಷಿಕ ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಳೆದ ಒಂದು ದಶಕದಲ್ಲಿ ಅದ್ಭುತ ವೃತ್ತಿಜೀವನ ನಡೆಸಿದ್ದಾರೆ. ಆದರೆ, ಅವರು ಮುಂದಿನ ತಂಡದ ಭಾಗವಾಗುತ್ತಾರೆಯೇ ಎಂಬುದನ್ನು ಈಗಲೇ ಹೇಳುವುದು ತುಂಬಾ ಬೇಗ ಎಂದು ಅಭಿಪ್ರಾಯಪಟ್ಟರು.
Duleep Trophy: ಏಕಾಂಗಿ ಹೋರಾಟ ನಡೆಸುತ್ತಿದ್ದ ತಿಲಕ್ ವರ್ಮಾರನ್ನು ಸ್ಲೆಡ್ಜ್ ಮಾಡಿದ ವೈಭವ್ ಸೂರ್ಯವಂಶಿ!
13 ತಿಂಗಳು ಎಂದರೆ ಸಾಕಷ್ಟು ದೀರ್ಘ ಸಮಯ
ತಮ್ಮ ಗುಜರಾತ್ ಟೈಟನ್ಸ್ ನಾಯಕ ಶುಭಮನ್ ಗಿಲ್ ಉದಾಹರಣೆಯನ್ನು ನೀಡಿದ ನೆಹ್ರಾ, ಏಕದಿನ ಹಾಗೂ ಟೆಸ್ಟ್ ತಂಡಗಳ ನಾಯಕರಾಗಿದ್ದರೂ ಗಿಲ್ ಅವರನ್ನು ಭಾರತದ ಟಿ20 ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದಿರುವುದನ್ನು ಉಲ್ಲೇಖಿಸಿದರು.
“ಕಳೆದ ಒಂದು ದಶಕದಲ್ಲಿ ರೋಹಿತ್ ಮತ್ತು ವಿರಾಟ್ ಏನು ಸಾಧಿಸಿದ್ದಾರೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಆದರೆ ನನ್ನ ಪ್ರಕಾರ 13 ತಿಂಗಳು ಎಂದರೆ ಸಾಕಷ್ಟು ದೀರ್ಘ ಸಮಯ. ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಅಲ್ಲಿ ಇರುತ್ತಾರೆಯೇ ಎಂದು ಈಗಲೇ ಹೇಳುವುದು ತುಂಬಾ ಕಷ್ಟ,” ಎಂದು ನೆಹ್ರಾ ಹೇಳಿದರು.
“ಭಾರತೀಯ ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಯಾವುದೇ ಕ್ರೀಡೆಯಲ್ಲೂ ನಾವು ಇದನ್ನು ನೋಡಿದ್ದೇವೆ. ಕೇವಲ 2-3 ವಾರಗಳಿರುವಾಗಲೂ ಪರಿಸ್ಥಿತಿಗಳು ಬದಲಾಗಬಹುದು,” ಎಂದು ಅವರು ತಿಳಿಸಿದ್ದಾರೆ.
Duleep Trophy: ಏಕಾಂಗಿ ಹೋರಾಟ ನಡೆಸುತ್ತಿದ್ದ ತಿಲಕ್ ವರ್ಮಾರನ್ನು ಸ್ಲೆಡ್ಜ್ ಮಾಡಿದ ವೈಭವ್ ಸೂರ್ಯವಂಶಿ!
ಅವರು ಉತ್ತಮವಾಗಿ ಆಡುತ್ತಿದ್ದರೆ, ಏಕೆ ಆಡಿಸಬಾರದು?
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ಮುಂದುವರಿಸಿದರೆ, ಅವರನ್ನು ವಿಶ್ವಕಪ್‌ಗಾಗಿ ಖಂಡಿತವಾಗಿಯೂ ಪರಿಗಣಿಸಬೇಕು ಎಂದು ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅಂತಿಮ ನಿರ್ಧಾರವನ್ನು ತಾವು ಅಥವಾ ಯಾವುದೇ ಒಬ್ಬ ಕೋಚ್ ಮಾತ್ರ ತೆಗೆದುಕೊಳ್ಳಲು ಸಾಧ್ಯವಿಲ್ಲ. ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆ ಸಮಿತಿ ಹಾಗೂ ಇತರ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರ ಪಾತ್ರವೂ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದರು.
“ಅವರು ಉತ್ತಮವಾಗಿ ಆಡುತ್ತಿದ್ದು, ನಿರಂತರವಾಗಿ ಪ್ರದರ್ಶನ ನೀಡುತ್ತಿದ್ದರೆ ಅವರನ್ನು ಏಕೆ ಪರಿಗಣಿಸಬಾರದು? ಆದರೆ, ನೀವು ಕೋಚ್ ಆಗಿದ್ದರೂ ಅಥವಾ ನಾನು ಕೋಚ್ ಆಗಿದ್ದರೂ, ಅದು ನನ್ನೊಬ್ಬನ ನಿರ್ಧಾರವಾಗಿರುವುದಿಲ್ಲ,” ಎಂದು ನೆಹ್ರಾ ಹೇಳಿದ್ದಾರೆ.