ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Asian Games 20267: ಅಫ್ಘಾನಿಸ್ತಾನ ತಂಡಕ್ಕೆ ಶಾಕ್‌ ನೀಡಿ ಕ್ವಾರ್ಟರ್‌ಫೈನಲ್‌ ರೇಸ್‌ನಲ್ಲಿ ಉಳಿದ ನೇಪಾಳ!

ಜಪಾನ್‌ ಆತಿಥ್ಯದಲ್ಲಿ ನಡೆಯುತ್ತಿರುವ 2026ರ ಏಷ್ಯಾ ಕ್ರೀಡಾಕೂಟದ ಕ್ರಿಕೆಟ್‌ ವಿಭಾಗದಲ್ಲಿ ನೇಪಾಳ ತಂಡ, ಕಳೆದ ಬಾರಿ ಬೆಳ್ಳಿ ಪದಕ ವಿಜೇತ ಹಾಗೂ ಬಲಿಷ್ಠ ಅಫ್ಘಾನಿಸ್ತಾನ ತಂಡವನ್ನು ನೇಪಾಳ ತಂಡ ಮಣಿಸಿದೆ. ಆ ಮೂಲಕ ಕ್ವಾರ್ಟರ್ ಫೈನಲ್ಸ್‌ಗೆ ರೇಸ್‌ನಲ್ಲಿ ಉಳಿದಿದೆ ಹಾಗೂ ಮುಂದಿನ ಪಂದ್ಯದಲ್ಲಿ ಭಾರತ ತಂಡವನ್ನು ನೇಪಾಳ ಎದುರಿಸುವ ಸಾಧ್ಯತೆ ಇದೆ.

ಅಫ್ಘಾನಿಸ್ತಾನ ವಿರುದ್ಧ ನೇಪಾಳ ತಂಡಕ್ಕೆ ಜಯ.

ನಿಶಿನ್‌ (ಜಪಾನ್‌): ಕಳೆದ ಬಾರಿ ಏಷ್ಯಾ ಕ್ರೀಡಾಕೂಟದಲ್ಲಿ (Asian Games 2026) ಬೆಳ್ಳಿ ಪದಕ ಗೆದ್ದಿದ್ದ ಅಫ್ಘಾನಿಸ್ತಾನ ತಂಡಕ್ಕೆ ನೇಪಾಳ ತಂಡ ಶಾಕ್‌ ನೀಡಿದೆ. ಶುಕ್ರವಾರ ಇಲ್ಲಿನ ಕೊರೋಗಿ ಸ್ಪೋರ್ಟ್ಸ್‌ ಪಾರ್ಕ್‌ನಲ್ಲಿ ನಡೆದಿದ್ದ ಎ ಗುಂಪಿನ ಪಂದ್ಯದಲ್ಲಿ (AFG vs NEP) ಕುಶಾಲ್‌ ಭುರ್ತಲೆ ಹಾಗೂ ಲಲಿತ್‌ ರಾಜ್‌ಬನ್ಸಿ ಅವರ ಬೌಲಿಂಗ್‌ ದಾಳಿಯ ಸಹಾಯದಿಂದ ನೇಪಾಳ ತಂಡ, ಅಫ್ಘಾನಿಸ್ತಾನ ತಂಡವನ್ನು ಐದು ವಿಕೆಟ್‌ಗಳಿಂದ ಮಣಿಸಿತು. ಆ ಮೂಲಕ ನೇಪಾಳ ತಂಡ, ಕ್ವಾರ್ಟರ್‌ ಫೈನಲ್ಸ್‌ ರೇಸ್‌ನಲ್ಲಿ ಉಳಿಯುವ ಮೂಲಕ ಮುಂದಿನ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಭಾರತ ತಂಡವನ್ನು ಎದುರಿಸುವ ಸಾಧ್ಯತೆ ಇದೆ.

ಅಫ್ಘಾನಿಸ್ತಾನ ತಂಡ, ತನ್ನ ಮೊದಲನೇ ಪಂದ್ಯದಲ್ಲಿ ಜಪಾನ್‌ ತಂಡವನ್ನು 48 ರನ್‌ಗಳಿಂದ ಮಣಿಸಿ ಕ್ರೀಡಾಕೂಟದಲ್ಲಿ ಶುಭಾರಂಭವನ್ನು ಕಂಡಿತ್ತು. ಆದರೆ, ತನ್ನ ಎರಡನೇ ಪಂದ್ಯದಲ್ಲಿ ನೇಪಾಳ ಎದುರು ಅದೇ ಲಯವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಮೊದಲು ಬ್ಯಾಟ್‌ ಮಾಡಿದ ಆಫ್ಘನ್‌, 7 ವಿಕೆಟ್‌ಗಳ ನಷ್ಟಕ್ಕೆ 102 ರನ್‌ಗಳಿಗೆ ಸೀಮಿತವಾಯಿತು. ನೇಪಾಳ ಪರ ಅದ್ಭುತವಾಗಿ ಬೌಲ್‌ ಮಾಡಿದ ರಾಜಬನ್ಸಿ ಅವರು ಹಸನ್‌ ಇಸಖಿಲ್‌, ಮೊಹಮ್ಮದ್‌ ಅಕ್ರಮ್‌ ಹಾಗೂ ಕರಿಮ್‌ ಜನತ್‌ ಅವರನ್ನು ಔಟ್‌ ಮಾಡಿದರು.

IND vs WI 1st ODI: ನಮನ್‌ ಧೀರ್‌ಗೆ ಚೊಚ್ಚಲ ಅವಕಾಶ? ಭಾರತದ ಸಂಭಾವ್ಯ ಪ್ಲೇಯಿಂಗ್‌ XI ವಿವರ!

ನಂತರ ಚೆಂಡನ್ನು ಕೈಗೆತ್ತಿಕೊಂಡ ಕುಶಾಲ್‌ ಭುರ್ತೆಲ್‌ ಕೂಡ ಬೌಲಿಂಗ್‌ನಲ್ಲಿ ಮಿಂಚಿ 4 ವಿಕೆಟ್‌ಗಳನ್ನು ಕಬಳಿಸಿದರು. ಇವರ ಜೊತೆಗೆ ಲಲಿತ್‌ ರಾಜಬನ್ಸೆ ಅವರು ಮೂರು ವಿಕೆಟ್‌ಗಳನ್ನು ಪಡೆದರು. ಆಫ್ಘನ್‌ ಪರ ಮಧ್ಯಮ ಕ್ರಮಾಂಕದಲ್ಲಿ ಫೈಸಲ್‌ ಶಿನೋಝಡ ಹಾಗೂ ನಜಿಬುಲ್ಲಾ ಝರ್ಡಾನ್‌ ಅವರು ತಲಾ 30 ರನ್‌ಗಳನ್ನು ಗಳಿಸಿದರು. ಇವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟರ್‌ಗಳು ವಿಫಲರಾದರು.

ಬಳಿಕ ಗುರಿಯನ್ನು ಹಿಂಬಾಲಿಸಿದ ನೇಪಾಳ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕುಶಾಲ್‌ ಭರ್ತುಲೆ ಹಾಗೂ ಆಸಿಫ್‌ ಶೇಕ್‌ ಬಹುಬೇಗ ವಿಕೆಟ್‌ ಒಪ್ಪಿಸಿದರು. ಕುಶಾಲ್‌ ಮಲ್ಲಾ ಕೂಡ ಬೇಗ ಔಟ್‌ ಆದರು. ಆ ಮೂಲಕ ಈ ವೇಳೆ ನೇಪಾಳ ತಂಡ, 31 ಕ್ಕೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಸಂದೀಪ್‌ ಜೋರಾ 34 ರನ್‌ ಹಾಗೂ ರೋಹಿತ್‌ ಪಡೌಲ್‌ ಅಜೇಯ 33 ರನ್‌ ಗಳಿಸಿದರು. ಇವರ ಬ್ಯಾಟಿಂಗ್‌ ಸಹಾಯದಿಂದ ನೇಪಾಳ ತಂಡ 17.4 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 103 ರನ್‌ಗಳನ್ನು ದಾಖಲಿಸಿತು.

ನೇಪಾಳ ಹಾಗೂ ಅಫ್ಘಾನಿಸ್ತಾನ ಪಂದ್ಯದ ಫಲಿತಾಂಶದ ಬಳಿಕ ಗ್ರೂಪ್ ‘ಎ’ಯ ಅರ್ಹತಾ ಲೆಕ್ಕಾಚಾರ ಮತ್ತಷ್ಟು ಸಂಕೀರ್ಣಗೊಂಡಿದೆ. ಈ ಗುಂಪಿನಲ್ಲಿ ಅಫ್ಘಾನಿಸ್ತಾನ, ನೇಪಾಳ ಮತ್ತು ಜಪಾನ್ ತಂಡಗಳಿದ್ದು, ಪ್ರತಿ ತಂಡವೂ ತಲಾ ಎರಡು ಪಂದ್ಯಗಳನ್ನು ಆಡಬೇಕಿದೆ. ಗ್ರೂಪ್ ಹಂತದ ಮೊದಲ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯಲಿವೆ. ಅಲ್ಲಿ ಈಗಾಗಲೇ ಶ್ರೇಯಾಂಕ ಪಡೆದಿರುವ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಸೇರಿಕೊಳ್ಳಲಿವೆ.

ಭಾರತ ಒಡಿಐ ತಂಡದಲ್ಲಿ ಆಕಿಬ್‌ ನಬಿಗೆ ಸ್ಥಾನ ನೀಡಿರುವುದನ್ನು ಪ್ರಶ್ನಿಸಿದ ಆಕಾಶ್‌ ಚೋಪ್ರಾ!

ಅಫ್ಘಾನಿಸ್ತಾನ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಒಂದು ಸೋಲು ದಾಖಲಿಸಿದ್ದು, ಇದೀಗ ಅವರಿಗೆ ಯಾವುದೇ ಪಂದ್ಯ ಬಾಕಿ ಉಳಿದಿಲ್ಲ. ಸೋಲಿನ ಹೊರತಾಗಿಯೂ, ಸದ್ಯ ಉತ್ತಮ ನೆಟ್ ರನ್‌ರೇಟ್‌ನ ಆಧಾರದ ಮೇಲೆ ಅಫ್ಘಾನಿಸ್ತಾನ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ನೇಪಾಳ ಒಂದು ಪಂದ್ಯ ಆಡಿದ್ದು, ಅದರಲ್ಲಿ ಗೆಲುವು ಸಾಧಿಸಿದೆ. ಶನಿವಾರ ನಡೆಯಲಿರುವ ತನ್ನ ಅಂತಿಮ ಗ್ರೂಪ್ ಪಂದ್ಯದಲ್ಲಿ ನೇಪಾಳ, ಜಪಾನ್ ತಂಡವನ್ನು ಎದುರಿಸಲಿದೆ.

ಇನ್ನು ಜಪಾನ್ ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 48 ರನ್‌ಗಳಿಂದ ಸೋಲು ಅನುಭವಿಸಿದೆ. ಹೀಗಾಗಿ ನೇಪಾಳ–ಜಪಾನ್ ನಡುವಿನ ಅಂತಿಮ ಪಂದ್ಯವು ಗ್ರೂಪ್ ‘ಎ’ಯಿಂದ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆಯುವ ತಂಡಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.