ನವದೆಹಲಿ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳ (IND vs PAK) ನಡುವಣ ಹೈವೋಲ್ಟೇಜ್ ಪಂದ್ಯದ ಆರಂಭಕ್ಕೆ ಇನ್ನೂ ಕೆಲವೇ ಗಂಟೆಗಳು ಬಾಕಿ ಇವೆ. ಇಂಡೋ-ಪಾಕ್ ನಡುವಣ 2026ರ ಏಷ್ಯಾ ಕ್ರೀಡಾಕೂಟದ (Asian Games 2026) ಕ್ರಿಕೆಟ್ ಪೈನಲ್ ಪಂದ್ಯ ಅಕ್ಟೋಬರ್ 3 ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ನಿಶಿನ್‌ನ ಕರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಆರಂಭವಾಗಲಿದೆ. ಈ ಮಹತ್ವದ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲೂ ಎರಡೂ ತಂಡಗಳು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಶ್ರೇಯಸ್ ಅಯ್ಯರ್ ನಾಯಕತ್ವದ ಭಾರತ ತಂಡ, ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಪಡೆಯುವ ಮೂಲಕ ಚಿನ್ನದ ಪದಕದ ಪಂದ್ಯಕ್ಕೆ ಅರ್ಹತೆ ಪಡೆದಿದ್ದರೆ, ಪಾಕಿಸ್ತಾನ ತಂಡ, ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಕಠಿಣ ಹೋರಾಟ ನೀಡಿ ಗೆದ್ದು ಫೈನಲ್‌ಗೆ ಅರ್ಹತೆ ಪಡೆದಿತ್ತು. ಅಂದ ಹಾಗೆ ಈ ಎರಡೂ ತಂಡಗಳ ಟಿ20ಐ ಮುಖಾಮುಖಿ ದಾಖಲೆಯನ್ನು ಭಾರತ 14-3 ಅಂತರದಲ್ಲಿ ಮುನ್ನಡೆ ಸಾಧಿಸಿದೆ.
IND vs WI: ಮೂರನೇ ಒಡಿಐ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳಲು ಭಾರತ ಸಜ್ಜು!
ಭಾರತ ತಂಡದ ಕಳೆದ ಆರು ಪಂದ್ಯಗಳನ್ನು ಸತತವಾಗಿ ಗೆದ್ದಿದೆ. ಶನಿವಾರದ ಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಪಡೆದು, ತನ್ನ ಮುನ್ನಡೆಯನ್ನು ಮತ್ತಷ್ಟು ವಿಸ್ತರಿಸಲು ಎದುರು ನೋಡುತ್ತಿದೆ. ಆದರೆ, ಪಾಕಿಸ್ತಾನ ತಂಡಮ ಇತ್ತೀಚಿನ ಸೋಲುಗಳಿಂದ ಪಾಠ ಕಲಿತು, ಭಾರತವನ್ನು ಮಣಿಸಿ ಗೆಲುವಿನ ಲಯಕ್ಕೆ ಮರಳಲು ಬಯಸುತ್ತಿದೆ.
ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಜಸ್‌ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಒಳಗೊಂಡ ಭಾರತ ತಂಡದ ಅಪಾಯಕಾರಿ ಬ್ಯಾಟಿಂಗ್ ಲೈನ್ ಅಪ್ ಎದುರು ಪಾಕಿಸ್ತಾನ ತಂಡಕ್ಕೆ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಈ ಪಂದ್ಯವನ್ನು ಗೆಲ್ಲುವ ನೆಚ್ಚಿನ ತಂಡ ಭಾರತ ಎಂದು ನೇರವಾಗಿ ಹೇಳಬಹುದು.
ODI World Cup 2027: ಅ 10ಕ್ಕೆ ಪಾಕ್ ಪಂದ್ಯ, ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ!
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಭಾರತ: ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ಇಶಾನ್ ಕಿಶನ್, ತಿಲಕ್ ವರ್ಮಾ, ಶಿವಂ ದುಬೇ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಜಸ್‌ಪ್ರೀತ್ ಬುಮ್ರಾ
ಪಾಕಿಸ್ತಾನ: ಸಹಿಬ್ಝಾದಾ ಫರ್ಹಾನ್ (ನಾಯಕ), ಮಾಝ್ ಸದಾಖತ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಸೈಮ್ ಆಯುಬ್, ಹಸನ್ ನವಾಝ್, ಅಬ್ದುಲ್ ಸಮದ್, ಅರಾಫತ್ ಮಿನ್ಹಾಸ್, ಅಹ್ಮದ್ ದನಿಯಲ್, ಮೊಹಮ್ಮದ್ ವಾಸೀಮ್, ಸೂಫಿಯನ್ ಮೊಖಿಮ್, ಅಬ್ರಾರ್ ಅಹ್ಮದ್
ಪಿಚ್ ಮತ್ತು ಹವಾಮಾನ ವರದಿ
ಇತ್ತೀಚೆಗೆ ನಿಸ್ಶಿನ್‌ನಲ್ಲಿ ಮಳೆಯಿಂದಾಗಿ ಹಲವು ಪಂದ್ಯಗಳು ರದ್ದಾದರೂ, ಶನಿವಾರದ ದಿನ ಮತ್ತೊಮ್ಮೆ ಬಿಸಿಲಿನಿಂದ ಕೂಡಿರುವ ನಿರೀಕ್ಷೆಯಿದೆ. ದಿನವಿಡೀ ಕೆಲವೆಡೆ ಮೋಡ ಕವಿಯುವ ಸಾಧ್ಯತೆಯಿದ್ದು, ಮಳೆಯ ಸಾಧ್ಯತೆ ಸುಮಾರು ಶೇ.10ರಷ್ಟಿದೆ. ತಾಪಮಾನ ಗರಿಷ್ಠ 25 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದ್ದು, ದಕ್ಷಿಣ ಏಷ್ಯಾದ ಎರಡೂ ತಂಡಗಳ ಆಟಗಾರರಿಗೆ ಹವಾಮಾನವು ಆಹ್ಲಾದಕರವಾಗಿರಲಿದೆ. ಪಿಚ್ ವಿಚಾರದಲ್ಲಿ ಸೆಮಿಫೈನಲ್ ಪಂದ್ಯಗಳಲ್ಲಿ ಕಂಡುಬಂದಂತೆ, ಬೌಲರ್‌ಗಳಿಗೆ ಸ್ವಲ್ಪ ತಿರುವು ಮತ್ತು ಬೌನ್ಸ್ ಸಿಗುವ ನಿರೀಕ್ಷೆಯಿದೆ. ಹೀಗಾಗಿ ಬ್ಯಾಟರ್‌ಗಳು ದೊಡ್ಡ ಹೊಡೆತಗಳನ್ನು ಬಾರಿಸುವುದರ ಜೊತೆಗೆ ಪಿಚ್‌ನ ಸ್ವಭಾವವನ್ನು ಅರಿತು ಆಡಬೇಕಾಗಬಹುದು.
ಪಂದ್ಯದ ವಿವರ
ಭಾರತ vs ಪಾಕಿಸ್ತಾನ
2026ರಏಷ್ಯಾ ಕ್ರೀಡಾಕೂಟದ ಕ್ರಿಕೆಟ್ ಫೈನಲ್
ದಿನಾಂಕ: ಅಕ್ಟೋಬರ್ 3,2026
ಸಮಯ: ಬೆಳಿಗ್ಗೆ 10:00 ಗಂಟೆಗೆ
ಸ್ಥಳ: ಕರೋಗಿ ಸ್ಪೋರ್ಟ್ಸ್ ಪಾರ್ಕ್, ನಿಶ್ಷಿನ್
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್
ಲೈವ್ ಸ್ಟ್ರೀಮಿಂಗ್: ಸೋನಿ ಲಿವ್