ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs NZ: ಏಕದಿನ ಸರಣಿಯ ಭಾರತ ತಂಡದಲ್ಲಿ ಪ್ರಸಿಧ್‌ ಕೃಷ್ಣ ಸ್ಥಾನಕ್ಕೆ ಆಕಿಬ್‌ ನಬಿ ಆಯ್ಕೆ!

ವೇಗದ ಬೌಲರ್ ಆಕಿಬ್‌ ನಬಿ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಸಂಪೂರ್ಣ ಏಕದಿನ ಸರಣಿಗೆ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅವರನ್ನು ಪ್ರಸಿಧ್‌ ಕೃಷ್ಣ ಅವರ ಸ್ಥಾನಕ್ಕೆ ಆರಿಸಲಾಗಿದೆ. ತೊಡೆಯ ಹಿಂಭಾಗದ ಸ್ನಾಯು ಸೆಳೆತದ ಗಾಯದಿಂದಾಗಿ ಪ್ರಸಿದ್ಧ್ ಕೃಷ್ಣ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಅಖೀಬ್ ನಬಿ ಅವರನ್ನು ಆಯ್ಕೆ ಮಾಡಲಾಗಿದೆ.

ಭಾರತ ಏಕದಿನ ಸರಣಿಯ ಭಾರತ ತಂಡಕ್ಕೆ ಆಕಿಬ್‌ ನಬಿ ಆಯ್ಕೆ.

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಮೊದಲ ಮೂರು ಏಕದಿನ ಪಂದ್ಯಗಳಿಗೆ (IND vs NZ) ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಆಕಿಬ್ ನಬಿ (Auqib Nabi) ಅವರನ್ನು ಭಾರತ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಮೂಲಕ ಅವರು ಐದು ಪಂದ್ಯಗಳ ಸಂಪೂರ್ಣ ಏಕದಿನ ಸರಣಿಗೆ ಲಭ್ಯವಾಗಲಿದ್ದಾರೆ. ಆರಂಭದಲ್ಲಿ ನಾಲ್ಕು ಮತ್ತು ಐದನೇ ಏಕದಿನ ಪಂದ್ಯಗಳಿಗೆ ಮಾತ್ರ ತಂಡದಲ್ಲಿ ಸ್ಥಾನ ಪಡೆದಿದ್ದ ನಬಿ ಅವರನ್ನು ಇದೀಗ ಸರಣಿಯ ಆರಂಭದಿಂದಲೇ ತಂಡದಲ್ಲಿ ಆಡಿಸಲು ಆಯ್ಕೆ ಸಮಿತಿ ನಿರ್ಧರಿಸಿದೆ.

ಭಾರತದ ವೇಗದ ಬೌಲರ್ ಪ್ರಸಿಧ್‌ ಕೃಷ್ಣ ಅವರು ತೊಡೆಯ ಹಿಂಭಾಗದ ಸ್ನಾಯು ಸೆಳೆತದ ಗಾಯದಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಸ್ಥಾನಕ್ಕೆ ಆಕಿಬ್ ನಬಿ ಅವರನ್ನು ಆಯ್ಕೆ ಮಾಡಲಾಗಿದೆ.

ಗುವಾಹಟಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಪ್ರಸಿಧ್‌ ಕೃಷ್ಣ ಗಾಯಗೊಂಡಿದ್ದರು. ಆ ಪಂದ್ಯದಲ್ಲಿ ಐದು ಓವರ್‌ಗಳನ್ನು ಬೌಲ್‌ ಮಾಡಿ 45 ರನ್ ನೀಡಿ ಒಂದು ವಿಕೆಟ್ ಪಡೆದಿದ್ದ ಅವರು, ಗಾಯದ ಸಮಸ್ಯೆಯಿಂದಾಗಿ ಮೈದಾನ ತೊರೆದಿದ್ದರು. ಆದರೆ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ.

30ರ ವಯಸ್ಸಿನ ಪ್ರಸಿಧ್‌ ಕೃಷ್ಣ ಅವರನ್ನು ಆರಂಭದಲ್ಲಿ ಫಿಟ್ನೆಸ್‌ಗೆ ಒಳಪಟ್ಟು ಭಾರತ ಏಕದಿನ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಮುಂಬರುವ ಟೆಸ್ಟ್ ಸರಣಿಗೆ ಅವರು ಸಂಪೂರ್ಣ ಫಿಟ್ ಆಗಿರುವುದು ಮುಖ್ಯವಾಗಿರುವುದರಿಂದ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಪ್ರಯಾಣಿಸದಿರಲು ತಂಡದ ಆಡಳಿತ ಮಂಡಳಿ ನಿರ್ಧರಿಸಿದೆ.‌

IND vs NZ: ವೈಭವ್‌ ಸೂರ್ಯವಂಶಿ ಬಗ್ಗೆ ದೊಡ್ಡ ಭವಿಷ್ಯ ನುಡಿದ ಸನತ್‌ ಜಯಸೂರ್ಯ!

ನ್ಯೂಜಿಲೆಂಡ್ ಎ ವಿರುದ್ಧದ ಭಾರತ ಎ ತಂಡದ ರೆಡ್ ಬಾಲ್ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ಆಕಿಬ್ ನಬಿ, ಪ್ರಸಿಧ್‌ ಕೃಷ್ಣ ಅವರ ಸ್ಥಾನಕ್ಕೆ ಸೂಕ್ತ ಆಯ್ಕೆಯಾಗಿ ಕಾಣಿಸಿಕೊಂಡಿದ್ದರು. ಲಿಂಕನ್‌ನಲ್ಲಿ ನಡೆದಿದ್ದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದ ಅವರು, ತಮ್ಮ ಸ್ವಿಂಗ್ ಹಾಗೂ ಸೀಮ್ ಬೌಲಿಂಗ್ ಮೂಲಕ ಗಮನ ಸೆಳೆದಿದ್ದರು. ಪ್ರವಾಸಿ ತಂಡದ ಆಯ್ಕೆ ಸಮಿತಿಯ ಸದಸ್ಯರಾದ ಪ್ರಜ್ಞಾನ್‌ ಓಜಾ ಮತ್ತು ಅಜಯ್ ರಾತ್ರಾ ಅವರ ಗಮನವನ್ನೂ ಸೆಳೆದಿದ್ದರು.

ಮೊದಲ ಮೂರು ಏಕದಿನ ಪಂದ್ಯಗಳಿಗೆ ಭಾರತ ತಂಡ ಪ್ರಕಟ

ಆಕಿಬ್ ನಬಿ ಸೇರ್ಪಡೆಯೊಂದಿಗೆ ಮೊದಲ ಮೂರು ಏಕದಿನ ಪಂದ್ಯಗಳಿಗೆ ಭಾರತ ತಂಡದ ಸಂಯೋಜನೆ ಬದಲಾಗಿದೆ. ಶುಭಮನ್ ಗಿಲ್ ತಂಡದ ನಾಯಕರಾಗಿದ್ದು, ಶ್ರೇಯಸ್ ಅಯ್ಯರ್ ಉಪನಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.



ನ್ಯೂಜಿಲೆಂಡ್ ವಿರುದ್ಧದ ಮೊದಲ ಮೂರು ಏಕದಿನ ಪಂದ್ಯಗಳಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ನಮನ್ ಧೀರ್, ಅನ್ಶುಲ್ ಕಾಂಬೋಜ್, ಗುರ್ನೂರ್‌ ಬ್ರಾರ್, ಋತುರಾಜ್ ಗಾಯಕ್ವಾಡ್, ಅರ್ಷದೀಪ್ ಸಿಂಗ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ (ಮೊದಲ ಏಕದಿನ ಪಂದ್ಯಕ್ಕೆ ಮಾತ್ರ) ಮತ್ತು ಆಕಿಬ್ ನಬಿ.

ಆಕಿಬ್ ನಬಿ ನಾಲ್ಕು ಮತ್ತು ಐದನೇ ಏಕದಿನ ಪಂದ್ಯಗಳಿಗೂ ಭಾರತ ತಂಡದಲ್ಲಿ ಮುಂದುವರಿಯಲಿದ್ದಾರೆ. ಕೊನೆಯ ಎರಡು ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ನಾಯಕರಾಗಿರಲಿದ್ದಾರೆ. ತಿಲಕ್ ವರ್ಮಾ ಮತ್ತು ಕುಮಾರ್ ಕುಶಾಗ್ರ ಕೂಡ ಆ ಪಂದ್ಯಗಳ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.