ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

AUS vs BAN: 300 ಟೆಸ್ಟ್‌ ವಿಕೆಟ್‌ ಪೂರ್ಣಗೊಳಿಸಿ ವಿಶೇಷ ದಾಖಲೆ ಬರೆದ ಜಾಶ್‌ ಹೇಝಲ್‌ವುಡ್‌!

ಬಾಂಗ್ಲಾದೇಶ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್‌ ಜಾಶ್‌ ಹೇಝಲ್‌ವುಡ್‌ ಅವರು 89 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಬಳಿಸಿದರು. ಆ ಮೂಲಕ ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ 300 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಆರನೇ ಬೌಲರ್‌ ಎಂಬ ದಾಖಲೆಯನ್ನು ಹೇಝಲ್‌ವುಡ್‌ ಬರೆದಿದ್ದಾರೆ.

300 ಟೆಸ್ಟ್‌ ವಿಕೆಟ್‌ಗಳನ್ನು ಕಬಳಿಸಿದ ಜಾಶ್‌ ಹೇಝಲ್‌ವುಡ್‌.

ಡಾರ್ವಿನ್‌: ಬಾಂಗ್ಲಾದೇಶ ವಿರುದ್ಧದ ಮೊದಲನೇ ಟೆಸ್ಟ್‌ ಪಂದ್ಯದ (AUS vs BAN) ಪ್ರಥಮ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್‌ ಜಾಶ್‌ ಹೇಝಲ್‌ವುಡ್‌ (Josh Hazlewood) ತಮ್ಮ ಟೆಸ್ಟ್‌ ವೃತ್ತಿ ಜೀವನದಲ್ಲಿ 300 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ 9ನೇ ಬೌಲರ್‌ ಎನಿಸಿಕೊಂಡಿದ್ದಾರೆ. ಮೂರನೇ ದಿನ ಹೇಝಲ್‌ವುಡ್‌ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ ಬಾಂಗ್ಲಾದೇಶ, 426 ರನ್‌ಗಳಿಂದ ಆಲ್‌ಔಟ್‌ ಆಯಿತು.

ಜಾಶ್‌ ಹೇಝಲ್‌ವುಡ್‌ ಅವರು ತಮ್ಮ 300ನೇ ವಿಕೆಟ್‌ಗೆ ಮೆಹಿದಿ ಹಸನ್‌ ಮಿರಾಝ್‌ ಅವರನ್ನು ಔಟ್‌ ಮಾಡಿದರು. ಇದಾದ ಬಳಿಕ ಎಬಾದತ್‌ ಹುಸೇನ್‌ ಅವರನ್ನು ಪೆವಿಲಿಯ್‌ಗೆ ಕಳುಹಿಸಿದರು. ಇನ್ನು ಹೇಝಲ್‌ವುಡ್‌ ಅವರ ಟೆಸ್ಟ್‌ ವೃತ್ತಿ ಜೀವನದ 14ನೇ 5 ವಿಕೆಟ್‌ ಸಾಧನೆಯಾಗಿದೆ ಹಾಗೂ ನಾಲ್ಕನೇ ಬಾರಿ 6 ವಿಕೆಟ್‌ ಸಾಧನೆ ಮಾಡಿದಂತಾಯಿತು. ಇವರು 2017ರಲ್ಲಿ ಭಾರತದ ಎದುರು ಕೊನೆಯ ಬಾರಿ 6 ವಿಕೆಟ್‌ ಸಾಧನೆ ಮಾಡಿದ್ದರು. ಅವರು ಅಂದಿನ ಪಂದ್ಯದಲ್ಲಿ 67 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಬಳಿಸಿದ್ದರು.

300 ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ಗಳ ಪಟ್ಟಿಗೆ ಇದೀಗ ಜಾಶ್‌ ಹೇಝಲ್‌ವುಡ್‌ ಸೇರ್ಪಡೆಯಾಗಿದ್ದಾರೆ. ನೇಥನ್‌ ಲಯಾನ್‌, ಮಿಚೆಲ್‌ ಸ್ಟಾರ್ಕ್‌ ಹಾಗೂ ಪ್ಯಾಟ್‌ ಕಮಿನ್ಸ್‌ 300ಕ್ಕೂ ಅಧಿಕ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ಇವರ ಸಾಲಿಗೆ ಜಾಶ್‌ ಹೊಸದಾಗಿ ಸೇರ್ಪಡೆಯಾಗಿದ್ದಾರೆ.

ಜೋ ರೂಟ್‌ ವಿಶ್ವದಾಖಲೆ ಸರಿಗಟ್ಟಿದ ಸ್ಟೀವನ್‌ ಸ್ಮಿತ್‌

ನೇಥನ್‌ ಲಯಾನ್‌ಗೆ ಅಗ್ರ ಸ್ಥಾನ

ಆಸ್ಟ್ರೇಲಿಯಾ ಪರ ನೇಥನ್‌ ಲಯಾನ್‌ ಅವರು ಸಕ್ರಿಯ ಆಟಗಾರರ ಪೈಕಿ ಅಗ್ರ ಸ್ಥಾನವನ್ನು ಹೊಂದಿದ್ದಾರೆ. ಲಯಾನ್‌ ಅವರು ಇಲ್ಲಿಯವರೆಗೂ 568 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರ ಬಳಿಕ ಮಿಚೆಲ್‌ ಸ್ಟಾರ್ಕ್‌ (435), ಪ್ಯಾಟ್‌ ಕಮಿನ್ಸ್‌ (316) ಅವರು ನಂತರದ ಸ್ಥಾನಗಳಲ್ಲಿದ್ದಾರೆ. ಒಟ್ಟಾರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಕಬಳಿಸಿದ ಆಸ್ಟ್ರೇಲಿಯಾ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಸ್ಪಿನ್‌ ದಿಗ್ಗಜ 708 ವಿಕೆಟ್‌ಗಳನ್ನು ಕಬಳಿಸಿದ್ದರೆ, ಗ್ಲೆನ್‌ ಮೆಗ್ರಾಥ್‌ ಅವರು 563 ವಿಕೆಟ್‌ಗಳು, ಮಿಚೆಲ್‌ ಜಾನ್ಸನ್‌ 313 ವಿಕೆಟ್‌ಗಳು ಹಾಗೂ ಬ್ರೆಟ್‌ ಲೀ 310 ವಿಕೆಟ್‌ಗಳನ್ನು ಕಿತ್ತಿದ್ದಾರೆ.

ಹೇಝಲ್‌ವುಡ್ ಅವರ ವೃತ್ತಿಜೀವನದ ಟೆಸ್ಟ್ ಬೌಲಿಂಗ್ ಸರಾಸರಿ 24.02 ಆಗಿದ್ದು, 300ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದಿರುವ ಒಂಬತ್ತು ಆಸ್ಟ್ರೇಲಿಯಾ ಬೌಲರ್‌ಗಳಲ್ಲಿ ಇದು ಅತ್ಯುತ್ತಮ ದಾಖಲೆಗಳಲ್ಲಿ ಒಂದಾಗಿದೆ. ಅವರಿಗಿಂತ ಉತ್ತಮ ಸರಾಸರಿ ಹೊಂದಿರುವವರು ಗ್ಲೆನ್ ಮೆಗ್ರಾಥ್‌ (21.64), ಪ್ಯಾಟ್ ಕಮಿನ್ಸ್ (22.21) ಮತ್ತು ಡೆನ್ನಿಸ್ ಲಿಲ್ಲೀ (23.92) ಮಾತ್ರ.

ಗಾಲೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಟೀಮ್‌ ಇಂಡಿಯಾ

ಮೂರನೇ ದಿನದಾಟದ ಬಳಿಕ ಮಾತನಾಡಿದ ಹೇಝಲ್‌ವುಡ್, ವೈಯಕ್ತಿಕ ಮೈಲುಗಲ್ಲುಗಳ ಬಗ್ಗೆ ಪಂದ್ಯ ನಡೆಯುವ ಸಂದರ್ಭದಲ್ಲಿ ಹೆಚ್ಚು ಯೋಚಿಸುವುದಿಲ್ಲ ಎಂದು ಹೇಳಿದ್ದಾರೆ.

“ನೀವು ಆಡುತ್ತಿರುವಾಗ ಇಂತಹ ಮೈಲುಗಲ್ಲುಗಳ ಬಗ್ಗೆ ನಿಜವಾಗಿಯೂ ಯೋಚಿಸುವುದಿಲ್ಲ. ಬಹುಶಃ ವೃತ್ತಿಜೀವನದ ಕೊನೆಯಲ್ಲಿ ಹಿಂದಿರುಗಿ ನೋಡಿದಾಗ ಅದರ ಮಹತ್ವ ಅರ್ಥವಾಗುತ್ತದೆ. ಆದರೆ ಆ ಪಟ್ಟಿಯಲ್ಲಿ ಇತರ ಶ್ರೇಷ್ಠ ಆಟಗಾರರ ಹೆಸರುಗಳನ್ನು ನೋಡುವುದು ಮತ್ತು ಅವರಲ್ಲಿ ಮೂವರೊಂದಿಗೆ ಆಡಿರುವುದು ನಿಜಕ್ಕೂ ವಿಶೇಷ ಅನುಭವ,” ಎಂದು ಜಾಶ್‌ ಹೇಝಲ್‌ವುಡ್‌ ತಿಳಿಸಿದ್ದಾರೆ.

“ಅವರು (ಬಾಂಗ್ಲಾದೇಶ) ತುಂಬಾ ಹಠದಿಂದ ಹೋರಾಡಿದರು. ಆ ಪಿಚ್‌ನಲ್ಲಿ ಬೌಲ್‌ ಮಾಡುವುದು ಕಷ್ಟವಾಗಿತ್ತು. ನಾವು ಕೊನೆಯವರೆಗೂ ಹೋರಾಡಿ, ರನ್‌ಗಳು ವೇಗವಾಗಿ ಹರಿದುಹೋಗದಂತೆ ನೋಡಿಕೊಂಡೆವು. ಆದರೆ ಬಾಂಗ್ಲಾದೇಶ ಉತ್ತಮವಾಗಿ ಆಡಿತು ಮತ್ತು ವಿಕೆಟ್ ಪಡೆಯುವುದನ್ನು ಕಠಿಣಗೊಳಿಸಿತು,” ಎಂದು ಜಾಶ್‌ ಹೇಝಲ್‌ವುಡ್ ಹೇಳಿದ್ದಾರೆ.