ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs ENG: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22,000 ರನ್‌ ಗಳಿಸಿದ ಜೋ ರೂಟ್‌!

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಕೇವಲ ಎರಡೇ ದಿನಗಳಲ್ಲಿ ಕೊನೆಗೊಂಡಿತು. ಆದರೆ, ಇಂಗ್ಲೆಂಡ್‌ನ ಜೋ ರೂಟ್ ಈ ಪಂದ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದಲ್ಲಿ 22000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22000 ರನ್‌ ಗಳಿಸಿದ ಜೋ ರೂಟ್‌.

ನವದೆಹಲಿ: ಡಿಸೆಂಬರ್ 26 ರಂದು ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಾಲ್ಕನೇ ಆಷಸ್ ಟೆಸ್ಟ್ ಪಂದ್ಯ ಆರಂಭವಾಗಿತ್ತು ಆದರೆ, ಡಿಸೆಂಬರ್ 27 ರಂದು ಪಂದ್ಯ ಅಚ್ಚರಿ ರೀತಿಯಲ್ಲಿ ಮುಕ್ತಾಯವಾಯಿತು. ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾವನ್ನು ನಾಲ್ಕು ವಿಕೆಟ್‌ಗಳಿಂದ (AUS vs ENG) ಮಣಿಸಿತು. 14 ವರ್ಷಗಳಲ್ಲಿ ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್ ತಂಡಕ್ಕೆ ಇದು ಮೊದಲ ಟೆಸ್ಟ್ ಗೆಲುವಾಗಿದೆ. ಇದು ಇಂಗ್ಲೆಂಡ್‌ಗೆ ಐತಿಹಾಸಿಕ ಜಯ. ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡ್‌ನ ಮೊದಲ ಟೆಸ್ಟ್ ಗೆಲುವು ಕೂಡ ಇದಾಗಿದೆ. ಆದಾಗ್ಯೂ, ಆಸ್ಟ್ರೇಲಿಯಾ (Australia) ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ಜೋ ರೂಟ್ (Joe Root) ಮಹತ್ವದ ದಾಖಲೆಯೊಂದನ್ನು ಬರೆದಿದ್ದಾರೆ.

ಮೆಲ್ಬೋರ್ನ್ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ ಜೋ ರೂಟ್ ಶೂನ್ಯಕ್ಕೆ ಔಟಾದರು, ಆದರೆ ದ್ವಿತೀಯ ಇನಿಂಗ್ಸ್‌ನಲ್ಲಿ ಕೇವಲ 15 ರನ್‌ಗಳನ್ನು ಗಳಿಸಿದರು. ಆದಾಗ್ಯೂ, ಕೇವಲ 15 ರನ್‌ಗಳನ್ನು ಗಳಿಸುವ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 22,000 ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ದಾಖಲೆ ಬರೆದ ಒಂಬತ್ತನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ಹಿಂದೆ, ಈ ಸಾಧನೆಯನ್ನು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಕುಮಾರ್ ಸಂಗಕ್ಕಾರ, ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್, ಮಹೇಲಾ ಜಯವರ್ಧನೆ, ಜಾಕ್‌ ಕಾಲಿಸ್ ಮತ್ತು ಬ್ರಿಯಾನ್ ಲಾರಾ ಸಾಧಿಸಿದ್ದಾರೆ. ಇದೀಗ ಈ ಸಾಲಿಗೆ ಇಂಗ್ಲೆಂಡ್‌ ಮಾಜಿ ನಾಯಕ ಜೋ ರೂಟ್‌ ಸೇರ್ಪಡೆಯಾಗಿದ್ದಾರೆ.

AUS vs ENG: 15 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಬಾಕ್ಸಿಂಗ್‌ ಡೇ ಟೆಸ್ಟ್‌ ಗೆದ್ದ ಇಂಗ್ಲೆಂಡ್‌!

ಆಸ್ಟ್ರೇಲಿಯಾದಲ್ಲಿ ಮೊದಲ ಶತಕ ಬಾರಿಸಿದ್ದ ಜೋ ರೂಟ್‌

ಜೋ ರೂಟ್ ಅವರು ಆಸ್ಟ್ರೇಲಿಯಾದಲ್ಲಿ ಎಂದಿಗೂ ಟೆಸ್ಟ್ ಶತಕ ಗಳಿಸಿರಲಿಲ್ಲ. ಇದು ಹೆಚ್ಚು ಚರ್ಚೆಯ ವಿಷಯವಾಗಿತ್ತು. ಆದರೆ, ಈ ಬಾರಿ ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಅವರು ಅದನ್ನು ಬದಲಾಯಿಸಿದರು. ರೂಟ್ ಅಂತಿಮವಾಗಿ ಆಸ್ಟ್ರೇಲಿಯಾ ನೆಲದಲ್ಲಿ ತಮ್ಮ ಮೊದಲ ಶತಕವನ್ನು ದಾಖಲಿಸಿದ್ದಾರೆ.

ಅಂದ ಹಾಗೆ ಇಲ್ಲಿಯವರೆಗೂ ಆಡಿದ ಈ ಸರಣಿಯ ನಾಲ್ಕು ಪಂದ್ಯಗಳಿಂದ 234 ರನ್‌ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಟ್ರೇಲಿಯಾ ಈಗಾಗಲೇ ಮೊದಲ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. ಆಷಸ್‌ ಟೆಸ್ಟ್ ಪಂದ್ಯ ಜನವರಿ 4 ರಂದು ಸಿಡ್ನಿಯಲ್ಲಿ ಪ್ರಾರಂಭವಾಗುತ್ತದೆ. ಈಗಾಗಲೇ ಟೆಸ್ಟ್‌ ಸರಣಿಯನ್ನು ಕಳೆದುಕೊಂಡಿರುವ ಇಂಗ್ಲೆಂಡ್‌ ತಂಡ, ಕನಿಷ್ಠ ಕೊನೆಯ ಪಂದ್ಯವನ್ನು ಗೆದ್ದು ಗೌರವದೊಂದಿಗೆ ಆಸ್ಟ್ರೇಲಿಯಾ

IND vs NZ: ಸಚಿನ್‌ ತೆಂಡೂಲ್ಕರ್‌ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರುವ ಸನಿಹದಲ್ಲಿ ರೋಹಿತ್‌ ಶರ್ಮಾ!

ಜೋ ರೂಟ್ ಟೆಸ್ಟ್ ವೃತ್ತಿಜೀವನ

34ನೇ ವಯಸ್ಸಿನ ಜೋ ರೂಟ್ ತಮ್ಮ ವೃತ್ತಿಜೀವನದಲ್ಲಿ 162 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 296 ಇನಿಂಗ್ಸ್‌ಗಳಲ್ಲಿ 40 ಶತಕಗಳು ಮತ್ತು 66 ಅರ್ಧಶತಕಗಳು ಸೇರಿದಂತೆ 13,777 ರನ್‌ಗಳನ್ನು ಗಳಿಸಿದ್ದಾರೆ.