ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

AUS vs SA: ಮೊದಲನೇ ಏಕದಿನ ಪಂದ್ಯದಿಂದ ಪ್ಯಾಟ್‌ ಕಮಿನ್ಸ್‌ ಔಟ್‌? ಆಸ್ಟ್ರೇಲಿಯಾಗೆ ಆಘಾತ!

Pat Cummins likely to Miss 1st ODI vs SA: ಆಸ್ಟ್ರೇಲಿಯಾ ಒಡಿಐ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ ಆಡುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ. ಅವರು ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಲ್ಲಿ ಕಮಿನ್ಸ್‌ ಆಡಿರಲಿಲ್ಲ.

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಏಕದಿನ ಪಂದ್ಯದಿಂದ ಪ್ಯಾಟ್‌ ಕಮಿನ್ಸ್‌ ಔಟ್‌.

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ (AUS vs SA) ಮೊದಲ ಪಂದ್ಯದಿಂದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಹೊರಗುಳಿಯುವ ಸಾಧ್ಯತೆಯಿದೆ. ಮುಂಬರುವ ಮಹತ್ವದ ಟೆಸ್ಟ್ ಸರಣಿಯನ್ನು ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ತನ್ನ ಪ್ರಮುಖ ವೇಗದ ಬೌಲರ್‌ಗಳ ವರ್ಕ್‌ಲೋಡ್‌ನ್ನು ಎಚ್ಚರಿಕೆಯಿಂದ ನಿರ್ವಹಿಸಲು ಮುಂದಾಗಿದೆ. ಕ್ರಿಕ್‌ಇನ್ಫೋ ವರದಿ ಪ್ರಕಾರ, ಮಿಚೆಲ್ ಸ್ಟಾರ್ಕ್‌ಗಿಂತ ತಡವಾಗಿ ದಕ್ಷಿಣ ಆಫ್ರಿಕಾಗೆ ಆಗಮಿಸಿರುವ ಕಮಿನ್ಸ್, ಸ್ಟಾರ್ಕ್ ಮತ್ತು ಜಾಶ್ ಹೇಝಲ್‌ವುಡ್ ಅವರೊಂದಿಗೆ ಮೂರು ಏಕದಿನ ಪಂದ್ಯಗಳಲ್ಲಿ ವರ್ಕ್‌ಲೋಡ್ ನಿರ್ವಹಣೆಗೆ ಒಳಗಾಗಲಿದ್ದಾರೆ. ಡರ್ಬನ್, ಜೋಹಾನ್ಸ್‌ಬರ್ಗ್ ಮತ್ತು ಪೊಟ್ಚೆಫ್‌ಸ್ಟ್ರೂಮ್‌ನಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ.

ಕಮಿನ್ಸ್ ಮತ್ತು ಸ್ಟಾರ್ಕ್‌ ಇಬ್ಬರೂ ಜಿಂಬಾಬ್ವೆ ಪ್ರವಾಸದ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಆ ಸರಣಿಯನ್ನು ಆಸ್ಟ್ರೇಲಿಯಾ 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯು 2027ರ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ ರೇಸ್‌ನಲ್ಲಿ ಮಹತ್ವದ ಅಂಕಗಳನ್ನು ಒಳಗೊಂಡಿರುವುದರಿಂದ ಆಸ್ಟ್ರೇಲಿಯಾ ತನ್ನ ಪ್ರಮುಖ ಟೆಸ್ಟ್ ವೇಗಿಗಳಿಗೆ ಹೆಚ್ಚಿನ ವಿಶ್ರಾಂತಿ ನೀಡುತ್ತಿದೆ.

ಭಾರತದ ವಿರುದ್ಧದ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ; ರಚಿನ್ ರವೀಂದ್ರ ಅಲಭ್ಯ

ಮೂರು ಏಕದಿನ ಪಂದ್ಯಗಳು ಕೇವಲ ಏಳು ದಿನಗಳ ಅವಧಿಯಲ್ಲಿ ನಡೆಯಲಿದ್ದು, ನಗರಗಳ ನಡುವಿನ ಪ್ರಯಾಣವೂ ಇರುವುದರಿಂದ ಕಮಿನ್ಸ್, ಸ್ಟಾರ್ಕ್ ಮತ್ತು ಹೇಝಲ್‌ವುಡ್ ಮೂವರನ್ನೂ ಎಲ್ಲಾ ಪಂದ್ಯಗಳಲ್ಲಿ ಆಡಿಸುವ ಸಾಧ್ಯತೆ ಕಡಿಮೆ. ಕಮಿನ್ಸ್ ಸ್ವತಃ ಕಳೆದ ತಿಂಗಳು ಟೆಸ್ಟ್ ಪಂದ್ಯಗಳಿಗೂ ಮುನ್ನ ಕೇವಲ ಒಂದು ಏಕದಿನ ಪಂದ್ಯದಲ್ಲಿ ಆಡಬಹುದು ಎಂದು ಸೂಚಿಸಿದ್ದರು.

ಜಿಂಬಾಬ್ವೆ ಸರಣಿಯಲ್ಲಿ ವರ್ಕ್‌ಲೋಡ್ ನಿರ್ವಹಣೆಯ ಭಾಗವಾಗಿ ಕೇವಲ ಒಂದು ಪಂದ್ಯ ಆಡಿದ್ದ ಹೇಝಲ್‌ವುಡ್, ಮೊದಲ ಮತ್ತು ಮೂರನೇ ಏಕದಿನ ಪಂದ್ಯಗಳಲ್ಲಿ ಸ್ಟಾರ್ಕ್ ಜೊತೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಕಮಿನ್ಸ್ ಎರಡನೇ ಪಂದ್ಯದಲ್ಲಿ ಮಾತ್ರ ಆಡುವ ಸಾಧ್ಯತೆ ಇದೆ. ಇದೇ ವೇಳೆ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ನೇಥನ್ ಎಲ್ಲಿಸ್ ಏಕದಿನ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ ಎಂದು ಸ್ಟಾರ್ಕ್ ಹೇಳಿದ್ದಾರೆ.

ENG vs SL: 23 ಸಾವಿರ ಅಂತಾರಾಷ್ಟ್ರೀಯ ರನ್‌ಗಳ ಕ್ಲಬ್‌ಗೆ ಜೋ ರೂಟ್; ಸಚಿನ್ ದಾಖಲೆ ಮುರಿದ ಇಂಗ್ಲೆಂಡ್ ಬ್ಯಾಟರ್!

ಕಮಿನ್ಸ್ ವಿಶ್ರಾಂತಿ ಪಡೆಯುವ ಪಂದ್ಯಗಳಲ್ಲಿ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸುವ ನಿರೀಕ್ಷೆಯಿದೆ. ಸ್ಟೀವನ್ ಸ್ಮಿತ್ 2025ರಲ್ಲಿ ನಿವೃತ್ತರಾದ ಬಳಿಕ ಮಾರ್ಷ್‌ಗೆ ಏಕದಿನ ತಂಡದ ಉಪನಾಯಕನ ಜವಾಬ್ದಾರಿ ನೀಡಲಾಗಿತ್ತು. ಇನ್ನು ಗಾಯದ ಸಮಸ್ಯೆಗಳಿಂದ ಆಸ್ಟ್ರೇಲಿಯಾ ತಂಡದ ಆಯ್ಕೆಯಲ್ಲೂ ಸವಾಲು ಎದುರಾಗಿದೆ. ಸೈಡ್ ಸ್ಟ್ರೇನ್‌ನಿಂದ ವೇಗಿ ಬಿಲ್ಲಿ ಸ್ಟಾನ್‌ಲೇಕ್ ಪ್ರವಾಸದಿಂದ ಹೊರಗುಳಿದಿದ್ದಾರೆ. ಸ್ಪೆನ್ಸರ್ ಜಾನ್ಸನ್ ಕೂಡ ವಿಶ್ರಾಂತಿಗಾಗಿ ತವರಿಗೆ ಮರಳಿದ್ದಾರೆ.

ಆಲ್‌ರೌಂಡರ್ ಜ್ಯಾಕ್ ಎಡ್ವರ್ಡ್ಸ್ ಅವರನ್ನು ತಂಡಕ್ಕೆ ಹೆಚ್ಚುವರಿ ಆಟಗಾರನಾಗಿ ಸೇರಿಸಲಾಗಿದೆ. ಕ್ಯಾಮೆರಾನ್ ಗ್ರೀನ್ ಭುಜದ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಆಡಲು ಫಿಟ್ ಆದರೆ ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ವಿಕೆಟ್‌ಕೀಪರ್-ಬ್ಯಾಟರ್ ಅಲೆಕ್ಸ್ ಕೇರಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಪೈಪೋಟಿ ಎದುರಿಸಬಹುದು.