ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

AUS vs SA: ದಕ್ಷಿಣ ಆಫ್ರಿಕಾ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾಗೆ ಆಘಾತ! ಮೂವರು ಆಟಗಾರರಿಗೆ ಗಾಯ!

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ಮೂವರು ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ. ಮಿಚೆಲ್‌ ಒವೆನ್‌, ಲ್ಯಾನ್ಸ್‌ ಮಾರಿಸ್‌ ಹಾಗೂ ಮ್ಯಾಟ್‌ ಶಾರ್ಟ್ಸ್‌ ಅವರು ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ.

ಆಸ್ಟ್ರೇಲಿಯಾ ತಂಡಕ್ಕೆ ಏಕದಿನ ಸರಣಿಗೂ ಮುನ್ನ ಭಾರಿ ಹಿನ್ನಡೆಯಾಗಿದೆ.

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ (AUS vs SA) ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಆಘಾತವಾಗಿದೆ. ಆಸ್ಟ್ರೇಲಿಯಾ ತಂಡದ ಮೂವರು ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ. ಮಿಚೆಲ್‌ ಒವೆನ್‌ (Mitchell Owen), ಲ್ಯಾನ್ಸ್‌ ಮಾರಿಸ್‌ ( Lance Morris) ಹಾಗೂ ಮ್ಯಾಟ್‌ ಶಾರ್ಟ್‌ (Matt Short) ಗಾಯಕ್ಕೆ ತುತ್ತಾಗಿದ್ದು, ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ. ಎರಡನೇ ಟಿ20ಐ ಪಂದ್ಯದಲ್ಲಿ ಕಗಿಸೊ ರಬಾಡ ಅವರ ಬೌನ್ಸರ್‌ನಲ್ಲಿ ಮಿಚೆಲ್‌ ಒವೆನ್‌ ಚೆಂಡನ್ನು ತಮ್ಮ ಹಲ್ಮೆಟ್‌ಗೆ ತಗುಲಿಸಿಕೊಂಡು ಕನ್ಕಷನ್‌ಗೆ ಒಳಗಾಗಿದ್ದರು. ಹಾಗಾಗಿ ಅವರು 12 ದಿನಗಳ ಕಾಲ ಕಡ್ಡಾಯವಾಗಿ ವಿಶ್ರಾಂತಿ ಪಡೆಯಬೇಕಾಗಿದೆ. ಆದ್ದರಿಂದ ಟಿ20ಐ ಸರಣಿಯ ನಿರ್ಣಾಯಕ ಪಂದ್ಯ ಹಾಗೂ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ.

ಮ್ಯಾಟ್‌ ಶಾರ್ಟ್‌ ಅವರು ಈಗಾಗಲೇ ಎರಡು ಟಿ20ಐ ಪಂದ್ಯಗಳಿಂದ ಹೊರ ನಡೆದಿದ್ದಾರೆ. ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಅವರಿಗೆ ಸೈಡ್‌ ಸ್ಟ್ರೇನ್‌ ಆಗಿತ್ತು. ಅವರು ಸಂಪೂರ್ಣ ಗುಣಮುಖರಾಗಲು ಹೆಚ್ಚಿನ ಅವಧಿ ಅಗತ್ಯವಿರುವ ಕಾರಣ, ಮುಂಬರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರ ನಡೆದಿದ್ದಾರೆ.

SA vs AUS: ದಕ್ಷಿಣ ಆಫ್ರಿಕಾ ಆಲ್‌ರೌಂಡರ್‌ ಕಾರ್ಬಿನ್‌ ಬಾಷ್‌ಗೆ ದಂಡ ವಿಧಿಸಿದ ಐಸಿಸಿ!

ಇನ್ನು ಲ್ಯಾನ್ಸ್‌ ಮಾರಿಸ್‌ ಅವರು ತರಬೇತಿಯ ವೇಳೆ ಕೆಳ ಬೆನ್ನಿನ ಗಾಯಕ್ಕೆ ತುತ್ತಾಗಿದ್ದರು. ಹೆಚ್ಚಿನ ಮೌಲ್ಯಮಾಪನಕ್ಕಾಗಿ ಅವರು ಪರ್ತ್‌ಗೆ ಮರಳಿದ್ದರು ಮತ್ತು ಅವರ ಫಿಟ್‌ನೆಸ್ ಕಾರಣ ಇದೀಗ ಏಕದಿನ ಸರಣಿಯಿಂದ ಹೊರ ಬಿದ್ದಿದ್ದಾರೆ. ಆಸ್ಟ್ರೇಲಿಯಾ ಎ ತಂಡದ ಭಾರತ ಪ್ರವಾಸಕ್ಕೆ ಅವರ ಲಭ್ಯತೆಯ ಮೇಲೆ ಪರಿಣಾಮ ಬೀರಬಹುದು.

AUS vs SA: 16 ವರ್ಷದ ವಾರ್ನರ್‌ ದಾಖಲೆ ಮುರಿದ ಟಿಮ್‌ ಡೇವಿಡ್‌

ಮೂವರಿಗೆ ಅವಕಾಶ

ಇದಕ್ಕೆ ಪ್ರತಿಕ್ರಿಯೆಯಾಗಿ ಆಯ್ಕೆದಾರರು ಆರನ್ ಹಾರ್ಡಿ, ಮ್ಯಾಥ್ಯೂ ಕುಹ್ನೆಮನ್ ಮತ್ತು ಕೂಪರ್ ಕಾನೊಲಿ ಅವರನ್ನು ಬದಲಿ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ. ಆಗಸ್ಟ್ 19 (ಕೈರ್ನ್ಸ್), ಆಗಸ್ಟ್ 22 ಮತ್ತು 24 (ಮೆಕೆಯಲ್ಲಿ) ರಂದು ಮೂರು ಪಂದ್ಯಗಳು ನಡೆಯಲಿವೆ.

2024ರ ಕೊನೆಯಿಂದ ಸತತ ಎಂಟು ಪಂದ್ಯಗಳನ್ನು ಗೆಲ್ಲುವ ಮೂಲಕ ಆಸ್ಟ್ರೇಲಿಯಾ ತಂಡ ಅದ್ಭುತ ಫಾರ್ಮ್‌ ಮೂಲಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಬಂದಿತ್ತು. ಮೊದಲನೇ ಪಂದ್ಯವನ್ನು 17 ರನ್‌ಗಳಿಂದ ಗೆದ್ದು ತಮ್ಮ ಗೆಲುವಿನ ಲಯವನ್ನು ಮುಂದುವರಿಸಿತ್ತ. ಈ ಪಂದ್ಯದಲ್ಲಿ ಟಿಮ್‌ ಡೇವಿಡ್‌ ಕೇವಲ 53 ಎಸೆತಗಳಲ್ಲಿ 83 ರನ್‌ಗಳನ್ನು ಸಿಡಿಸಿದ್ದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.



ನಂತರ ಎರಡನೇ ಟಿ20ಐ ಪಂದ್ಯವನ್ನು 53 ರನ್‌ಗಳಿಂದ ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಸರಣಿಯಲ್ಲಿ ಕಮ್‌ಬ್ಯಾಕ್‌ ಮಾಡಿತ್ತು. ಡೆವಾಲ್ಡ್‌ ಬ್ರೆವಿಸ್‌ 56 ಎಸೆತಗಳಲ್ಲಿ ಅಜೇಯ 125 ರನ್‌ ಸಿಡಿಸಿ ದಕ್ಷಿಣ ಆಫ್ರಿಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಇದೀಗ ಸರಣಿಯಲ್ಲಿ ಉಭಯ ತಂಡಗಳು 1-1 ಅಂತರದಲ್ಲಿ ಸಮಬಲ ಕಾಯ್ದುಕೊಂಡಿವೆ. ಮೂರನೇ ಹಾಗೂ ಕೊನೆಯ ಪಂದ್ಯವನ್ನು ಗೆಲ್ಲುವ ತಂಡ ಟಿ20ಐ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ.