ʻಟಿ20 ವಿಶ್ವಕಪ್ ಭಾರತ ತಂಡಕ್ಕೆ ಶ್ರೇಯಸ್ ಅಯ್ಯರ್ ಅರ್ಹರುʼ: ರಾಬಿನ್ ಉತ್ತಪ್ಪ!
ಮುಂಬರುವ 2025ರ ಏಷ್ಯಾ ಕಪ್ ಭಾರತ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್‌ಗೆ ಸ್ಥಾನವನ್ನು ನೀಡಿಲ್ಲ. ಈ ಬಗ್ಗೆ ಭಾರತದ ಮಾಜಿ ಆರಂಭಿಕ ರಾಬಿನ್ ಉತ್ತಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಐಸಿಸಿ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಆಡಲು ಶ್ರೇಯಸ್ ಅಯ್ಯರ್ ಅರ್ಹರಾಗಿದ್ದಾರೆಂದು ತಿಳಿಸಿದ್ದಾರೆ.

ಶ್ರೇಯಸ್‌ಅಯ್ಯರ್ ಅವರನ್ನು ರಾಬಿನ್ ಉತ್ತಪ್ಪ ಬೆಂಬಲಿಸಿದ್ದಾರೆ.

ನವದೆಹಲಿ: ಮುಂಬರುವ ಏಷ್ಯಾ ಕಪ್ (Asia Cup 2025) ಭಾರತ ತಂಡದಲ್ಲಿ ಶ್ರೇಯಸ್ ಅಯ್ಯರ್‌ಗೆ (Shreyas Iyer) ಸ್ಥಾನ ನೀಡದ ಬಗ್ಗೆ ಟೀಮ್ ಇಂಡಿಯಾ ಮಾಜಿ ಆರಂಭಿಕ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ (Robin Uthappa) ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮುಂದಿನ ವರ್ಷ ನಡೆಯುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಭಾರತ ತಂಡಕ್ಕೆ ಶ್ರೇಯಸ್ ಅಯ್ಯರ್ ಅರ್ಹರು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಶ್ರೇಯಸ್ ಅಯ್ಯರ್ ಕಳೆದ 2025ರ ಐಪಿಎಲ್ ಟೂರ್ನಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು ಹಾಗೂ ಇದಕ್ಕೂ ಮುನ್ನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತ ತಂಡದಲ್ಲಿಯೂ ಉತ್ತಮ ಪ್ರದರ್ಶನವನ್ನು ತೋರಿದ್ದರು. ಆದರೂ ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಬಲಗೈ ಬ್ಯಾಟ್ಸ್‌ಮನ್ ಅನ್ನು ಪರಿಗಣಿಸಿಲ್ಲ.
ಏಷ್ಯಾ ಕಪ್ ಭಾರತ ತಂಡದಲ್ಲಿ ಆಯ್ಕೆಯಾಗುವ ಮೂಲಕ ಶುಭಮನ್ ಗಿಲ್ ದೀರ್ಘಾವಧಿ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗ ಮರಳಿದ್ದಾರೆ. ಅವರನ್ನು ತಂಡಕ್ಕೆ ಆಯ್ಕೆ ಮಾಡುವುದರ ಜೊತೆಗೆ ಉಪ ನಾಯಕನ ಜವಾಬ್ದಾರಿಯನ್ನು ನೀಡಲಾಗಿದೆ. 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶುಭಮನ್ ಗಿಲ್ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು. ಬಹುಶಃ ಇದರ ಆಧಾರದ ಮೇಲೆ ಅವರಿಗೆ ಟಿ20ಐ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ ಎಂದು ಭಾವಿಸಬಹುದು. ಇವರು 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಬಾರಿ ಟಿ20ಐ ಸರಣಿಯನ್ನು ಆಡಿದ್ದರು.
Asia Cup: ಯಶಸ್ವಿ ಜೈಸ್ವಾಲ್‌ಗೆ ಸ್ಥಾನ ನೀಡದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಮದನ್ ಲಾಲ್!
2024ರ ಐಪಿಎಲ್ ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಚಾಂಪಿಯನ್ ಆಗಿತ್ತು. ಇದರ ಹೊರತಾಗಿಯೂ 2025ರ ಟೂರ್ನಿಯಲ್ಲಿ ಅವರನ್ನು ಉಳಿಸಿಕೊಳ್ಳುವಲ್ಲಿ ಕೋಲ್ಕತಾ ಫ್ರಾಂಚೈಸಿ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಮೆಗಾ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದರು. ಅದರಂತೆ ಅವರ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ಫೈನಲ್‌ಗೆ ಪ್ರವೇಶ ಮಾಡಿತ್ತು. ಆದರೆ, ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋಲು ಅನುಭವಿಸುವ ಮೂಲಕ ರನ್ನರ್ ಅಪ್ ಆಗಿತ್ತು.
There are around 18 T20I’s to go before India play the next #T20WC; not having #ShreyasIyer who was integral in helping you win the CT seems strange. But one can only hope that he gets into this side soon coz he deserves it! I hope they have communicated to him about his… https://t.co/lsa6MpvhLz
— Robbie Uthappa (@robbieuthappa) August 20, 2025
ಸೋಶಿಯಲ್ ಮೀಡಿಯಾದಲ್ಲಿ ಮಾತನಾಡಿದ ರಾಬಿನ್ ಉತ್ತಪ್ಪ, "ಭಾರತ ತಂಡ, ಮುಂದಿನ ಟಿ20 ವಿಶ್ವಕಪ್ ಆಡುವುದಕ್ಕೂ ಮುನ್ನ ಸುಮಾರು 18 ಟಿ20ಐ ಪಂದ್ಯಗಳನ್ನು ಆಡುವುದು ಬಾಕಿ ಇವೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ನಿಮಗೆ ಸಹಾಯ ಮಾಡಿದ ಶ್ರೇಯಸ್ ಅಯುರ್ ಇಲ್ಲದಿರುವುದು ವಿಚಿತ್ರವೆನಿಸುತ್ತದೆ. ಆದರೆ ಅವರು ಶೀಘ್ರದಲ್ಲೇ ಈ ತಂಡಕ್ಕೆ ಬರುತ್ತಾರೆ ಎಂದು ನಾವು ಆಶಿಸಬಹುದು ಏಕೆಂದರೆ ಅವರು ಅದಕ್ಕೆ ಅರ್ಹರು! ಅವರು ಅಯ್ಯರ್ ಹೊರಗಿಡುವ ಬಗ್ಗೆ ತಿಳಿಸಿದ್ದಾರೆಂದು ನಾನು ಭಾವಿಸುತ್ತೇನೆ," ಎಂದು ರಾಬಿನ್ ಉತ್ತಪ್ಪ ಪೋಸ್ಟ್ ಹಾಕಿದ್ದಾರೆ.
Asia Cup 2025: ಭಾರತ ತಂಡ ಕಳೆದುಕೊಂಡಿರುವ ಎಕ್ಸ್ ಫ್ಯಾಕ್ಟರ್ ಆಟಗಾರರನ್ನು ಹೆಸರಿಸಿದ ಹರ್ಭಜನ್ ಸಿಂಗ್!
ಮುಂದೆ ನೋಡುವುದಾದರೆ, ಭಾರತ ತಂಡ 2026ರ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳೊಂದಿಗೆ ಅಂತಾರಾಷ್ಟ್ರೀಯ ಟಿ20ಐ ಕ್ಯಾಲೆಂಡರ್ ಅನ್ನು ಹೊಂದಿದೆ. ಆದಾಗ್ಯೂ, ಅಯ್ಯರ್ ಅವರ ಭಾರತದ ಟಿ20I ಕಲರ್ಸ್ ಧರಿಸಲು ಕಾಯುವಿಕೆ ಮುಂದುವರಿದಿದೆ. 2023ರ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಪಂದ್ಯದಲ್ಲಿ ಅರ್ಧಶತಕವನ್ನು ಬಾರಿಸಿದ್ದರು. ಆದರೆ ಅವರ ಸ್ಥಿರ ದೇಶಿ ಫಾರ್ಮ್ ಮತ್ತು ನಾಯಕತ್ವದ ಅರ್ಹತೆಗಳಿದ್ದರೂ ಸಹ ಅವರನ್ನು ಏಷ್ಯಾ ಕಪ್ ಟೂರ್ನಿಯಿಂದ ಕಡೆಗಣಿಸಲಾಗಿದೆ.