ನವದೆಹಲಿ: ಭಾರತೀಯ ಮೂಲದ ಇಬ್ಬರು ಯುವ ಕ್ರಿಕೆಟಿಗರಾದ ಆರ್ಯನ್ ಶರ್ಮಾ(Aryan Sharma), ಯಶ್ ದೇಶ್‌ಮುಖ್ (Yash Deshmukh) ಅವರು ಆಸ್ಟ್ರೇಲಿಯಾ ಅಂಡರ್-19 (Australia U-19) ತಂಡದಲ್ಲಿ ಸ್ಥಾನವನ್ನು ಪಡೆದಿದ್ದಾರೆ. ಆಸ್ಟ್ರೇಲಿಯಾ ದೇಶಿ ಕ್ರಿಕೆಟ್‌ನಲ್ಲಿ ವಿಕ್ಟೋರಿಯಾ ತಂಡದlfli ಆರ್ಯನ್ ಶರ್ಮಾ ಆಡಲಿದ್ದಾರೆ. ಇನ್ನು ಯಶ್ ದೇಶ್‌ಮುಖ್ ಅವರು ನ್ಯೂ ಸೌಥ್‌ವೇಲ್ಸ್ ಪರ ಆಡುತ್ತಿದ್ದಾರೆ. ಅವರು ತಮ್ಮ ಪ್ರತಿಭೆ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಿದ ಫಲವಾಗಿ ಆಸ್ಟ್ರೇಲಿಯಾ ಕಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭಾರತದ ವಿರುದ್ಧ ಆಸ್ಟ್ರೇಲಿಯಾ ಕಿರಿಯದ ತಂಡ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ನಾಲ್ಕು ದಿನಗಳ ಎರಡು ಪಂದ್ಯಗಳನ್ನು ಆಡಲಿದೆ.ಸೆಪ್ಟಂಬರ್ 21 ರಂದು ಆರಂಭವಾಗುವ ಸರಣಿಗಳು ಅಕ್ಟೋಬರ್ 10 ರಂದು ನಡೆಯಲಿವೆ.
ಕ್ರಿಕೆಟ್ ಆಸ್ಟ್ರೇಲಿಯಾದ ಯುವ ಆಯ್ಕೆ ಸಮಿತಿಯು, ರಾಜ್ಯ ಪ್ರತಿಭಾ ವ್ಯವಸ್ಥಾಪಕರೊಂದಿಗೆ 15 ಆಟಗಾರರ ತಂಡವನ್ನು ಆಯ್ಕೆ ಮಾಡಿದೆ. ಈ ಸರಣಿಯು ಯುವ ಆಟಗಾರರನ್ನು ಅಭಿವೃದ್ಧಿಪಡಿಸುವ ಮತ್ತು ಅವರಿಗೆ ಬಿಳಿ-ಚೆಂಡು ಮತ್ತು ಕೆಂಪು-ಚೆಂಡು ಕ್ರಿಕೆಟ್ ಎರಡರಲ್ಲೂ ಅನುಭವವನ್ನು ನೀಡುವ ಕ್ರಿಕೆಟ್ ಆಸ್ಟ್ರೇಲಿಯಾದ ಯೋಜನೆಯ ಭಾಗವಾಗಿದೆ.
IND vs ENG: ಅರ್ಷದೀಪ್ ಸಿಂಗ್ ಬದಲು ಅನ್ಶುಲ್ ಕಾಂಬೋಜ್‌ಗೆ ಸ್ಥಾನ ನೀಡಿದ್ದೇಕೆ? ಅರುಣ್ ಲಾಲ್ ಪ್ರಶ್ನೆ!
ಇದು 2026ರಲ್ಲಿ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಐಸಿಸಿ U19 ಪುರುಷರ ವಿಶ್ವಕಪ್ ಟೂರ್ನಿಗೆ ಸಿದ್ಧತೆಯಾಗಿದೆ. ಇಲ್ಲಿಯವರೆಗೆ ಎರಡು ವರ್ಷಗಳ ಋತುವು ಬ್ರಿಸ್ಬೇನ್‌ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಕೇಂದ್ರದಲ್ಲಿ ಶಿಬಿರ, ಭಾರತ ಪ್ರವಾಸ ಮತ್ತು ಭಾರತದಲ್ಲಿ ವಿಶೇಷ ಸ್ಪಿನ್ ಮತ್ತು ಬ್ಯಾಟಿಂಗ್ ಶಿಬಿರವನ್ನು ಒಳಗೊಂಡಿದೆ.
ಆಸ್ಟ್ರೇಲಿಯಾದ ಮಾಜಿ ಮುಖ್ಯ ಕೋಚ್ ಟಿಮ್ ನೀಲ್ಸನ್ ಅಂಡರ್-19 ತಂಡದ ಉಸ್ತುವಾರಿ ವಹಿಸಿಕೊಂಡಿದ್ದು, ಇದು ಅವರಿಗೆ ಮೊದಲ ಸರಣಿಯಾಗಲಿದೆ. ಉನ್ನತ ಮಟ್ಟದಲ್ಲಿ ಅವರ ಅನುಭವವು ತಂಡವನ್ನು ಮುನ್ನಡೆಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
The next batch of future stars ✨
— Cricket Australia (@CricketAus) August 8, 2025
Congrats to all selected in a 15-man U19 squad ahead of an upcoming series against the India U19s in Brisbane and Mackay. pic.twitter.com/PoCa2d2Szk
ಭಾರತದ ಸರಣಿಯ ನಂತರ ಆಸೀಸ್ ಆಟಗಾರರು ದೇಶಿ ಋತುವಿಗಾಗಿ ತಮ್ಮ ರಾಜ್ಯಗಳಿಗೆ ಹಿಂತಿರುಗುತ್ತಾರೆ. ಡಿಸೆಂಬರ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ ಅಂಡರ್-19 ಪುರುಷ ಚಾಂಪಿಯನ್‌ಶಿಪ್‌ಗಳು, 2026ರ ಅಂಡರ್-19 ವಿಶ್ವಕಪ್‌ಗಾಗಿ ಅಂತಿಮ ತಂಡವನ್ನು ನಿರ್ಧರಿಸುತ್ತವೆ.
ಭಾರತದ ಸರಣಿಯ ಆಸ್ಟ್ರೇಲಿಯಾ ಅಂಡರ್-19 ತಂಡ: ಸೈಮನ್ ಬಡ್ಜ್, ಅಲೆಕ್ಸ್ ಟರ್ನರ್, ಸ್ಟೀವನ್ ಹೊಗನ್, ವಿಲ್ ಮಲರ್ಝುಕ್, ಯಶ್ ದೇಶ್‌ಮುಖ್, ಟಾಮ್ ಹೊಗನ್, ಆರ್ಯನ್ ಶರ್ಮಾ, ಜಾನ್ ಜೇಮ್ಸ್, ಹೇಡನ್ ಸೀಲರ್, ಚಾರ್ಲ್ಸ್ ಲ್ಯಾಚ್ಮಂಡ್, ಬೆನ್ ಗಾರ್ಡನ್, ವಿಲ್ ಬೈರಮ್, ಕ್ಯಾಸಿ ಬಾರ್ಟನ್, ಅಲೆಕ್ಸ್ ಲೀ ಚಂಗ್, ಜೇಡನ್ ಡ್ರಾಪರ್