ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಸಾಲಿನ (IPL 2026) 31ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ ಕಾದಾಟ ನಡೆಸಿದವು. ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದಲ್ಲದೆ, ಈ ಪಂದ್ಯವು ಅಕ್ಷರ್ ಪಟೇಲ್ ಅವರ ಡೆಲ್ಲಿ ಪರ 100 ನೇ ಪಂದ್ಯವಾಗಿದೆ. ಆ ಮೂಲಕ ಡಿಸಿ ಪರ 100 ಐಪಿಎಲ್ ಪಂದ್ಯಗಳನ್ನು ಆಡದ ಆಟಗಾರರ ಎಲೈಟ್ ಲಿಸ್ಟ್‌ಗೆ ಅಕ್ಷರ್ ಪಟೇಲ್ ಸೇರ್ಪಡೆಯಾಗಿದ್ದಾರೆ.
ನಾಯಕ ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ಪರ 100 ಪಂದ್ಯಗಳನ್ನು ಆಡಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಅಕ್ಷರ್‌ಗಿಂತ ಮುನ್ನ ಅಮಿತ್ ಮಿಶ್ರಾ (103) ಮತ್ತು ರಿಷಭ್ ಪಂತ್ (111) ಮಾತ್ರ ಡೆಲ್ಲಿ ಕ್ಯಾಪಿಟಲ್ಸ್ ಪರ 100 ಪಂದ್ಯಗಳನ್ನು ಆಡಿದ್ದರು. ಈಗ ಡೆಲ್ಲಿ ಫ್ರಾಂಚೈಸಿ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಮೂರನೇ ಆಟಗಾರ ಅಕ್ಷರ್.
ಶ್ರೇಯಸ್ ಅಯ್ಯರ್‌ಗೆ ಭಾರತ ತಂಡದಲ್ಲಿ ದೊಡ್ಡ ಅನ್ಯಾಯ: ಸಂಜಯ್ ಮಾಂಜ್ರೇಕರ್!
100ನೇ ಪಂದ್ಯದ ಬಗ್ಗೆ ಅಕ್ಷರ್ ಪಟೇಲ್ ಪ್ರತಿಕ್ರಿಯೆ
ಡೆಲ್ಲಿ ಕ್ಯಾಪಿಟಲ್ಸ್ ತನ್ನ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಮಾಡಿಕೊಂಡಿತು. ಆಕಿಬ್ ನಬಿ ಬದಲಿಗೆ ನಿತೀಶ್ ರಾಣಾ ತಂಡಕ್ಕೆ ಮರಳಿದ್ದಾರೆ. ಟಾಸ್ ಗೆದ್ದ ನಂತರ, ನಾಯಕ ಅಕ್ಷರ್ ಪಟೇಲ್, "ನಾವು ಮೊದಲು ಬೌಲ್ ಮಾಡುತ್ತೇವೆ. ಟಾಸ್ ಗೆಲ್ಲುವುದು ನಿಜಕ್ಕೂ ಅದೃಷ್ಟ, ಎಲ್ಲಾ ಪಂದ್ಯಗಳಲ್ಲಿ ಟಾಸ್ ಗೆಲ್ಲುವುದು ನಿಜಕ್ಕೂ ಉತ್ತಮ. ಧನ್ಯವಾದಗಳು; ನಾನು ಡೆಲ್ಲಿ ಕ್ಯಾಪಿಟಲ್ಸ್ ಪರ 100 ಪಂದ್ಯಗಳನ್ನು ಆಡುತ್ತೇನೆ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಈ ಪಂದ್ಯವು ಗೆಲುವಿನೊಂದಿಗೆ ಕೊನೆಗೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ತರಲಾಗಿದೆ. ಆಕಿಬ್ ನಬಿ ಬದಲಿಗೆ ನಿತೀಶ್ ರಾಣಾ ಆಡುತ್ತಿದ್ದಾರೆ," ಎಂದು ಮಾಹಿತಿ ನೀಡಿದ್ದಾರೆ.
ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ಪರ 100 ಪಂದ್ಯಗಳಲ್ಲಿ 1,259 ರನ್ ಮತ್ತು 73 ವಿಕೆಟ್‌ಗಳನ್ನು ಪಡೆದಿದ್ದಾರೆ.
MI vs GT: 4 ವಿಕೆಟ್ ಕಿತ್ತ ತಮ್ಮ ಬೌಲಿಂಗ್ ಪ್ಲ್ಯಾನ್ ಏನೆಂದು ತಿಳಿಸಿದ ಅಶ್ವಿನಿ ಕುಮಾರ್!
“ಇದು (ರಾಜೀವ್ ಗಾಂಧಿ ಸ್ಟೇಡಿಯಂ ಪಿಷ್) ಹಿಂದಿನ ಪಿಚ್‌ನಂತಿಲ್ಲ ಎಂದು ನಾನು ಭಾವಿಸುತ್ತೇನೆ, ಆದ್ದರಿಂದ ನಿರ್ಧಾರ ಮಾಡುವುದು ಸ್ವಲ್ಪ ಕಷ್ಟ. ತಂಡದಲ್ಲಿ ಕೆಲವು ಬದಲಾವಣೆಗಳಿವೆ. ಮಧುಶಣಕ ತಂಡಕ್ಕೆ ಸೇರಿದ್ದಾರೆ ಮತ್ತು ಹರ್ಷ ದುಬೆ ಕೂಡ ಮರಳಿ ಬಂದಿದ್ದಾರೆ. ಯೋಜನೆಗಳನ್ನು ಸರಿಯಾಗಿ ಜಾರಿಗೆ ತರುವುದು ಮುಖ್ಯ. ನಾವು ಒಂದೊಂದು ಪಂದ್ಯವನ್ನು ಪ್ರತ್ಯೇಕವಾಗಿ ನೋಡಿಕೊಂಡು ಅದಕ್ಕೆ ಅನುಗುಣವಾಗಿ ಆಡುತ್ತೇವೆ,” ಎಂದು ಸನ್‌ರೈಸರ್ಸ್ ಹೈದರಾಬಾದ್ ಇಶಾನ್ ಕಿಶನ್ ಟಾಸ್ ವೇಳೆ ತಿಳಿಸಿದ್ದಾರೆ.