ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026 ಟೂರ್ನಿಯ ಬಳಿಕ ನಾಯಕತ್ವ ಕಳೆದುಕೊಳ್ಳಬಲ್ಲ ಮೂವರು ಆಟಗಾರರು!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಮ್ಮ-ತಮ್ಮ ತಂಡಗಳು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾದ ಕಾರಣ ಅಜಿಂಕ್ಯ ರಹಾನೆ, ಅಕ್ಷರ್‌ ಪಟೇಲ್‌ ಹಾಗೂ ರಿಷಭ್‌ ಪಂತ್‌ ಅವರು ನಾಯಕತ್ವವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಫ್ರಾಂಚೈಸಿಗಳಲ್ಲಿನ ನಡೆದಿರುವ ಬೆಳವಣಿಗೆಗಳನ್ನು ಅರಿತುಕೊಂಡಿರುವ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಐಪಿಎಲ್‌ ತಂಡಗಳ ನಾಯಕತ್ವ ಕಳೆದುಕೊಳ್ಳಬಲ್ಲ ಆಟಗಾರರು.

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ ಸಾಲಿನ (IPL 2026) ಟೂರ್ನಿ ನಿರ್ಣಾಯಕ ಹಂತ ತಲುಪಿದೆ. ಇದೀಗ ಎಂಟು ತಂಡಗಳು ನಡುವೆ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ತೀವ್ರ ಪೈಪೋಟಿ ನಡೆಸುತ್ತಿವೆ. ಇದರ ನಡುವೆ ಲಖನೌ ಸೂಪರ್‌ ಕಿಂಗ್ಸ್‌ ಹಾಗೂ ಮುಂಬೈ ಇಂಡಿಯನ್ಸ್‌ ತಂಡಗಳು ಪ್ಲೇಆಫ್ಸ್‌ನಿಂದ ಹೊರ ಬಿದ್ದಿವೆ. ಮುಂದಿನ ಎರಡು, ಮೂರು ದಿನಗಳಲ್ಲಿ ಅಂತಿಮ ನಾಲ್ಕರ ಹಂತಕ್ಕೆ ಅರ್ಹತೆ ಪಡೆಯಬಲ್ಲ ತಂಡಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ.

ಇದರ ನಡುವೆ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟನ್ಸ್‌ ತಂಡಗಳು ಈಗಾಗಲೇ 16 ಅಂಕಗಳ ಮೂಲಕ ಪ್ಲೇಆಫ್ಸ್‌ ಅನ್ನು ಈಗಾಗಲೇ ಖಚಿತಪಡಿಸಿಕೊಂಡಿವೆ. ಇನ್ನುಳಿದ ಎರಡು ಸ್ಥಾನಗಳಲ್ಲಿ ಪಂಜಾಬ್‌ ಕಿಂಗ್ಸ್‌, ಸನ್‌ರೈಸರ್ಸ್‌ ಹೈದರಾಬಾದ್‌, ಚೆನ್ನೈ ಸೂಪರ್‌ ಕಿಂಗ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳ ನಡುವೆ ಪೈಪೋಟಿ ನಡೆಸುತ್ತಿವೆ. ಅಂದ ಹಾಗೆ ಈ ಐಪಿಎಲ್‌ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲವಾಗಿರುವ ಕೆಲ ತಂಡಗಳಲ್ಲಿ ಕೆಲ ಆಟಗಾರರು ನಾಯಕತ್ವವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಅಕ್ಷರ್‌ ಪಟೇಲ್‌, ಅಜಿಂಕ್ಯ ರಹಾನೆ ಹಾಗೂ ರಿಷಭ್‌ ಪಂತ್‌ ಅವರು ಕಳೆದ ಎರಡು ಸೀಸನ್‌ಗಳಿಂದ ನಾಯಕತ್ವದಲ್ಲಿ ವಿಫಲರಾಗಿದ್ದು, ತಮ್ಮ ತಂಡಗಳನ್ನು ಪ್ಲೇಆಫ್ಸ್‌ಗೆ ಕರೆದುಕೊಂಡು ಹೋಗುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಇವರು ತಮ್ಮ ತಮ್ಮ ತಂಡಗಳ ನಾಯಕತ್ವವನ್ನು ಕಳೆದುಕೊಳ್ಳಲಿದ್ದಾರೆಂದು ಫ್ರಾಂಚೈಸಿಯಲ್ಲಿನ ಬೆಳವಣಿಗೆಗಳನ್ನು ಅರಿತುಕೊಂಡಿರುವ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

RCB vs KKR: ವಿರಾಟ್‌ ಕೊಹ್ಲಿ ಶತಕದ ಬಲದಿಂದ ಗೆದ್ದು ಅಗ್ರ ಸ್ಥಾನಕ್ಕೆ ಮರಳಿದ ಆರ್‌ಸಿಬಿ!

ಡೆಲ್ಲಿ ಕ್ಯಾಪಿಟಲ್ಸ್‌ ನಾಯಕ ಅಕ್ಷರ್‌ ಪಟೇಲ್‌

ಅಕ್ಷರ್‌ ಪಟೇಲ್‌ ಕಳೆದ ಎರಡು ಆವೃತ್ತಿಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ವಿಫಲರಾಗಿದ್ದಾರೆ ಹಾಗೂ ವೈಯಕ್ತಿಕವಾಗಿಯೂ ಅವರು ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ. ಅವರು ಆಡಿದ 9 ಇನಿಂಗ್ಸ್‌ಗಳಿಂದ ಕೇವಲ 100 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು 56 ರನ್‌ ಗಳಿಸಿರುವುದು ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. ಇನ್ನು ಬೌಲಿಂಗ್‌ನಲ್ಲಿ ಅವರು 36 ಓವರ್‌ಗಳಲ್ಲಿ 8.08ರ ಎಕಾನಮಿ ರೇಟ್‌ನಲ್ಲಿ 10 ವಿಕೆಟ್‌ ಪಡೆದಿದ್ದಾರೆ.

ಇವರ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆಡಿದ 12 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ 7 ರಲ್ಲಿ ಸೋಲು ಅನುಭವಿಸಿದೆ. ಇದೀಗ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬೇಕೆಂದರೆ, ಡೆಲ್ಲಿ ಇನ್ನುಳಿದ ಎರಡೂ ಪಂದ್ಯಗಳನ್ನು ಅತ್ಯುತ್ತಮ ರನ್‌ರೇಟ್‌ನಿಂದ ಗೆಲ್ಲಬೇಕಾಗುತ್ತದೆ, ಆದರೆ ಇವರ ಪ್ಲೇಆಫ್ಸ್‌ ಭವಿಷ್ಯ ಇತರೆ ತಂಡಗಳನ್ನು ಅವಲಂಭಿಸಿದೆ. ಈ ಹಿನ್ನೆಲೆಯಲ್ಲಿ ಅಕ್ಷರ್‌ ಪಟೇಲ್‌ ಸೇರಿದಂತೆ ಸಂಪೂರ್ಣ ಕೋಚಿಂಗ್‌ ಸಿಬ್ಬಂದಿಯನ್ನು ತೆಗೆಯುವ ಸಾಧ್ಯತೆ ಇದೆ.

ಇನ್ನು ಮುಂದೆ ದಾಖಲೆಗಳನ್ನು ಬೆನ್ನಟ್ಟುವುದಿಲ್ಲ, ಪ್ರತಿ ಕ್ಷಣವನ್ನು ಆನಂದಿಸಲು ಪ್ರಯತ್ನಿಸುತ್ತಿದ್ದೇನೆ; ಪಂದ್ಯದ ಬಳಿಕ ಕೊಹ್ಲಿ ಭಾವುಕ

ಲಖನೌ ಸೂಪರ್‌ ಜಯಂಟ್ಸ್‌ ನಾಯಕ ರಿಷಭ್‌ ಪಂತ್‌

ರಿಷಭ್‌ ಪಂತ್‌ ಕೂಡ ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಾಯಕತ್ವವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಅವರು ಬ್ಯಾಟ್ಸ್‌ಮನ್‌ ಆಗಿ ಹಾಗೂ ನಾಯಕನಾಗಿ ವೈಫಲ್ಯ ಅನುಭವಿಸಿದ್ದಾರೆ. ಕಳೆದ ಎರಡೂ ಸೀಸನ್‌ಗಳಲ್ಲಿ ಇವರ ನಾಯಕತ್ವದಲ್ಲಿ ಎಲ್‌ಎಸ್‌ಜಿ ತಂಡ ಸ್ಟಾರ್‌ ಆಟಗಾರರನ್ನು ಹೊಂದಿದ ಹೊರತಾಗಿಯೂ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ. ಅಲ್ಲದೆ, ಬ್ಯಾಟ್ಸ್‌ಮನ್‌ ಆಗಿ ಪಂತ್‌ ಈ ಸೀಸನ್‌ನಲ್ಲಿ 251 ರನ್‌ಗಳನ್ನು ಮಾತ್ರ ಕಲೆ ಹಾಕಿದ್ದಾರೆ. ಈ ಬಾರಿ ಲಖನೌ ಆಡಿದ 11 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 3 ಪಂದ್ಯಗಳಲ್ಲಿ ಮಾತ್ರ.

ಕೋಲ್ಕತಾ ನೈಟ್‌ ರೈಡರ್ಸ್‌ ನಾಯಕ ಅಜಿಂಕ್ಯ ರಹಾನೆ

2026ರ ಐಪಿಎಲ್‌ ಟೂರ್ನಿಯ ಮೊದಲ ಅವಧಿಯಲ್ಲಿ ಸಂಪೂರ್ಣವಾಗಿ ನೆಲಕಚ್ಚಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ, ಎರಡನೇ ಅವಧಿಯಲ್ಲಿ ಸತತ ನಾಲ್ಕು ಪಂದ್ಯಗಳನ್ನು ಗೆಲ್ಲುವ ಮೂಲಕ ಕಮ್‌ಬ್ಯಾಕ್‌ ಮಾಡಿತ್ತು. ಆ ಮೂಲಕ ಪ್ಲೇಆಫ್ಸ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಆದರ, ಕಳೆದ ಪಂದ್ಯದಲ್ಲಿ ಆರ್‌ಸಿಬಿ ಎದುರು ಸೋಲುವ ಮೂಲಕ ಕೆಕೆಆರ್‌ ತಂಡದ ನಾಕೌಟ್‌ ಹಾದಿ ಕಠಿಣವಾಗಿದೆ. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಕೆಕೆಆರ್‌ ತಂಡ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲವಾಗಿದೆ. ಇಲ್ಲಿಯವರೆಗೂ ಆಡಿದ 11 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಪಡಯುವ ಮೂಲಕ 9 ಅಂಕಗಳನ್ನು ಕಲೆ ಹಾಕಿದೆ. ಈ ಸೀಸನ್‌ನಲ್ಲಿ ಕೆಕೆಆರ್‌ ಪ್ಲೇಆಫ್ಸ್‌ಗೆ ಅರ್ಹತೆ ಪಡೆದಿಲ್ಲವಾದರೆ, ರಹಾನೆ ನಾಯಕತ್ವವನ್ನು ಕಳೆದುಕೊಳ್ಳಲಿದ್ದಾರೆ.