ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಿಂದ ಬಾಂಗ್ಲಾದೇಶ ಔಟ್‌? ಬಾಂಗ್ಲಾ ಸ್ಥಾನಕ್ಕೆ ಸ್ಕಾಟ್ಲೆಂಡ್!

ಬಾಂಗ್ಲಾದೇಶ 2026ರ ಟಿ20 ವಿಶ್ವಕಪ್ ಟೂರ್ನಿಯನ್ನು ಬಹಿಷ್ಕರಿಸಲಿದೆ ಮತ್ತು ಈ ಮಹತ್ವದ ಟೂರ್ನಿಯನ್ನು ಆಡಲು ಭಾರತಕ್ಕೆ ಪ್ರಯಾಣಿಸುವುದಿಲ್ಲ. ತಮ್ಮ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವುದರ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯ ಮನವಿಯನ್ನು ಐಸಿಸಿ ತಿರಸ್ಕರಿಸಿದೆ. ಹಾಗಾಗಿ ಬಾಂಗ್ಲಾ ಟಿ20 ಟೂರ್ನಿಯನ್ನು ತೊರೆಯುವ ನಿರ್ಧಾರವನ್ನು ತೆಗೆದುಕೊಂಡಿದೆ.

ಟಿ20 ವಿಶ್ವಕಪ್‌ ಟೂರ್ನಿಯಿಂದ ಬಾಂಗ್ಲಾದೇಶ ಔಟ್‌.

ಢಾಕಾ: ಮುಂದಿನ ಟಿ20ಐ ವಿಶ್ವಕಪ್‌ ಟೂರ್ನಿಯ (ICC T20 World Cup 2026) ತಮ್ಮ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯ (BCB) ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ICC) ತಿರಸ್ಕರಿಸಿದೆ. ಹಾಗಾಗಿ ಬಾಂಗ್ಲಾದೇಶ ಚುಟುಕು ವಿಶ್ವಕಪ್‌ ಟೂರ್ನಿಯನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಅಂದ ಹಾಗೆ ಬಾಂಗ್ಲಾದೇಶ ತನ್ನ ನಾಲ್ಕು ಲೀಗ್‌ ಪಂದ್ಯಗಳನ್ನು ಭಾರತದಲ್ಲಿ ಆಡಬೇಕಾಗಿತ್ತು. ಮೂರು ಪಂದ್ಯಗಳನ್ನು ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಹಾಗೂ ಒಂದು ಪಂದ್ಯವನ್ನು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಬೇಕಿತ್ತು. ಆದರೆ, ರಾಜಕೀಯ ಕಾರಣಗಳಿಂದಾಗಿ ಬಾಂಗ್ಲಾದೇಶ ತಂಡ ಭಾರತದಲ್ಲಿ ಟಿ20 ವಿಶ್ವಕಪ್‌ ಟೂರ್ನಿಯನ್ನು ಆಡಲು ನಿರಾಕರಿಸಿದೆ.

ಜನವರಿ 21 ರಂದು ಐಸಿಸಿ ತನ್ನ ಸದಸ್ಯ ರಾಷ್ಟ್ರಗಳೊಂದಿಗೆ ಸಭೆಯನ್ನು ನಡೆಸಿತ್ತು. ಈ ವೇಳೆ ಬಾಂಗ್ಲಾದೇಶ ತಂಡದ ಮನವಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿತ್ತು. ಈ ವೇಳೆ ಬಾಂಗ್ಲಾ ಪಂದ್ಯಗಳನ್ನು ಶ್ರೀಲಂಕಕ್ಕೆ ಸ್ಥಳಾಂತರಿಸುವ ಮನವಿಯನ್ನು ತಿರಸ್ಕರಿಸಿತು. ಒಂದು ವೇಳೆ ಬಾಂಗ್ಲಾದೇಶ ತಂಡ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯನ್ನು ತಿರಸ್ಕರಿಸಿದರೆ, ಬಾಂಗ್ಲಾ ತಂಡದ ಸ್ಥಾನಕ್ಕೆ ಬೇರೆ ತಂಡವನ್ನು ಪರಿಗಣಿಸಬಹುದು. ಈ ರೇಸ್‌ನಲ್ಲಿ ಸ್ಕಾಟ್ಕೆಂಡ್‌ ಮುಂಚೂಣಿಯಲ್ಲಿದೆ. ಟಿ20 ವಿಶ್ವಕಪ್‌ ಟೂರ್ನಿಯು ಫೆಬ್ರವರಿ 7 ರಿಂದ ಮಾರ್ಚ್‌ 8ರವರೆಗೆ ನಡೆಯಲಿದೆ.

20 ಎಸೆತಗಳಲ್ಲಿ 44 ರನ್‌ ಚಚ್ಚಿದ ರಿಂಕು ಸಿಂಗ್‌ ಬಗ್ಗೆ ಸೈಮನ್‌ ದೌಲ್‌ ಅಚ್ಚರಿ ಹೇಳಿಕೆ!

ಈ ತಿಂಗಳ ಆರಂಭದಲ್ಲಿ ಬಿಸಿಸಿಐ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು 2026ರ ಟೂರ್ನಿಯಿಂದ ಬಾಂಗ್ಲಾ ವೇಗಿ ಮುಸ್ತಾಫಿಝುರ್ ರೆಹಮಾನ್ ಅವರನ್ನು ತಮ್ಮ ತಂಡದಿಂದ ಬಿಡುಗಡೆ ಮಾಡುವಂತೆ ಕೇಳಿಕೊಂಡ ನಂತರ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಐಸಿಸಿಗೆ ಪತ್ರ ಬರೆಯುವ ಮೂಲಕ ರಾಷ್ಟ್ರೀಯ ತಂಡಕ್ಕೆ ಭಾರತದಲ್ಲಿ ಭದ್ರತೆಯ ಅಗತ್ಯವಿದೆ ಮತ್ತು ನಮ್ಮ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂದು ಒತ್ತಾಯಿಸಿತ್ತು.

ಐಸಿಸಿ ಮತ್ತು ಬಿಸಿಬಿ ನಡುವೆ ಕೆಲವು ವಾರಗಳ ಚರ್ಚೆಯ ನಂತರ ಈ ವಿಷಯವನ್ನು ಸದಸ್ಯರ ಮತಗಳಿಂದ ನಿರ್ಧರಿಸಲು ಮುಂದಾಯಿತು. ಮತಗಳಲ್ಲಿ ಬಾಂಗ್ಲಾದೇಶ ಬೆಂಬಲವನ್ನು ಪಡೆಯುವಲ್ಲಿ ವಿಫಲವಾಯಿತು ಮತ್ತು ಕೇವಲ ಇಬ್ಬರು ಸದಸ್ಯರು (ಬಾಂಗ್ಲಾದೇಶ ಮತ್ತು ಪಾಕಿಸ್ತಾನ) ಬಾಂಗ್ಲಾ ಪಂದ್ಯವನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವುದರ ಪರವಾಗಿ ಮತ ಚಲಾಯಿಸಿದರು, ಆದರೆ 14 ಸದಸ್ಯರು ಮೂಲ ವೇಳಾಪಟ್ಟಿಯನ್ನು ಮುಂದುವರಿಸಬೇಕು ಮತ್ತು ಬಾಂಗ್ಲಾದೇಶ ಭಾರತಕ್ಕೆ ಪ್ರಯಾಣ ಬೆಳೆಸಲು ಸಾಧ್ಯವಾಗದಿದ್ದರೆ ಅದನ್ನು ಬೇರೆ ತಂಡದೊಂದಿಗೆ ಬದಲಾಯಿಸಬೇಕೆಂದು ಮತ ಚಲಾಯಿಸಿದರು.

IND vs NZ: ಎರಡನೇ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ!

ತನ್ನ ನಿರ್ಧಾರವನ್ನು ಬದಲಿಸದ ಬಾಂಗ್ಲಾದೇಶ

ಶ್ರೀಲಂಕಾದಲ್ಲಿ ಪಂದ್ಯಗಳು ನಡೆದರೆ ಮಾತ್ರ ಬಾಂಗ್ಲಾದೇಶ ಆಡಲಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅಮೀನುಲ್ ಇಸ್ಲಾಂ ಮತ್ತು ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಈ ನಿರ್ಧಾರದ ಬಗ್ಗೆ ಢಾಕಾದಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

"ನಾವು ಈ ವಿಶ್ವಕಪ್ ಆಡಲು ಬಯಸುತ್ತೇವೆ. ಭಾರತದಲ್ಲಿ ನಮ್ಮ ಆಟಗಾರರು ಮತ್ತು ಇತರ ಸಿಬ್ಬಂದಿಗೆ ಭದ್ರತಾ ಬೆದರಿಕೆ ಇದೆ. ಐಸಿಸಿ ಏನು ಬೇಕಾದರೂ ಹೇಳಬಹುದು. ಯಾವುದೇ ಭದ್ರತಾ ಬೆದರಿಕೆ ಇಲ್ಲ ಎಂದು ಅವರು ಹೇಳಬಹುದು. ಆದರೆ ನಮ್ಮ ಆಟಗಾರನನ್ನು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಹೊರಹಾಕಲಾಯಿತು. ಅಂತಹ ದೇಶವು ವಿಶ್ವಕಪ್ ಅನ್ನು ಆಯೋಜಿಸುತ್ತಿದೆ. ಅಂದಿನಿಂದ ಏನು ಬದಲಾಗಿದೆ? ಮುಸ್ತಾಫಿಝುರ್ ರೆಹಮಾನ್‌ಗೆ ಭದ್ರತೆ ಒದಗಿಸಲಾಗದಿದ್ದರೆ, ಐಸಿಸಿ ಮಾಡುತ್ತದೆ ಎಂದು ನಾವು ಹೇಗೆ ನಂಬುವುದು? ನಾವು ವಿಶ್ವಕಪ್ ಆಡಲು ಬಯಸುತ್ತೇವೆ, ಆದರೆ ನಾವು ಭಾರತದಲ್ಲಿ ಆಡಲು ಸಾಧ್ಯವಿಲ್ಲ. ಶ್ರೀಲಂಕಾದಲ್ಲಿ ಪಂದ್ಯಗಳು ನಡೆದರೆ, ನಾವು ಹೋಗಬಹುದು," ಎಂದು ಆಸಿಫ್‌ ನಜ್ರುಲ್‌ ಹೇಳಿದ್ದಾರೆ.