ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 World Cup 2026: ಭಾರತ ತಂಡ ಟಿ20 ವಿಶ್ವಕಪ್‌ ಗೆದ್ದರೆ ಡ್ಯಾನ್ಸ್‌ ಮಾಡುತ್ತೇನೆಂದ ಸುನೀಲ್‌ ಗವಾಸ್ಕರ್‌!

ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲಲಿದೆ ಎಂದು ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಭಾರತ ತಂಡ ಕಪ್‌ ಗೆದ್ದರೆ, ನಾನು ನೃತ್ಯ ಮಾಡುತ್ತೇನೆಂದು ಕ್ರಿಕೆಟ್‌ ನಿರೂಪಕರಾಗಿಯೂ ಕಾರ್ಯನಿರ್ವಹಿಸುತ್ತಿರುವ ಅವರು ಹೇಳಿದ್ದಾರೆ.

ಭಾರತ ತಂಡ ವಿಶ್ವಕಪ್‌ ಗೆದ್ರೆ ಡ್ಯಾನ್ಸ್‌ ಮಾಡುತ್ತೇನೆಂದ ಗವಾಸ್ಕರ್‌.

ನವದೆಹಲಿ: ಐಸಿಸಿ ಟಿ20 ವಿಶ್ವಕಪ್‌ (ICC T20 World Cup 2026) ಟೂರ್ನಿಯ ನಿಮಿತ್ತ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ (Sunil Gavaskar) ಕ್ರಿಕೆಟ್‌ ಅಭಿಮಾನಿಗಳಿಗೆ ದೊಡ್ಡ ಭರವಸೆಯೊಂದನ್ನು ನೀಡಿದ್ದಾರೆ. ಅದೇನೆಂದರೆ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ (Indian Cricket Team), ಮುಂಬರುವ ಚುಟಕು ವಿಶ್ವಕಪ್‌ ಗೆದ್ದರೆ, ಡ್ಯಾನ್ಸ್‌ ಮಾಡುವುದಾಗಿ ಹೇಳಿದ್ದಾರೆ. ಇಂಡಿಯಾ ಟುಡೇಯಾ ಸಲಾಮ್‌ ಕ್ರಿಕೆಟ್‌ ಸಂಭಾಷಣೆಯಲ್ಲಿ ಬ್ಯಾಟಿಂಗ್‌ ದಿಗ್ಗಜ ಈ ಭವಸೆಯನ್ನು ನೀಡಿದ್ದಾರೆ. ಅಲ್ಲದೆ, ಭಾರತ ದೊಡ್ಡ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರೆ, ಅದು ನನ್ನ ಪಾಲಿಗೆ ದೊಡ್ಡ ವಿಷಯ ಎಂದು ಅವರು ಹೇಳಿಕೊಂಡಿದ್ದಾರೆ.

“ನೀವು ಟ್ರೋಫಿಯನ್ನು ಎತ್ತಿ ಹಿಡಿದಾಗ, ನಾನು ನೃತ್ಯ ಮಾಡುತ್ತೇನೆ,” ಎಂದ ಸುನೀಲ್‌ ಗವಾಸ್ಕರ್‌, “ನೃತ್ಯವೇ ನನ್ನ ಕಾರ್ಡಿಯೋ ವ್ಯಾಯಾಮ. ಇತರರು ತೀವ್ರ ಕಾರ್ಡಿಯೋ ಮಾಡುತ್ತಾರೆ, ಆದರೆ ನನ್ನ ವಯಸ್ಸಿನಲ್ಲಿ ಅದನ್ನು ನಾನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸ್ವಲ್ಪ ಕಾರ್ಡಿಯೋ ಮಾಡುತ್ತೇನೆ, ಅದೇ ನೃತ್ಯ. ನಿಮ್ಮ ನಾಯಕ ಮತ್ತು ನಿಮ್ಮ ದೇಶದ ಧ್ವಜವನ್ನು ಏರಿರುವುದನ್ನು ನೋಡುವುದು ತುಂಬಾ ಸಂತೋಷ ನೀಡುತ್ತದೆ. ಕೆಲವೊಮ್ಮೆ ಭಾವನೆಗಳು ನಿಯಂತ್ರಣಕ್ಕೆ ಒಳಗಾಗದೆ ಸ್ವತಃ ಹೊರಬರುತ್ತವೆ," ಎಂದರು.‌

T20 World Cup: ಬಾಂಗ್ಲಾದೇಶ, ಪಾಕಿಸ್ತಾನ ತಂಡಗಳ ಬಾಯ್ಕಟ್‌ ನಿಲುವನ್ನು ಸಮರ್ಥಿಸಿಕೊಂಡ ನಾಸರ್‌ ಹುಸೇನ್‌!

ಭಾರತ ತಂಡವನ್ನು ಉಲ್ಲೇಖಿಸಿ ಮಾತನಾಡಿದ ಸುನೀಲ್‌ ಗವಾಸ್ಕರ್‌, "ನೀವು ನಿಮ್ಮ ಕೆಲಸವನ್ನು ಮಾಡಿ ಹಾಗೂ ಟ್ರೋಫಿಯನ್ನು ಗೆಲ್ಲಿ ಹಾಗೂ ಇನ್ನುಳಿದ ಸಂಗತಿಗಳನ್ನು ನಾನು ನೋಡಿಕೊಳ್ಳುತ್ತೇನೆ," ಎಂದು ಅವರು ಹೇಳಿದ್ದಾರೆ.

ಸುನೀಲ್‌ ಗವಾಸ್ಕರ್‌ ಪ್ರಕಾರ ಭಾರತ ತಂಡಮ ಜಾಗತಿಕ ವೇದಿಕೆಯಲ್ಲಿ ಗೆಲುವು ಸಾಧಿಸುವುದು ಕೇವಲ ದಾಖಲೆ ಅಥವಾ ಪರಂಪರೆಯ ಬಗ್ಗೆ ಮಾತ್ರವಲ್ಲ. ಎಷ್ಟು ವರ್ಷಗಳು ಕಳೆದರೂ ಅಡಿಗಲ್ಲು ಹೋದಷ್ಟು ಎಂದೂ ಮರುಕಳದ ಘನತೆ ಮತ್ತು ಭಾವನೆ ಬಗ್ಗೆ ಇದಾಗಿದೆ. ಭಾರತದ ಟಿ20 ವಿಶ್ವಕಪ್ ಅನ್ನು ರಕ್ಷಿಸುವ ಕಲ್ಪನೆ, ಹಿಂದೆ ಯಾವುದೇ ಪುರುಷ ತಂಡ ಮಾಡಲಾಗದ ಸಾಧನೆ ಇದಾಗದೆ. ಹಾಗಾಗಿ ಭಾರತ ಗೆದ್ದರೆ ಅವರನ್ನು ಸಂತೋಷವನ್ನು ನಿಯಂತ್ರಿಸಲು ಸಾಧ್ಯವಿಲ್ಲ.

ಭಾರತದ ಪಂದ್ಯವನ್ನು ಬಾಯ್ಕಟ್‌ ಮಾಡಿರುವ ಪಾಕ್‌ ನಿಲುವಿನ ಬಗ್ಗೆ ಸೂರ್ಯಕುಮಾರ್‌ ಪ್ರತಿಕ್ರಿಯೆ!

ತನ್ನ ಸಮ್ಮುಖದಲ್ಲಿ ಪ್ರಸ್ತುತ ಭಾರತ ತಂಡವನ್ನು ನೋಡುವುದು ತಮಗೆ ಆತ್ಮವಿಶ್ವಾಸ ನೀಡುತ್ತದೆ ಎಂದು ಸುನೀಲ್‌ ಗವಾಸ್ಕರ್‌ ಒಪ್ಪಿಕೊಂಡಿದ್ದಾರೆ. ಬಲವಾದ ಮಧ್ಯಮ ಕ್ರಮ, ಪ್ರಭಾವಶಾಲಿ ಆಲ್-ರೌಂಡರ್‌ಗಳು ಮತ್ತು ಸಮತೋಲನ ಬೌಲಿಂಗ್ ವಿಭಾಗವಿದೆ. ಆದರೆ ತಂತ್ರಗಳಿಗಿಂತ ಹೆಚ್ಚಾಗಿ, ಭಾರತ ತಂಡ ಯಶಸ್ಸು ಸಾಧಿಸುವುದನ್ನು ನೋಡುವ ಭಾವನೆ ಅವರ ಉತ್ಸಾಹಕ್ಕೆ ಚಾಲನೆ ನೀಡುತ್ತದೆ.

ಸುನೀಲ್ ಗವಾಸ್ಕರ್ ಅವರ ಈ ಭರವಸೆ ಅವರ ಆಟಗಾರರೊಂದಿಗೆ ಇರುವ ಬಾಂಧವ್ಯವನ್ನು ತೋರುತ್ತದೆ ಮತ್ತು ವಿಭಿನ್ನ ಯುಗಕ್ಕೆ ಸೇರಿದವರಾಗಿದ್ದರೂ ಸಹ ಆಧುನಿಕ ಕ್ರಿಕೆಟಿಗರೊಂದಿಗೆ ಸಂಬಂಧ ಬೆಳೆಸುವ ಅವರ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.