ಶುಭಮನ್ ಗಿಲ್ ಕಿತ್ತಾಕಿ, ಭಾರತ ಏಕದಿನ ತಂಡದ ನಾಯಕತ್ವ ರೋಹಿತ್ ಶರ್ಮಾಗೆ ನೀಡಿ ಎಂದ ಮನೋಜ್ ತಿವಾರಿ!
ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿದ ಬೆನ್ನಲ್ಲೆ ಭಾರತ ಏಕದಿನ ತಂಡದ ನಾಯಕತ್ವದಿಂದ ಶುಭಮನ್ ಗಿಲ್ ಅವರನ್ನು ತೆಗೆದು, ಪುನಃ ರೋಹಿತ್ ಶರ್ಮಾ ಅವರನ್ನು ನಾಯಕತ್ವಕ್ಕೆ ತರಬೇಕೆಂದು ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಆಗ್ರಹಿಸಿದ್ದಾರೆ.
ಭಾರತ ಏಕದಿನ ತಂಡಕ್ಕೆ ರೋಹಿತ್ ಪುನಃ ನಾಯಕರಾಗಬೇಕೆಂದ ಮನೋಜ್. -
ನವದೆಹಲಿ: ನ್ಯೂಜಿಲೆಂಡ್ ವಿರುದ್ಧ ಏಕದಿನ ಸರಣಿ (IND vs NZ) ಸೋಲು ಅನುಭವಿಸಿದ ಬೆನ್ನಲ್ಲೆ ಭಾರತ ತಂಡದ ನಾಯಕ ಶುಭಮನ್ ಗಿಲ್ (Shubman Gill) ಅವರ ವಿರುದ್ಧ ಟೀಕೆಗಳು ಕೇಳಿ ಬಂದಿವೆ. ಗಿಲ್ ಅವರನ್ನು ಏಕದಿನ ತಂಡದ ನಾಯಕತ್ವದಿಂದ ತೆಗೆದು, ರೋಹಿತ್ ಶರ್ಮಾ (Rohit Sharma) ಅವರನ್ನು ಪುನಃ ಭಾರತ ತಂಡಕ್ಕೆ ನಾಯಕನ್ನಾಗಿ ಮರು ನೇಮಿಸಬೇಕೆಂದು ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ ಆಗ್ರಹಿಸಿದ್ದಾರೆ. 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ನಿರ್ಧಾರವನ್ನು ತಕ್ಷಣ ತೆಗೆದುಕೊಳ್ಳಬೇಕೆಂದು ಪಶ್ಚಿಮ ಬಂಗಾಳದ ಸಚಿವರು ಸಲಹೆ ನೀಡಿದ್ದಾರೆ.
ಭಾರತ ಏಕದಿನ ತಂಡಕ್ಕೆ ನಾಯಕನಾದ ಬಳಿಕ ಶುಭಮನ್ ಗಿಲ್ ಹೆಚ್ಚು ಯಶಸ್ವಿಯನ್ನು ಪಡೆದಿಲ್ಲ. ಆಸ್ಟ್ರೇಲಿಯಾ ಎದುರು ಏಕದಿನ ಸರಣಿಯನ್ನು ಸೋತ ಬಳಿಕ, ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು ಗೆದ್ದಿತ್ತು. ಆದರೆ, ಇದೀಗ ನ್ಯೂಜಿಲೆಂಡ್ ವಿರುದ್ಧ 1-2 ಅಂತರದಲ್ಲಿ ಏಕದಿನ ಸರಣಿಯನ್ನೂ ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಗಿಲ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.
20 ಎಸೆತಗಳಲ್ಲಿ 44 ರನ್ ಚಚ್ಚಿದ ರಿಂಕು ಸಿಂಗ್ ಬಗ್ಗೆ ಸೈಮನ್ ದೌಲ್ ಅಚ್ಚರಿ ಹೇಳಿಕೆ!
ಇನ್‌ಸೈಡ್‌ಸ್ಪೋರ್ಟ್ಸ್ ಜೊತೆ ಮಾತನಾಡಿದ ಮನೋಜ್ ತಿವಾರಿ,. "ಹೌದು, ನಿಸ್ಸಂಶಯವಾಗಿ. ಶುಭಮನ್ ಗಿಲ್ ಅವರನ್ನು ಕೆಳಗೆ ಇಳಿಸಿ ರೋಹಿತ್ ಶರ್ಮಾಗೆ ನಾಯಕತ್ವವನ್ನು ನೀಡಬೇಕು. ನನ್ನ ಸಲಹೆ ಕೂಡ ಇದೇ ಆಗಿದೆ, ಆ ಮೂಲಕ ಆಗಿರುವ ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಇದೆಲ್ಲವೂ ಏಕದಿನ ವಿಶ್ವಕಪ್ ಟೂರ್ನಿಗಾಗಿ ಮಾಡಬೇಕು. ಇದು ದ್ವಿಪಕ್ಷೀಯ ಸರಣಿ ಅಲ್ಲ ಅಥವಾ ನಾನು ಆಡುತ್ತಿರುವುದು ಯಾದೃಚ್ಛಿಕ ಟೂರ್ನಿಯಲ್ಲ," ಎಂದು ಹೇಳಿದ್ದಾರೆ.
ನ್ಯೂಜಿಲೆಂಡ್ ಏಕದಿನ ಸರಣಿಯಲ್ಲಿ ಭಾರತ ತಂಡಕ್ಕೆ ರೋಹಿತ್ ಶರ್ಮಾ ನಾಯಕನಾಗಿದ್ದರೆ, ಇಲ್ಲಿನ ಫಲಿತಾಂಶ ವಿಭಿನ್ನವಾಗಿರುತ್ತಿತ್ತು. ಈ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ಸೋಲುವ ಮೂಲಕ ಭಾರತ ತಂಡ ಇದೇ ಮೊದಲ ಬಾರಿ ತವರಿನಲ್ಲಿ ಕಿವೀಸ್ ಎದುರು ಏಕದಿನ ಸರಣಿಯಲ್ಲಿ ಸೋಲು ಅನುಭವಿಸಿತು. ಗಿಲ್ ಅವರಿಗಿಂತ ರೋಹಿತ್ ಶರ್ಮಾ ಎಷ್ಟೋ ಉತ್ತಮ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡದ ಏಕದಿನ ವಿಶ್ವಕಪ್ ಗೆಲುವಿನ ಅವಕಾಶ ಜಾಸ್ತಿ ಎಂದು ಮನೋಜ್ ತಿವಾರಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
IND vs NZ: ಎರಡನೇ ಟಿ20ಐ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಬದಲಾವಣೆ ಸಾಧ್ಯತೆ!
"ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ತೆಗೆಯವ ಅಗತ್ಯವೇನಿತ್ತು? ಈಗ ರೋಹಿತ್ ಶರ್ಮಾ ಅವರು ಭಾರತ ತಂಡಕ್ಕೆ ನಾಯಕನಾಗಿದ್ದರೆ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂಬ ಬಗ್ಗೆ ನನಗೆ ಖಚಿತವಿದೆ. ಏಕೆಂದರೆ ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದಿದ್ದಾರೆ. ಅವರ ನಾಯಕತ್ವದಲ್ಲಿ ತಂಡ ಉತ್ತಮ ಹಾದಿಯಲ್ಲಿ ಸಾಗುತ್ತಿತ್ತು," ಎಂದು ಮನೋಜ್ ತಿವಾರಿ ಹೇಳಿದ್ದಾರೆ.
ಶುಭಮನ್ ಗಿಲ್‌ಗಿಂತ ರೋಹಿತ್ ಶರ್ಮಾ ಉತ್ತಮ
"ರೋಹಿತ್ ಶರ್ಮಾ, ಶುಭಮನ್ ಗಿಂತ ಸ್ವಲ್ಪ ಉತ್ತಮನಲ್ಲ, ತುಂಬಾ ಉತ್ತಮ. ಅದಕ್ಕಾಗಿಯೇ ಅವರು ಇಷ್ಟೊಂದು ಯಶಸ್ವಿ ನಾಯಕ. ನೀವು ಅದನ್ನು (ವಿಶ್ವಕಪ್) ಶುಭಮನ್ ನಾಯಕತ್ವದೊಂದಿಗೆ ಗೆಲ್ಲಬಹುದು, ಆದರೆ ನಾನು ಇಬ್ಬರ ನಾಯಕತ್ವವನ್ನು ಹೋಲಿಸಲು ಸೂಚಿಸುತ್ತಿದ್ದೇನೆ. ರೋಹಿತ್ ನಾಯಕನಾದರೆ, ಗೆಲ್ಲುವ ಶೇಕಡಾವಾರು ಅವಕಾಶ ಎಷ್ಟು? ಮತ್ತು ಶುಭಮನ್ ಮುನ್ನಡೆಸಿದರೆ, ಗೆಲ್ಲುವ ಶೇಕಡಾವಾರು ಅವಕಾಶ ಎಷ್ಟು? ರೋಹಿತ್ ನಾಯಕನಾಗಿದ್ದರೆ, ವಿಶ್ವಕಪ್ ಗೆಲ್ಲುವ ಸಾಧ್ಯತೆ ಶೇ. 85 ರಿಂದ 90 ರಷ್ಟು ಇರುತ್ತದೆ ಎಂದು ಎಲ್ಲರೂ ಹೇಳುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ತಿವಾರಿ ತಿಳಿಸಿದ್ದಾರೆ.