ಹೊಸದಿಲ್ಲಿ: ಜಗತ್ತಿನ ಕ್ರಿಕೆಟ್ ಪ್ರೇಮಿಗಳು ಕುತೂಹಲದಿಂದ ಎದುರು ನೋಡುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2025 (Indian Premier League 2025)ರ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮಾ. 22ರಂದು ಆರಂಭವಾಗಲಿರುವ ಈ ಚುಟುಕು ಮಾದರಿ ಕ್ರಿಕೆಟ್ ಪಂದ್ಯಾವಳಿಯ 18ನೇ ಆವೃತ್ತಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ (IPL 2025 Schedule). ಮೊದಲ ದಿನವೇ ಆರ್‌ಸಿಬಿ (RCB) ಕಣಕ್ಕಿಳಿಯಲಿದ್ದು, 2024ರ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದ ವಿರುದ್ಧ ಸೆಣಸಾಡಲಿದೆ. ಮಾ. 22ರಂದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಮೂಲಕ ಮೊದಲ ದಿನವೇ ಬೆಂಗಳೂರು ಅಭಿಮಾನಿಗಳ ಪಾಲಿಗೆ ಬಿಗ್ ಡೇ ಎನಿಸಿಕೊಂಡಿದೆ.
ಒಟ್ಟು 13 ತಾಣಗಳಲ್ಲಿ, 65 ದಿನಗಳ ಕಾಲ 74 ಪಂದ್ಯಗಳನ್ನು ಆಯೋಜಿಸಲಾಗಿದೆ. 12 ದಿನ 2 ಪಂದ್ಯಗಳು ನಡೆಯಲಿದ್ದು, ಎಂದಿನಂತೆ ಅಪರಾಹ್ನ 3.30ಕ್ಕೆ ಮತ್ತು ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಹೈದರಾಬಾದ್ ಮತ್ತು ಕೋಲ್ಕತಾದಲ್ಲಿ ಪ್ಲೇ ಆಫ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಇನ್ನು ಮೇ 20ರಂದು ಹೈದರಾಬಾದ್‌ನಲ್ಲಿ ಮೊದಲ ಕ್ವಾಲಿಫೈಯರ್ ಮತ್ತು ಮೇ 21ರಂದು ಎಲಿಮಿನೇಟರ್ ಪಂದ್ಯ ನಿಗದಿಯಾಗಿದೆ. ಮೇ 23ರಂದು ಕೋಲ್ಕತಾದಲ್ಲಿ 2ನೇ ಕ್ವಾಲಿ ಫೈಯರ್ ಪಂದ್ಯ ನಡೆಯಲಿದ್ದು, ಮೇ 25ರಂದು ಫೈನಲ್ ಪಂದ್ಯ ನಿಗದಿಯಾಗಿದೆ. ಫೈನಲ್ ಕೋಲ್ಕತದಲ್ಲಿಯೇ ನಡೆಯಲಿದೆ.
ಆರ್‌ಸಿಬಿಯ ಪಂದ್ಯಗಳು
ಮುಖಾಮುಖಿ | ಸಮಯ | ದಿನಾಂಕ | ಸ್ಥಳ |
---|---|---|---|
ಕೆಕೆಆರ್ vs ಆರ್‌ಸಿಬಿ | ಸಂಜೆ 7:30 | ಮಾರ್ಚ್ 22 | ಕೋಲ್ಕತಾ |
ಸಿಎಸ್‌ಕೆ vs ಆರ್‌ಸಿಬಿ | ಸಂಜೆ 7:30 | ಮಾರ್ಚ್ 28 | ಚೆನ್ನೈ |
ಜಿಟಿ vs ಆರ್‌ಸಿಬಿ | ಸಂಜೆ 7:30 | ಏಪ್ರಿಲ್ 2 | ಬೆಂಗಳೂರು |
ಎಂಐ vs ಆರ್‌ಸಿಬಿ | ಸಂಜೆ 7:30 | ಏಪ್ರಿಲ್ 7 | ಮುಂಬೈ |
ಡಿಸಿ vs ಆರ್‌ಸಿಬಿ | ಸಂಜೆ 7:30 | ಏಪ್ರಿಲ್ 10 | ಬೆಂಗಳೂರು |
ಆರ್‌ಆರ್ vs ಆರ್‌ಸಿಬಿ | ಅಪರಾಹ್ನ 3:30 | ಏಪ್ರಿಲ್ 13 | ಜೈಪುರ |
ಪಿಬಿಕೆಎಸ್ vs ಆರ್‌ಸಿಬಿ | ಸಂಜೆ 7:30 | ಏಪ್ರಿಲ್ 18 | ಬೆಂಗಳೂರು |
ಪಿಬಿಕೆಎಸ್ vs ಆರ್‌ಸಿಬಿ | ಅಪರಾಹ್ನ 3:30 | ಏಪ್ರಿಲ್ 20 | ಮುಲ್ಲಾನ್ಪುರ್ |
ಆರ್‌ಆರ್ vs ಆರ್‌ಸಿಬಿ | ಸಂಜೆ 7:30 | ಏಪ್ರಿಲ್ 24 | ಬೆಂಗಳೂರು |
ಡಿಸಿ vs ಆರ್‌ಸಿಬಿ | ಸಂಜೆ 7:30 | ಏಪ್ರಿಲ್ 27 | ದಿಲ್ಲಿ |
ಸಿಎಸ್‌ಕೆ vs ಆರ್‌ಸಿಬಿ | ಸಂಜೆ 7:30 | ಮೇ 3 | ಬೆಂಗಳೂರು |
ಎಲ್‌ಎಸ್‌ಜಿ vs ಆರ್‌ಸಿಬಿ | ಸಂಜೆ 7:30 | ಮೇ 9 | ಲಖನೌ |
ಎಸ್‌ಆರ್‌ಎಚ್ vs ಆರ್‌ಸಿಬಿ | ಸಂಜೆ 7:30 | ಮೇ 13 | ಬೆಂಗಳೂರು |
ಕೆಕೆಆರ್ vs ಆರ್‌ಸಿಬಿ | ಸಂಜೆ 7:30 | ಮೇ 17 | ಬೆಂಗಳೂರು |
ಈ ಬಾರಿ ಕಪ್ ಗೆಲ್ಲುತ್ತಾ ಆರ್‌ಸಿಬಿ?
ಪ್ರತಿ ಬಾರಿ ಐಪಿಎಲ್ ಆರಂಭವಾದಾಗಲೂ ಈ ಬಾರಿ ಕಪ್ ನಮ್ದೆ ಎನ್ನುವ ಘೋಷ ವಾಕ್ಯ ಆರ್‌ಸಿಬಿ ಫ್ಯಾನ್‌ನಿಂದ ಮೊಳಗುತ್ತದೆ. ಆದರೆ ಇದುವರೆಗೆ ಒಂದೇ ಒಂದು ಬಾರಿ ಕಪ್ ಎತ್ತಲು ಸಾಧ್ಯವಾಗಿಲ್ಲ. ಈ ಬಾರಿಯಾದರೂ ಬೆಂಗಳೂರಿನ ಕಪ್ ಬರ ನೀಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.
ಈ ಸುದ್ದಿಯನ್ನೂ ಓದಿ: IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಜತ್ ಪಾಟಿದಾರ್ ನಾಯಕ!
ರಜತ್ ಪಾಟಿದಾರ್ ನಾಯಕ
ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಎಂದೇ ಬಿಂಬಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇತ್ತೀಚೆಗೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್‌ಗೆ ನಾಯಕತ್ವದ ಜವಾಬ್ದಾರಿ ನೀಡಿದೆ.
2022ರಿಂದ 2024ರವರೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ಮುನ್ನಡೆಸಿದ್ದರು. ಇವರ ನಾಯಕತ್ವದಲ್ಲಿ ಆರ್‌ಸಿಬಿ ಎರಡು ಬಾರಿ ಪ್ಲೇಆಫ್ಸ್‌ಗೆ ಲಗ್ಗೆ ಇಟ್ಟಿತ್ತು. ಆದರೆ, ಫಾಫ್ ನಾಯಕತ್ವದಲ್ಲಿ ಆರ್‌ಸಿಬಿ ಚೊಚ್ಚಲ ಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿ ಟೀಮ್ ಮ್ಯಾನೇಜ್‌ಮೆಂಟ್ ಇಂದೋರ್ ಮೂಲದ ರಜತ್ ಪಾಟಿದಾರ್‌ಗೆ ನಾಯಕತ್ವದ ಹೊಣೆಯನ್ನು ನೀಡಿದೆ. ಅಂದ ಹಾಗೆ 2021ರ ಐಪಿಎಲ್ ಟೂರ್ನಿಯ ಬಳಿಕ ರಜತ್ ಪಾಟಿದಾರ್ ಅವರನ್ನು ಆರ್‌ಸಿಬಿ ಕೈ ಬಿಟ್ಟಿತ್ತು. ಆದರೆ, ಲವನೀತ್ ಸಿಸೋಡಿಯಾ ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ರಜತ್‌ಗೆ 2022ರ ಐಪಿಎಲ್ ಟೂರ್ನಿಯಲ್ಲಿ ಆಡುವ ಅದೃಷ್ಟ ಬಂದಿತ್ತು.