ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ben Duckett: ಡೆಲ್ಲಿ ಕ್ಯಾಪಿಟಲ್ಸ್‌ಗೆ ಆಘಾತ, ಇಂಗ್ಲೆಂಡ್‌ ಸ್ಟಾರ್‌ ಬ್ಯಾಟರ್‌ ಐಪಿಎಲ್‌ ಟೂರ್ನಿಯಿಂದ ಔಟ್‌!

IPL 2026: ಬೆನ್‌ ಡಕೆಟ್‌ ಅವರು ಇಂಗ್ಲೆಂಡ್ ತಂಡದ ಕರ್ತವ್ಯಗಳಿಗೆ ಗಮನ ಹರಿಸಲು 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಈ ನಿರ್ಧಾರದ ಹಿನ್ನೆಲೆದಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಕ್ಷಮೆಯಾಚಿಸಿದ್ದಾರೆ. ಹರಾಜಿನಲ್ಲಿ ಆಯ್ಕೆಯಾದ ನಂತರ ಟೂರ್ನಿಯಿಂದ ಹೊರನಡೆದಿರುವುದರಿಂದ, ಲೀಗ್ ನಿಯಮಗಳ ಪ್ರಕಾರ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ಗೆ ನಿಷೇಧದ ಭೀತಿ ಎದುರಾಗಿದೆ.

ಐಪಿಎಲ್‌ ಟೂರ್ನಿಯಿಂದ ಬೆನ್‌ ಡಕೆಟ್‌ ಔಟ್‌.

ನವದೆಹಲಿ: ಇಂಗ್ಲೆಂಡ್ ಬ್ಯಾಟ್ಸ್‌ಮನ್ ಬೆನ್‌ ಡಕೆಟ್‌ (Ben Ducket) ಅವರು 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದಾರೆ. ಇದರ ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್‌ಗೆ ಭಾರಿ ಹಿನ್ನಡೆಯಾಗಿದೆ. ಮುಂಬರುವ ಅಂತಾರಾಷ್ಟ್ರೀಯ ಕ್ರಿಕೆಟ್ ಸೀಸನ್‌ಗೆ ತಯಾರಾಗುವ ಸಲುವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹರಾಜಿನಲ್ಲಿ ಅವರನ್ನು ಮೂಲ ಬೆಲೆಯಾದ 2 ಕೋಟಿ ರು. ಗಳಿಗೆ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಆಯ್ಕೆ ಮಾಡಿತ್ತು. ಟೂರ್ನಿ ಆರಂಭಕ್ಕೆ ಕೇವಲ ನಾಲ್ಕು ದಿನ ಬಾಕಿ ಇರುವಾಗ ಡಕೆಟ್‌ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಮಾರ್ಚ್ 28ರಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ನಡುವಿನ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಮೂಲಕ 19ನೇ ಆವೃತ್ತಿಯ ಟೂರ್ನಿ ಆರಂಭವಾಗಲಿದೆ. ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಪ್ರಕಟಣೆಯಲ್ಲಿ ಬೆನ್‌ ಡಕೆಟ್‌ ಈ ನಿರ್ಧಾರ ಕಷ್ಟಕರವಾದರೂ ಅಗತ್ಯವಾಗಿದೆ ಎಂದು ವಿವರಿಸಿದ್ದಾರೆ.

IPL 2026: ʻಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಆಡಿಸಿದ್ರೆ ನಿವೃತ್ತಿ ಹೇಳಿʼ-ಎಂಎಸ್‌ ಧೋನಿಗೆ ಆಕಾಶ್‌ ಚೋಪ್ರಾ ಸಲಹೆ!

ಬೆನ್‌ ಡಕೆಟ್‌ ಸೋಶಿಯಲ್‌ ಮೀಡಿಯಾ ಪೋಸ್ಟ್‌ನಲ್ಲಿ ಏನಂದ್ರು?

“ನಾನು ಐಪಿಎಲ್‌ ಟೂರ್ನಿಯಿಂದ ಹಿಂದೆ ಸರಿಯುವ ಅತ್ಯಂತ ಕಷ್ಟದ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ಬಗ್ಗೆ ನಾನು ಸಾಕಷ್ಟು ಆಲೋಚಿಸಿದ್ದೇನೆ, ಇದು ಸುಲಭದ ಆಯ್ಕೆಯಾಗಿರಲಿಲ್ಲ,” ಎಂದು ಬೆನ್‌ ಡಕೆಟ್‌ ತಿಳಿಸಿದ್ದಾರೆ. ತಮ್ಮ ದೀರ್ಘಕಾಲೀನ ಗುರಿ ಇಂಗ್ಲೆಂಡ್ ತಂಡವನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸುವುದೇ ಎಂದು ಅವರು ಹೇಳಿದ್ದಾರೆ.

“ಇಂಗ್ಲೆಂಡ್ ಪರ ಆಡಲು ನಾನು ಬಾಲ್ಯದಿಂದಲೇ ಕನಸು ಕಂಡಿದ್ದೇನೆ. ಇಂಗ್ಲಿಷ್ ಕ್ರಿಕೆಟ್‌ಗೆ ನನ್ನ ಸಂಪೂರ್ಣ ಶ್ರಮವನ್ನು ಹಾಕಲು ಬಯಸುತ್ತೇನೆ. ಅದಕ್ಕಾಗಿ, ಮುಂಬರುವ ಸೀಸನ್‌ಗೂ ಮುನ್ನ ನಾನು ದೈಹಿಕ ಹಾಗೂ ಮಾನಸಿಕವಾಗಿ ಅತ್ಯುತ್ತಮ ಸ್ಥಿತಿಯಲ್ಲಿ ಇರಬೇಕಾಗಿದೆ,” ಎಂದು ಅವರು ತಿಳಿಸಿದ್ದಾರೆ.

IPL 2026: ಐಪಿಎಲ್‌ ಆಡುವ ವಿದೇಶಿ ಆಟಗಾರರ ವಿರುದ್ಧ ರೊಚ್ಚಿಗೆದ್ದ ಸುನೀಲ್‌ ಗವಾಸ್ಕರ್‌! ಇದಕ್ಕೆ ಕಾರಣವೇನು?

ಡೆಲ್ಲಿ ಕ್ಯಾಪಿಟಲ್ಸ್‌, ಫ್ಯಾನ್ಸ್‌ ಬಳಿ ಕ್ಷಮೆಯಾಚಿಸಿದ ಡಕೆಟ್‌

“ಡೆಲ್ಲಿ ತಂಡದ ಎಲ್ಲರಿಗೂ ನಾನು ಹೃತ್ಪೂರ್ವಕ ಕ್ಷಮೆಯಾಚಿಸುತ್ತೇನೆ. ಈ ಫ್ರಾಂಚೈಸಿಯನ್ನು ಪ್ರತಿನಿಧಿಸುವ ಅವಕಾಶಕ್ಕಾಗಿ ನಾನು ತುಂಬಾ ಉತ್ಸಾಹದಿಂದ ಇದ್ದೆ. ತಂಡ ನಿರ್ಮಾಣಕ್ಕೆ ಬೇಕಾಗುವ ಸಮಯ ಮತ್ತು ಯೋಜನೆಯನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ನನ್ನ ಈ ನಿರ್ಧಾರದಿಂದ ಉಂಟಾಗಬಹುದಾದ ಅಡಚಣೆಗಳಿಗೆ ಕ್ಷಮೆಯಾಚಿಸುತ್ತೇನೆ,” ಎಂದು ಅವರು ಹೇಳಿದ್ದಾರೆ.

“ಡೆಲ್ಲಿ ಅಭಿಮಾನಿಗಳಿಗೂ ನಾನು ಕ್ಷಮೆಯಾಚಿಸುತ್ತೇನೆ, ಏಕೆಂದರೆ ಈ ತಂಡವು ಅವರಿಗೆ ಎಷ್ಟು ಮಹತ್ವದ್ದೆಂಬುದು ನನಗೆ ತಿಳಿದಿದೆ,” ಎಂದು ಅವರು ಸೇರಿಸಿದ್ದಾರೆ.

IPL 2026: ಕೆಎಲ್‌ ರಾಹುಲ್‌ಗೆ ಬ್ಯಾಟಿಂಗ್‌ ಕ್ರಮಾಂಕ ಆರಿಸಿದ ಡಿಸಿ ಕೋಚ್‌ ಹೇಮಾಂಗ್‌ ಬದಾನಿ!

2 ವರ್ಷಗಳ ನಿಷೇಧದ ಭೀತಿ?

ಕೊನೆಯ ಕ್ಷಣದಲ್ಲಿ ಐಪಿಎಲ್‌ ಟೂರ್ನಿಯಿಂದ ಹಿಂದೆ ಸರಿದ ಬೆನ್‌ ಡಕೆಟ್‌ ವಿರುದ್ದ ಬಿಸಿಸಿಐ ಕಠಿಣ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹರಾಜಿನಲ್ಲಿ ಆಯ್ಕೆಯಾದ ನಂತರ ಟೂರ್ನಿಯಿಂದ ಹೊರನಡೆಯುವ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಲು ಐಪಿಎಲ್ ನಿಯಮಗಳು ಅವಕಾಶ ನೀಡುತ್ತವೆ. ಡಕೆಟ್ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈದ್ಯಕೀಯ ಕಾರಣವನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಹಾಗಾಗಿ ಐಪಿಎಲ್‌ ನಿಯಮಗಳ ಪ್ರಕಾರ, ಬೆನ್‌ ಡಕೆಟ್‌ ಅವರು ಮುಂದಿನ ಎರಡು ವರ್ಷಗಳಲ್ಲಿ ಐಪಿಎಲ್‌ ಟೂರ್ನಿಯಲ್ಲಿ ಭಾಗವಹಿಸುವಂತಿಲ್ಲ.