ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

RCB vs CSK: ಐಪಿಎಲ್‌ ಟೂರ್ನಿಯಲ್ಲಿ 200 ವಿಕೆಟ್‌ಗಳನ್ನು ಪಡೆದ ಭುವನೇಶ್ವರ್‌ ಕುಮಾರ್‌!

Bhuvneshwar Kumar 200 IPL Wickets: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವೇಗದ ಬೌಲರ್‌ ಭುವನೇಶ್ವರ್‌ ಕುಮಾರ್‌ ಅವರು ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಈ ಸಾಧನೆ ಮಾಡಿದ ಮೊದಲ ವೇಗದ ಬೌಲರ್‌ ಎಂಬ ದಾಖಲೆಯನ್ನು ಬರೆದಿದ್ದಾರೆ.

200 ಐಪಿಎಲ್‌ ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಭುವನೇಶ್ವರ್‌ ಕುಮಾರ್‌.

ಬೆಂಗಳೂರು: ಚೆನ್ನೈ ಸೂಪರ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ 11ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ಹಿರಿಯ ವೇಗಿ ಭುವನೇಶ್ವರ್‌ ಕುಮಾರ್‌ (Bhuvneshwar Kumar) ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅವರು ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ 200 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ವಿಶ್ವದ ಅತ್ಯಂತ ಫ್ರಾಂಚೈಸಿ ಲೀಗ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ವೇಗದ ಬೌಲರ್‌ ಹಾಗೂ ಒಟ್ಟಾರೆಯಾಗಿ ಎರಡನೇ ಬೌಲರ್‌ ಎಂಬ ನೂತನ ಮೈಲುಗಲ್ಲು ತಲುಪಿದ್ದಾರೆ. ಈ ಪಂದ್ಯಕ್ಕೂ ಮುನ್ನ ಈ ದಾಖಲೆಯನ್ನು ಬರೆಯಲು ಭುವನೇಶ್ವರ್‌ ಕುಮಾರ್‌ಗೆ ಕೇವಲ ಎರಡು ವಿಕೆಟ್‌ ಅಗತ್ಯವಿತ್ತು.

200 ಐಪಿಎಲ್‌ ವಿಕೆಟ್‌ಗಳನ್ನು ಕಬಳಿಸಿದ ಎರಡನೇ ಬೌಲರ್‌ ಹಾಗೂ ಭಾರತದ ಎರಡನೇ ಬೌಲರ್‌ ಆಗಿದ್ದಾರೆ. ಪಂಜಾಬ್‌ ಕಿಂಗ್ಸ್‌ ತಂಡದ ಯುಜ್ವೇಂದ್ರ ಚಹಲ್‌ ಈ ಸಾಧನೆ ಮಾಡಿದ ಮೊದಲನೇ ಬೌಲರ್‌ ಆಗಿದ್ದಾರೆ. ಚಹಲ್‌ 176 ಪಂದ್ಯಗಳ ಮೂಲಕ 224 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಆದರೆ, ಭುವನೇಶ್ವರ್‌ ಕಮಾರ್‌ 192ನೇ ಪಂದ್ಯದಲ್ಲಿ ಈ ದಾಖಲೆಯನ್ನು ಬರೆದಿದ್ದಾರೆ.

IPL 2026: ಟಿಮ್‌ ಡೇವಿಡ್‌ ಅಬ್ಬರಕ್ಕೆ ಕೊಚ್ಚಿಹೋದ ಸಿಎಸ್‌ಕೆ, ಆರ್‌ಸಿಬಿಗೆ ಭರ್ಜರಿ ಜಯ!

ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಕಿತ್ತ ಬೌಲರ್‌ಗಳು

ಯುಜ್ವೇಂದ್ರ ಚಹಲ್‌- 224 ವಿಕೆಟ್‌ಗಳು

ಭುವನೇಶ್ವರ್‌ ಕುಮಾರ್‌ - 200* ವಿಕೆಟ್‌ಗಳು

ಸುನೀಲ್‌ ನರೇನ್‌ - 193 ವಿಕೆಟ್‌ಗಳು

ಪಿಯೂಷ್‌ ಚಾವ್ಲಾ- 192 ವಿಕೆಟ್‌ಗಳು

ಆರ್‌ ಅಶ್ವಿನ್‌ - 187 ವಿಕೆಟ್‌ಗಳು

ಜಸ್‌ಪ್ರೀತ್‌ ಬುಮ್ರಾ - 183 ವಿಕೆಟ್‌ಗಳು

ಡ್ವೇನ್‌ ಬ್ರಾವೊ- 183 ವಿಕೆಟ್‌ಗಳು

IPL 2026: 28 ರನ್‌ಗೆ ಔಟಾದರೂ ರೋಹಿತ್‌ ಶರ್ಮಾರ ದೊಡ್ಡ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

36 ವರ್ಷದ ವೇಗದ ಬೌಲರ್ ತಮ್ಮ ಐಪಿಎಲ್ ವೃತ್ತಿಜೀವನದ 200ನೇ ವಿಕೆಟ್ ಎಂಬ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದರು. ಅವರು ಸಿಎಸ್‌ಕೆ ಯುವ ಬ್ಯಾಟರ್ ಆಯುಷ್ ಮ್ಹಾತ್ರೆ ಅವರನ್ನು ಔಟ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ. ಬೌಲರ್ ಆಫ್ ಸ್ಟಂಪ್ ಹೊರಭಾಗದಲ್ಲಿ ಹಾರ್ಡ್ ಲೆನ್ತ್‌ ಡೆಲಿವರಿ ಹಾಕಿದರು ಹಾಗೂ ಇದರಿಂದ ಬಲಗೈ ಬ್ಯಾಟರ್ ಪುಲ್ ಶಾಟ್ ಆಡಲು ಪ್ರಯತ್ನಿಸಿ ವಿಫಲರಾದರು ಹಾಗೂ ಋತುರಾಜ್‌ ಗಾಯಕ್ವಾಡ್‌ಗೆ ಕ್ಯಾಚ್‌ ಕೊಟ್ಟರು.



ಐಪಿಎಲ್ ಇತಿಹಾಸದಲ್ಲಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್‌ಗಳ ಪಟ್ಟಿಯಲ್ಲಿ 2022ರಲ್ಲಿ ಕೊನೆಯದಾಗಿ ಭಾರತ ಪುರುಷರ ತಂಡವನ್ನು ಪ್ರತಿನಿಧಿಸಿದ್ದ ಭುವನೇಶ್ವರ್ ಕುಮಾರ್ ಅವರ ಬಳಿಕ ಜಸ್‌ಪ್ರೀತ್‌ ಬುಮ್ರಾ ಮತ್ತು ಡ್ವೇನ್ ಬ್ರಾವೋ ಇದ್ದಾರೆ. ಡ್ವೇನ್ ಬ್ರಾವೋ ತಮ್ಮ ಐಪಿಎಲ್ ವೃತ್ತಿಜೀವನವನ್ನು 161 ಪಂದ್ಯಗಳಲ್ಲಿ 183 ವಿಕೆಟ್‌ಗಳೊಂದಿಗೆ ಮುಕ್ತಾಯಗೊಳಿಸಿದ್ದು, ಅವರು ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಲಯನ್ಸ್ ತಂಡಗಳ ಪರ ಆಡಿದ್ದರು. ಇನ್ನೊಂದೆಡೆ, 2013ರಿಂದ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿರುವ ಜಸ್‌ಪ್ರೀತ್‌ ಬುಮ್ರಾ, ಕೇವಲ 147 ಪಂದ್ಯಗಳಲ್ಲಿ 183 ವಿಕೆಟ್‌ಗಳನ್ನು ಪಡೆದಿದ್ದಾರೆ.