ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

T20 world Cup 2026: ಶ್ರೀಲಂಕಾ ತಂಡದ ವೈಫಲ್ಯದ ಬಗ್ಗೆ ಕುಮಾರ ಸಂಗಕ್ಕಾರ ದೊಡ್ಡ ಹೇಳಿಕೆ!

Kumara Sangakkara on Sri lanka's T20 WC Exit: ಪ್ರಸ್ತುತ ನಡಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದ ಶ್ರೀಲಂಕಾ ತಂಡದ ಬಗ್ಗೆ ಮಾಜಿ ನಾಯಕ ಕುಮಾರ ಸಂಗಕ್ಕಾರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 25 ರಂದು ನ್ಯೂಜಿಲೆಂಡ್‌ ವಿರುದ್ಧ ಸೋಲುವ ಮೂಲಕ ಶ್ರೀಲಂಕಾ ಟೂರ್ನಿಯಿಂದ ಎಲಿಮಿನೇಟ್‌ ಆಯಿತು.

ಶ್ರೀಲಂಕಾ ತಂಡದ ವೈಫಲ್ಯದ ಬಗ್ಗೆ ಕುಮಾರ ಸಂಗಕ್ಕಾರ ಪ್ರತಿಕ್ರಿಯೆ.

ಕೊಲಂಬೊ: ಪ್ರಸ್ತುತ ನಡೆಯುತ್ತಿರುವ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಸಹ-ಆಯೋಜಕ ಶ್ರೀಲಂಕಾ ತಂಡ, ಫೆಬ್ರವರಿ 25ರಂದು ಇಲ್ಲಿನ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ ವಿರುದ್ಧ 61 ರನ್‌ಗಳ ಭಾರೀ ಸೋಲು ಅನುಭವಿಸಿ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ದಸೂನ್‌ ಶಾನಕ ನೇತೃತ್ವದ ಶ್ರೀಲಂಕಾ (Sri lanka) ತಂಡ, ಗುಂಪು ಹಂತದಲ್ಲಿ ಆರಂಭಿಕ ಮೂರು ಪಂದ್ಯಗಳನ್ನು ಗೆದ್ದು ಟೂರ್ನಿಯ ಅಭಿಯಾನವನ್ನು ಅದ್ಭುತವಾಗಿ ಆರಂಭಿಸಿತ್ತು ಹಾಗೂ ಸುಲಭವಾಗಿ ಸೂಪರ್‌-8ಕ್ಕೆ ಅರ್ಹತೆ ಪಡೆದಿತ್ತು. ಆದರೆ, ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋತ ಬಳಿಕ ತಂಡದ ಪ್ರದರ್ಶನ ಕುಸಿತ ಕಂಡಿತು. ಇದಾದ ಬಳಿಕ ಸೂಪರ್-8ರ ಎರಡೂ ಪಂದ್ಯಗಳಲ್ಲಿ ಸೋಲು ಕಂಡು, ಶ್ರೀಲಂಕಾ ಟೂರ್ನಿಯಿಂದ ಹೊರಬಿದ್ದಿದೆ.

ಶ್ರೀಲಂಕಾ ತಂಡದ ನೀರಸ ಪ್ರದರ್ಶನದ ಬಳಿಕ ದಿಗ್ಗಜ ಕುಮಾರ ಸಂಗಕ್ಕಾರ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ‘ಎಕ್ಸ್’ ಖಾತೆಯಲ್ಲಿ ಅವರು ತಮ್ಮ ಸಂದೇಶವನ್ನು ಪ್ರಕಟಿಸಿದ್ದು, ತಮ್ಮ ಕ್ರಿಕೆಟ್‌ ದಿನಗಳ ಅನುಭವ ಮತ್ತು ಆ ಸಂದರ್ಭಗಳಲ್ಲಿ ಎದುರಾಗುವ ನಿರಾಶೆಯನ್ನು ನೆನಪಿಸಿಕೊಂಡಿದ್ದಾರೆ.

“ಎಲ್ಲೆಡೆ ನೋವು ತುಂಬಿದೆ. ಅಭಿಮಾನಿಗಳು ನೊಂದುಹೋಗಿದ್ದಾರೆ, ನಿರಾಶರಾಗಿದ್ದಾರೆ, ಕೋಪಗೊಂಡಿದ್ದಾರೆ. ಆಟಗಾರರೂ ಸಹ ತೀವ್ರವಾಗಿ ನೋವು ಅನುಭವಿಸುತ್ತಿದ್ದಾರೆ. ನಾನು ಸಹ ಇಂತಹ ಸಂದರ್ಭಗಳನ್ನು ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಅನುಭವಿಸಿದ್ದೇನೆ. ಇದು ಸುಲಭವಲ್ಲ. ಆದರೆ ದೇಶ ಮತ್ತು ಜನರನ್ನು ಪ್ರತಿನಿಧಿಸುವ ಜವಾಬ್ದಾರಿ ಇದರ ಜೊತೆಯೇ ಬರುತ್ತದೆ. ಇದು ಒಂದು ಭಾರವಾದ ಹೊಣೆಗಾರಿಕೆ, ಆದರೆ ಅದೇ ಸಮಯದಲ್ಲಿ ಮಹತ್ತರ ಗೌರವವೂ ಹೌದು,” ಎಂದು ಅವರು ಎಕ್ಸ್‌ ಖಾತೆಯಲ್ಲಿ ಬರೆದಿದ್ದಾರೆ.

IND vs ZIM: ʻಶಿವಂ ದುಬೆ ಆಲ್‌ರೌಂಡರ್‌ ಅಲ್ಲ, ಬ್ಯಾಟ್ಸ್‌ಮನ್‌ʼ-ಮೊಹಮ್ಮದ್‌ ಕೈಫ್‌ ಅಚ್ಚರಿ ಹೇಳಿಕೆ!

ಶ್ರೀಲಂಕಾ ಕ್ರಿಕೆಟ್‌ಗೆ ಕುಮಾರ ಸಂಗಕ್ಕರ ಎಚ್ಚರಿಕೆ

ಎಡಗೈ ಬ್ಯಾಟರ್ ಸಂಗಕ್ಕಾರ ಶ್ರೀಲಂಕಾ ಕ್ರಿಕೆಟ್‌ನ ಪ್ರಸ್ತುತ ಸ್ಥಿತಿಗತಿಗಳನ್ನೂ ಪ್ರಶ್ನಿಸಿದರು. ಪ್ರಸ್ತುತ ರಾಷ್ಟ್ರೀಯ ತಂಡ ಸಾಗುತ್ತಿರುವ ಹಾದಿ ಸರಿಯಾದುದಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದು, ಇದೇ ರೀತಿಯಲ್ಲಿ ಮುಂದುವರಿದರೆ ದೇಶದ ಕ್ರಿಕೆಟ್ ಅಪ್ರಸ್ತುತವಾಗುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

“ಎಲ್ಲ ಹಂತಗಳಲ್ಲೂ ತಪ್ಪುಗಳನ್ನು ತಿದ್ದಲು ಬಹಳಷ್ಟು ಕೆಲಸ ಮಾಡಬೇಕಿದೆ. ನಮ್ಮ ಸುತ್ತಲಿನ ಕ್ರಿಕೆಟ್ ಜಗತ್ತು ವೇಗವಾಗಿ ಬದಲಾಗುತ್ತಿರುವಾಗ, ನಾವು ಅದೇ ಕೆಲಸಗಳನ್ನು ಪದೇ-ಪದೆ ಮಾಡುತ್ತಾ ಬೇರೆ ಫಲಿತಾಂಶಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನಾವು ಹೊಂದಾಣಿಕೆ ಮಾಡಿಕೊಂಡಿಲ್ಲ; ಅದರಿಂದ ಅಪ್ರಸ್ತುತವಾಗುವ ಅಪಾಯ ಎದುರಿಸುತ್ತಿದ್ದೇವೆ,” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾ ತಂಡ ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ದಾಸುನ್ ಶನಕ

ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್‌ ನಡುವೆ ಪೈಪೋಟಿ

ನ್ಯೂಜಿಲೆಂಡ್‌ ವಿರುದ್ಧದ ಸೋಲಿನ ಬಳಿಕ ಶ್ರೀಲಂಕಾ ತಂಡ ಅಧಿಕೃತವಾಗಿ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದೆ. ಇಂಗ್ಲೆಂಡ್ ಈಗಾಗಲೇ ಅರ್ಹತೆ ಪಡೆದಿರುವುದರಿಂದ, ಎರಡನೇ ಗುಂಪಿನಿಂದ ಲಭ್ಯವಿರುವ ಏಕೈಕ ಸ್ಥಾನಕ್ಕಾಗಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ನಡುವೆ ಈಗ ನೇರ ಪೈಪೋಟಿ ನಡೆಯುತ್ತಿದೆ. ಪಾಕಿಸ್ತಾನ ತಂಡ ಮುಂದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ಇತ್ತ ನ್ಯೂಜಿಲೆಂಡ್‌ ತಂಡ, ಇಂಗ್ಲೆಂಡ್ ವಿರುದ್ಧದ ರೋಚಕ ಪಂದ್ಯಕ್ಕೆ ಸಜ್ಜಾಗುತ್ತಿದೆ.