ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Duleep Trophy 2026: ಕೇಂದ್ರ ವಲಯ ತಂಡಕ್ಕೆ ರಜತ್ ಪಾಟಿದಾರ್ ನಾಯಕ, ರಿಂಕು ಸಿಂಗ್ ಉಪನಾಯಕ!

2026ರ ದುಲೀಪ್ ಟ್ರೋಫಿ ಟೂರ್ನಿಗೆ ಕೇಂದ್ರ ವಲಯ (ಸೆಂಟ್ರಲ್ ಝೋನ್) ತಂಡವನ್ನು ಪ್ರಕಟಿಸಲಾಗಿದ್ದು, ನಾಯಕತ್ವವನ್ನು ರಜತ್ ಪಾಟಿದಾರ್ ಅವರಿಗೆ ನೀಡಲಾಗಿದೆ. ತಂಡದ ಉಪನಾಯಕರಾಗಿ ರಿಂಕು ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಈ ಪ್ರತಿಷ್ಠಿತ ದೇಶಿ ಟೂರ್ನಿಯು ಆಗಸ್ಟ್ 23ರಿಂದ ಸೆಪ್ಟೆಂಬರ್ 10ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.

ಕೇಂದ್ರ ವಲಯ ತಂಡಕ್ಕೆ ರಜತ್‌ ಪಾಟಿದಾರ್‌ ನಾಯಕ.

ನವದೆಹಲಿ: ಭಾರತೀಯ ಕೆಂಪು ಚೆಂಡಿನ ಕ್ರಿಕೆಟ್‌ ಆವೃತ್ತಿಯು ಆಗಸ್ಟ್ 23 ರಂದು ದುಲೀಪ್ ಟ್ರೋಫಿಯೊಂದಿಗೆ (Duleep Trophy 2026-27) ಆರಂಭವಾಗಲಿದೆ. ಈ ಪ್ರತಿಷ್ಠಿತ ಟೂರ್ನಿಗೆ ಕೇಂದ್ರ ವಲಯ ತಂಡವನ್ನು (Cental Zone) ಪ್ರಕಟಿಸಲಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ತಮ್ಮ ನಾಯಕತ್ವದಲ್ಲಿ ಸತತ ಎರಡು ಐಪಿಎಲ್ ಪ್ರಶಸ್ತಿಗಳತ್ತ ಮುನ್ನಡೆಸಿದ ರಜತ್ ಪಾಟಿದಾರ್ ಅವರನ್ನು ತಂಡದ ನಾಯಕರಾಗಿ ನೇಮಕ ಮಾಡಲಾಗಿದೆ. ಆಕ್ರಮಣಕಾರಿ ಬ್ಯಾಟರ್ ರಿಂಕು ಸಿಂಗ್ ಅವರಿಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ.

ದುಲೀಪ್ ಟ್ರೋಫಿಯ ಎಲ್ಲಾ ಪಂದ್ಯಗಳು ಆಗಸ್ಟ್ 23ರಿಂದ ಸೆಪ್ಟೆಂಬರ್ 10ರವರೆಗೆ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆಯಲಿವೆ. ವಲಯ ಮಾದರಿಯಲ್ಲಿ ನಡೆಯುವ ಈ ಟೂರ್ನಿಯಲ್ಲಿ ಹಲವು ಅಂತಾರಾಷ್ಟ್ರೀಯ ಆಟಗಾರರು ಹಾಗೂ ಉದಯೋನ್ಮುಖ ಯುವ ಪ್ರತಿಭೆಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ರಜತ್ ಪಾಟಿದಾರ್ ಮತ್ತು ರಿಂಕು ಸಿಂಗ್ ಅವರ ನೇತೃತ್ವದಲ್ಲಿ ಕೇಂದ್ರ ವಲಯ ತಂಡ ಈ ಬಾರಿ ಬಲಿಷ್ಠ ತಂಡವಾಗಿ ಕಣಕ್ಕಿಳಿಯಲಿದೆ.