ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಏಷ್ಯನ್ ಗೇಮ್ಸ್‌ನಲ್ಲಿ ದೇಶದ ಕೀರ್ತಿ ಬೆಳಗಿಸಿದ ಕರ್ನಾಟಕದ ಕ್ರೀಡಾಪಟುಗಳಿಗೆ ಸಿಎಂ ಡಿ‌‌ ಕೆ‌ ಶಿವಕುಮಾರ್ ಸನ್ಮಾನ!

2026ರ ಏಷ್ಯಾ ಕ್ರೀಡಾಕೂಟದಲ್ಲಿ ಭಾಗವಹಿಸಿದ ಹಾಗೂ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳಿಗೆ ಸಿಎಂ ಡಿಕೆ ಶಿವಕುಮಾರ್‌ ಅವರು ಸನ್ಮಾನ ಮಾಡಿದ್ದಾರೆ. ಇದರಲ್ಲಿ ಚಿನ್ನ ಗೆದ್ದವರಿಗೆ ಒಂದು ಕೋಟಿ, ಬೆಳ್ಳಿ ಗೆದ್ದವರಿಗೆ 75 ಲಕ್ಷ ರು ಹಾಗೂ ಕಂಚಿನ ಪದಕ ಗೆದ್ದವರಿಗೆ 50 ಲಕ್ಷ ರು ನೀಡಲಾಗುವುದು ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ಏಷ್ಯನ್‌ ಗೇಮ್ಸ್‌ನಲ್ಲಿ ಭಾಗವಹಿಸಿದ ಕರ್ನಾಟಕದ ಅಥ್ಲಿಟ್‌ಗಳಿಗೆ ಡಿಕೆ ಶಿವಕುಮಾರ್‌ ಮೆಚ್ಚುಗೆ.

ಬೆಂಗಳೂರು: ಕಳೆದ 2026ರ ಏಷ್ಯನ್ ಗೇಮ್ಸ್‌ನಲ್ಲಿ ದೇಶ ಹಾಗೂ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ ರಾಜ್ಯದ ಕ್ರೀಡಾಪಟುಗಳನ್ನು ಮುಖ್ಯಮಂತ್ರಿ ಡಿ ಕೆ‌ ಶಿವಕುಮಾರ್ ‌ಅವರು ವಿಧಾ‌ನಸೌಧದಲ್ಲಿ ಮಂಗಳವಾರ ಸನ್ಮಾನಿಸಿದರು. 8 ಪದಕ ವಿಜೇತರಿಗೆ ಒಟ್ಟು 8 ಕೋಟಿ ರೂ. ನಗದು ಬಹುಮಾನ ಘೋಷಿಸಿದರು. ಪದಕ ವಿಜೇತರು ಸೇರಿದಂತೆ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದಿಂದ ಹಲವು ಮಹತ್ವದ ಪ್ರೋತ್ಸಾಹಕ ಕ್ರಮಗಳನ್ನು ಇದೇ ವೇಳೆ ಸಿಎಂ ಘೋಷಿಸಿದರು.

ಏಷ್ಯನ್ ಗೇಮ್ಸ್ 2026ರಲ್ಲಿ ಭಾಗವಹಿಸಲು ಅರ್ಹತೆ ಪಡೆದು ಸ್ಪರ್ಧಿಸಿದ ಕರ್ನಾಟಕದ 20 ಕ್ರೀಡಾಪಟುಗಳಿಗೆ ಇದೇ ಮೊದಲ ಬಾರಿ ತಲಾ 5 ಲಕ್ಷ ರೂ. ನಗದು ಪ್ರೋತ್ಸಾಹಧನ ಮಂಜೂರು ಮಾಡಲಾಗಿದೆ. ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕ್ರಿಕೆಟ್, ಸೈಕ್ಲಿಂಗ್, ಎಕ್ವೆಸ್ಟ್ರಿಯನ್, ಗಾಲ್ಫ್, ಹಾಕಿ, ಶೂಟಿಂಗ್, ಈಜು, ಟೇಬಲ್ ಟೆನಿಸ್ ಹಾಗೂ ಸ್ಪೋರ್ಟ್ಸ್ ಕ್ಲೈಂಬಿಂಗ್ ವಿಭಾಗಗಳ ಕ್ರೀಡಾಪಟುಗಳು ಇದರ ಫಲಾನುಭವಿಗಳಾಗಿದ್ದಾರೆ.

ಕ್ರೀಡಾಪಟುಗಳಿಗೆ ಸರಕಾರಿ ನೌಕರಗಳಿಗೆ 2% ಮೀಸಲು

ಪದಕ ವಿಜೇತರ ಬಹುಮಾನ ಮೊತ್ತ ಹೆಚ್ಚಳ

ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳಿಗೆ ನೀಡಲಾಗುತ್ತಿದ್ದ ನಗದು ಬಹುಮಾನವನ್ನೂ ಸಿಎಂ ಹೆಚ್ಚಳ ಮಾಡಿದ್ದಾರೆ. ಈ ಹಿಂದೆ ಚಿನ್ನದ ಪದಕ ವಿಜೇತರಿಗೆ 35 ಲಕ್ಷ ರು., ಬೆಳ್ಳಿ ಪದಕ ವಿಜೇತರಿಗೆ 25 ಲಕ್ಷ ರು. ಹಾಗೂ ಕಂಚಿನ ಪದಕ ವಿಜೇತರಿಗೆ 15 ಲಕ್ಷ ರು. ನೀಡಲಾಗುತ್ತಿತ್ತು. ಸಿಎಂ ಡಿ ಕೆ‌ ಶಿವಕುಮಾರ್ ಅವರು ಚಿನ್ನದ ಪದಕಕ್ಕೆ 1 ಕೋಟಿ ರೂ., ಬೆಳ್ಳಿ ಪದಕಕ್ಕೆ 75 ಲಕ್ಷ ಹಾಗೂ ಕಂಚಿನ ಪದಕಕ್ಕೆ 50 ಲಕ್ಷ ನಗದು ಬಹುಮಾನ ನೀಡಲು ನಿರ್ಧರಿಸಿದ್ದಾರೆ.



ಕ್ರೀಡಾಪಟುಗಳಿಗೆ ನೇರ ನೇಮಕಾತಿ ಅವಕಾಶ

ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಿಗೆ ಗುಂಪು-ಬಿ ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ನೇಮಕಾತಿಯನ್ನು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಮೂಲಕ ಕೈಗೊಳ್ಳಲಾಗುವುದು.

ಏಷ್ಯನ್‌ ಗೇಮ್ಸ್‌ ವರ್ಣರಂಜಿತ ತೆರೆ; ದೋಹಾದಲ್ಲಿ 2030ರ ಏಷ್ಯಾಡ್

ಒಲಿಂಪಿಕ್ಸ್ ತಯಾರಿಗೆ ತಲಾ 10 ಲಕ್ಷ ರು

ಮುಂದಿನ ಹಂತದಲ್ಲಿ ಒಲಿಂಪಿಕ್ಸ್‌ಗೆ ಸಜ್ಜಾಗುತ್ತಿರುವ ಕ್ರೀಡಾಪಟುಗಳಿಗೂ ಸರ್ಕಾರ ನೆರವು ನೀಡಿದೆ. ಏಷ್ಯನ್ ಗೇಮ್ಸ್ ಪದಕ ವಿಜೇತರಾದ ಎಂ.ಆರ್. ಪೂವಮ್ಮ, ಸ್ನೇಹಾ ಎಸ್.ಎಸ್., ಶ್ರೇಯಾಂಕಾ ಪಾಟೀಲ್ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತೆ ಶಿಲ್ಪಾ ಕೆ.ಎಸ್. ಅವರನ್ನು ‘ಗುರಿ ಒಲಿಂಪಿಕ್ಸ್’ ಯೋಜನೆಗೆ 2026-27ನೇ ಸಾಲಿಗೆ ಸೇರ್ಪಡೆ ಮಾಡಲಾಗಿದೆ. ಒಲಿಂಪಿಕ್ಸ್ ತಯಾರಿಗಾಗಿ ತಲಾ 10 ಲಕ್ಷ ರೂ. ನಗದು ಪ್ರೋತ್ಸಾಹಧನವನ್ನು ಇವರಿಗೆ ನೀಡಲಾಗುತ್ತದೆ.

ಸರ್ಕಾರಿ ಉದ್ಯೋಗಗಳಲ್ಲಿ ಕ್ರೀಡಾಪಟುಗಳಿಗೆ 2% ಮೀಸಲಾತಿ

ಸಾಧಕ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರಿ ನೇರ ನೇಮಕಾತಿಗಳಲ್ಲಿ 2% ಮೀಸಲಾತಿ ಜಾರಿಗೆ ತರಲಾಗಿದೆ. ಗುಂಪು-ಎ, ಗುಂಪು-ಬಿ, ಗುಂಪು-ಸಿ ಮತ್ತು ಗುಂಪು-ಡಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಈ ಮೀಸಲಾತಿ ಅನ್ವಯವಾಗಲಿದೆ. ಈ ಕುರಿತು ಅಕ್ಟೋಬರ್ 3, 2026 ರಂದು ಅಧಿಸೂಚನೆ ಹೊರಡಿಸಲಾಗಿದೆ.



ಪದಕ ವಿಜೇತ 08 ಕ್ರೀಡಾಪಟುಗಳ ವಿವರ ಹಾಗೂ ಬಹುಮಾನದ ಮೊತ್ತ

ಶ್ರೇಯಾಂಕ ಆರ್. ಪಾಟೀಲ್ (ಕ್ರಿಕೆಟ್ ಮಹಿಳಾ ತಂಡ, ಚಿನ್ನ), ಎಂ.ಆರ್. ಪೂವಮ್ಮ (ಅಥ್ಲೆಟಿಕ್ಸ್ 4x400 ಮಿಶ್ರ ರಿಲೇ, 4x400 ಮಹಿಳಾ ರಿಲೇ ಬೆಳ್ಳಿ ಮತ್ತು ಚಿನ್ನ) , ತಿಲೋತ್ತಮ ಸೇನ್ (ಶೂಟಿಂಗ್, ಮಹಿಳೆಯರ 50 ಮೀ ರೈಫಲ್, ಬೆಳ್ಳಿ), ಆಯುಷ್ ಆರ್ ಶೆಟ್ಟಿ (ಪುರುಷರ ತಂಡ ಬ್ಯಾಡ್ಮಿಂಟನ್, ಬೆಳ್ಳಿ), ಸ್ನೇಹಾ ಎಸ್.ಎಸ್. ( ಅಥ್ಲೆಟಿಕ್ಸ್ 4x100 ಮಿಶ್ರ ರಿಲೇ ಕಂಚು), ಅಧಿತಿ ಅಶೋಕ್ (ಗಾಲ್ಫ್ ಮಹಿಳಾ ತಂಡ, ಬೆಳ್ಳಿ), ಪ್ರಣವಿ ಎಸ್. ಅರಸ್ (ಗಾಲ್ಫ್ ಮಹಿಳಾ ತಂಡ, ಬೆಳ್ಳಿ ಹಾಗೂ ವೈಯಕ್ತಿಕ ಚಿನ್ನ), ಮೋಹಿತ್ ಹೆಚ್.ಎಸ್. (ಹಾಕಿ ಪುರುಷರ ತಂಡ, ಚಿನ್ನ)



<blockquote class="twitter-tweet"><p lang="kn" dir="ltr">2026ರ ಏಷ್ಯನ್‌ ಗೇಮ್ಸ್‌ನಲ್ಲಿ ಅದ್ಭುತ ಸಾಧನೆಗೈದು, ನಾಡಿಗೆ ಕೀರ್ತಿ ತಂದ ಕರ್ನಾಟಕದ ಹೆಮ್ಮೆಯ ಕ್ರೀಡಾಪಟುಗಳಾದ ಮೋಹಿತ್‌ ಎಚ್.‌ ಎಸ್.‌, ಅದಿತಿ ಅಶೋಕ್‌, ಪೂವಮ್ಮ, ಆಯುಷ್‌ ಶೆಟ್ಟಿ, ತಿಲೋತ್ತಮಾ ಸೇನ್, ಶ್ರೇಯಾಂಕ ಪಾಟೀಲ್ ಹಾಗೂ ಸ್ನೇಹ ಎಸ್.‌ ಎಸ್. ಅವರನ್ನು ಇಂದು ವಿಧಾನಸೌಧದಲ್ಲಿ ಆತ್ಮೀಯವಾಗಿ ಸನ್ಮಾನಿಸಿ, ಗೌರವಿಸಲಾಯಿತು. ಈ ಕ್ರೀಡಾಪಟುಗಳ ಐತಿಹಾಸಿಕ ಸಾಧನೆ ಪ್ರತಿಯೊಬ್ಬ ಕನ್ನಡಿಗನ ಎದೆಯುಬ್ಬುವಂತೆ ಮಾಡಿದೆ. ಇವರ ಕಠಿಣ ಪರಿಶ್ರಮ, ಛಲ ಮತ್ತು ಕ್ರೀಡಾಭಕ್ತಿ ನಮ್ಮ ನಾಡಿನ ಯುವ ಪೀಳಿಗೆಗೆ ಅತ್ಯುತ್ತಮ ಸ್ಫೂರ್ತಿಯಾಗಿದೆ. ಮುಂಬರುವ ದಿನಗಳಲ್ಲಿ ಈ ಎಲ್ಲ ಪ್ರತಿಭೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಸಾಧನೆಗೈದು, ನಮ್ಮ ರಾಜ್ಯ ಹಾಗೂ ದೇಶದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಲಿ. ಕ್ರೀಡೆ ಹಾಗೂ ಕ್ರೀಡಾಪಟುಗಳ ಏಳಿಗೆಗೆ ನಮ್ಮ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ. ಈ ವೇಳೆ ಮಾನ್ಯ ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಮತ್ತು ಯುವಜನ ಸೇವೆ ಸಚಿವರಾದ ಡಾ. ಜಿ. ಪರಮೇಶ್ವರ, ಕರ್ನಾಟಕ ಒಲಂಪಿಕ್‌ ಒಕ್ಕೂಟದ ಅಧ್ಯಕ್ಷರಾದ ಡಾ. ಕೆ. ಗೋವಿಂದರಾಜ್‌, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತರಾದ ಎಂ. ಎನ್. ಅನುಚೇತ್‌ ಮತ್ತಿತರರು ಉಪಸ್ಥಿತರಿದ್ದರು.


— DK Shivakumar (@DKShivakumar) October 6, 2026

2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಿ ತಲಾ 5.00 ಲಕ್ಷ ರೂ. ಪ್ರೋತ್ಸಾಹಧನ ಪಡೆದ 20 ಕ್ರೀಡಾಪಟುಗಳು

ಯಶಸ್ ಪಾಲಾಕ್ಷ - ಅಥ್ಲೆಟಿಕ್ಸ್

ಸುಪ್ರಿಯಾ ಸಿಂಡಿಗೆರೆ ಬಸವರಾಜು - ಅಥ್ಲೆಟಿಕ್ಸ್

ಉನ್ನತಿ ಅಯ್ಯಪ್ಪ - ಅಥ್ಲೆಟಿಕ್ಸ್

ಎಂ.ಆರ್. ಪೂವಮ್ಮ - ಅಥ್ಲೆಟಿಕ್ಸ್

ಸ್ನೇಹಾ ಎಸ್.ಎಸ್. - ಅಥ್ಲೆಟಿಕ್ಸ್

ಆಯುಷ್ ಶೆಟ್ಟಿ - ಬ್ಯಾಡ್ಮಿಂಟನ್

ಶ್ರೇಯಾಂಕ ಆರ್. ಪಾಟೀಲ್ - ಕ್ರಿಕೆಟ್ T20

ಕೀರ್ತಿ ರಂಗಸ್ವಾಮಿ - ಸೈಕ್ಲಿಂಗ್ ಟ್ರ್ಯಾಕ್

ಫವಾದ್ ಮಿರ್ಜಾ- ಈಕ್ವೇಸ್ಟ್ರೀಯನ್

ಅಧಿತಿ ಅಶೋಕ್ - ಗಾಲ್ಫ್

ಪ್ರಣವಿ ಎಸ್. ಅರಸ್ - ಗಾಲ್ಫ್

ಮೋಹಿತ್ ಹೆಚ್.ಎಸ್. - ಹಾಕಿ

ತಿಲೋತ್ತಮಾ ಸೇನ್ - ಶೂಟಿಂಗ್

ಆಕಾಶ್ ಮಣಿ - ಈಜು

ಶ್ರೀ ಹರಿ ನಟರಾಜ್ - ಈಜು

ದಕ್ಷಣ್ ಎಸ್. - ಈಜು

ಅನೀಶ್ ಗೌಡ - ಈಜು

ಯಶಸ್ವಿನಿ ಘೋರ್ಪಡೆ - ಟೇಬಲ್ ಟೆನ್ನಿಸ್

ಸಿಂಧುಶ್ರೀ - ಅಥ್ಲೆಟಿಕ್ಸ್

ದೀಪು ಮಲ್ಲೇಶ್ - ಸ್ಪೋರ್ಟ್ಸ್ ಕ್ಲೈಂಬಿಂಗ್