ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಗೆ (IND vs SA) ಹಾಗೂ ನಮೀಬಿಯಾ ಮತ್ತು ಜಿಂಬಾಬ್ವೆ ಜಂಟಿ ಆತಿಥ್ಯದಲ್ಲಿ ನಡೆಯುವ 2026ರ ಅಂಡರ್-19 ವಿಶ್ವಕಪ್ ಟೂರ್ನಿಗೆ (U-19 World Cup 2026) ಭಾರತ ಕಿರಿಯರ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಶನಿವಾರ ಪ್ರಕಟಿಸಿದೆ. ಚೆನ್ನೈ ಸೂಪರ್ ಹಾಗೂ ಮುಂಬೈನ ಯುವ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆಗೆ ತಂಡದ ನಾಯಕತ್ವವನ್ನು ನೀಡಲಾಗಿದೆ. ಇದರ ಜೊತೆಗೆ ಬಿಹಾರ ಹಾಗೂ ಭಾರತೀಯ ಕ್ರಿಕೆಟ್‌ನ ಉದಯೋನ್ಖುಕ ಆಟಗಾರ ವೈಭವ್ ಸೂರ್ಯವಂಶಿಗೂ ತಂಡದಲ್ಲಿ ಸ್ಥಾನವನ್ನು ಕಲ್ಪಿಸಲಾಗಿದೆ.
"ಜೂನಿಯರ್ ಕ್ರಿಕೆಟ್ ಸಮಿತಿಯು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು 2026 ಜನವರಿ 15 ರಿಂದ ಫೆಬ್ರವರಿ 6 ರವರೆಗೆ ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಅಂಡರ್-19 ವಿಶ್ವಕಪ್ ಟೂರ್ನಿಗಾಗಿ ಭಾರತ ಅಂಡರ್-19 ತಂಡವನ್ನು ಆಯ್ಕೆ ಮಾಡಿದೆ. ಮುಂಬರುವ ಐಸಿಸಿ ಪುರುಷರ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ 16 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ, ನಂತರ ಸೂಪರ್ ಸಿಕ್ಸ್ ಹಂತ, ಸೆಮಿಫೈನಲ್ ಮತ್ತು ಹರಾರೆಯಲ್ಲಿ ಫೈನಲ್ ನಡೆಯಲಿದೆ," ಎಂದು ಬಿಸಿಸಿಐ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಗ್ಲೆಂಡ್ ವಿರುದ್ಧ ಅತಿ ಹೆಚ್ಚು ಟೆಸ್ಟ್ ರನ್ ಗಳಿಸಿ ಅಲಾನ್ ಬಾರ್ಡರ್ ದಾಖಲೆ ಮುರಿದ ಸ್ಟೀವನ್ ಸ್ಮಿತ್!
"ಐದು ಬಾರಿ ಚಾಂಪಿಯನ್ಸ್ ಭಾರತ (2000, 2008, 2012, 2018 ಹಾಗೂ 2022) ತಂಡ, ನ್ಯೂಜಿಲೆಂಡ್, ಯುಎಸ್‌ಎ ಹಾಗೂ ಬಾಂಗ್ಲಾದೇಶ ತಂಡಗಳ ಜತೆಗೆ ಬಿ ಗುಂಪಿನಲ್ಲಿ ಸ್ಥಾನವನ್ನು ಪಡೆದಿದೆ. ಜನವರಿ 15 ರಂದು ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಯುಎಸ್‌ಎ ವಿರುದ್ಧ ಭಾರತ ತನ್ನ ಮೊದಲನೇ ಪಂದ್ಯವನ್ನು ಆಡಲಿದೆ. ಇದಾದ ಬಳಿಕ ಜನವರಿ 17 ರಂದು ಇದೇ ಅಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ಕಾದಾಟ ನಡೆಸಲಿದೆ. ಇನ್ನು ಜನವರಿ 24 ರಂದು ನ್ಯೂಜಿಲೆಂಡ್ ವಿರುದ್ಧ ಕಾದಾಟ ನಡೆಸಲಿದೆ," ಎಂದು ಬಿಸಿಸಿಐ ಹೇಳಿದೆ.
ವಿಶ್ವಕಪ್ ಟೂರ್ನಿಗೂ ಮುನ್ನ ಭಾರತ ಅಂಡರ್-19 ವಿಶ್ವಕಪ್ ಟೂರ್ನಿಗೂ ಮುನ್ನ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಹಮ್ಮಿಕೊಳ್ಳಲಿದ್ದು, ಇಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯನು ಆಡಲಿದೆ. ಆ ಮೂಲಕ ವಿಶ್ವಕಪ್ ಟೂರ್ನಿಗೆ ಸಜ್ಜಾಗಲಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಗಾಯದಿಂದ ಗುಣಮುಖರಾಗುತ್ತಿರುವ ಆಯುಷ್ ಮ್ಹಾತ್ರೆ ಹಾಗೂ ಉಪನಾಯಕ ವಿಹಾನ್ ಮಲ್ಹೋತ್ರಾ ಅಲಭ್ಯರಾಗಿದ್ದಾರೆ. ಹಾಗಾಗಿ ಒಡಿಐ ಸರಣಿಯಲ್ಲಿ ಭಾರತ ತಂಡವನ್ನು ವೈಭವ್ ಸೂರ್ಯವಂಶಿ ಮುನ್ನಡೆಸಲಿದ್ದಾರೆ.
Vijay Hazare Trophy 2025-26: ದೆಹಲಿ ಪರ ಮತ್ತೊಂದು ಪಂದ್ಯವನ್ನು ಆಡಲಿರುವ ವಿರಾಟ್ ಕೊಹ್ಲಿ!
ಜನವರಿ 3 ರಂದು ಭಾರತ ಅಂಡರ್-19 ತಂಡ, ದಕ್ಷಿಣ ಆಫ್ರಿಕಾ U19 ತಂಡವನ್ನು ಮೊದಲನೇ ಪಂದ್ಯದಲ್ಲಿ ಎದುರಿಸಲಿದೆ. ನಂತರ ಜನವರಿ 5 ರಂದು ಎರಡನೇ ಪಂದ್ಯ ಮತ್ತು ಜನವರಿ 7 ರಂದು ಸರಣಿಯ ಅಂತಿಮ ಪಂದ್ಯ ನಡೆಯಲಿದೆ. ಮೂರೂ ಪಂದ್ಯಗಳು ಬೆನೋನಿಯ ವಿಲ್ಲೋಮೂರ್ ಪಾರ್ಕ್‌ನಲ್ಲಿ ನಡೆಯಲಿವೆ.
ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ಭಾರತ ಅಂಡರ್-19 ತಂಡ: ವೈಭವ್ ಸೂರ್ಯವಂಶಿ (ನಾಯಕ), ಆರೋನ್ ಜಾರ್ಜ್ (ಉಪ ನಾಯಕ), ವೇದಾಂತ ತ್ರಿವೇದಿ, ಅಭಿಜ್ಞಾನ್ ಕುಂಡು (ವಿ.ಕೀ), ಹಾರ್ವಂಶ್ ಸಿಂಗ್ (ವಿ.ಕೀ), ಆರ್‌ಎಸ್ ಅಂಬ್ರೀಶ್, ಕಾನಿಷ್ಕಾ ಚೌವ್ಹಾಣ್, ಖಿಲಮ್ ಎ ಪಟೇಲ್, ಮೊಹಮ್ಮದ್ ಎನಾನ್, ಹೆನಿಲ್ ಪಟೇಲ್, ದೀಪೇಶ್, ಕಿಶನ್ ಕುಮಾರ್ ಸಿಂಗ್, ಉಧವ್ ಮೋಹನ್, ಯುವರಾಜ್ ಗೋಹಿಲ್, ರಾಹುಲ್ ಕುಮಾರ್
2026ರ ಅಂಡರ್-19 ವಿಶ್ವಕಪ್ ಟೂರ್ನಿಯ ಭಾರತ ತಂಡ: ಆಯುಷ್ ಮ್ಹಾತ್ರೆ (ನಾಯಕ), ವಿಹಾನ್ ಮೆಲ್ಹೋತ್ರಾ (ಉಪ ನಾಯಕ), ವೈಭವ್ ಸೂರ್ಯವಂಶಿ, ಆರೋನ್ ಜಾರ್ಜ್, ವೇದಾಂತ್ ತ್ರಿವೇದಿ, ಅಭಿಜ್ಞಾನ್ ಕುಂಡು (ವಿ.ಕೀ), ಹಾರ್ವಂಶ್ ಸಿಂಗ್ (ವಿ.ಕೀ),ಆರ್‌ಎಸ್ ಅಂಬ್ರಿಶ್, ಕಾನಿಷ್ಕಾ ಚೌವ್ಹಾಣ್, ಖಿಲನ್ ಎ ಪಟೇಲ್, ಮೊಹಮ್ಮದ್ ಎನಾನ್, ಹೆನಿಲ್ ಪಟೇಲ್, ದೀಪೇಶ್, ಕಿಶನ್ ಕುಮಾರ್ ಸಿಂಗ್, ಉಧವ್ ಮೋಹನ್