ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2026: ಸತತ 5 ಅರ್ಧಶತಕಗಳ ಮೂಲಕ ವೀರೇಂದ್ರ ಸೆಹ್ವಾಗ್‌ ದಾಖಲೆ ಸರಿಗಟ್ಟಿದ ಸಾಯಿ ಸುದರ್ಶನ್‌!

IPL 2026: ಚೆನ್ನೈ ಸೂಪರ್‌ ಕಿಂಗ್ಸ್‌ ಎದುರಿನ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ತಂಡದ ಆರಂಭಿಕ ಸಾಯಿ ಸುದರ್ಶನ್‌ ಅವರು ಅರ್ಧಶತಕ ಬಾರಿಸಿದರು. ಆ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅಲ್ಲದೆ ದಿಗ್ಗಜ ವೀರೇಂದ್ರ ಸೆಹ್ವಾಗ್‌ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ.

ವೀರೇಂದ್ರ ಸೆಹ್ವಾಗ್‌ ದಾಖಲೆ ಸರಿಗಟ್ಟಿದ ಸಾಯಿ ಸುದರ್ಶನ್‌.

ಅಹಮದಾಬಾದ್‌: ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಪಂದ್ಯದಲ್ಲಿ (CSK vs GT) ಅರ್ಧಶತಕ ಬಾರಿಸಿದ ಗುಜರಾತ್‌ ಟೈಟನ್ಸ್‌ ತಂಡದ ಆರಂಭಿಕ ಸಾಯಿ ಸುದರ್ಶನ್‌ (Sai Sudarshan), ಭಾರತದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್‌ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ. ಐಪಿಎಲ್‌ ಟೂರ್ನಿಯಲ್ಲಿ ಸತತವಾಗಿ 5 ಅರ್ಧಶತಕಗಳನ್ನು ಸಿಡಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದಿದ್ದಾರೆ. ಸಿಎಸ್‌ಕೆ ಎದುರಿನ ಪಂದ್ಯದ 12ನೇ ಓವರ್‌ನಲ್ಲಿ ಸಿಂಗಲ್‌ ರನ್‌ ಪಡೆಯುವ ಮೂಲಕ ಸುದರ್ಶನ್‌ ಈ ಮೈಲುಗಲ್ಲು ತಲುಪಿದ್ದಾರೆ. ಸುದರ್ಶನ್‌ 35 ಎಸೆತಗಳಲ್ಲಿ ಅರ್ಧಶತಕವನ್ನು ಪೂರ್ಣಗೊಳಿಸಿದರು.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಗುಜರಾತ್‌ ಟೈಟನ್ಸ್‌ ಪರ ಇನಿಂಗ್ಸ್‌ ಆರಂಭಿಸಿದ ಸಾಯಿ ಸುದರ್ಶನ್‌, ಆಡಿದ 53 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 84 ರನ್‌ಗಳನ್ನು ಸಿಡಿಸಿದ್ದರು. ಅಲ್ಲದೆ, ಶುಭಮನ್‌ ಗಿಲ್‌ (64 ರನ್‌) ಜೊತೆಗೆ ಮೊದಲನೇ ವಿಕೆಟ್‌ಗೆ 125 ರನ್‌ಗಳ ಜೊತೆಯಾಟವನ್ನು ಆಡಿದ ಬಳಿಕ, ಜೋಸ್‌ ಬಟ್ಲರ್‌ ಅವರ ಜೊತೆಗೆ ಎರಡನೇ ವಿಕೆಟ್‌ಗೆ 82 ರನ್‌ಗಳ ಜೊತೆಯಾಟವನ್ನು ಆಡಿದರು. ಅಂತಿಮವಾಗಿ ಅವರು ಅನ್ಷುಲ್‌ ಕಾಂಬೋಜ್‌ಗೆ ವಿಕೆಟ್‌ ಒಪಿಸಿದರು.

RCB vs SRH: ಆರ್‌ಸಿಬಿ ಫ್ಯಾನ್ಸ್‌ಗೆ ಸಿಹಿ ಸುದ್ದಿ, ಹೈದರಾಬಾದ್‌ ಎದುರು ಆಡಲಿರುವ ರಜತ್‌ ಪಾಟಿದಾರ್‌!

ಸೆಹ್ವಾಗ್‌ ಒಳಗೊಂಡ ಎಲೈಟ್‌ ಲಿಸ್ಟ್‌ಗೆ ಸೇರಿದ ಸುದರ್ಶನ್‌

ವೀರೇಂದ್ರ ಸೆಹ್ವಾಗ್‌ ಬಳಿಕ ಐಪಿಎಲ್‌ ಟೂರ್ನಿಯಲ್ಲಿ ಸತತ ಐದು ಅರ್ಧಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌. ಅವರು 2012ರ ಐಪಿಎಲ್‌ ಟೂರ್ನಿಯಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ (ಈಗಿನ ಡೆಲ್ಲಿ ಕ್ಯಾಪಿಟಲ್ಸ್‌) ಪರ ಸತತ ಐದು ಅರ್ಧಶತಕಗಳನ್ನು ಬಾರಿಸಿದ್ದರು. ಸಾಯಿ ಸುದರ್ಶನ್‌ ಹಾಗೂ ಸೆಹ್ವಾಗ್‌ ಅವರ ಜೊತೆಗೆ ಡೇವಿಡ್‌ ವಾರ್ನರ್‌ ಹಾಗೂ ಜೋಸ್‌ ಬಟ್ಲರ್‌ ಈ ದಾಖಲೆಯನ್ನು ಬರೆದಿದ್ದಾರೆ.



2019ರ ಐಪಿಎಲ್‌ ಟೂರ್ನಿಯಲ್ಲಿ ಡೇವಿಡ್‌ ವಾರ್ನರ್‌, ಸನ್‌ರೈಸರ್ಸ್‌ ಹೈದರಬಾದ್‌ ಪರ ಸತತ ಐದು ಅರ್ಧಶತಕಗಳನ್ನು ಬಾರಿಸಿದ್ದರು. ಇನ್ನು ಜೋಸ್‌ ಬಟ್ಲರ್‌ 2018ರ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಆಡುವಾಗ ಸತತ ಐದು ಅರ್ಧಶತಕಗಳನ್ನು ಸಿಡಿಸಿ ದಾಖಲೆ ಬರೆದಿದ್ದರು.

ಐಪಿಎಲ್‌ ಟೂರ್ನಿಯಲ್ಲಿ ಸತತ 50 ರನ್‌ ಗಳಿಸಿದ ಬ್ಯಾಟರ್ಸ್‌

5 - ವೀರೇಂದ್ರ ಸೆಹ್ವಾಗ್ (2012)

5 - ಜೋಸ್ ಬಟ್ಲರ್ (2018)

5 - ಡೇವಿಡ್ ವಾರ್ನರ್ (2019)

5 - ಸಾಯಿ ಸುದರ್ಶನ್ (2026)

ಸಾಯಿ ಸುದರ್ಶನ್‌ ಅವರು ಪಂಜಾಬ್‌ ಕಿಂಗ್ಸ್‌ ವಿರುದ್ಧ 57, ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ 55, ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 61 ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಅಜೇಯ 53 ರನ್‌ಗಳ ಅದ್ಭುತ ಇನಿಂಗ್ಸ್‌ಗಳನ್ನು ಆಡಿದ್ದರು. ಇದೀಗ ಅಹಮದಾಬಾದ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ 84 ರನ್‌ಗಳನ್ನು ಬಾರಿಸಿದ್ದಾರೆ.