ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ರ (IPL 2026) ಸಾಲಿನ ಟೂರ್ನಿಯಲ್ಲಿ ಈಗಾಗಲೇ ಹಲವು ದಾಖಲೆಗಳನ್ನು ಬರೆದಿರುವ ರಾಜಸ್ಥಾನ್ ರಾಯಲ್ಸ್ ಯುವ ಆರಂಭಿಕ ವೈಭವ್ ಸೂರ್ಯವಂಶಿ (Vaibhav Sooryavanshi) ಇದೀಗ ಮತ್ತೊಂದು ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಅವರು ಇದೀಗ ಏಕೈಕ ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಪಂದ್ಯದಲ್ಲಿ (DC vs RR) ಅವರು ಈ ಸಾಧನೆಗೆ ಭಾಜನರಾಗಿದ್ದಾರೆ. ಅವರು ಈ ಟೂರ್ನಿಯಲ್ಲಿ ಆಡಿದ 12 ಇನಿಂಗ್ಸ್‌ಗಳಿಂದ 43 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
ಈ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ವೈಭವ್ ಸೂರ್ಯವಂಶಿ ಎಂದಿನಂತೆ ತಾವು ಎದುರಿಸಿದ ಮೊದಲನೇ ಎಸೆತದಲ್ಲಿಯೂ ಸ್ಪೋಟಕ ಬ್ಯಾಟ್ ಮಾಡಿದರು. ಅವರು ಆಡಿದ 21 ಎಸೆತಗಳಲ್ಲಿ ಮೂರು ಸಿಕ್ಸರ್‌ಗಳ ಮೂಲಕ 46 ರನ್ ಗಳಿಸಿ ಔಟ್ ಆದರು. ತಮ್ಮ ಈ ಮೂರು ಸಿಕ್ಸರ್‌ಗಳ ಮೂಲಕ ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ ಅವರ ದಾಖಲೆಯನ್ನು ಮುರಿದರು. ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟ್ಸ್‌ಮನ್ 2024ರ ಟೂರ್ನಿಯಲ್ಲಿ 42 ಸಿಕ್ಸರ್ ಬಾರಿಸಿದ್ದರು. ಇದೀಗ ಇವರು ಎರಡನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ( 39 ಸಿಕ್ಸರ್, 2024 ಮೂರನೇ ಸ್ಥಾನ ಹಾಗೂ ರಾಯಲ್ ಚಾಲೆಂಜರ್ಸ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (38 ಸಿಕ್ಸರ್, 2016) ನಾಲ್ಕನೇ ಸ್ಥಾನದಲ್ಲಿದ್ದಾರೆ.
RCB vs PBKS: ಪಂಜಾಬ್ ಕಿಂಗ್ಸ್ ಸೋಲುಣಿಸಿ ಪ್ಲೇಆಫ್ಸ್‌ಗೆ ಅರ್ಹತೆ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು!
ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಪ್ರದರ್ಶನ 2025ರ ಐಪಿಎಲ್ ಟೂರ್ನಿಯಲ್ಲಿನ ಅತ್ಯಂತ ಗಮನಾರ್ಹ ಸಂಗತಿಗಳನ್ನು ಒಂದಾಗಿತ್ತು.ಅವರ ಭಯ ಮುಕ್ತ ಬ್ಯಾಟಿಂಗ್ ಶೈಲಿ, ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭದಲ್ಲೇ ಆಕ್ರಮಣಕಾರಿ ಮುನ್ನಡೆ ಒದಗಿಸಿದ್ದು, ಟಾಪ್ ಆರ್ಡರ್‌ನಲ್ಲಿ ತಂಡದ ಆಟದ ಧೋರಣೆಯನ್ನೇ ಬದಲಿಸಿದೆ. ಕೇವಲ 15 ವರ್ಷದ ವಯಸ್ಸಿನಲ್ಲಿ ಅವರು ತೋರಿಸಿರುವ ಭರ್ಜರಿ ಸಿಕ್ಸರ್‌ಗಳ ಮಳೆ ಮತ್ತು ಆಕ್ರಮಣಕಾರಿ ಆಟದ ಕಾರಣದಿಂದಾಗಿ, ಐಪಿಎಲ್ ಇತಿಹಾಸದ ಅತ್ಯಂತ ಅಪಾಯಕಾರಿ ಹಿಟ್ಟರ್‌ಗಳೊಂದಿಗೆ ಅವರನ್ನು ಹೋಲಿಕೆ ಮಾಡಲಾಗುತ್ತಿದೆ.
ವೈಭವ್ ಬಗ್ಗೆ ಕುಮಾರ ಸಂಗಕ್ಕಾರ ಹೇಳಿದ್ದೇನು?
“ಅವರು ಚೆಂಡನ್ನು ಬಹಳ ಚೆನ್ನಾಗಿ ಹೊಡೆಯುತ್ತಿದ್ದಾರೆ ಮತ್ತು ನಮಗೆ ಬಹಳ ವೇಗದ ಆರಂಭಗಳನ್ನು ಒದಗಿಸುತ್ತಿದ್ದಾರೆ ಎಂದು ನನಗೆ ಅನಿಸುತ್ತದೆ,” ಎಂದು ಕುಮಾರ ಸಂಗಕ್ಕಾರ ಪಂದ್ಯದ ವೇಳೆ ಹೇಳಿದ್ದಾರೆ.
“ಅತ್ಯಂತ ಉತ್ಸಾಹಕರ ವಿಷಯವೆಂದರೆ ಅವರ ಬ್ಯಾಟಿಂಗ್‌ನತ್ತ ಇರುವ ದೃಷ್ಟಿಕೋನ. ಅವರು ಬ್ಯಾಟಿಂಗ್ ಅನ್ನು ನೋಡುತ್ತಿರುವ ರೀತಿ ನಿಜವಾಗಿಯೂ ಗಮನಾರ್ಹ. 15 ವರ್ಷದ ಹುಡುಗನಂತೆ, ನಾವು ಎಲ್ಲರೂ ನೋಡಬೇಕಾದ ರೀತಿಯಲ್ಲೇ ಅವರು ಅದನ್ನು ನೋಡುತ್ತಾರೆ. ಅವರಿಗೆ ಆಟದ ಮೇಲೆ ಪ್ರೀತಿ ಇದೆ. ಅವರು ದೀರ್ಘ ಸಮಯ ಬ್ಯಾಟಿಂಗ್ ಅಭ್ಯಾಸ ಮಾಡುತ್ತಾರೆ. ಅದೇ ಅತ್ಯಂತ ಮುಖ್ಯ ಮತ್ತು ಉತ್ಸಾಹಕರ ವಿಷಯ,” ಎಂದು ಅವರು ಶ್ಲಾಘಿಸಿದ್ದಾರೆ.
RCB vs PBKS: ʻಪವರ್‌ಪ್ಲೇನಲ್ಲಿಯೇ ನಾವು ಸೋತೆವುʼ-ಸೋಲಿನ ಬಳಿಕ ಶ್ರೇಯಸ್ ಅಯ್ಯರ್ ಬೇಸರ!
486 ರನ್ ಕಲೆ ಹಾಕಿರುವ ವೈಭವ್
ವೈಭವ್ ಸೂರ್ಯವಂಶಿ ಈ ಸೀಸನ್‌ನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದಾರೆ. ಅವರು ಇಲ್ಲಿಯವರೆಗೂ ಆಡಿದ 12 ಪಂದ್ಯಗಳಿಂದ 40.50ರ ಸರಾಸರಿ ಹಾಗೂ 234.78ರ ಸ್ಟ್ರೈಕ್ ರೇಟ್‌ನಲ್ಲಿ 486 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಅವರು ಒಂದು ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ಈ ಸೀಸನ್‌ನಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಸಾನಲ್ಲಿ ಆರನೇ ಸ್ಥಾನದಲ್ಲಿದ್ದಾರೆ.