ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

WPL 2026: ಯುಪಿ ವಾರಿಯರ್ಸ್‌ ಎದುರು ಗೆದ್ದು ಎಲಿಮಿನೇಟರ್‌ಗೆ ಅರ್ಹತೆ ಪಡೆದ ಡೆಲ್ಲಿ ಕ್ಯಾಪಿಟಲ್ಸ್!

DCW vs UPW Match Highlights: ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ಎದುರು 5 ವಿಕೆಟ್‌ ಗೆಲುವು ಪಡೆಯಿತು. ಆ ಮೂಲಕ 2026ರ ಮಹಿಳಾ ಪ್ರೀಮಿಯರ್‌ ಲೀಗ್‌ ಟೂರ್ನಿಯ ಎಲಿಮಿನೇಟರ್‌ ಪಂದ್ಯಕ್ಕೆ ಅರ್ಹತೆ ಪಡೆಯಿತು.

ಯುಪಿ ಎದುರು ಗೆದ್ದು ಎಲಿಮಿನೇಟರ್‌ಗೆ ಡೆಲ್ಲಿ ಅರ್ಹತೆ ಪಡೆಯಿತು.

ವಡೋದರ: ಮಾರಿಜಾನ್‌ ಕಾಪ್‌ (Marizanne Kapp) ಮಾರಕ ಬೌಲಿಂಗ್‌ ಹಾಗೂ ಶ್ರೀಚರಣಿ ಸ್ಪಿನ್‌ ಮೋಡಿಯ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್‌ (Delhi capitals) ತಂಡ, ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ವಿರುದ್ಧ 5 ವಿಕೆಟ್‌ ಗೆಲುವು ದಾಖಲಿಸಿತು. ಆ ಮೂಲಕ 2026ರ ಮಹಿಳಾ ಪ್ರೀಮಿಯರ್‌ ಲೀಗ್‌ (WPL 2026) ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೇರುವ ಮೂಲಕ ಎಲಿಮಿನೇಟರ್‌ ಪಂದ್ಯಕ್ಕೆ ಅಧಿಕೃತವಾಗಿ ಅರ್ಹತೆ ಪಡೆಯಿತು. ಇದರ ಪರಿಣಾಮವಾಗಿ ಆರು ಅಂಕಗಳನ್ನು ಕಲೆ ಹಾಕಿದ್ದ ಮುಂಬೈ ಇಂಡಿಯನ್ಸ್‌ ಹಾಗೂ ಕೊನೆಯ ಸ್ಥಾನಕ್ಕೆ ಕುಸಿದಿರುವ ಯುಪಿ ವಾರಿಯರ್ಸ್‌ ಟೂರ್ನಿಯಲ್ಲಿ ತಮ್ಮ ಅಭಿಯಾನವನ್ನು ಮುಗಿಸಿದವು.

ಭಾನುವಾರ ಇಲ್ಲಿನ ಬಿಸಿಎ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್‌ ನೀಡಿದ್ದ 123 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಲಾರಾ ವಾಲ್ವಾರ್ಡ್‌ ಹಾಗೂ ಜೆಮಿಮಾ ರೊಡ್ರಿಗಸ್‌ ಅವರ ಬ್ಯಾಟಿಂಗ್‌ ಬಲದಿಂದ 18.4 ಓವರ್‌ಗಳಿಗೆ 5 ವಿಕೆಟ್‌ ನಷ್ಟಕ್ಕೆ 126 ರನ್‌ ಗಳಿಸಿ ಗೆದ್ದು ಬೀಗಿತು. ಆ ಮೂಲಕ ಪೆಬ್ರವರಿ 3 ರಂದು ಇದೇ ಅಂಗಣದಲ್ಲಿ ನಡೆಯುವ ಎಲಿಮಿನೇಟರ್‌ ಪಂದ್ಯದಲ್ಲಿ ಎರಡನೇ ಸ್ಥಾನದಲ್ಲಿರುವ ಗುಜರಾತ್‌ ಜಯಂಟ್ಸ್‌ ವಿರುದ್ಧ ಡೆಲ್ಲಿ ತಂಡ ಕಾದಾಟ ನಡೆಸಲಿದೆ.

ICC T20 World Cup 2026: ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ ಪಾಕಿಸ್ತಾನ!

ಲಿಝೆಲ್‌ ಲೀ 10 ರನ್‌ ಗಳಿಸಿ ಬೇಗ ಔಟ್‌ ಆದರು. ಆದರೆ, ಶಫಾಲಿ ವರ್ಮಾ ತಮ್ಮ ಶೈಲಿಯ 29 ರನ್‌ ಗಳಿಸಿ ವಿಕೆಟ್‌ ಒಪ್ಪಸಿದರು. ಆದರೆ, ಶಫಾಲಿ ಹಾಗೂ ಲಾರಾ ವಾಲ್ವಾರ್ಡ್‌ ಎರಡನೇ ವಿಕೆಟ್‌ಗೆ 72 ರನ್‌ಗಳ ಜೊತೆಯಾಟವನ್ನು ಆಡಿ ತಂಡವನ್ನು ಬಹುತೇಕ ಗೆಲುವಿನ ಹಾದಿಗೆ ತಂದಿದ್ದರು. ಅತ್ಯುತ್ತಮ ಬ್ಯಾಟ್‌ ಮಾಡಿದ ಲಾರಾ, 36 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 47 ರನ್‌ಗಳನ್ನು ಬಾರಿಸಿ ಔಟ್‌ ಆದರು.



ಆದರೆ, ಕೊನೆಯವೆರೆಗೂ ಬ್ಯಾಟ್‌ ಮಾಡಿದ ನಾಯಕಿ ಜೆಮಿಮಾ ರೊಡ್ರಿಗಸ್‌ ಅವರು ಕೇವಲ 18 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ ಅಜೇಯ 34 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಯುಪಿ ವಾರಿಯರ್ಸ್‌ ಪರ ದೀಪ್ತಿ ಶರ್ಮಾ ತಲಾ ಎರಡು ವಿಕೆಟ್‌ ಪಡೆದರು.



122 ರನ್‌ ಕಲೆ ಹಾಕಿದ್ದ ಯುಪಿ ವಾರಿಯರ್ಸ್

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಯುಪಿ ವಾರಿಯರ್ಸ್‌ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತ್ತು. ಮಾರಿಜಾನ್‌ ಕಾಪ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿದ್ದ ಯುಪಿ ತಂಡ, 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 8 ವಿಕೆಟ್‌ಗಳ ನಷ್ಟಕ್ಕೆ 122 ರನ್‌ಗಳಿಗೆ ಸೀಮಿತವಾಗಿತ್ತು. ಆ ಮೂಲಕ ಡೆಲ್ಲಿಗೆ 123 ರನ್‌ಗಳ ಸಾಧಾರಣ ಗುರಿಯನ್ನು ನೀಡಿತ್ತು. ಯುಪಿ ಪರ ದೀಪ್ತಿ ಶರ್ಮಾ 24, ಸಿಮ್ರಾನ್‌ ಶೇಖ್‌ 22 ರನ್‌ ಹಾಗೂ ಶಿಖಾ ಪಾಂಡೆ ಅಜೇಯ 23 ರನ್‌ ಗಳಿಸಿದ್ದರು.

ಡೆಲ್ಲಿ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ಮಾರಿಜಾನ್‌ ಕಾಪ್‌ ಮೂರು ವಿಕೆಟ್‌ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಚಿನೆಲ್‌ ಹೆನ್ರಿ ಮತ್ತು ಶ್ರೀ ಚರಣಿ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.