ನವದೆಹಲಿ: ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ (IND vs SL) ಅದ್ಭುತವಾಗಿ ಬ್ಯಾಟ್ ಮಾಡಿದ್ದ ಭಾರತ ತಂಡದ ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ (Devdutt Padikkal) ಅವರನ್ನು ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ಕಾಮೆಂಟೇಟರ್ ದೀಪ್ ದಾಸ್‌ಗುಪ್ತಾ (Deep Dasgupta) ಮುಕ್ತಕಂಠದಿಂದ ಗುಣಗಾಣ ಮಾಡಿದಾರೆ. ನ್ಯೂಜಿಲೆಂಡ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಲ್ಲಿಯೂ ದೇವದತ್ ಪಡಿಕ್ಕಲ್ ಅವರನ್ನೇ ಮೂರನೇ ಕ್ರಮಾಂಕದಲ್ಲಿ ಮುಂದುವರಿಸಬೇಕೆಂದು ದಾಸ್‌ಗುಪ್ತಾ ಆಗ್ರಹಿಸಿದ್ದಾರೆ.
ಅಂದ ಹಾಗೆ ಭಾರತ ಟೆಸ್ಟ್ ತಂಡದಲ್ಲಿ ಮೂರನೇ ಕ್ರಮಾಂಕಕ್ಕೆ ಸಾಯಿ ಸುದರ್ಶನ್ ಅವರೇ ಮೊದಲ ಆಯ್ಕೆಯಾಗಿತ್ತು. ಆದರೆ, ಶ್ರೀಲಂಕಾ ಟೆಸ್ಟ್ ಸರಣಿಗೂ ಮುನ್ನ ಗಾಯದಿಂದ ಸಂಪೂರ್ಣವಾಗಿ ಗುಣಮುಖರಾಗುವಲ್ಲಿ ವಿಫಲರಾದ ಕಾರಣ ಸಾಯಿ ಸುದರ್ಶನ್ ಅವರು ಹೊರ ನಡೆದಿದ್ದರು. ಈ ಹಿನ್ನೆಲೆಯಲ್ಲಿ ದೇವದತ್ ಪಡಿಕ್ಕಲ್‌ಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಅವಕಾಶ ಲಭಿಸಿತ್ತು.
ಅದರಂತೆ ಸಿಕ್ಕ ಅವಕಾಶವನ್ನು ಕನ್ನಡಿಗ ಪಡಿಕ್ಕಲ್ ಸದುಪಯೋಗಪಡಿಸಿಕೊಂಡರು. ದೇವದತ್ ಪಡಿಕ್ಕಲ್ ಈ ಸರಣಿಯ ಆರಂಭಿಕ ಪಂದ್ಯದಲ್ಲಿ 167 ರನ್ ಹಾಗೂ 44 ರನ್‌ಗಳನ್ನ ಕಲೆ ಹಾಕಿದ್ದರು. ನಂತರ ಎರಡನೇ ಟೆಸ್ಟ್ ಪಂದ್ಯದಲ್ಲಿ ಶತಕವನ್ನು ಬಾರಿಸಿದ್ದರು. ಆ ಮೂಲಕ ಭಾರತ ತಂಡ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಮುಡಿಗೇರಿಸಿಕೊಳ್ಳಲು ನೆರವು ನೀಡಿದ್ದರು ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ 4 ದಿನಗಳ 3 ಪಂದ್ಯಗಳನ್ನು ಆಡಲಿರುವ ಭಾರತ ಎ!
ಭಾರತದ ಮೂರನೇ ಕ್ರಮಾಂಕಕ್ಕೆ ದೇವದತ್ ಪಡಿಕ್ಕಲ್
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ ದೀಪ್ ದಾಸ್‌ಗುಪ್ತಾ, "ಒಂದರಿಂದ ಒಂದೂವರೆ ವರ್ಷದಿಂದ ದೇವದತ್ ಪಡಿಕ್ಕಲ್ ತುಂಬಾ ವಿಭಿನ್ನವಾಗಿ ಕಾಣುತ್ತಿದ್ದಾರೆ. ಅವರು ತಮ್ಮ ಆಟದ ಮೇಲೆ ತುಂಬಾ ಕೆಲಸ ಮಾಡಿದ್ದಾರೆ. ಅವರ ಫುಟ್‌ವರ್ಕ್ ತುಂಬಾ ಬೆಳವಣಿಗೆ ಸಾಧಿಸಿದೆ. ಅವರು ಮೂಲಭೂತ ಆಟದಲ್ಲಿಯೂ ತುಂಬಾ ಬದಲಾವವಣೆಯನ್ನು ಕಾಣಬಹುದು ಹಾಗೂ ಇದು ಸಕಾರಾತ್ಮವಾಗಿ ಕೂಡಿದೆ," ಎಂದು ಹೇಳಿದ್ದಾರೆ.
"ನ್ಯೂಜಿಲೆಂಡ್ ವಿರುದ್ಧದ ಮುಂದಿನ ಟೆಸ್ಟ್ ಸರಣಿಯಲ್ಲಿ ದೇವದತ್ ಪಡಿಕ್ಕಲ್ ನಿಮಗೆ ಮೂರನೇ ಕ್ರಮಾಂಕಕ್ಕೆ ಮೊದಲ ಆಯ್ಕೆಯ ಬ್ಯಾಟರ್ ಅಲ್ಲ ಎನ್ನುವುದಾದರೆ ನಿಮಗೆ ಬುದ್ದಿ ಇಲ್ಲವೆಂದು ಅರ್ಥ. ಸಾಯಿ ಸುದರ್ಶನ್ ಅವರು ಕಾಯಬೇಕಾಗುತ್ತದೆ. ಪಡಿಕ್ಕಲ್ ತಮ್ಮ ಅವಕಾಶವನ್ನು ಪಡೆದಿದ್ದಾರೆ ಹಾಗೂ ಅದಕ್ಕೆ ತಕ್ಕಂತೆ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಹಾಗಾಗಿ ಅವರು ಮೂರನೇ ಕ್ರಮಾಂಕದಲ್ಲಿ ಆಡಬೇಕು," ಎಂದು ದಾಸ್‌ಗುಪ್ತಾ ತಿಳಿಸಿದ್ದಾರೆ.
Duleep Trphy 2026: ಕೇಂದ್ರ ವಲಯವನ್ನು ಮಣಿಸಿ ಫೈನಲ್‌ಗೇರಿದ ಪೂರ್ವ ವಲಯ!
ನ್ಯೂಜಿಲೆಂಡ್ ಟೆಸ್ಟ್ ಸರಣಿ ಯಾವಾಗ?
ಈ ವರ್ಷದ ಕೊನೆಯಲ್ಲಿ ಭಾರತ ತಂಡ, ನ್ಯೂಜಿಲೆಂಡ್ ಪ್ರವಾಸದಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ನವೆಂಬರ್ 19 ರಿಂದ 23ರವರೆಗೆ ವೆಲ್ಲಿಂಗ್ಟನ್‌ನಲ್ಲಿ ಮೊದಲನೇ ಟೆಸ್ಟ್ ಹಾಗೂ ನವೆಂಬರ್ 27 ರಿಂದ ಡಿಸೆಂಬರ್ 1ರವರೆಗೆ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.
2027ರ ಆರಂಭದಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಎದುರು ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಜನವರಿ 21 ರಿಂದ 25ರವರಗೆ ನಾಗ್ಪುರದಲ್ಲಿ ಮೊದಲನೇ ಟೆಸ್ಟ್ ಹಾಗೂ ಐದು ಹಾಗೂ ಕೊನೆಯ ಟೆಸ್ಟ್ ಪಂದ್ಯ ಫೆಬ್ರವರಿ 27 ರಿಂದ ಮಾರ್ಚ್ 3ರವರೆಗೆ ನಡೆಯಲಿದೆ.