ಕರ್ನಾಟಕ ಜೂನಿಯರ್ ತಂಡಕ್ಕೆ ರಾಹುಲ್ ದ್ರಾವಿಡ್‌ರ ಕಿರಿಯ ಪುತ್ರ ಅನ್ವಯ್ ನಾಯಕ!
2025ರ ವಿನೋ ಮಂಕಡ್ ಟ್ರೋಫಿ ಟೂರ್ನಿಯ ಕರ್ನಾಟಕ ಅಂಡರ್-19 ತಂಡಕ್ಕೆ ಭಾರತೀಯ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್‌ಗೆ ನಾಯಕತ್ವವನ್ನು ನೀಡಲಾಗಿದೆ. ಅನ್ವಯ್ ಅಪ್ಪನಂತೆ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿದ್ದಾರೆ. ದೊಡ್ಡ ಮಗ ಸಮಿತ್ ಅವರು ಆಲ್‌ರೌಂಡರ್ ಆಗಿದ್ದಾರೆ.

ರಾಹುಲ್ ದ್ರಾವಿಡ್ ಪುತ್ರ ಕರ್ನಾಟಕ ಕಿರಿಯರ ತಂಡಕ್ಕೆ ನಾಯಕ. -

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ (Anvay Dravid) ಕರ್ನಾಟಕ ಕಿರಿಯರ ತಂಡದ ನಾಯಕತ್ವವನ್ನು ಅಲಂಕರಿಸಿದ್ದಾರೆ. 2025ರ ವಿನೋ ಮಂಕಡ್ ಟ್ರೋಫಿ ಟೂರ್ನಿಯಲ್ಲಿ 19ರ ವಯೋಮಿತಿಯ ಕರ್ನಾಟಕ (Karnataka U-19 team) ತಂಡವನ್ನು ಅನ್ವಯ್ ಮುನ್ನಡೆಸಲಿದ್ದಾರೆ. ಆ ಮೂಲಕ ತಮ್ಮ ತಂದೆಯ ಹಾದಿಯನ್ನು ಕಿರಿಯ ಪುತ್ರ ತುಳಿದಿದ್ದಾರೆ. ದ್ರಾವಿಡ್ ಅವರ ಇಬ್ಬರೂ ಗಂಡು ಮಕ್ಕಳು ಕ್ರಿಕೆಟಿಗರು. ದೊಡ್ಡ ಮಗ ಸಮಿತ್ ಈಗಾಗಲೇ ಭಾರತ ಅಂಡರ್-19 ತಂಡದ ಪರ ಆಡಿದ್ದಾರೆ. ಅವರು ಬ್ಯಾಟಿಂಗ್ ಆಲ್‌ರೌಂಡರ್ ಆಗಿದ್ದಾರೆ. ಆದರೆ, ಅನ್ವಯ್ ತಮ್ಮ ತಂದೆಯಂತೆ ವಿಕೆಟ್ ಕೀಪರ್ -ಬ್ಯಾಟ್ಸ್‌ಮನ್ ಆಗಿದ್ದಾರೆ.
2024ರಲ್ಲಿ ಅನ್ವಯ್ ದ್ರಾವಿಡ್ ಅಂಡರ್-16 ಕರ್ನಾಟಕ ತಂಡದ ಪರ ಆಡಿದ್ದರು ಹಾಗೂ ಅವರು 6 ಪಂದ್ಯಗಳ 8 ಇನಿಂಗ್ಸ್‌ಗಳಿಂದ 459 ರನ್‌ಗಳನ್ನು ಕಲೆ ಹಾಕಿದ್ದರು. ಇದರ ಫಲವಾಗಿ ಅವರನ್ನು ಕರ್ನಾಟಕ ಅಂಡರ್-19 ತಂಡದ ನಾಯಕತ್ವವನ್ನು ನೀಡಲಾಗಿದೆ.
IND vs AUS: ರವೀಂದ್ರ ಜಡೇಜಾರ ಏಕದಿನ ವೃತ್ತಿ ಜೀವನ ಅಂತ್ಯ? ಎಬಿಡಿ ಹೇಳಿದ್ದಿದು!
ವಿನೋ ಮಂಕಡ್ ಟ್ರೋಫಿ ಟೂರ್ನಿಗೆ ಕರ್ನಾಟಕ ಅಂಡರ್-19 ತಂಡ: ಅನ್ವಯ್ ದ್ರಾವಿಡ್ (ನಾಯಕ), ನಿತೀಶ್ ಆರ್ಯ, ಆದರ್ಶ್ ಡಿ, ಎಸ್ ಮಣಿಕಂಠ, ಪ್ರಣೀತ್ ಶೆಟ್ಟಿ, ವಾಸವ್ ವೆಂಕಟೇಶ್, ಅಕ್ಷತ್ ಪ್ರಭಾಕರ್, ಸಿ ವೈಭವ್, ಕುಲ್ದೀಪ್ ಸಿಂಗ್ ಪುರೋಹಿತ್, ರತನ್ ಬಿಆರ್, ವೈಭವ್ ಶರ್ಮಾ, ಕೆಎ ತೇಜಸ್, ಅಥರ್ವ್ ಮಾಲ್ವಿಯಾ, ಸನ್ನಿ ಕಾಂಚಿ, ರೆಹಾನ್ ಮೊಹಮ್ಮದ್
ಕರ್ನಾಟಕ ರಣಜಿ ತಂಡಕ್ಕೆ ಮಯಾಂಕ್ ಅಗರ್ವಾಲ್ ನಾಯಕ
ಮುಂಬರುವ ರಣಜಿ ಟ್ರೋಫಿ ಟೂರ್ನಿಯ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಕರ್ನಾಟಕ ತಂಡಕ್ಕೆ ಮಯಾಂಕ್ ಅಗರ್ವಾಲ್‌ಗೆ ನಾಯಕತ್ವವನ್ನು ನೀಡಲಾಗಿದೆ. ಕಳೆದ ಕೆಲ ವರ್ಷಗಳಿಂದ ಮಯಾಂಕ್ ಅಗರ್ವಾಲ್ ಅವರು ರಾಷ್ಟ್ರೀಯ ತಂಡದಿಂದ ದೂರ ಉಳಿದಿದ್ದಾರೆ. ಕಳೆದ ಬಾರಿ ವಿದರ್ಭ ತಂಡದ ಪರ ಆಡಿದ್ದ ಕನ್ನಡಿಗ ಕರುಣ್ ನಾಯರ್ ಭಾರತ ತಂಡದಿಂದ ಹೊರ ಬಂದ ಬಳಿಕ ಕರ್ನಾಟಕ ತಂಡಕ್ಕೆ ಮರಳಿದ್ದಾರೆ. ಅವರು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನವನ್ನು ತೋರಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
IND vs AUS: ಯಶಸ್ವಿ ಜೈಸ್ವಾಲ್ ಔಟ್, ಆಸ್ಟ್ರೇಲಿಯಾ ಏಕದಿನ ಸರಣಿಗೆ ಭಾರತದ ಬಲಿಷ್ಠ ಪ್ಲೇಯಿಂಗ್ XI
ವೆಸ್ಟ್ ಇಂಡೀಸ್ ಸರಣಿಯ ಭಾರತ ತಂಡದಿಂದ ಕರುಣ್ ನಾಯರ್ ಅವರನ್ನು ಕೈಬಿಡಲಾಯಿತು ಮತ್ತು ಭಾರತ ಎ ತಂಡದಲ್ಲೂ ಅವರನ್ನು ಸೇರಿಸಲಾಗಿಲ್ಲ. ಕರ್ನಾಟಕ ತಂಡದಲ್ಲಿ ಶ್ರೇಯಸ್ ಗೋಪಾಲ್, ವೈಶಾಖ್ ವಿಜಯ್‌ಕುಮಾರ್ ಮತ್ತು ಅಭಿನವ್ ಮನೋಹರ್ ಸೇರಿದಂತೆ ಇತರರು ಇದ್ದಾರೆ. ವಿಜಯ್‌ಕುಮಾರ್ ಟಿ20ಐ ತಂಡದ ಭಾಗವಾಗಿದ್ದಾರೆ ಆದರೆ ಅವರಿಗೆ ಯಾವುದೇ ಸ್ಥಾನ ನೀಡಲಾಗಿಲ್ಲ.
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ಕರುಣ್ ನಾಯರ್, ಆರ್ ಸ್ಮರಣ್, ಕೆಎಲ್ ಶ್ರೀಜಿತ್, ಶ್ರೇಯಸ್ ಗೋಪಾಲ್, ವೈಶಾಕ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ಎಂ ವೆಂಕಟೇಶ್, ನಿಕಿನ್ ಜೋಸ್, ಅಭಿನವ್ ಮನೋಹರ್, ಕೃತಿಕ್ ಕೃಷ್ಣ, ಕೆವಿ ಅನೀಶ್, ಮೊಹ್ಸಿನ್ ಶೆಟ್ಟಿ, ಶಿಖರ್ ಶೆಟ್ಟಿ