ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅ.7ರಿಂದ ಕೆಜಿಎಯಲ್ಲಿ ಬೆಂಗಳೂರು ಓಪನ್ 2025 ಪವರ್ಡ್ ಬೈ ಇಂಡಿಯನ್ ಆಯಿಲ್ ಟೂರ್ನಮೆಂಟ್ ಪ್ರಾರಂಭ

ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ನಲ್ಲಿ ಅಕ್ಟೋಬರ್ 7-10ರವರೆಗೆ ಬೆಂಗಳೂರು ಓಪನ್ 2025 ಪವರ್ಡ್ ಬೈ ಇಂಡಿಯನ್ ಆಯಿಲ್ ಟೂರ್ನಮೆಂಟ್ ನಡೆಯಲಿದೆ. ಈ ಟೂರ್ನ ಮೆಂಟ್ 1 ಕೋಟಿ ರೂ. ಬಹುಮಾನದ ಮೊತ್ತ ಹೊಂದಿದೆ. ಪ್ರೊ-ಆಮ್ ಕಾರ್ಯಕ್ರಮವನ್ನು ಅಕ್ಟೋಬರ್ 11ರಂದು ಆಡಲಾ ಗುತ್ತದೆ.

ಅ.7ರಿಂದ ಪವರ್ಡ್ ಬೈ ಇಂಡಿಯನ್ ಆಯಿಲ್ ಟೂರ್ನಮೆಂಟ್ ಪ್ರಾರಂಭ

-

Ashok Nayak Ashok Nayak Oct 6, 2025 11:43 PM

ಬೆಂಗಳೂರು: ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ನಲ್ಲಿ ಅಕ್ಟೋಬರ್ 7-10ರವರೆಗೆ ಬೆಂಗಳೂರು ಓಪನ್ 2025 ಪವರ್ಡ್ ಬೈ ಇಂಡಿಯನ್ ಆಯಿಲ್ ಟೂರ್ನಮೆಂಟ್ ನಡೆಯಲಿದೆ. ಈ ಟೂರ್ನ ಮೆಂಟ್ 1 ಕೋಟಿ ರೂ. ಬಹುಮಾನದ ಮೊತ್ತ ಹೊಂದಿದೆ. ಪ್ರೊ-ಆಮ್ ಕಾರ್ಯಕ್ರಮವನ್ನು ಅಕ್ಟೋಬರ್ 11ರಂದು ಆಡಲಾಗುತ್ತದೆ.

ಆರು ವರ್ಷಗಳ ಅಂತರದ ಬಳಿಕೆ ಹಿಂದಿರುಗಿರುವ ಬೆಂಗಳೂರು ಓಪನ್ ಗೆ ಇಂಡಿಯನ್ ಆಯಿಲ್ ಪಾರ್ಟ್ನರ್ ಮತ್ತು ಬ್ರಿಟಾನಿಯಾ ಅಸೋಸಿಯೇಟ್ ಪಾರ್ಟ್ನರ್ ಆಗಿವೆ.

ಈ ಕಾರ್ಯಕ್ರಮದಲ್ಲಿ 126 ಗಾಲ್ಫರ್ ಗಳಿದ್ದು ಅವರಲ್ಲಿ 124 ವೃತ್ತಿಪರರು ಮತ್ತು ಇಬ್ಬರು ಹವ್ಯಾಸಿಗಳಿದ್ದಾರೆ. ಭಾರತದ ಮುಂಚೂಣಿಯ ವೃತ್ತಿಪರರಲ್ಲಿ ಅರ್ಜುನ್ ಪ್ರಸಾದ್ (ಪ್ರಸ್ತುತ ಪಿಜಿಟಿಐ ಆರ್ಡರ್ ಆ‍ಫ್ ಮೆರಿಟ್ ನಲ್ಲಿ ನಂ.2), ಶೌರ್ಯ ಭಟ್ಟಾಚಾರ್ಯ, ಉದಯನ್ ಮಾನೆ, ಅಂಗದ್ ಖೀಮಾ, ರಕ್ಷಣಾತ್ಮಕ ಚಾಂಪಿಯನ್ ಅಭಿನವ್ ಲೋಹನ್ ಮತ್ತು ವಿರಾಜ್ ಮಾದಪ್ಪ ಮುಂತಾದವರಿದ್ದಾರೆ.

ಇದನ್ನೂ ಓದಿ: Bangalore News: ಹಾಸನ ಕುರುಬರ ಸಂಘದ ಮಾಜಿ ಅಧ್ಯಕ್ಷ ಪಟೇಲ್ ಶಿವಪ್ಪರನ್ನು ಹುಡಾ ಅಧ್ಯಕ್ಷ ಹುದ್ದೆಗೆ ನೇಮಿಸಬಾರದು: ಡಾ. ಶ್ರೀನಾಥ್ ಚೌಡಪ್ಪ ಒತ್ತಾಯ

ಸ್ಥಳೀಯ ಚಾಲೆಂಜ್ ನೇತೃತ್ವವನ್ನು ಬೆಂಗಳೂರಿನ ರಹಿಲ್ ಗಂಗ್ಜೀ, ಖಲಿನ್ ಜೋಷಿ, ಚಿಕ್ಕರಂಗಪ್ಪ ಎಸ್., ಅಕ್ಷಯ್ ನೆರಂಜನ್, ಮನೋಜ್ ಎಸ್., ಮಾರಿಮುತ್ತು ಆರ್. ಮತ್ತು ವರುಣ್ ಮುತ್ತಪ್ಪ ವಹಿಸುತ್ತಾರೆ. ತನಿಷ್ ಆರ್. ಗೌಡ ಮತ್ತು ಸಿದ್ಧಾರ್ಥ್ ಪರುಥಿ ಹವ್ಯಾಸಿಗಳಾಗಿದ್ದಾರೆ.

ಇಂಡಿಯನ್ ಆಯಿಲ್ ಅಧ್ಯಕ್ಷ ಶ್ರೀ ಎ.ಎಸ್.ಸಾಹ್ನೀ, “ಇಂಡಿಯನ್ ಆಯಿಲ್ ಗಾಲ್ಫಿಂಗ್ ಶ್ರೇಷ್ಠತೆ ಮತ್ತು ಕ್ರೀಡಾತನಕ್ಕೆ ಮುಂಚೂಣಿಯ ವೇದಿಕೆಯಾದ ಬೆಂಗಳೂರು ಓಪನ್ 2025 ಗಾಲ್ಫ್ ಚಾಂಪಿ ಯನ್ ಶಿಪ್ ಆಯೋಜಿಸಲು ಹೆಮ್ಮೆ ಪಡುತ್ತದೆ. ನಾವು ಅದರ ದೊಡ್ಡ ಯಶಸ್ಸಿಗೆ ಹಾರೈಸುತ್ತೇವೆ” ಎಂದರು.

ಕೆಜಿಎ ಅಧ್ಯಕ್ಷ ಶ್ರೀ ಅದಿತ್ ಕುಮಾರ್ ಭಂಡಾರಿ, “ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಪ್ರತಿಷ್ಠಿತ ಗಾಲ್ಫ್ ಟೂರ್ ಆಫ್ ಇಂಡಿಯಾ ಪ್ರೊ ಚಾಂಪಿಯನ್ ಶಿಪ್- ಬೆಂಗಳೂರು ಓಪನ್ 2025 ಅನ್ನು ನಮ್ಮ ಪ್ರತಿಷ್ಠಿತ ಗಾಲ್ಫ್ ಕೋರ್ಸ್ ನಲ್ಲಿ ಆಯೋಜಿಸುವುದು ಮಹತ್ತರ ಹೆಮ್ಮೆ ಮತ್ತು ಗೌರವ ವಾಗಿದೆ. ಎರಡು ವರ್ಷಗಳ ನಂತರ ಪಿಜಿಟಿಐ, ಕೆಜಿಎಗೆ ಹಿಂದಿರುಗಿರುವುದು ಮತ್ತು ಆರು ವರ್ಷಗಳ ನಂತರ ಬೆಂಗಳೂರು ಓಪನ್ ನಮ್ಮ ಗಾಲ್ಫ್ ಕೋರ್ಸ್ ಗೆ ಹಿಂದಿರುಗಿರುವುದು ನಮಗೆಲ್ಲರಿಗೂ ಸಂಭ್ರಮಾಚರಣೆಯಾಗಿದೆ” ಎಂದರು.

“ಈ ವರ್ಷ ಭಾರತದಾದ್ಯಂತ ಹಾಗೂ ಶ್ರೀಲಂಕಾ, ಬಾಂಗ್ಲಾದೇಶ, ನೇಪಾಳ, ಇಟಲಿ, ಯು.ಎಸ್.ಎ .ಗಳಿಂದ ಆಟಗಾರರು ಭಾಗವಹಿಸಲಿದ್ದಾರೆ. ಕೆಜಿಎಯಲ್ಲಿ ನಾವು ಈ ಕ್ರೀಡೆಗೆ ಅತ್ಯುತ್ತಮ ಆಟದ ಪರಿಸ್ಥಿತಿಗಳನ್ನು ಸೃಷ್ಟಿಸಲು ಶ್ರಮಿಸುತ್ತೇವೆ” ಎಂದರು.

ಪಿಜಿಟಿಐ ಸಿಒ ಶ್ರೀ ಅಮನ್ ದೀಪ್ ಜೋಹ್ಲ್, “ಇಂಡಿಯನ್ ಆಯಿಲ್ ಮತ್ತು ಸಹ ಪಾಲುದಾರರಾದ ಬ್ರಿಟಾನಿಯಾಗೆ ಬೆಂಗಳೂರು ಓಪನ್ ಗೆ ಬೆಂಬಲಿಸುತ್ತಿರುವುದಕ್ಕೆ ನಾವು ಆಭಾರಿಯಾಗಿದ್ದೇವೆ. ಇಂಡಿಯನ್ ಆಯಿಲ್ ತನ್ನ ವೃತ್ತಿಪರ ಗಾಲ್ಫ್ ಕಾರ್ಯಕ್ರಮದ 25 ವರ್ಷಗಳ ಸಂಭ್ರಮಾಚರಣೆ ನಡೆಸಲಿದ್ದು ಇದು ಭಾರತದಲ್ಲಿ ವೃತ್ತಿಪರ ಗಾಲ್ಫ್ ಉನ್ನತೀಕರಣಕ್ಕೆ ನಮ್ಮ ಬದ್ಧತೆಯನ್ನು ತೋರಿದೆ” ಎಂದರು.