ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs SL: ಚೊಚ್ಚಲ ಶತಕ ಸಿಡಿಸಿ ಮೂರು ದಾಖಲೆಗಳನ್ನು ಬರೆದ ದೇವದತ್‌ ಪಡಿಕ್ಕಲ್‌!

ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಶತಕ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಶತಕದೊಂದಿಗೆ ಅವರು ಮೂರು ಪ್ರಮುಖ ದಾಖಲೆಗಳನ್ನು ಕೂಡ ಬರೆದಿದ್ದಾರೆ. ಈ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಪಡಿಕ್ಕಲ್‌, 178 ಎಸೆತಗಳಲ್ಲಿ 131 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಚೊಚ್ಚಲ ಶತಕ ಸಿಡಿಸಿ 3 ದಾಖಲೆ ಬರೆದ ದೇವದತ್‌ ಪಡಿಕ್ಕಲ್‌.

ಗಾಲೆ: ಶ್ರೀಲಂಕಾ ವಿರುದ್ಧ ಇಲ್ಲಿನ ಗಾಲೆ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ (IND vs SL) ಸ್ಟಾರ್ ಎಡಗೈ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ (Devdutt Padikkal) ತಮ್ಮ ಚೊಚ್ಚಲ ಟೆಸ್ಟ್ ಶತಕ ಗಳಿಸಿದರು. ಸಾಯಿ ಸುದರ್ಶನ್ ಗಾಯಗೊಂಡ ನಂತರ 3ನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಇಳಿದ ಪಡಿಕ್ಕಲ್, ಅವಕಾಶವನ್ನು ಸದುಪಯೋಗಪಡಿಸಿಕೊಂಡರು ಮತ್ತು ತಮ್ಮ ಅದ್ಭುತ ಶತಕ ಸಿಡಿಸಿದ ಬಳಿಕ ದೊಡ್ಡ ಮೊತದತ್ತ ಸಾಗುತ್ತಿದ್ದಾರೆ. ತಮ್ಮ ಈ ಶತಕದ ಮೂಲಕ ಕನ್ನಡಿಗ ದೇವದತ್‌ ಪಡಿಕ್ಕಲ್‌, ಮೂರು ಪ್ರಮುಖ ದಾಖಲೆಗಳನ್ನು ಬರೆದಿದ್ದಾರೆ.

ಈ ಪಂದ್ಯದಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಿಸಿಕೊಂಡ ಭಾರತ ತಂಡ, ದೇವದತ್‌ ಪಡಿಕ್ಕಲ್‌ ಶತಕ ಹಾಗೂ ಕೆಎಲ್‌ ರಾಹುಲ್‌ ಅವರ ಅರ್ಧಶತಕದ ಬಲದಿಂದ ಮೊದಲನೇ ದಿನದಾಟದ ಅಂತ್ಯಕ್ಕೆ 73 ಓವರ್‌ಗಳಿಗೆ 2 ವಿಕೆಟ್‌ಗಳ ನಷ್ಟಕ್ಕೆ 288 ರನ್‌ಗಳನ್ನು ಕಲೆ ಹಾಕಿತು. ಅದ್ಭುತ ಬ್ಯಾಟ್‌ ಮಾಡಿದ ಕನ್ನಡಿಗ ಪಡಿಕ್ಕಲ್‌ ಆಡಿದ 178 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 12 ಮನಮೋಹಕ ಬೌಂಡರಿಗಳೊಂದಿಗೆ ಅಜೇಯ 131 ರನ್‌ಗಳನ್ನು ಗಳಿಸಿದ್ದು, ಎರಡನೇ ದಿನ ದ್ವಿಶತಕ ಸಿಡಿಸುವ ಭರವಸೆಯನನು ಮೂಡಿಸಿದ್ದಾರೆ.

IND vs SL: 77 ರನ್‌ ಗಳಿಸಿ ಕೆಎಲ್‌ ರಾಹುಲ್‌ ರಿಟೈರ್ಡ್‌ ಹರ್ಟ್‌, ಭಾರತಕ್ಕೆ ಮತ್ತೊಂದು ಗಾಯದ ಭೀತಿ!

ಚೊಚ್ಚಲ ಶತಕ ಸಿಡಿಸಿ ಮೂರು ದಾಖಲೆ ಬರೆದ ದೇವದತ್‌ ಪಡಿಕ್ಕಲ್‌

21ನೇ ಶತಮಾನದಲ್ಲಿ 3ನೇ ಕ್ರಮಾಂಕದಲಲಿ ಶತಕ ಗಳಿಸಿದ ಭಾರತದ ಎರಡನೇ ಎಡಗೈ ಬ್ಯಾಟ್ಸ್‌ಮನ್

21 ನೇ ಶತಮಾನದಲ್ಲಿ (ಅಂದರೆ, 2001 ರಿಂದ) ಭಾರತ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿ ಶತಕ ಗಳಿಸಿದ ಎರಡನೇ ಎಡಗೈ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್. ಅವರಿಗಿಂತ ಮೊದಲು, ಮಾಜಿ ನಾಯಕ ಸೌರವ್ ಗಂಗೂಲಿ 2002ರಲ್ಲಿ ಜಿಂಬಾಬ್ವೆ ವಿರುದ್ಧದ ದೆಹಲಿ ಟೆಸ್ಟ್‌ನಲ್ಲಿ 136 ರನ್‌ಗಳ ಇನಿಂಗ್ಸ್‌ ಆಡುವ ಮೂಲಕ ಈ ಸಾಧನೆ ಮಾಡಿದ್ದರು.

3ನೇ ಕ್ರಮಾಂಕದಲ್ಲಿ ಶತಕ ಗಳಿಸಿದ ದಿಗ್ಗಜರ ಪಟ್ಟಿಗೆ ಸೇರಿದ ಪಡಿಕ್ಕಲ್‌

ಭಾರತದ ಟೆಸ್ಟ್ ಇತಿಹಾಸದಲ್ಲಿ 3ನೇ ಸ್ಥಾನದಲ್ಲಿ ಬ್ಯಾಟಿಂಗ್ ನಡೆಸಿ ಶತಕ ಗಳಿಸಿದ ಎಂಟನೇ ಎಡಗೈ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಡಿಕ್ಕಲ್ ಪಾತ್ರರಾಗಿದ್ದಾರೆ. ವಿನೋದ್ ಕಾಂಬ್ಳಿ (4 ಶತಕಗಳು), ಸೌರವ್ ಗಂಗೂಲಿ (3 ಶತಕಗಳು), ಸಲೀಂ ದುರಾನಿ, ಬಾಪು ನಾಡಕರ್ಣಿ, ಅಜಿತ್ ವಾಡೇಕರ್, ಏಕನಾಥ್ ಸೋಲ್ಕರ್ ಮತ್ತು ಸುರಿಂದರ್ ಅಮರ್‌ನಾಥ್ ಅವರಂತಹ ದಂತಕಥೆಗಳನ್ನು ಹೊಂದಿರುವ ವಿಶಿಷ್ಟ ಪಟ್ಟಿಗೆ ಅವರು ಸೇರಿದ್ದಾರೆ.



19 ಟೆಸ್ಟ್ ಪಂದ್ಯಗಳ ದೀರ್ಘ ಬರಗಾಲದ ನಂತರ 3ನೇ ಸ್ಥಾನದಲ್ಲಿ ಶತಕ

2024ರ ಸೆಪ್ಟೆಂಬರ್ ನಲ್ಲಿ ಬಾಂಗ್ಲಾದೇಶ ವಿರುದ್ಧದ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡಕ್ಕೆ ನಂಬರ್-3 ಸ್ಥಾನದಲ್ಲಿ ಕೊನೆಯ ಟೆಸ್ಟ್ ಶತಕ ಬಾರಿಸಿದ್ದು ಶುಭಮನ್ ಗಿಲ್ ಅವರ ಬ್ಯಾಟ್‌ನಿಂದ. ಆ ಪಂದ್ಯದ ನಂತರ ಆಡಿದ 19 ಟೆಸ್ಟ್‌ಗಳಲ್ಲಿ 35 ಇನಿಂಗ್ಸ್‌ಗಳಲ್ಲಿ ಭಾರತ ತಂಡ ಏಳು ವಿಭಿನ್ನ ಬ್ಯಾಟ್ಸ್‌ಮನ್‌ಗಳನ್ನು ನಂಬರ್-3 ಸ್ಥಾನದಲ್ಲಿ ಪ್ರಯತ್ನಿಸಿತ್ತು; ಒಟ್ಟಾರೆಯಾಗಿ, ಅವರು ಕೇವಲ ಐದು ಬಾರಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಬರಗಾಲವನ್ನು ಕೊನೆಗೊಳಿಸುವ ಮೂಲಕ, ಪಡಿಕ್ಕಲ್ ತಂಡದ ನಂಬರ್-3 ಸ್ಥಾನದಲ್ಲಿದ್ದ ಪ್ರಮುಖ ಸಮಸ್ಯೆಯನ್ನು ಪರಿಹರಿಸಿದ್ದಾರೆ.