ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs SL: ಪಂದ್ಯದ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ದಿನೇಶ್‌ ಚಾಂಡಿಮಾಲ್‌!

Dinesh Chandimal Injury: ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನ ಆತಿಥೇಯ ತಂಡದ ಬ್ಯಾಟ್ಸ್‌ಮನ್‌ ದಿನೇಶ್‌ ಚಾಂಡಿಮಾಲ್‌ ಅವರು ಗಂಭೀರ ಗಾಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆ ಮೂಲಕ ಅವರು ಗಾಲೆ ಟೆಸ್ಟ್‌ ಪಂದ್ಯದಿಂದ ಹೊರ ನಡೆದಿದ್ದಾರೆ.

ದಿನೇಶ ಚಾಂಡಿಮಾಲ್‌ ಗಂಭೀರ ಗಾಯಕ್ಕೆ ತುತ್ತಾಗಿದ್ದಾರೆ.

ಗಾಲೆ: ಭಾರತದ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ (IND vs SL) ಸೋಲಿನ ಭೀತಿಗೆ ಒಳಗಾಗಿರುವ ಆತಿಥೇಯ ಶ್ರೀಲಂಕಾ ತಂಡಕ್ಕೆ ಇದೀಗ ಮತ್ತೊಂದು ಆಘಾತವಾಗಿದೆ. ಪಂದ್ಯದ ನಾಲ್ಕನೇ ದಿನ ಗಂಭೀರ ಗಾಯಕ್ಕೆ ತುತ್ತಾಗಿರುವ ಶ್ರೀಲಂಕಾ ತಂಡದ ಹಿರಿಯ ಬ್ಯಾಟ್ಸ್‌ಮನ್‌ ದಿನೇಶ್‌ ಚಾಂಡಿಮಾಲ್‌ (Dinesh Chandimal) ಅವರು ಆಸ್ಪತ್ರೆಗೆ ದಾಖಲಾಗಿದ್ದು, ಅವರು ಗಾಲೆ ಟೆಸ್ಟ್‌ ಪಂದ್ಯದ ಇನ್ನುಳಿದ ಭಾಗದಿಂದ ಹೊರ ನಡೆದಿದ್ದಾರೆ. ಈಗಾಗಲೇ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿರುವ ಸಿಂಹಳೀಯರಿಗೆ ಚಾಂಡಿಮಾಲ್‌ ಅವರ ಅನುಪಸ್ಥಿತಿ ದೊಡ್ಡ ಹಿನ್ನಡೆಯನ್ನು ತಂದೊಡ್ಡಿದೆ.

36ರ ವಯಸ್ಸಿನ ದಿನೇಶ್ ಚಾಂಡಿಮಲ್ ಭಾರತ ವಿರುದ್ಧದ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನ ಆರಂಭದಲ್ಲೇ ಬೌಂಡರಿ ತಡೆಯುವ ಪ್ರಯತ್ನದಲ್ಲಿ ಭುಜ ಮತ್ತು ಕುತ್ತಿಗೆಗೆ ಗಾಯ ಮಾಡಿಕೊಂಡಿದ್ದರು. ಬೌಂಡರಿ ತಡೆಯಲು ಡೈವ್ ಮಾಡಿದ ವೇಳೆ ಚಾಂಡಿಮಲ್ ಅಸಹಜವಾಗಿ ನೆಲಕ್ಕೆ ಬಿದ್ದರು. ತಕ್ಷಣವೇ ನೋವಿನಿಂದ ಬಳಲಿದ ಅವರು ಮೈದಾನದಲ್ಲೇ ಉಳಿದುಕೊಂಡು ತಮ್ಮ ಬಲಭಾಗದ ಕುತ್ತಿಗೆಯನ್ನು ಹಿಡಿದುಕೊಂಡಿದ್ದರು. ಚಾಂಡಿಮಲ್ ಅವರ ಮುಖದಲ್ಲಿ ತೀವ್ರ ಅಸ್ವಸ್ಥತೆ ಕಂಡುಬಂದಿದ್ದು, ವೈದ್ಯಕೀಯ ಸಿಬ್ಬಂದಿ ಅವರ ಪರಿಶೀಲನೆ ನಡೆಸಿದರು.

IND vs SL: 100 ಟೆಸ್ಟ್‌ ಸಿಕ್ಸರ್‌ಗಳನ್ನು ಸಿಡಿಸಿ ದೊಡ್ಡ ದಾಖಲೆ ಬರೆದ ರಿಷಭ್‌ ಪಂತ್‌!

ಮೈದಾನದಲ್ಲೇ ಶ್ರೀಲಂಕಾ ಕ್ರಿಕೆಟ್ ತಂಡದ ಫಿಸಿಯೊ ಮತ್ತು ವೈದ್ಯರು ದಿನೇಶ್ ಚಾಂಡಿಮಲ್ ಅವರಿಗೆ ಚಿಕಿತ್ಸೆ ನೀಡಿದರು. ಬಳಿಕ ಹೆಚ್ಚಿನ ವೈದ್ಯಕೀಯ ತಪಾಸಣೆಗಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಾಂಡಿಮಲ್ ಅವರ ಗಾಯದ ಗಂಭೀರತೆಯನ್ನು ಪರಿಶೀಲಿಸಲು ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಕ್ಯಾನ್‌ಗೆ ಕಳುಹಿಸಲಾಗಿದೆ ಎಂದು ಶ್ರೀಲಂಕಾ ಕ್ರಿಕೆಟ್ (SLC) ದೃಢಪಡಿಸಿದೆ. ಸ್ಕ್ಯಾನ್‌ನ ವರದಿ ಬಂದ ಬಳಿಕ ಚಾಂಡಿಮಲ್ ಅವರ ಗಾಯದ ಸ್ಥಿತಿ ಹಾಗೂ ಮುಂದಿನ ಕ್ರಮದ ಕುರಿತು ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಎಸ್‌ಎಲ್‌ಸಿ ತಿಳಿಸಿದೆ.



ದಿನೇಶ್ ಚಾಂಡಿಮಲ್ ಗಾಯಗೊಂಡಿರುವ ಸಮಯ ಶ್ರೀಲಂಕಾ ತಂಡಕ್ಕೆ ಆತಂಕ ಮೂಡಿಸಿದೆ. ಭಾರತ ವಿರುದ್ಧದ ಟೆಸ್ಟ್‌ನ ನಾಲ್ಕನೇ ಇನಿಂಗ್ಸ್‌ನಲ್ಲಿ ಕಠಿಣ ಗುರಿಯನ್ನು ಶ್ರೀಲಂಕಾ ಹಿಂಬಾಲಿಸುತ್ತಿದೆ. ಪ್ರಥಮ ಇನಿಂಗ್ಸ್‌ನಲ್ಲಿ ಚಾಂಡಿಮಲ್ ಕೇವಲ 4 ರನ್ ಗಳಿಸಿ ಔಟಾಗಿದ್ದರು. ಬಳಿಕ ಶ್ರೀಲಂಕಾ ತಂಡ 284 ರನ್‌ಗಳಿಗೆ ಆಲೌಟ್ ಆಗಿದ್ದು, ಭಾರತಕ್ಕೆ 178 ರನ್‌ಗಳ ಮಹತ್ವದ ಮೊದಲ ಇನಿಂಗ್ಸ್‌ ಮುನ್ನಡೆ ಲಭಿಸಿತ್ತು. ಹೀಗಾಗಿ, ನಾಲ್ಕನೇ ಇನಿಂಗ್ಸ್‌ನಲ್ಲಿ ಶ್ರೀಲಂಕಾಗೆ ಅನುಭವಿ ಬ್ಯಾಟರ್‌ಗಳ ಅಗತ್ಯವಿರುವ ಸಂದರ್ಭದಲ್ಲಿ ಚಾಂಡಿಮಲ್ ಅವರ ಗಾಯ ತಂಡದ ಚಿಂತೆ ಹೆಚ್ಚಿಸಿದೆ. ಅವರ ಸ್ಕ್ಯಾನ್ ವರದಿ ಬಂದ ಬಳಿಕ ಅವರು ಮುಂದಿನ ಆಟಕ್ಕೆ ಲಭ್ಯರಾಗುತ್ತಾರೆಯೇ ಎಂಬುದು ಸ್ಪಷ್ಟವಾಗಲಿದೆ.

IND vs SL: ನಾಲ್ಕನೇ ದಿನವೂ ಪ್ರಾಬಲ್ಯ ಸಾಧಿಸಿದ ಭಾರತ, ಗೆಲುವಿನ ಸನಿಹದಲ್ಲಿ ಶುಭಮನ್‌ ಗಿಲ್‌ ಪಡೆ!

4 ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿಯಲ್ಲಿ ಶ್ರೀಲಂಕಾ

ಭಾರತ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 193 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಎದುರಾಳಿ ಶ್ರೀಲಂಕಾ ತಂಡಕ್ಕೆ 372 ರನ್‌ಗಳ ಗುರಿಯನ್ನು ನೀಡಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಸಿಂಹಳೀಯರು ನಾಲ್ಕನೇ ದಿನದಾಟದ ಅಂತ್ಯಕ್ಕೆ 34 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 84 ರನ್‌ಗಳನ್ನು ಕಲೆ ಹಾಕಿದೆ. ಐದನೇ ದಿನವಾದ ಬುಧವಾರ ಶ್ರೀಲಂಕಾ ತಂಡಕ್ಕೆ ಗೆಲ್ಲಲು ಇನ್ನೂ 288 ರನ್‌ಗಳ ಅಗತ್ಯವಿದೆ ಹಾಗೂ ಇನ್ನು ಉಳಿದಿರುವ ಕೇವಲ 6 ವಿಕೆಟ್‌ ಮಾತ್ರ. ಈ ಸಂದರ್ಭದಲ್ಲಿ ದಿನೇಶ್‌ ಚಾಂಡಿಮಾಲ್‌ ಅವರ ಗಾಯ ಆತೀಥೇಯರಿಗೆ ತೀವ್ರ ಹಿನ್ನಡೆಯನ್ನು ತಂದಿದೆ.