ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ರಿಷಭ್‌ ಪಂತ್‌ರನ್ನು ಮರೆಯಬೇಡಿ ಬಿಸಿಸಿಐಗೆ ಪಠಾಣ್‌ ವಾರ್ನಿಂಗ್‌!

ಔಟ್‌ ಆಫ್‌ ಫಾರ್ಮ್‌ ರಿಷಭ್‌ ಪಂತ್‌ ಅವರು ಸದ್ಯ ಕಠಿಣ ದಿನಗಳನ್ನು ಎದುರಿಸುತ್ತಿದ್ದಾರೆ. ಅವರು ಸತತ ಬ್ಯಾಟಿಂಗ್‌ ವೈಫಲ್ಯದಿಂದಾಗಿ ಅವರನ್ನು ಏಕದಿನ ತಂಡದಿಂದ ಕೈ ಬಿಡಲಾಗಿದ್ದು, ಟೆಸ್ಟ್‌ ತಂಡದಲ್ಲಿಯೂ ಉಪ ನಾಯಕನ ಸ್ಥಾನದಿಂದ ಕೈ ಬಿಡಲಾಗಿದೆ. ಇದರ ನಡುವೆ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌, ರಿಷಭ್‌ ಪಂತ್‌ಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ರಿಷಭ್‌ ಪಂತ್‌ಗೆ ಇರ್ಫಾನ್‌ ಪಠಾಣ್‌ ಬೆಂಬಲ.

ನವದೆಹಲಿ: ಸದ್ಯ ತಮ್ಮ ವೃತ್ತಿ ಜೀವನದ ಕಠಿಣ ದಿನಗಳನ್ನು ಎದುರಿಸುತ್ತಿರುವ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ಗೆ (Rishabh Pant) ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ (Irfan Pathan) ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಸದ್ಯದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು 2027ರ ಐಸಿಸಿ ಏಕದಿನ ವಿಶ್ವಕಪ್‌ (ODI World Cup 2027) ಟೂರ್ನಿಯ ನಿಮಿತ್ತ ರಿಷಭ್‌ ಪಂತ್‌ಗೆ ರಾಷ್ಟ್ರೀಯ ತಂಡದ ಬಾಗಿಲನ್ನು ಈಗಲೇ ಬಂದ್‌ ಮಾಡಬೇಡಿ ಎಂದು ಅವರು ಬಿಸಿಸಿಐಗೆ ಆಗ್ರಹಿಸಿದ್ದಾರೆ. ಮುಂದಿನ ವರ್ಷ ಅಕ್ಟೋಬರ್‌ 4 ರಂದು ಏಕದಿನ ವಿಶ್ವಕಪ್‌ ಟೂರ್ನಿ ಆರಂಭವಾಗಿ ನವೆಂಬರ್‌ 21 ರಂದು ಫೈನಲ್‌ ಪಂದ್ಯದ ಮೂಲಕ ಅಂತ್ಯವಾಗಲಿದೆ.

ಜೂನ್‌ 13 ರಂದು ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಣ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಯ ಮೂಲಕ ಭಾರತ ತಂಡ, ಮುಂದಿನ ಏಕದಿನ ವಿಶ್ವಕಪ್‌ ಟೂರ್ನಿಗೆ ತಯಾರಿ ನಡೆಸಲಿದೆ. ರಿಷಭ್‌ ಪಂತ್‌ ಅವರನ್ನು ತಂಡದಿಂದ ಕೈ ಬಿಡಲಾಗಿದ್ದು, ಕೆಎಲ್‌ ರಾಹುಲ್‌ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿದ್ದರೆ, ಇಶಾನ್‌ ಕಿಶನ್‌ ಎರಡನೇ ಆಯ್ಕೆಯ ವಿಕೆಟ್‌ ಕೀಪರ್‌. ಟಿ20ಐ ತಂಡದಿಂದಲೂ ಅವರನ್ನು ಈಗಾಗಲೇ ಕೈ ಬಿಡಲಾಗಿದೆ.

ಕಳೆದ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಿಷಭ್‌ ಪಂತ್‌ ಸತತ ಬ್ಯಾಟಿಂಗ್‌ ವೈಫಲ್ಯವನ್ನು ಅನುಭವಿಸಿದ್ದರು. ಅವರು ತಮ್ಮ ನಾಯಕತ್ವದಲ್ಲಿ ಸತತ ಎರಡು ಬಾರಿ ಲಖನೌ ಸೂಪರ್‌ ಜಯಂಟ್ಸ್‌ ತಂಡವನ್ನು ಪ್ಲೇಆಫ್ಸ್‌ಗೆ ತಲುಪಿಸುವಲ್ಲಿ ವಿಫಲರಾಗಿದ್ದರು. ಅಲ್ಲದೆ ಐಪಿಎಲ್‌ ಇತಿಹಾಸದ ಅತ್ಯಂತ ದುಬಾರಿ ಅಟಗಾರನಾಗಿದ್ದರೂ ಪಂತ್‌ ಅವರಿಂದ ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವಂಥಾ ಆಟ ಬಂದಿರಲಿಲ್ಲ. 2026ರ ಐಪಿಎಲ್‌ ಟೂರ್ನಿಯಲ್;ಲಿ 14 ಪಂದ್ಯಗಳಿಂದ 312 ರನ್‌ಗಳನ್ನು ಮಾತ್ರ ಕಲೆ ಹಾಕಿದ್ದರು. ಟೂರ್ನಿಯ ಬಳಿಕ ಅವರು ನಾಯಕತ್ವದಿಂದ ಕೆಳಗೆ ಇಳಿದಿದ್ದರು.

ಆಸ್ಟ್ರೇಲಿಯಾ ವಿರುದ್ಧ ಮೊದಲ ಒಡಿಐ ಸರಣಿ ಗೆದ್ದು ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ!

ಇತ್ತೀಚೆಗೆ ಅಂತ್ಯವಾಗಿದ್ದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಅವರು 121 ಎಸೆತಗಳಲ್ಲಿ 81 ರನ್‌ ಗಳಿಸಿದ್ದರು. ಆ ಮೂಲಕ ತಮ್ಮ ಟೆಸ್ಟ್‌ ಕ್ರಿಕೆಟ್‌ನಲ್ಲಿನ ಫಾರ್ಮ್‌ ಅನ್ನು ಉಳಿಸಿಕೊಂಡಿದ್ದಾರೆ.ಆದರೆ, ಏಕದಿನ ತಂಡದಿಂದ ಕೈ ಬಿಟ್ಟಿರುವುದು ಖಂಡಿತಾ ಅವರಿಗೆ ಭಾರಿ ನಿರಾಶೆಯನ್ನು ತಂದಿದೆ. ಈ ಬಗ್ಗೆ ಭಾರತೀಯ ಮಾಜಿ ಆಲ್‌ರೌಂಡರ್‌ ಇರ್ಫಾನ್‌ ಪಠಾಣ್‌ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

“ಏಕದಿನ ಕ್ರಿಕೆಟ್‌ನಲ್ಲಿ ಕೆಎಲ್‌ ರಾಹುಲ್‌ ಭಾರತದ ಮೊದಲ ಆಯ್ಕೆಯ ವಿಕೆಟ್‌ಕೀಪರ್-ಬ್ಯಾಟರ್. ಅವರು ಐದನೇ ಮತ್ತು ಆರನೇ ಕ್ರಮಾಂಕಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಯಾವುದೇ ಸ್ಥಾನದಲ್ಲಿ ಬ್ಯಾಟ್‌ ಮಾಡುವ ಸಾಮರ್ಥ್ಯ ಹೊಂದಿರುವ ಬಹುಮುಖ ಆಟಗಾರ,” ಎಂದು ಇರ್ಫಾನ್‌ ಪಠಾಣ್‌ ಹೇಳಿದ್ದಾರೆ.

“ಬ್ಯಾಕಪ್ ಆಯ್ಕೆಯಾಗಿ ಆಯ್ಕೆ ಸಮಿತಿಯು ಇಶಾನ್‌ ಕಿಶನ್‌ ಅವರನ್ನು ತಂಡಕ್ಕೆ ಕರೆತಂದಿದೆ. ಇಶಾನ್ ಕಿಶನ್‌ ಮೇಲಿನ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬಲ್ಲರು ಮತ್ತು ಶಾರ್ಟ್ ಬಾಲ್‌ಗಳನ್ನು ಸ್ಕೈರ್‌ನಲ್ಲಿ ಪರಿಣಾಮಕಾರಿಯಾಗಿ ಆಡುತ್ತಾರೆ. ಇದು ಅತ್ಯಂತ ಚತುರ ಆಯ್ಕೆಯಾಗಿದೆ. ಹೀಗಾಗಿ ಸದ್ಯಕ್ಕೆ ರಾಹುಲ್ ಮತ್ತು ಇಶಾನ್ ಇಬ್ಬರೂ ತಂಡದ ವಿಕೆಟ್‌ಕೀಪರ್-ಬ್ಯಾಟರ್‌ಗಳಾಗಿದ್ದಾರೆ. ಮೂರನೇ ಆಯ್ಕೆಯಾಗಿ ಸಂಜು ಸ್ಯಾಮ್ಸನ್‌ ಇರಬೇಕು. ಅವರಿಗೆ ಯಾವಾಗ ಅವಕಾಶ ಸಿಕ್ಕಿದರೂ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅದನ್ನು ನಾವು ಟಿ20 ವಿಶ್ವಕಪ್‌ನಲ್ಲಿಯೂ ನೋಡಿದ್ದೇವೆ,” ಎಂದು ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಸಚಿನ್‌, ಕೊಹ್ಲಿಗಿಂತ ಹೆಚ್ಚಿನ ಸಾಮರ್ಥ್ಯವನ್ನು ವೈಭವ್‌ ಸೂರ್ಯವಂಶಿ ಹೊಂದಿದ್ದಾರೆ: ಡೇಲ್‌ ಸ್ಟೇನ್‌!

ರಿಷಭ್‌ ಪಂತ್‌ ಅವರನ್ನು ಕಡೆಗಣಿಸಬೇಡಿ: ಪಠಾಣ್‌

“ಈಗ ರಿಷಭ್‌ ಪಂತ್‌ ಬಗ್ಗೆ ಮಾತನಾಡುವುದಾದರೆ, ಆಯ್ಕೆ ಸಮಿತಿಗೆ ನನ್ನ ಸಲಹೆ ಏನೆಂದರೆ ಅವರನ್ನು ಸಂಪೂರ್ಣವಾಗಿ ಕಡೆಗಣಿಸಬಾರದು. ಹೌದು, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅವರು ಸದ್ಯ ಹಿನ್ನಡೆ ಅನುಭವಿಸಿದ್ದಾರೆ. ಅವರ ಫಾರ್ಮ್ ಕೂಡ ನಿರೀಕ್ಷಿತ ಮಟ್ಟದಲ್ಲಿಲ್ಲ. ಆದರೆ ಇಶಾನ್‌ ಕಿಶನ್‌ ಅವರ ಉದಾಹರಣೆಯನ್ನು ಗಮನಿಸಿ. ಅವರೂ ಒಂದು ಹಂತದಲ್ಲಿ ತಂಡದಿಂದ ಹೊರಗುಳಿದಿದ್ದರು. ಆದರೆ ಅದನ್ನೇ ಅವರು ಪ್ರೇರಣೆಯಾಗಿ ಬಳಸಿಕೊಂಡರು. ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು ಮತ್ತು ನಾಯಕನಾಗಿ ಜಾರ್ಖಂಡ್‌ ತಂಡಕ್ಕೆ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಗೆದ್ದುಕೊಟ್ಟಿದ್ದರು. ರಿಷಭ್ ಪಂತ್ ಅವರು ಇಶಾನ್ ಕಿಶನ್ ಅವರಿಂದ ಪ್ರೇರಣೆ ಪಡೆದು ಕಠಿಣ ಪರಿಶ್ರಮವನ್ನು ಮುಂದುವರಿಸಬೇಕು. ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡುವ ಆಸೆಯನ್ನು ಅವರು ಎಂದಿಗೂ ಕಳೆದುಕೊಳ್ಳಬಾರದು,” ಎಂದು ಇರ್ಫಾನ್‌ ಪಠಾಣ್‌ ಸಲಹೆ ನೀಡಿದ್ದಾರೆ.