ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟೆಂಟ್‌ಗಳಲ್ಲಿ ಡ್ರೆಸ್ಸಿಂಗ್‌ ರೂಂ, 500 ಮೀ ದೂರ ಶೌಚಾಲಯ: ಏಷ್ಯನ್‌ ಗೇಮ್ಸ್‌ ಮೂಲಭೂತ ಸೌಕರ್ಯಗಳ ಬಗ್ಗೆ ಬಿಸಿಸಿಐ ಅಸಮಾಧಾನ!

ಏಷ್ಯಾ ಕ್ರೀಡಾಕೂಟದಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಎರಡನೇ ಭಾರತೀಯ ತಂಡವನ್ನು ಜಪಾನ್‌ಗೆ ಕಳುಹಿಸಲು ಚಿಂತನೆ ನಡೆಸಿದೆ. ಏಷ್ಯನ್‌ ಗೇಮ್ಸ್‌ನ ಮಹಿಳೆಯರ ಟಿ20 ಸ್ಪರ್ಧೆ ಸೆಪ್ಟಂಬರ್‌ 17 ರಿಂದ 22ರವರೆಗೆ ನಡೆಯಲಿದ್ದು, ಪುರುಷರ ಟೂರ್ನಿಯು ಸೆಪ್ಟಂಬರ್‌ 24 ರಿಂದ ಅಕ್ಟೋಬರ್‌ 3ರವರೆಗೆ ನಡೆಯಲಿದೆ.

ಏಷ್ಯಾ ಕ್ರೀಡಾಕೂಟದಲ್ಲಿ ಮೂಲ ಸೌಕರ್ಯಗಳ ಬಗ್ಗೆ ಬಿಸಿಸಿಐನಿಂದ ಅಪಸ್ವರ.

ನವದೆಹಲಿ: ಜಪಾನ್‌ನಲ್ಲಿ ನಡೆಯಲಿರುವ 2026ರ ಏಷ್ಯಾ ಕ್ರೀಡಾಕೂಟಕ್ಕೆ (Asian Games) ಭಾರತದ ಎರಡನೇ ತಂಡವನ್ನು ಕಳುಹಿಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ಬಯಸುತ್ತಿದೆ. ಏಕೆಂದರೆ, ಏಷ್ಯನ್‌ ಗೇಮ್ಸ್‌ನಲ್ಲಿನ ಮೂಲಭೂತ ಸೌಲಭ್ಯಗಳು ಅಗ್ರ ದರ್ಜೆಯಲ್ಲಿ ಇಲ್ಲದ ಕಾರಣ ಬಿಸಿಸಿಐ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇಲ್ಲಿನ ಮೂಲಭೂತ ಸೌಲಭ್ಯಗಳ ಬಗ್ಗೆ ಬಿಸಿಸಿಐ ಜೊತೆಗೆ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಕೂಡ ಅಸಮಾಧಾನವನ್ನು ವ್ಯಕ್ತಪಡಿಸಿದೆ. ಈ ಕಾರಣದಿಂದಲೇ ಎರಡನೇ ತಂಡವನ್ನು ಕಳುಹಿಸಲು ಬಿಸಿಸಿಐ ತೀರ್ಮಾನ ಮಾಡಿದೆ ಎಂದು ಹೇಳಲಾಗುತ್ತಿದೆ.

ಸೆಪ್ಟಂಬರ್‌ 19 ರಂದು ಆರಂಭವಾಗಲಿರುವ ಏಷ್ಯನ್‌ ಗೇಮ್ಸ್‌ಗೆ ಈಗಾಗಲೇ ಬಿಸಿಸಿಐ ಭಾರತದ ಪುರುಷರ ಹಾಗೂ ಮಹಿಳೆಯರ ತಂಡಗಳನ್ನು ಪಕಟಿಸಿದೆ. ಪುರುಷರ ತಂಡವನ್ನು ಶ್ರೇಯಸ್‌ ಅಯ್ಯರ್‌ ಮುನ್ನಡೆಸಲಿದ್ದು, ತಿಲಕ್‌ ವರ್ಮಾ ಉಪನಾಯಕನ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಜಸ್‌ಪ್ರೀತ್‌ ಬುಮ್ರಾ, ಅರ್ಷದೀಪ್‌ ಸಿಂಗ್‌ ಹಾಗೂ ಅಕ್ಷರ್‌ ಪಟೇಲ್‌ ಸೇರಿದಂತೆ ಹಲವು ಸ್ಟಾರ್‌ ಆಟಗಾರರು ಆಯ್ಕೆಯಾಗಿದ್ದಾರೆ.

ʻಕೇವಲ ಒಬ್ಬ ಬ್ಯಾಟ್ಸ್‌ಮನ್‌ ಅನ್ನು ಔಟ್‌ ಮಾಡಲು ನಿಮ್ಮಿಂದ ಸಾಧ್ಯವಾಗಲಿಲ್ಲʼ: ಭಾರತ ತಂಡವನ್ನು ಟೀಕಿಸಿದ ಮೊಹಮ್ಮದ್‌ ಕೈಫ್‌!

ಮಹಿಳೆಯರ ಟಿ20 ಸ್ಪರ್ಧೆ ಸೆಪ್ಟಂಬರ್‌ 17 ರಿಂದ 22ರವರೆಗೆ ನಡೆಯಲಿದ್ದು, ಪುರುಷರ ಸ್ಪರ್ಧೆ ಸೆಪ್ಟಂಬರ್‌ 24 ರಿಂದ ಅಕ್ಟೋಬರ್‌ 3ರವರಗೆ ನಡೆಯಲಿದೆ. ಆಟಗಾರರ ಡ್ರೆಸ್ಸಿಂಗ್‌ ರೂಂಗಳನ್ನು ಟೆಂಟ್‌ಗಳಲ್ಲಿ ರೂಪಿಸಲಾಗಿದ್ದು, ಶೌಚಾಲಯ ಹಾಗೂ ಸ್ನಾಯದ ಗೃಹಗಳನ್ನು 500 ಮೀ ದೂರ ವ್ಯವಸ್ಥೆ ಮಾಡಲಾಗಿದೆ. ಹೋಟೆಲ್‌ ಕೊಠಡಿಗಳು ಹಾಗೂ ಲೀವಿಂಗ್‌ ಏರಿಯಾ ಬಗ್ಗೆಯೂ ಬಿಸಿಸಿಐ ಅಸಮಾಧಾನವನ್ನು ಹೊಂದಿದೆ ಎಂದು ವರದಿಯಾಗಿದೆ.

"ಜಪಾನ್‌ನಲ್ಲಿ ಕ್ರೀಡಾಪಟುಗಳಿಗೆ ನೀಡಲಾದ ಸೌಲಭ್ಯ ಹಾಗೂ ವ್ಯವಸ್ಥೆಗಳ ಬಗ್ಗೆ ಬಿಸಿಸಿಐ ಹಾಗೂ ಎಸಿಸಿಗೆ ಅಸಮಾಧಾನವಿದೆ ಹಾಗೂ ಕ್ರಿಕೆಟ್‌ ಮಂಡಳಿ ಇದೆಲ್ಲವನ್ನೂ ತಿಳಿದುಕೊಳ್ಳುವ ಸಲುವಾಗಿ ವೀಕ್ಷಕರೊಬ್ಬರನ್ನು ಕಳುಹಿಸಲಿದೆ. ವೀಕ್ಷಕರಿಂದ ಅಲ್ಲಿನ ಸೌಲಭ್ಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದ ಬಳಿಕ ಬಿಸಿಸಿಐ ಭಾರತ ಬಿ ತಂಡವನ್ನು ಅಲ್ಲಿಗೆ ಕಳುಹಿಸುವ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ," ಎಂದು ಮೂಲಗಳು ಹೇಳಿರುವುದನ್ನು ಎಎನ್‌ಐ ವರದಿ ಮಾಡಿದೆ.

IND vs SL ಟೆಸ್ಟ್‌ ಸರಣಿಯಲ್ಲಿ ರಿಷಭ್‌ ಪಂತ್‌ ನಿರೀಕ್ಷೆಗೆ ತಕ್ಕಂತೆ ಬ್ಯಾಟ್‌ ಮಾಡಿಲ್ಲ: ಆರ್‌ ಅಶ್ವಿನ್‌ ಬೇಸರ!

"ಡ್ರೆಸ್ಸಿಂಗ್‌ ರೂಂಗಳನ್ನು ಟೆಂಟ್‌ಗಳಲ್ಲಿ ಹಾಗೂ ಶೌಚಾಲಯಗಳನ್ನು 500 ಮೀಟರ್‌ ದೂರ ನಿರ್ಮಿಸಲಾಗಿದೆ ಎಂಬ ಬಗ್ಗೆ ಎಸಿಸಿ ಸಭೆಯಲಿ ಜಪಾನ್‌ ಒಲಿಂಪಿಕ್ಸ್‌ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದರಿಂದ ಆಟಗಾರರಿಗೆ ಅತೃಪ್ತ ಭಾವನೆ ಉಂಟಾಗಿದೆ. ಅಲ್ಲದೆ ಹೋಟೆಲ್‌ ಕೊಠಡಿಗಳು ಕೂಡ ತುಂಬಾ ಕಿರಿದಾಗಿವೆ. ಇದು ದೊಡ್ಡ ಸಮಸ್ಯೆ ಎಂದು ಅಧಿಕಾರಿಗಳ ಮುಂದೆ ಹೇಳಲಾಗಿದೆ," ಎಂದು ಮೂಲಗಳು ತಿಳಿಸಿವೆ.

ಏಷ್ಯನ್‌ ಗೇಮ್ಸ್‌ನ ಭಾರತ ಪುರುಷರ ತಂಡ: ಶ್ರೇಯಸ್‌ ಅಯ್ಯರ್‌ (ನಾಯಕ), ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ಅಭಿಷೇಕ್‌ ಶರ್ಮಾ, ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ಶಿವಂ ದುಬೇ, ತಿಲಕ್‌ ವರ್ಮಾ (ಉಪ ನಾಯಕ), ಅಕ್ಷರ್‌ ಪಟೇಲ್‌, ವಾಷಿಂಗ್ಟನ್‌ ಸುಂದರ್‌, ನಿತೀಶ್‌ಕುಮಾರ್‌ ರೆಡ್ಡಿ, ವರುಣ್‌ ಚಕ್ರವರ್ತಿ, ರವಿ ಬಿಷ್ಣೋಯ್‌, ಹರ್ಷಿತ್‌ ರಾಣಾ, ಅರ್ಷದೀಪ್‌ ಸಿಂಗ್‌, ವೈಭವ್‌ ಸೂರ್ಯವಂಶಿ, ಜಸ್‌ಪ್ರೀತ್‌ ಬುಮ್ರಾ