ನವದೆಹಲಿ: ಪೂರ್ವ ವಲಯ ತಂಡದ ನಾಯಕ ಇಶಾನ್ ಕಿಶನ್ (Ishan Kishan), ತಮ್ಮ 100ನೇ ಪ್ರಥಮ ದರ್ಜೆ ಪಂದ್ಯವನ್ನಾಡಲು ಸಜ್ಜಾಗಿರುವ ವೇಗದ ಬೌಲರ್ ಮಹಮ್ಮದ್ ಶಮಿ (Mohammad Shami) ಅವರಲ್ಲಿ ಹಿಂದಿನಂತೆಯೇ ಉತ್ಸಾಹ ಮತ್ತು ಹುಮ್ಮಸ್ಸು ಇನ್ನೂ ಉಳಿದಿದೆ ಎಂದು ಹೇಳಿದ್ದಾರೆ. ಶಮಿ ಮತ್ತೆ ಭಾರತ ತಂಡಕ್ಕೆ ಮರಳಲು ಬದ್ಧರಾಗಿರುವಂತೆ ಕಾಣುತ್ತಿದ್ದಾರೆ ಎಂದು ಇಶಾನ್ ಹೇಳಿದ್ದಾರೆ.
36 ವರ್ಷದ ಶಮಿ, ಕೇಂದ್ರ ವಲಯ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಕಬಳಿಸಿ, ಪೂರ್ವ ವಲಯ ತಂಡ 13 ವರ್ಷಗಳ ಬಳಿಕ ದುಲೀಪ್ ಟ್ರೋಫಿಯ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಫೈನಲ್‌ನಲ್ಲಿ ಪೂರ್ವ ವಲಯ ತಂಡ ದಕ್ಷಿಣ ವಲಯ ತಂಡವನ್ನು ಎದುರಿಸಲಿದೆ.
IPL 2027: ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ತೆಗೆಯಬೇಕೆಂದ ಸುರೇಶ್ ರೈನಾ!
ಶಮಿ ಬಗ್ಗೆ ಇಶಾನ್ ಕಿಶನ್ ಹೇಳಿದ್ದೇನು?
ಪಂದ್ಯದ ಮುನ್ನಾ ದಿನದಂದು ಸುದ್ದಿಗಾರರೊಂದಿಗೆ ಮಾತನಾಡಿದ ಇಶಾನ್ ಕಿಶನ್, “ಅವರು ಅತ್ಯುತ್ತಮ ಆಟಗಾರರಲ್ಲಿ ಒಬ್ಬರು ಎಂದು ನಾನು ಭಾವಿಸುತ್ತೇನೆ. ಅವರು ಕ್ರಿಕೆಟ್ ದಿಗ್ಗಜ. ಬಂಗಾಳ ಪರ ಆಡಲು ಆರಂಭಿಸಿದಾಗಿನಿಂದಲೂ ಅವರ ಪ್ರದರ್ಶನ ಅದ್ಭುತವಾಗಿದೆ. ಅವರು ನಿರಂತರವಾಗಿ ವಿಕೆಟ್‌ಗಳನ್ನು ಪಡೆಯುತ್ತಿದ್ದಾರೆ. ಅವರು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ತಂಡಕ್ಕಾಗಿ ನೀಡುತ್ತಾರೆ. ಭಾರತ ತಂಡದ ಪರವೂ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ," ಎಂದು ಹೇಳಿದ್ದಾರೆ.
“ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ. ಅವರು ಕಠಿಣ ಪರಿಶ್ರಮ ಮಾಡುತ್ತಿದ್ದರೆ ವಯಸ್ಸು ಯಾವುದೇ ವಿಷಯವಲ್ಲ. ಶಮಿ ಭಾಯ್ ಅವರಲ್ಲಿರುವ ಆ ಉತ್ಸಾಹ ಮತ್ತು ಗೆಲುವಿನ ಹಂಬಲವನ್ನು ನಾನು ನೋಡುತ್ತಿದ್ದೇನೆ. ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ನಮ್ಮ ತಂಡದಲ್ಲಿರುವುದು ನಮಗೆ ನಮಗೆ ಆತ್ಮವಿಶ್ವಾಸ ನೀಡುತ್ತದೆ,” ಎಂದು ಇಶಾನ್ ಕಿಶನ್ ತಿಳಿಸಿದ್ದಾರೆ.
2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಸಂಜು ಸ್ಯಾಮ್ಸನ್ ಬೇಡ ಎಂದ ವಾಸೀಮ್ ಜಾಫರ್!
ಶಮಿ ಮತ್ತೆ ಭಾರತ ತಂಡದ ಭಾಗವಾಗಲು ಬಯಸುತ್ತಿದ್ದಾರೆ: ಇಶಾನ್ ಕಿಶನ್
ಮಹಮ್ಮದ್ ಶಮಿಗೆ ಈಗ 36 ವರ್ಷ. ಅವರ ಕ್ರಿಕೆಟ್ ವೃತ್ತಿಜೀವನ ಅಂತಿಮ ಹಂತದಲ್ಲಿದೆ ಎನ್ನಲಾಗುತ್ತಿದ್ದರೂ, ಇನ್ನೂ ಹೆಚ್ಚುವರಿ ಓವರ್‌ಗಳನ್ನು ಬೌಲ್ ಮಾಡಲು ಅವರು ಸಿದ್ಧರಾಗಿರುತ್ತಾರೆ ಎಂದು ಪೂರ್ವ ವಲಯ ನಾಯಕ ಇಶಾನ್ ಕಿಶನ್ ಹೇಳಿದ್ದಾರೆ.
“ಶಮಿ ಭಾಯ್ ವಿಕೆಟ್ ಪಡೆಯಲು ಹೆಚ್ಚುವರಿ ಓವರ್‌ಗಳನ್ನು ಕೇಳಿದ್ದರು. ನಾಯಕನಾಗಿ ಅವರ ಈ ಮನೋಭಾವ ನನಗೆ ತುಂಬಾ ಇಷ್ಟವಾಯಿತು. ಇದು ನಾಯಕನ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಅವರಲ್ಲಿ ಇನ್ನೂ ಭಾರತ ತಂಡದ ಪರ ಆಡಬೇಕೆಂಬ ಹಂಬಲ ಇದೆ. ಅವರು ಮತ್ತೆ ಭಾರತ ತಂಡದ ಭಾಗವಾಗಲು ಬಯಸುತ್ತಿದ್ದಾರೆ,” ಎಂದು ಇಶಾನ್ ಕಿಶನ್ ತಿಳಿಸಿದ್ದಾರೆ.
100ನೇ ಪ್ರಥಮ ದರ್ಜೆ ಪಂದ್ಯನ್ನಾಡಲಿರುವ ಮೊಹಮ್ಮದ್ ಶಮಿಗೆ ಬಂಗಾಳ ಕ್ರಿಕೆಟ್ ಸಂಸ್ಥೆಯಿಂದ ವಿಶೇಷ ಸನ್ಮಾನ
ಶಮಿಗೆ ತಿಲಕ್ ವರ್ಮಾ ಶ್ಲಾಘನೆ
ಮಹಮ್ಮದ್ ಶಮಿ ಭಾರತ ಪರ ತಮ್ಮ ಕೊನೆಯ ಪಂದ್ಯವನ್ನು 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ದುಬೈನಲ್ಲಿ ಆಡಿದ್ದರು. ದಕ್ಷಿಣ ವಲಯ ತಂಡದ ನಾಯಕ ತಿಲಕ್ ವರ್ಮಾ ಕೂಡ ಶಮಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಆದರೆ ಈ ಚತುರ ವೇಗದ ಬೌಲರ್ ಅವರನ್ನು ಎದುರಿಸಲು ತಮ್ಮ ತಂಡ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
“ಶಮಿ ಭಾಯ್ ವಿರುದ್ಧ ಆಡುವುದು ನಮಗೆ ಉತ್ತಮ ಸವಾಲಾಗಲಿದೆ. ಹಿಂದಿನ ಪಂದ್ಯದಲ್ಲಿ ಅವರು ಬ್ಯಾಟರ್‌ಗಳನ್ನು ತಮ್ಮ ಬಲೆಗೆ ಬೀಳಿಸಿ ಹೇಗೆ ವಿಕೆಟ್‌ಗಳನ್ನು ಪಡೆದರು ಎಂಬುದನ್ನು ನಾವು ನೋಡಿದ್ದೇವೆ. ಆದರೆ ಅವರನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ,” ಎಂದು ತಿಲಕ್ ವರ್ಮಾ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.