ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Duleep Trophy 2026: ದಕ್ಷಿಣ ವಲಯ ತಂಡದಲ್ಲಿ ನಾಲ್ವರು ಕನ್ನಡಿಗರು, ತಿಲಕ್‌ ವರ್ಮಾ ನಾಯಕ!

2026ರ ದುಲೀಪ್ ಟ್ರೋಫಿ ಟೂರ್ನಿಗೆ ದಕ್ಷಿಣ ವಲಯ ತಂಡವನ್ನು ಪ್ರಕಟಿಸಲಾಗಿದ್ದು, ತಿಲಕ್ ವರ್ಮಾ ಅವರಿಗೆ ನಾಯಕತ್ವವನ್ನು ನೀಡಲಾಗಿದೆ. ಕರ್ನಾಟಕದಿಂದ ಒಟ್ಟು ನಾಲ್ವರು ಆಟಗಾರರು ದಕ್ಷಿಣ ವಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಿಕಿ ಭುಯಿ ಅವರಿಗೆ ಉಪ ನಾಯಕತ್ವವನ್ನು ನೀಡಲಾಗಿದೆ.

ದಕ್ಷಿಣ ವಲಯ ತಂಡಕ್ಕೆ ತಿಲಕ್‌ ವರ್ಮಾ ನಾಯಕ.

ನವದೆಹಲಿ: ದೇಶಿ ಕ್ರಿಕೆಟ್‌ನ ಪ್ರಮುಖ ಟೂರ್ನಿಯಾದ ದುಲೀಪ್‌ ಟ್ರೋಫಿ (Duleep Trophy 2026) ಟೂರ್ನಿಗೆ ದಕ್ಷಿಣ ವಲಯ ತಂಡವನ್ನು ಪ್ರಕಟಿಸಲಾಗಿದ್ದು, ಭಾರತ ಟಿ20ಐ ತಂಡದ ಉಪ ನಾಯಕ ತಿಲಕ್‌ ವರ್ಮಾಗೆ (Tialk Verma) ನಾಯಕತ್ವವನ್ನು ನೀಡಲಾಗಿದೆ ಹಾಗೂ ರಿಕಿ ಭುಯಿ ಅವರಿಗೆ ಉಪ ನಾಯಕತ್ವವನ್ನು ನೀಡಲಾಗಿದೆ. ಆಂಧ್ರದ ಎಂಎನ್‌ ವಿಕ್ರಮ್‌ ವರ್ಮಾ ಅವರಿಗೆ ಹೆಡ್‌ ಕೋಚ್‌ ಹುದ್ದೆಯನ್ನು ನೀಡಲಾಗಿದೆ. ಇತ್ತೀಚೆಗಷ್ಟೇ ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಭಾರತ 3-0 ಅಂತರದ ಕ್ಲೀನ್‌ಸ್ವೀಪ್ ಮಾಡಿಕೊಂಡಿತ್ತು. ಈ ಸರಣಿಯಲ್ಲಿ ತಿಲಕ್‌ ವರ್ಮಾ ಉಪ ನಾಯಕನ ಜವಾಬ್ದಾರಿಯನ್ನು ನಿರ್ವಹಿಸಿದ್ದರು.

ಅನುಭವಿ ಬ್ಯಾಟರ್ ಕರುಣ್ ನಾಯರ್ ಸೇರಿದಂತೆ ಹಲವು ಪ್ರಮುಖ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ರಣಜಿ ಟ್ರೋಫಿ ಟೂರ್ನಿಯಲ್ಲಿ 950ಕ್ಕೂ ಹೆಚ್ಚು ರನ್‌ಗಳನ್ನು ಸಿಡಿಸಿ ಗಮನ ಸೆಳೆದ ಕರ್ನಾಟಕದ ಆರ್ ಸ್ಮರಣ್ ಹಾಗೂ ಹೈದರಾಬಾದ್‌ನ ಭರವಸೆಯ ಬ್ಯಾಟರ್ ಕೆ ಹಿಮತೇಜ ಕೂಡ ತಂಡದಲ್ಲಿದ್ದು, ಈ ಬಾರಿ ದಕ್ಷಿಣ ವಲಯ ತಂಡ ಬಲಿಷ್ಠ ಆಟಗಾರರೊಂದಿಗೆ ಕಣಕ್ಕಿಳಿಯಲಿದೆ.

Duleep Trophy 2026: ಕೇಂದ್ರ ವಲಯ ತಂಡಕ್ಕೆ ರಜತ್ ಪಾಟಿದಾರ್ ನಾಯಕ, ರಿಂಕು ಸಿಂಗ್ ಉಪನಾಯಕ!

ದುಲೀಪ್ ಟ್ರೋಫಿ ಟೂರ್ನಿಯಲ್ಲಿ ದಕ್ಷಿಣ ವಲಯ ತಂಡ ಅತ್ಯಂತ ಸಮತೋಲನ ಮತ್ತು ಬಲಿಷ್ಠ ತಂಡ ಬಲಿಷ್ಠವಾಗಿದ್ದು, ನೇರವಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದಿದೆ. ಇತ್ತೀಚೆಗೆ ಶ್ರೀಲಂಕಾ 'ಎ' ವಿರುದ್ಧದ ಸರಣಿಯಲ್ಲಿ ಮಿಂಚಿ ತಂಡದ 1-0 ಸರಣಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದ್ದ ಶೈಕ್ ರಶೀದ್ ಅವರಿಗೆ ದಕ್ಷಿಣ ವಲಯ ತಂಡದಲ್ಲಿ ಸ್ಥಾನ ದೊರೆತಿದೆ. ಜೊತೆಗೆ ಗೋವಾದ ಸ್ಫೋಟಕ ಬ್ಯಾಟರ್ ಅಭಿನವ್ ತೇಜ್ರಾನಾ ಕೂಡ ತಂಡವನ್ನು ಸೇರಿಕೊಂಡಿದ್ದು, ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ.

ಭಾರತ 'ಎ' ತಂಡದ ಪ್ರವಾಸದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದ ತಮಿಳುನಾಡಿನ ಎನ್ ಜಗದೀಸನ್ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದು, ತಂಡದ ಮಧ್ಯಮ ಕ್ರಮಕ್ಕೂ ಪ್ರಮುಖ ಆಧಾರವಾಗಲಿದ್ದಾರೆ. ಅನುಭವ ಹಾಗೂ ಯುವ ಪ್ರತಿಭೆಗಳ ಸಮನ್ವಯ ಹೊಂದಿರುವ ದಕ್ಷಿಣ ವಲಯ ತಂಡ, ಈ ಬಾರಿ ದುಲೀಪ್ ಟ್ರೋಫಿ ಪ್ರಶಸ್ತಿಯ ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಂಡಿದೆ.

2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ತಂಡವನ್ನು ಆರಿಸಿದ ಆರ್‌ ಅಶ್ವಿನ್‌!

ದಕ್ಷಿಣ ವಲಯ ತಂಡದ ಸ್ಪಿನ್ ಬೌಲಿಂಗ್ ವಿಭಾಗವನ್ನು ಎಡಗೈ ಸ್ಪಿನ್ನರ್ ತನಯ್ ತ್ಯಾಗರಾಜನ್ ಹಾಗೂ ಲೆಗ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಮುನ್ನಡೆಸಲಿದ್ದಾರೆ. ಇಬ್ಬರೂ ತಮ್ಮ ವೈವಿಧ್ಯಮಯ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಸವಾಲು ಒಡ್ಡುವ ಸಾಮರ್ಥ್ಯ ಹೊಂದಿದ್ದಾರೆ. ವೇಗದ ಬೌಲಿಂಗ್ ವಿಭಾಗದಲ್ಲೂ ದಕ್ಷಿಣ ವಲಯ ಅತ್ಯಂತ ಬಲಿಷ್ಠವಾಗಿದೆ. ಕೆ. ಸಾಯಿ ತೇಜ, ತ್ರಿಪುರಾನ ವಿಜಯ್, ವಿದ್ವತ್ ಕಾವೇರಪ್ಪ ಹಾಗೂ ಎಂಡಿ ನಿಧೀಶ್ ಅವರನ್ನೊಳಗೊಂಡ ವೇಗದ ಬೌಲಿಂಗ್‌ ವಿಭಾಗದಿಂದ ಎದುರಾಳಿ ತಂಡಗಳಿಗೆ ಕಠಿಣ ಪರೀಕ್ಷೆಯಾಗಲಿದೆ. ಅನುಭವಿ ಆಟಗಾರರು ಹಾಗೂ ಯುವ ಪ್ರತಿಭೆಗಳ ಸಮನ್ವಯ ಹೊಂದಿರುವ ದಕ್ಷಿಣ ವಲಯ ತಂಡ ಈ ಬಾರಿಯ ದುಲೀಪ್ ಟ್ರೋಫಿಯಲ್ಲಿ ಪ್ರಶಸ್ತಿ ಗೆಲ್ಲುವ ಪ್ರಮುಖ ಫೇವರಿಟ್ ತಂಡಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ದಕ್ಷಿಣ ವಲಯ ತಂಡ: ಎನ್. ತಿಲಕ್ ವರ್ಮಾ (ನಾಯಕ), ರಿಕ್ಕಿ ಭುಯಿ (ಉಪನಾಯಕ), ಅಭಿನವ್ ತೇಜ್ರಾನಾ, ಶೈಕ್ ರಶೀದ್, ಕೆ ಎಂ ಹಿಮತೇಜ, ಆರ್. ಸ್ಮರಣ್, ಎನ್. ಜಗದೀಸನ್ (ವಿಕೆಟ್‌ಕೀಪರ್), ಕರುಣ್ ನಾಯರ್, ತನಯ್ ತ್ಯಾಗರಾಜನ್, ಶ್ರೇಯಸ್ ಗೋಪಾಲ್, ಕೆ. ಸಾಯಿ ತೇಜ, ಟಿ. ವಿಜಯ್, ವಿದ್ಯತ್ ಕಾವೇರಪ್ಪ, ಎಚ್. ಅಮಾನ್ ಖಾನ್ ಹಾಗೂ ಎಂ.ಡಿ. ನಿಧೀಶ್