ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Duleep Trophy Final: ಸೋಲಿನ ಸುಳಿಯಲ್ಲಿ ದಕ್ಷಿಣ ವಲಯ, ಪೂರ್ವ ವಲಯಕ್ಕೆ 584 ರನ್‌ ಮುನ್ನಡೆ!

East Zone vs East Zone: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2026ರ ದುಲೀಪ್‌ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯದ ನಾಲ್ಕನೇ ದಿನವೂ ಪೂರ್ವ ವಲಯ ಮುನ್ನಡೆ ಸಾಧಿಸಿದೆ. ಆ ಮೂಲಕ ದಕ್ಷಿಣ ವಲಯ ಎದುರು ಗೆಲುವಿನ ಸನಿಹದಲ್ಲಿದೆ.

ದಕ್ಷಿಣ ವಲಯ ಎದುರು ದೊಡ್ಡ ಮುನ್ನಡೆ ಸಾಧಿಸಿದ ಪೂರ್ವ ವಲಯ.

ಚೆನ್ನೈ: ಇಲ್ಲಿನ ಎಂ ಎ ಚಿದಂಬರಂ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ದುಲೀಪ್‌ ಟ್ರೋಫಿ (Duleep Trophy 2026) ಟೂರ್ನಿಯ ಫೈನಲ್‌ ಪಂದ್ಯದ ನಾಲ್ಕನೇ ದಿನವೂ ದಕ್ಷಿಣ ವಲಯ ಎದುರು ಪೂರ್ವ ವಲಯ ಮೇಲುಗೈ ಸಾಧಿಸಿದೆ. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಎರಡೂ ವಿಭಾಗಗಳಲ್ಲಿ ಉತ್ತಮ ಪ್ರದರ್ಶನವನ್ನು ಮುಂದುವರಿಸಿರುವ ಇಶಾನ್‌ ಕಿಶನ್‌ ನಾಯಕತ್ವದ ಈಸ್ಟ್‌ ಝೋನ್‌ ತಂಡ, ಪಂದ್ಯವನ್ನು ಗೆಲ್ಲುವ ಸನಿಹದಲ್ಲಿದೆ. ಪಂದ್ಯದಲ್ಲಿ ಇನ್ನು ಕೇವಲ ಒಂದೇ ದಿನ ಬಾಕಿ ಇದ್ದ, ಡ್ರಾನಲ್ಲಿ ಅಂತ್ಯವಾದರೂ ಪೂರ್ವ ವಲಯ ತಂಡ ಪ್ರಥಮ ಇನಿಂಗ್ಸ್‌ನ ಮುನ್ನಡೆಯ ಆಧಾರದ ಮೇಲೆ ದುಲೀಪ್‌ ಟ್ರೋಫಿಯನ್ನು ತನ್ನದಾಗಿಸಿಕೊಳ್ಳಲಿದೆ.

ಪಂದ್ಯದ ನಾಲ್ಕನೇ ದಿನ 6 ವಿಕೆಟ್‌ಗಳ ನಷ್ಟಕ್ಕೆ 242 ರನ್‌ಗಳಿಂದ ಪ್ರಥಮ ಇನಿಂಗ್ಸ್‌ ಅನ್ನು ಮುಂದುವರಿಸಿದ ದಕ್ಷಿಣ ವಲಯ ತಂಡ, ಬುಧವಾರ ಕನಿಷ್ಠ 100 ರನ್‌ ಅನ್ನು ಕೂಡ ಕಲೆಹಾಕಲು ಸಾಧ್ಯವಾಗಿಲ್ಲ. ಬೆಳಿಗ್ಗೆ ಕ್ರೀಸ್‌ಗೆ ಬಂದ ನಾಯಕ ತಿಲಕ್‌ ವರ್ಮಾ, 211 ಎಸೆತಗಳಲ್ಲಿ 99 ರನ್‌ ಗಳಿಸಿ ಶತದಂಚಿನಲ್ಲಿ ವಿಕೆಟ್‌ ಒಪ್ಪಿಸಿದರು. ಕೆಲ ಕಾಲ ತಿಲಕ್‌ಗೆ ಸಾಥ್‌ ನೀಡಿದ್ದ ಚಾಮ ವಿ ಮಿಲಿಂಗ್‌ 43 ರನ್‌ಗಳನ್ನು ಕಲೆ ಹಾಕಿದ ಬಳಿಕ ವಿಕೆಟ್‌ ಒಪ್ಪಿಸಿದರು. ಈ ಇಬ್ಬರೂ 7 ನೇ ವಿಕೆಟ್‌ಗೆ 78 ರನ್‌ಗಳನ್ನು ಕಲೆ ಹಾಕಿದರು.

Duleep Trophy: ಏಕಾಂಗಿ ಹೋರಾಟ ನಡೆಸುತ್ತಿದ್ದ ತಿಲಕ್‌ ವರ್ಮಾರನ್ನು ಸ್ಲೆಡ್ಜ್‌ ಮಾಡಿದ ವೈಭವ್‌ ಸೂರ್ಯವಂಶಿ!

ಚಾಮ ವಿ ಮಿಲಿಂದ್‌ ವಿಕೆಟ್‌ ಒಪ್ಪಿಸಿದ ಬಳಿಕ ಇನ್ನುಳಿದ ಬ್ಯಾಟರ್‌ಗಳು ನಾಯಕ ತಿಲಕ್‌ ವರ್ಮಾಗೆ ಸಾಥ್‌ ನೀಡಲಿಲ್ಲ. ತ್ರಿಪುರಣ ವಿಜಯ್‌, ಮೊಹಮ್ಮದ್‌ ಸಿರಾಜ್‌ ತಲಾ ಒಂದೊಂದು ರನ್‌ಗೆ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ದೀರ್ಘಾವಧಿ ಬ್ಯಾಟ್‌ ಮಾಡಿದ ನಾಯಕ ತಿಲಕ್‌ ವರ್ಮಾ ಕೊನೆಯ ವಿಕೆಟ್‌ಗೆ ಔಟ್‌ ಆದರು. ಆ ಮೂಲಕ ಅವರು ಕೇವಲ ಒಂದು ರನ್‌ನಿಂದ ಶತಕವನ್ನು ಕಳೆದುಕೊಂಡರು. ಅಂತಿಮವಾಗಿ ದಕ್ಷಿಣ ವಲಯ ತಂಡ, 107.3 ಓವರ್‌ಗಳಿಗೆ 336 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಸೌಥ್‌ ಝೋನ್‌ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ಭಾರಿ ಹಿನ್ನಡೆಯನ್ನು ಅನುಭವಿಸಿತು. ಪೂರ್ವ ವಲಯ ಪರ ಮುಖೇಶ್‌ ಕುಮಾರ್‌ 3 ವಿಕೆಟ್‌ ಕಿತ್ತರೆ, ಮೊಹಮ್ಮದ್‌ ಶಮಿ ಮತ್ತು ಶಿಖರ್‌ ಮೋಹನ್‌ ತಲಾ ಎರಡೆರಡು ವಿಕೆಟ್‌ ಪಡೆದರು.



584 ರನ್‌ ಮುನ್ನಡೆ ಗಳಿಸಿರುವ ಪೂರ್ವ ವಲಯ

ದಕ್ಷಿಣ ವಲಯ ಆಲೌಟ್‌ ಆದ ಬಳಿಕ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಪೂರ್ವ ವಲಯದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಮೊತ್ತ ಕೇವಲ 2 ರನ್‌ ಇರುವಾಗಲೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಅಭಿಮನ್ಯು ಈಶ್ವರನ್‌ ಹಾಗೂ ವೈಭವ್‌ ಸೂರ್ಯವಂಶಿ ವಿಕೆಟ್‌ ಒಪ್ಪಿಸಿದರು. ಮೂರನೇ ವಿಕೆಟ್‌ಗೆ ನಾಯಕ ಇಶಾನ್‌ ಕಿಶನ್‌ ಹಾಗೂ ಶಿಖರ್‌ ಮೋಹನ್‌ ಅದ್ಭುತವಾಗಿ ಬ್ಯಾಟ್‌ ಮಾಡಿ 126 ರನ್‌ಗಳ ಜೊತೆಯಾಟವನ್ನು ಆಡಿದರು. ಶಿಖರ್‌ 52 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, ಇಶಾನ್‌ ಕಿಶನ್‌ 80 ರನ್‌ಗಳ ಮತ್ತೊಂದು ಅದ್ಭುತ ಇನಿಂಗ್ಸ್‌ ಆಡಿ ವಿಕೆಟ್‌ ಒಪ್ಪಿಸಿದರು. ಇದರ ನಡುವೆ ಸುದೀಪ್‌ ಕುಮಾರ್‌ ರನ್‌ ಔಟ್‌ ಆದರು.

IND vs WI ಒಡಿಐ ಸರಣಿಗೆ ಶ್ರೇಯಸ್‌ ಅಯ್ಯರ್‌ ಅನುಮಾನ! ಇದಕ್ಕೆ ಕಾರಣ ಇಲ್ಲಿದೆ ನೋಡಿ..

ಅದ್ಭುತವಾಗಿ ಬ್ಯಾಟ್‌ ಮಾಡುತ್ತಿರುವ ಕುಮಾರ್‌ ಕುಶಾಗ್ರ ನಾಲ್ಕನೇ ದಿನದಾಟದ ಅಂತ್ಯಕ್ಕೆ ಅಜೇಯ 34 ರನ್‌ ಗಳಿಸಿದ್ದು, ಮತ್ತೊಂದು ತುದಿಯಲ್ಲಿ ಅಜೇಯರಾಗಿ ಉಳಿದಿರುವ ಕೊನೈನ್ ಖುರೇಷಿ 26 ರನ್‌ಗಳಿಸಿದ್ದಾರೆ. ಪೂರ್ವ ವಲಯವನ್ನು ಬೇಗ ಔಟ್‌ ಮಾಡಬೇಕೆಂದು ಕಣಕ್ಕೆ ಇಳಿದ ದಕ್ಷಿಣ ವಲಯ ತಂಡದ ಬೌಲರ್‌ಗಳಿಗೆ ಬೇಗ ಎರಡು ವಿಕೆಟ್‌ ಕಿತ್ತರೂ ನಾಲ್ಕನೇ ದಿನ 5 ವಿಕೆಟ್‌ಗಳನ್ನು ಕಬಳಿಸಲಷ್ಟೇ ಶಕ್ತರಾದರು. ಅಂತಿಮವಾಗಿ ಪೂರ್ವ ವಲಯ ತಂಡ, 51 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 212 ರನ್‌ಗಳನ್ನು ಕಲೆ ಹಾಕಿದೆ. ಆ ಮೂಲಕ 584 ರನ್‌ಗಳ ಬೃಹತ್‌ ಮುನ್ನಡೆಯನ್ನು ಪಡೆದಿದೆ.

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರ ಏಕದಿನ ವಿಶ್ವಕಪ್‌ ಭವಿಷ್ಯ ನುಡಿದ ಆಶಿಶ್‌ ನೆಹ್ರಾ!

ಡ್ರಾ ಸನಿಹದಲ್ಲಿ ದುಲೀಪ್‌ ಟ್ರೋಫಿ ಫೈನಲ್‌

ಪಂದ್ಯದ ನಾಲ್ಕನೇ ದಿನದಾಟದ ಅಂತ್ಯಕ್ಕೆ ಪೂರ್ವ ವಲಯ ತಂಡ, ದಕ್ಷಿಣ ವಲಯ ಎದುರು 584 ರನ್‌ಗಳ ಭಾರಿ ಮುನ್ನಡೆಯನ್ನು ಪಡೆದಿದೆ. ಇನ್ನು ಉಳಿದಿರುವುದು ಕೇವಲ ಒಂದು ದಿನ ಮಾತ್ರ. ಗುರುವಾರ ಮೊದಲ ಸೆಷನ್‌ನಲ್ಲಿ ಪೂರ್ವ ವಲಯದ ಇನ್ನುಳಿದ 5 ವಿಕೆಟ್‌ಗಳನ್ನು ಕಬಳಿಸಲು ದಕ್ಷಿಣ ವಲಯ ಪ್ರಯತ್ನಿಸಲಿದೆ. ಆ ಮೂಲಕ 600ಕ್ಕೂ ಅಧಿಕ ರನ್‌ಗಳ ಗುರಿಯನ್ನು ದಕ್ಷಿಣ ವಲಯ ಪಡೆಯಬಹುದು. ಆದರೆ, ಈ ಪಂದ್ಯ ಡ್ರಾನಲ್ಲಿ ಅಂತ್ಯ ಕಾಣುವುದು ಬಹುತೇಕ ಖಚಿತವಾಗಿದೆ. ಇದಕ್ಕೂ ಮುನ್ನ ಪೂರ್ವ ವಲಯ ಪ್ರಥಮ ಇನಿಂಗ್ಸ್‌ನಲ್ಲಿ 708 ರನ್‌ ಕಲೆ ಹಾಕಿತ್ತು.