ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ವಾಷಿಂಗ್ಟನ್‌ ಸುಂದರ್‌ಗೂ ಮುನ್ನ ಶಾರ್ದುಲ್‌ ಠಾಕೂರ್‌ ಆಡಿದ್ದಕ್ಕೆ ದಿನೇಶ್‌ ಕಾರ್ತಿಕ್‌ ಆಕ್ರೋಶ!

ಇಂಗ್ಲೆಂಡ್‌ ವಿರುದ್ಧ ನಾಲ್ಕನೇ ಟೆಸ್ಟ್‌ ಪಂದ್ಯದ ಮೊದಲನೇ ದಿನ ವಾಷಿಂಗ್ಟನ್‌ ಸುಂದರ್‌ಗೂ ಮುನ್ನ ಶಾರ್ದುಲ್‌ ಠಾಕೂರ್‌ಗೆ ಬ್ಯಾಟಿಂಗ್‌ ನೀಡಿದ್ದರ ಭಾರತ ತಂಡದ ನಿರ್ಧಾರದ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮೆಂಟರ್‌ ದಿನೇಶ್‌ ಕಾರ್ತಿಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತ ತಂಡದ ವಿರುದ್ಧ ದಿನೇಶ್‌ ಕಾರ್ತಿಕ್‌ ಅಸಮಾಧಾನ.

ಮ್ಯಾಂಚೆಸ್ಟರ್‌: ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ (IND vs ENG) ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದ ಮೊದಲನೇ ದಿನ ಭಾರತ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ ತೆಗೆದುಕೊಂಡು ಒಂದು ಕರೆಯನ್ನು ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ (Dinesh Karthik) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಸಾಯಿ ಸುದರ್ಶನ್‌ ಔಟ್‌ ಆದ ಬಳಿಕ ವಾಷಿಂಗ್ಟನ್‌ ಸುಂದರ್‌ ಬದಲು ಶಾರ್ದುಲ್‌ ಠಾಕೂರ್‌ (Shardul Thakur) ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಲಾಗಿತ್ತು. ಇದು ದಿನೇಶ್‌ ಕಾರ್ತಿಕ್‌ಗೆ ಇಷ್ಟವಾಗಲಿಲ್ಲ. ಈ ಬಗ್ಗೆ ಅವರು ಗೌತಮ್‌ ಗಂಭೀರ್‌ ಮಾರ್ಗದರ್ಶನದ ಪ್ರವಾಸಿ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ದ ಕಾರ್ತಿಕ್‌ ಬೇಸರ ವ್ಯಕ್ತಪಡಿಸಿದ್ದಾರೆ.

37 ರನ್‌ ಗಳಿಸಿ ಬ್ಯಾಟ್‌ ಮಾಡುತ್ತಿದ್ದ ರಿಷಭ್‌ ಪಂತ್‌ ಅವರು ಕ್ರಿಸ್‌ ವೋಕ್ಸ್‌ ಎಸೆತದಲ್ಲಿ ಚೆಂಡನ್ನು ತಮ್ಮ ಪಾದಕ್ಕೆ ತಗುಲಿಸಿಕೊಂಡು ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಈ ವೇಳೆ ಗಾಯದ ಸ್ವರೂಪ ಗಂಭೀರವಾಗಿದ್ದ ಕಾರಣ ರಿಷಭ್‌ ಪಂತ್‌ ಬ್ಯಾಟಿಂಗ್‌ ಮುಂದುವರಿಸಲು ಸಾಧ್ಯವಾಗದ ಪೆವಿಲಿಯನ್‌ಗೆ ತೆರಳಿದ್ದರು. ಈ ವೇಳೆ ರವಿಂದ್ರ ಜಡೇಜಾ ಕ್ರೀಸ್‌ಗೆ ಬಂದಿದ್ದರು. ಈ ವೇಳೆ ಜೊತೆಯಾಗಿದ್ದ ಸಾಯಿ ಸುದರ್ಶನ್‌ ಹಾಗೂ ರವೀಂದ್ರ ಜಡೇಜಾ ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುತ್ತಿದ್ದರು. ಅರ್ಧಶತಕ ಸಿಡಿಸಿದ ಬಳಿಕ ಸಾಯಿ ಸುದರ್ಶನ್‌, ಬೆನ್‌ ಸ್ಟೋಕ್ಸ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದ್ದರು.

IND vs ENG: IND vs ENG: ಕನ್ನಡಿಗ ಕರುಣ್‌ ನಾಯರ್‌ರ ಟೆಸ್ಟ್‌ ವೃತ್ತಿ ಜೀವನ ಅಂತ್ಯ? ಫ್ಯಾನ್ಸ್‌ ಪ್ರತಿಕ್ರಿಯೆ!

ಸಾಯಿ ಸುದರ್ಶನ್‌ ವಿಕೆಟ್‌ ಒಪ್ಪಿಸಿದ ಬಳಿಕ ವಾಷಿಂಗ್ಟನ್‌ ಸುಂದರ್‌ ಕ್ರೀಸ್‌ಗೆ ಬರಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಶಾರ್ದುಲ್‌ ಠಾಕೂರ್‌ ಕ್ರೀಸ್‌ಗೆ ಬರುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು. ಈ ವೇಳೆ ಕಾಮೆಂಟರಿ ಮಾಡುತ್ತಿದ್ದ ದಿನೇಶ್‌ ಕಾರ್ತಿಕ್‌ ಆಘಾತ ವ್ಯಕ್ತಪಡಿಸಿದ್ದರು. ಟೀಮ್‌ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರವನ್ನು ದಿನೇಶ್‌ ಕಾರ್ತಿಕ್‌ ಪ್ರಶ್ನೆ ಮಾಡಿದ್ದಾರೆ.

""ನನಗೆ ತುಂಬಾ ಆಶ್ಚರ್ಯವಾಯಿತು. ವಾಷಿಂಗ್ಟನ್ ಸುಂದರ್‌ ಈ ಸರಣಿಯಲ್ಲಿ ಮತ್ತು ಇದಕ್ಕೂ ಮೊದಲು ಬ್ಯಾಟಿಂಗ್‌ನಲ್ಲಿ ನಿಜವಾದ ಸಂಯಮವನ್ನು ತೋರಿಸಿದ್ದಾರೆ. ಅವರು ತಮ್ಮ ಸುತ್ತಲೂ ಗುರುತಿಸಬಹುದಾದ ಬ್ಯಾಟ್ಸ್‌ಮನ್‌ಗಳೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ವ್ಯಕ್ತಿ. ಪಂತ್ ನಿರ್ಗಮಿಸಿ ಸಾಯಿ ಸುದರ್ಶನ್ ಔಟಾದ ನಂತರ, ಸುಂದರ್ ತಂಡಕ್ಕೆ ಬಂದು ಪರಿಸ್ಥಿತಿಯನ್ನು ಸ್ಥಿರಗೊಳಿಸಲು ಇದು ಸೂಕ್ತ ಕ್ಷಣವಾಗಿತ್ತು" ಎಂದು ಅನಿರೀಕ್ಷಿತ ಕರೆಯ ನಂತರ ದಿನೇಶ್‌ ಕಾರ್ತಿಕ್ ಬೇಸರ ವ್ಯಕ್ತಪಡಿಸಿದ್ದಾರೆ.

IND vs ENG: ಬ್ಯಾಟಿಂಗ್‌ ವೇಳೆ ಗಂಭೀರ ಗಾಯಕ್ಕೆ ತುತ್ತಾಗಿ ಮೈದಾನ ತೊರೆದ ರಿಷಭ್‌ ಪಂತ್‌!

ಈ ವೇಳೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌, "ನೀವು ಬೇಕಿದ್ದರೆ ಅಂಕಿಅಂಶಗಳನ್ನು ನೋಡಬಹುದು, ವಾಷಿಂಗ್ಟನ್‌ ಸುಂದರ್‌ ಸರಾಸರಿ 39ರ ಸನಿಹವಿದೆ ಹಾಗೂ ಶಾರ್ದುಲ್‌ ಠಾಕೂರ್‌ ಅವರ ಸರಾಸರಿ 17ಕ್ಕೂ ಕಡಿಮೆ ಇದೆ. ಶಾರ್ದುಲ್‌ ಠಾಕೂರ್‌ ಅವರನ್ನು ಕಳುಹಿಸಬಾರದಿತ್ತು. ಏಕೆಂದರೆ ದಿನದಾಟ ಮುಗಿಯಲು ಇನ್ನೂ 40ನಿಮಿಷಗಳು ಬಾಕಿ ಇದ್ದವು, ಹಾಗಾಗಿ ಅವರು ನೈಟ್‌ ವಾಚ್‌ಮನ್‌ ಆಗಿ ಆಡಿಸಬಾರದಿತ್ತು. ಮತ್ತೊಂದೆಡೆ ಈ ವೇಳೆ ಹೊಸ ಚೆಂಡನ್ನು ಎದುರಿಸಬೇಕಾಗಿತ್ತು," ಎಂದು ಹೇಳಿದ್ದಾರೆ.

"ಶಾರ್ದುಲ್‌ ಠಾಕೂರ್‌ ಬದಲು ವಾಷಿಂಗ್ಟನ್‌ ಸುಂದರ್‌ ಬದಲು ಅವರನ್ನು ಕಳುಹಿಸಬೇಕೆನ್ನೆಲು ಕಾರಣವೇನೆಂದರೆ, ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಶಾರ್ದುಲ್‌ ಠಾಕೂರ್‌ ಅತ್ಯಂತ ಹೀನಾಯವಾಗಿ ವಿಕೆಟ್‌ ಒಪ್ಪಿಸಿದ್ದರು. ಅವರು ಎರಡು ಕಳಪೆ ಹೊಡೆತಗಳನ್ನು ಆಡಿದ್ದರು," ಎಂದು ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.