ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಇಂಗ್ಲೆಂಡ್‌ ಪ್ರವಾಸದ ಭಾರತ ಟೆಸ್ಟ್‌ ತಂಡಕ್ಕೆ ಸೇರ್ಪಡೆಯಾದ ಹರ್ಷಿತ್‌ ರಾಣಾ!

ಇಂಗ್ಲೆಂಡ್‌ ಪ್ರವಾಸದಲ್ಲಿರುವ ಭಾರತ ಟೆಸ್ಟ್‌ ತಂಡಕ್ಕೆ ಯುವ ವೇಗಿ ಹರ್ಷಿತ್‌ ರಾಣಾ ಸೇರ್ಪಡೆಯಾಗಿದ್ದಾರೆಂದು ಸ್ಟಾರ್‌ ಸ್ಪೋರ್ಟ್ಸ್‌ ತಿಳಿಸಿದೆ. ಜೂನ್‌ 20 ರಂದು ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಐದು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆರಂಭಿಸಲಿವೆ. ಇದಕ್ಕೂ ಮುನ್ನ ಹರ್ಷಿತ್‌ ರಾಣಾ ಆಗಮಿಸಿರುವುದು ಭಾರತ ತಂಡದ ವೇಗದ ಬೌಲಿಂಗ್‌ ವಿಭಾಗದ ಬಲವನ್ನು ಹೆಚ್ಚಿಸಿದೆ.

ಭಾರತ ಟೆಸ್ಟ್‌ ತಂಡಕ್ಕೆ ಸೇರ್ಪಡೆಯಾದ ಹರ್ಷಿತ್‌ ರಾಣಾ.

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯ (IND vs ENG) ನಿಮಿತ್ತ ಭಾರತ ತಂಡಕ್ಕೆ ಯುವ ವೇಗಿ ಹರ್ಷಿತ್‌ ರಾಣಾ (Harshit Rana) ಸೇರ್ಪಡೆಯಾಗಿದ್ದಾರೆ. 17 ರಂದು ಸ್ಟಾರ್‌ ಸ್ಪೋರ್ಟ್ಸ್‌ ತನ್ನ ಅಧೀಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಪ್ರಕಟಿಸಿದೆ. ಉಭಯ ತಂಡಗಳ ನಡುವಣ ಮೊದಲನೇ ಟೆಸ್ಟ್‌ ಪಂದ್ಯ ಜೂನ್‌ 20 ರಂದು ಲೀಡ್ಸ್‌ನ ಹೆಡಿಂಗ್ಲೆ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಇದೀಗ ಹರ್ಷಿತ್‌ ರಾಣಾ ಸೇರ್ಪಡೆಯಿಂದ ಭಾರತ ತಂಡದ (India) ವೇಗದ ಬೌಲಿಂಗ್‌ ವಿಭಾಗಕ್ಕೆ ಬಲ ಬಂದಂತಾಗಿದೆ. ಈ ಟೆಸ್ಟ್‌ ಸರಣಿಯ ಮೂಲಕ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಪಯಣವನ್ನು ಆರಂಭಿಸಲಿವೆ.

ಈಗಾಗಲೇ ಭಾರತ ತಂಡದ ವೇಗದ ಬೌಲಿಂಗ್‌ ವಿಭಾಗದಲ್ಲಿ ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಸಿರಾಜ್‌, ಅರ್ಷದೀಪ್‌ ಸಿಂಗ್‌, ಆಕಾಶ್‌ ಸಿಂಗ್‌ ಹಾಗೂ ಪ್ರಸಿಧ್‌ ಕೃಷ್ಣ ಇದ್ದಾರೆ. ಇದೀಗ ಟೀಮ್‌ ಇಂಡಿಯಾಗೆ ಹರ್ಷಿತ್‌ ರಾಣಾ ಸೇರ್ಪಡೆಯಾಗಿರುವುದು ಇಂಗ್ಲೆಂಡ್‌ನಲ್ಲಿನ ಫಾಸ್ಟ್‌ ಬೌಲಿಂಗ್‌ ಕಂಡೀಷನ್ಸ್‌ ನಿಮಿತ್ತ ಪ್ರವಾಸಿ ತಂಡಕ್ಕೆ ಹೆಚ್ಚಿನ ಆಯ್ಕೆ ಸಿಗಲಿದೆ. ಅಂದ ಹಾಗೆ ಹರ್ಷಿತ್‌ ರಾಣಾ ಸೇರ್ಪಡೆಯ ಬಗ್ಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇಂಗ್ಲೆಂಡ್‌ ಕಂಡೀಷನ್ಸ್‌ ವೇಗದ ಬೌಲಿಂಗ್‌ಗೆ ನೆರವು ನೀಡಲಿದೆ ಹಾಗೂ ಗಾಯದ ಕಾರಣ ಹೆಚ್ಚುವರಿ ಬೌಲಿಂಗ್‌ ಆಯ್ಕೆ ಇರಲಿ ಎಂಬ ಕಾರಣಕ್ಕೆ ಬಿಸಿಸಿಐ ಹರ್ಷಿತ್‌ ರಾಣಾಗೆ ಸ್ಥಾನ ನೀಡಿರಬಹುದು.

IND vs ENG: ಭಾರತ ಟೆಸ್ಟ್‌ ತಂಡದ ನಾಯಕತ್ವ ತಪ್ಪಲು ಕಾರಣ ತಿಳಿಸಿದ ಜಸ್‌ಪ್ರೀತ್‌ ಬುಮ್ರಾ!

ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ ಹರ್ಷಿತ್‌ ರಾಣಾ ಭಾರತದ ಪರ ಕೊನೆಯ ಟೆಸ್ಟ್‌ ಪಂದ್ಯವನ್ನು ಆಡಿದ್ದರು. ಈ ಸರಣಿಯಲ್ಲಿಯೇ ಅವರು ಟೆಸ್ಟ್‌ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದರು. ಆದರೆ, ಈ ಸರಣಿಯಲ್ಲಿ ಭಾರತ ತಂಡ ಸೋಲು ಅನುಭವಿಸಿತ್ತು. ಮೂರನೇ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. ಈ ಸರಣಿಯ ಅಡಿಲೇಡ್‌ ಟೆಸ್ಟ್‌ನಲ್ಲಿ ರಾಣಾ 4 ವಿಕೆಟ್‌ಗಳನ್ನು ಕಬಳಿಸಿದ್ದರು ಹಾಗೂ ಪರ್ತ್‌ ಟೆಸ್ಟ್‌ನಲ್ಲಿ ವಿಕೆಟ್‌ ಪಡೆದಿರಲಿಲ್ಲ. ಹರ್ಷಿತ್‌ ರಾಣಾ ಇತ್ತೀಚಿನ ಭಾರತ ಎ ತಂಡದ ಪರ ಆಡಿದ್ದರು ಹಾಗೂ 99 ರನ್‌ ನೀಡಿ ಒಂದು ವಿಕೆಟ್‌ ಪಡೆದಿದ್ದರು.



ಅವರು ಇತ್ತೀಚೆಗೆ ಬೆಕೆನ್‌ಹ್ಯಾಮ್‌ನಲ್ಲಿ ನಡೆದಿದ್ದ ಭಾರತದ ಅಂತರ್-ತಂಡದ ಅಭ್ಯಾಸ ಪಂದ್ಯದಲ್ಲೂ ಭಾಗವಹಿಸಿದ್ದರು ಮತ್ತು ಅವರು ಇಂಗ್ಲೆಂಡ್‌ನಲ್ಲಿ ಉಳಿದುಕೊಂಡಿರುವ ಏಕೈಕ ಸದಸ್ಯರಲ್ಲಿ ಒಬ್ಬರು ಹಾಗೂ ಅನ್ಶುಲ್ ಕಾಂಬೋಜ್‌ ಭಾರತಕ್ಕೆ ಮರಳಿದ್ದಾರೆ ಎಂದು ವರದಿಯಾಗಿದೆ.

ಭಾರತ ಟೆಸ್ಟ್‌ ತಂಡದ ನೂತನ ನಾಯಕ ಶುಭಮನ್ ಗಿಲ್, ಇಂಗ್ಲೆಂಡ್‌ನಂತಹ ಬಲಿಷ್ಠ ತಂಡವನ್ನು ಎದುರಿಸುವಾಗ, ವಿಶೇಷವಾಗಿ ಸರಣಿಯಲ್ಲಿ ಬುಮ್ರಾ ಅವರ ಸೀಮಿತ ಉಪಸ್ಥಿತಿಯೊಂದಿಗೆ, ಹರ್ಷಿತ್‌ ರಾಣಾ ಇರುವುದು ಅವರಿಗೆ ಹೆಚ್ಚಿನ ಆಯ್ಕೆಯನ್ನು ತಂದುಕೊಡಲಿದೆ. ಹರ್ಷಿತ್‌ ರಾಣಾ ತಮ್ಮ ಮಾರಕ ಬೌಲಿಂಗ್‌ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಆಕ್ರಮಣಕಾರಿಯಾಗಿ ಆಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.