ಲಂಡನ್: ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ (ENG vs PAK) ಎರಡನೇ ದಿನವಾದ ಶುಕ್ರವಾರ (ಆಗಸ್ಟ್ 28), ಇಂಗ್ಲೆಂಡ್ ವೇಗದ ಬೌಲರ್ ಓಲ್ಲಿ ರಾಬಿನ್ಸನ್ (Ollie Robinson) ಇತಿಹಾಸ ಬರೆದಿದ್ದಾರೆ. ಪಾಕಿಸ್ತಾನದ ಬ್ಯಾಟಿಂಗ್ ಪಡೆಯನ್ನು ಇಂಗ್ಲೆಂಡ್ ಬೌಲರ್‌ಗಳು ಸಂಪೂರ್ಣವಾಗಿ ಕಟ್ಟಿ ಹಾಕಿದರೆ, ರಾಬಿನ್ಸನ್ ತಂಡದ ಪರ ಅತ್ಯುತ್ತಮ ಎಕಾನಮಿ ಬೌಲರ್ ಎನಿಸಿಕೊಂಡರು. ಅದ್ಭುತ ಫಾರ್ಮ್ ಮುಂದುವರಿಸಿದ ಬಲಗೈ ವೇಗದ ಬೌಲರ್ ರಾಬಿನ್ಸನ್ 13 ಓವರ್‌ಗಳಲ್ಲಿ ಕೇವಲ 11 ರನ್ ನೀಡಿ ನಾಲ್ಕು ವಿಕೆಟ್‌ಗಳ ಸಾಧನೆ ಮಾಡಿದರು. ಅವರ ಎಕಾನಮಿ ರೇಟ್ ಕೇವಲ 0.84 ರಷ್ಟಿರುವುದು ಅತ್ಯಂತ ವಿಶೇಷವಾಗಿದೆ.
ಪಾಕಿಸ್ತಾನದ ಪರ ಗರಿಷ್ಠ ರನ್ ಗಳಿಸಿದ ಅಜಾನ್ ಅವೈಸ್ ಅವರ ವಿಕೆಟ್ ಸೇರಿದಂತೆ ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ ಮತ್ತು ಖುರ್ರಂ ಶೆಹ್ಜಾದ್ ಅವರ ವಿಕೆಟ್‌ಗಳನ್ನು ರಾಬಿನ್ಸನ್ ಕಬಳಿಸಿದರು. ರಾಬಿನ್ಸನ್ ಅವರ ಶಿಸ್ತುಬದ್ಧ ಹಾಗೂ ಪರಿಣಾಮಕಾರಿ ಬೌಲಿಂಗ್‌ನಿಂದ ಪಾಕಿಸ್ತಾನದ ಬ್ಯಾಟಿಂಗ್ ಕ್ರಮಾಂಕಕ್ಕೆ ಭಾರೀ ಹೊಡೆತ ಬಿದ್ದಿದ್ದು, ಇಂಗ್ಲೆಂಡ್ ಪಂದ್ಯದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿತು.
Tri-series 2026: ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಇತಿಹಾಸ ನಿರ್ಮಿಸಿದ ನಮೀಬಿಯಾ!
ಇತಿಹಾಸ ಬರೆದ ಓಲ್ಲಿ ರಾಬಿನ್ಸನ್
ಲಾರ್ಡ್ಸ್ ಕ್ರಿಕೆಟ್ ಕ್ರೀಡಾಂಗಣದ 142 ವರ್ಷಗಳ ಇತಿಹಾಸದಲ್ಲಿ ಅತ್ಯುತ್ತಮ ಎಕಾನಮಿ ಸ್ಪೆಲ್‌ನಲ್ಲಿ ನಾಲ್ಕು ವಿಕೆಟ್ ದಾಖಲಿಸಿದ ವೇಗದ ಬೌಲರ್ ಎಂಬ ನೂತನ ದಾಖಲೆಯನ್ನು ಓಲ್ಲಿ ರಾಬಿನ್ಸನ್ ಬರೆದಿದ್ದಾರೆ. ‘ಕ್ರಿಕೆಟ್‌ನ ಕಾಶಿ’ ಎಂದೇ ಕರೆಯಲ್ಪಡುವ ಲಾರ್ಡ್ಸ್‌ನಲ್ಲಿ ಇದುವರೆಗೆ 310 ವೇಗದ ಬೌಲರ್‌ಗಳು ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ ಎಕಾನಮಿ ರೇಟ್ ಒಂದಕ್ಕಿಂತ ಕಡಿಮೆ ಇರುವಂತೆ ನಾಲ್ಕು ವಿಕೆಟ್‌ಗಳ ಸಾಧನೆ ಮಾಡಿದ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ರಾಬಿನ್ಸನ್ ಪಾತ್ರರಾಗಿದ್ದಾರೆ.
ಅಷ್ಟೇ ಅಲ್ಲದೆ, ಲಾರ್ಡ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳ ಸಾಧನೆ ಮಾಡುವ ವೇಳೆ ಯಾವುದೇ ಬೌಲರ್ ನೀಡಿದ ಅತ್ಯಂತ ಕಡಿಮೆ ರನ್‌ಗಳ ದಾಖಲೆ ಕೂಡ ರಾಬಿನ್ಸನ್ ಅವರ ಹೆಸರಿನಲ್ಲಿದೆ. ಅವರು ಕೇವಲ 11 ರನ್ ನೀಡಿ ನಾಲ್ಕು ವಿಕೆಟ್ ಪಡೆದಿದ್ದಾರೆ.
Sachin or Kohli? ಭಾರತೀಯ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನನ್ನು ಹೆಸರಿಸಿದ ಆರ್ ಅಶ್ವಿನ್!
ಕಡಿಮೆ ಎಕಾನಮಿ ರೇಟ್‌ನಲ್ಲಿ 4 ವಿಕೆಟ್ ಕಿತ್ತ ವೇಗದ ಬೌಲರ್‌ಗಳು
ಓಲ್ಲಿ ರಾಬಿನ್ಸನ್ (ಇಂಗ್ಲೆಂಡ್): 4/11 (0.84 ಎಕಾನಮಿ ರೇಟ್) vs ಪಾಕಿಸ್ತಾನ 2026
ರಾಬ್ ವಿಲ್ಸ್ (ಇಂಗ್ಲೆಂಡ್ ): 4/16 (1.00) vs ನ್ಯೂಜಿಲೆಂಡ್ 1978
ಫ್ರಾಂಕ್ ಫೋಸ್ಟರ್ (ಇಂಗ್ಲೆಂಡ್): 5/16 (1.21) vs ದಕ್ಷಿಣ ಆಫ್ರಿಕಾ 1912
ಆಂಡಿ ಕ್ಯಾಡಿಕ್ (ಇಂಗ್ಲೆಂಡ್): 5/16 (1.23) vs ವೆಸ್ಟ್ ಇಂಡೀಸ್ 2000
ಜಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ) 4/24 (1.26) vs ಇಂಗ್ಲೆಂಡ್ 1998
ಸ್ಪಿನ್ನರ್‌ಗಳ ಪೈಕಿ ಲಾರ್ಡ್ಸ್‌ನಲ್ಲಿ ರಾಬಿನ್ಸನ್‌ಗಿಂತ ಕಡಿಮೆ ಎಕಾನಮಿಯಲ್ಲಿ ನಾಲ್ಕು ವಿಕೆಟ್‌ಗಳ ವಿಕೆಟ್ ಪಡೆದಿರುವ ಏಕೈಕ ಬೌಲರ್ ಇಂಗ್ಲೆಂಡ್‌ನ ಫಿಲ್ ಎಡ್ಮಂಡ್ಸ್ (0.75). 1978ರಲ್ಲಿ ಪಾಕಿಸ್ತಾನ ವಿರುದ್ಧ ಅವರು ಅದ್ಭುತ 4/6 ಬೌಲಿಂಗ್ ಸ್ಪೆಲ್ ಮೂಲಕ ಈ ಸಾಧನೆ ಮಾಡಿದ್ದರು. ಲಾರ್ಡ್ಸ್‌ನಲ್ಲಿ ಪೇಸ್ ಅಥವಾ ಸ್ಪಿನ್—ಯಾವುದೇ ಬೌಲರ್‌ವೊಬ್ಬರು ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆಯುವ ವೇಳೆ ರಾಬಿನ್ಸನ್‌ಗಿಂತ ಕಡಿಮೆ ರನ್ ನೀಡಿರುವ ಏಕೈಕ ಉದಾಹರಣೆಯೂ ಇದಾಗಿದೆ.